Chamarajanagar

ಬಂಡೀಪುರ: ಕಾಡಲ್ಲಿ ಒಟ್ಟಿಗೆ 5 ಚಿರತೆ ದರ್ಶನ- ರಸ್ತೇಲಿ 5 ಹುಲಿ ಪ್ರತ್ಯಕ್ಷ!!

Kayakayogi

ಚಾಮರಾಜನಗರ: ಬಂಡೀಪುರ ಈಗ ಹುಲಿ- ಚಿರತೆಗಳ ಅವಾಸಸ್ಥಾನವಾಗಿದ್ದು ಒಂದಲ್ಲ ಎರಡಲ್ಲ ಒಟ್ಟೊಟ್ಟಿಗೆ 4-5 ಪ್ರಾಣಿಗಳು ದರ್ಶನ ಕೊಡುತ್ತಿದ್ದು ಪ್ರಾಣಿಪ್ರಿಯರು ರೋಮಾಂಚನಗೊಳ್ಳುತ್ತಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ವೀಡಿಯೋ ತುಣುಕೊಂದನ್ನು X ನಲ್ಲಿ ಬಿಡುಗಡೆ ಮಾಡಿದ್ದು ಅದರಲ್ಲಿ ಬಂಡೀಪುರ ಒಟ್ಟಿಗೇ 5 ಚಿರತೆಗಳು ಫೋಟೋಗೆ ಫೋಸ್ ಕೊಡುವ ಅಪರೂಪದ ದೃಶ್ಯವನ್ನು ಶೇರ್ ಮಾಡಿದೆ.

ಶುಕ್ರವಾರ ರಾತ್ರಿ ಗುಂಡ್ಲುಪೇಟೆಯಿಂದ ಊಟಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದಾದ ನಂತರ ಒಂದಂತೆ 5 ಹುಲಿಗಳು ರಸ್ತೆ ದಾಟುವ ದೃಶ್ಯ ಸೆರೆಯಾಗುವ ಮೂಲಕ ಬಂಡೀಪುರ ಹುಲಿ-ಚಿರತೆಗಳ ಬೀಡಾಗಿದೆ ಎನ್ನಬಹುದಾಗಿದೆ‌.

ಗುಂಡ್ಲುಪೇಟೆಯ ಹರೀಶ್ ಎಂಬುವರು ತಮ್ಮ ಮೊಬೈಲ್ ನಲ್ಲಿ ಈ ವ್ಯಾಘ್ರ ಸಮೂಹವನ್ನು ವಿಡಿಯೋ ಸೆರೆ ಹಿಡಿದಿದ್ದಾರೆ‌.
ರಸ್ತೆಯ ಎರಡೂ ಬದಿ ವಾಹನ ಇದ್ದರಿಂದ ಆತುರಾತುರವಾಗಿ 5 ಹುಲಿಗಳು ರಸ್ತೆ ದಾಟಿವೆ. ಒಟ್ಟಿನಲ್ಲಿ ಕಾಡಲ್ಲಿ ಚಿರತೆಗಳ ದರ್ಶನ- ರಸ್ತೆಯಲ್ಲಿ ವ್ಯಾಘ್ರ ಸಮೂಹ ಪರಿಸರ ಪ್ರೇಮಿಗಳಲ್ಲಿ ಉಲ್ಲಾಸ ಉಂಟುಮಾಡಿದೆ

error: Content is protected !!