Davanagere

ಪಾಲಿಕೆಯೊಳಗೆ ಕಾನೂನು ಸಲಹೆಗಾರರ ನೇಮಕ ಕೇವಲ ನಾಮಕಾವಸ್ಥೆಗೆ….. ಉಳಿದಿದ್ದು ಮಾತ್ರ ಮುಟ್ಟಾಳ್ ಮೂರ್ಖ ಶಿಖಾಮಣಿಗಳಿದ್ದೇ ನಿರ್ಧಾರ…..

ಪಾಲಿಕೆ ಆಯುಕ್ತರು ಹೇಳುವುದು ಒಂದು… ಮಾಡುವುದೇ ಇನ್ನೊಂದು… ಇದು ಖದೀಮರ ಕೋಟೆ ಕಣೋ…!!

ದಾವಣಗೆರೆ : ಇದು ನಾವು ಹೇಳುತ್ತಿರುವ ಮಾತಲ್ಲ ಗುರು, ಮೊನ್ನೆ ನಮ್ಮ ಪತ್ರಿಕೆಯ ಸಂಪಾದಕರು, ಪುಷ್ಪಾ ಮಹಾಲಿಂಗಪ್ಪ ಶಾಲೆಯು ಅನಧಿಕೃತವಾಗಿ ಕಟ್ಟಿಕೊಂಡಿರುವ ಶಾಲಾ ಗೋಡೆಗ:ಳನ್ನು ಮತ್ತು ಕಾಂಪೌಂಡನ್ನು ತೆರವುಗೊಳಿಸಲು ಸತತ ಪ್ರಯತ್ನದ ಮೂಲಕ ಪಾಲಿಕೆಯ ಸಿಬ್ಬಂಧಿಗಳಾದ ಮೂರ್ಖ ಶಿಖಾಮಣಿಗಳ ಜೊತೆ ರೇಗಾಡಿ… ಕೂಗಾಡಿ ದಿನಾಂಕ 08-0-2024ರಂದುಕರ್ನಾಟಕ ಪೌರನಗಮಗಳ ಅಧಿನಿಯಮ-1976ರ ಕಲಂ 321(3)ರ ಅನುಸಾರವಾಗಿ ಅಂತಿಮ ಆದೇಶವನ್ನು ಪಡೆದುಕೊಂಡಿದ್ದು ಅದರಂತೆ ಮೊನ್ನೆ ನಮ್ಮ ಪತ್ರಿಕೆಯಲ್ಲಿ “ಪ್ರಾಮಾಣಿಕರೇ ಆಗಿದ್ದರೇ ಅಕ್ರಮವಾಗಿ ಪಾಲಿಕೆಗೆ ದ್ರೋಹ ಬಗೆಯುತ್ತಿರುವ ಮಹಾಲಿಂಗಪ್ಪ, ಅವರಣ್ಣ ಭೀಮಪ್ಪ ಮತ್ತು ಅವರ ಗ್ಯಾಂಗ್ ಆಕ್ರಮಿಸಿಕೊಂಡಿರುವ ಕಟ್ಟಡ ಹಾಗೂ ಕಾಂಪೌಂಡನ್ನು ತೆರವುಗೊಳಿಸಿ ಸಾಬೀತು ಪಡಿಸಿ ಎಂದು ಸುದ್ಧಿ ಮಾಡಿದ್ದರೆ, ಕಿರಿಯ ಸಹಾಯಕ ಕಾರ್ಯಪಾಲಕ ಅಭಿಯಂತರಿ ಶ್ರೀಮತಿ ಶೃತಿಯವರು ಮಹಾಲಿಂಗಪ್ಪ ಏನೋ ಇವರ ಸೋದರ ಸಂಬಂದಿ ಎಂಬಂತೆ ಯಾವುದೇ ರೀತಿಯ ಮಾಹಿತಿಯನ್ನು ನಮ್ಮ ಪತ್ರಿಕೆಗೆ ನೀಡದೆ, ಮೊನ್ನೆ ಮಾತ್ರ ಇಲ್ಲ ಸಾರ್ ಅವರು ಮೊನ್ನೆ ಅಂದರೆ ಒಂದು ವಾರದ ಕೆಳಗೆ ಲಾಯರ್ ರವರಿಂದ ತಾತ್ಕಾಲಿಕ ತಡೆಯಾಜ್ಞೆಯ ನೋಟೀಸ್ ಕಳಿಸಿದ್ದಾರೆ ಎಂದು, ಅದೇನೋ ನಮ್ಮ ದಾವಣಗೆರೆ ಮಹಾನಗರ ಪಾಲಿಕೆಗೆ ಉತ್ತರ ವಿಧಾನಸಭಾ ಕ್ಷೇತ್ರದ ಕಡೆ ಕರ್ತವ್ಯಕ್ಕೆಂದು ಹೊಸದಾಗಿ ನಿಯುಕ್ತಿಗೊಂಡ ಸತ್ಯಾ ಹರಿಶ್ಚಂದ್ರ ಮಹಾಶೂರ ಪ್ರವೀಣ ಎಂಬ ಸಹಾಯಕ ಕಾರ್ಯಪಾಲಕ ಅಭಿಯಂತರಿಯ ಬಳಿ ಹೇಳಿದ್ದಾರೆ. ಇನ್ನು ಮಹಾಶೂರ ಪ್ರವೀಣ್ ಸಾಹೇಬರೋ ಹೇ ನಾವ್ ನೋಡಿದ್ರಲ್ಲಾ ಎಲ್ಲಾ ರೀತಿಯಲ್ಲಿ ಕ್ಲೀನ್ ಕೃಷ್ಣಪ್ಪ ಇದ್ದಂಗೆ, ನೀವು ಮೊನ್ನೆ ಕೇಳಿದ್ದ ತಕ್ಷಣನೇ ನಿಮಗೆ ಕೋರ್ಟ್ ಇಂದ ಬಂದಿರುವುದರ ಬಗ್ಗೆ ಹಿಂಬರಹ ಕಳಿಸಿದ್ದೇನೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾರೆ. ಆದರೆ ಪುಣ್ಯಾತ್ಮರಿಗೆ ಗೊತ್ತಿಲ್ಲ, ನಮ್ಮ ಪತ್ರಿಕೆಯ ವಿಳಾಸಕ್ಕೆ ಇಲ್ಲಿಯವರೆಗೂ ಶಾಲೆಗೆ ಸಂಬಂಧಿಸಿದ ಯಾವುಂದು ಹಿಂಬರಹದ ನೋಟೀಸುಗಳು ಬಂದಿಲ್ಲ, ಬಂದಿದ್ದರೆ ನಮ್ಮ ಪೋಸ್ಟ್ ಮಾಸ್ಟರ್ ಕಿರಣ ಪತ್ರಿಕೆಯ ಸಂಪಾದಕರಿಗೆ ಕರೆ ಮಾಡಿ ತಿಳಿಸುತ್ತಿದ್ದರು ಎಂಬುದು. ಹೋಗಲಿ ಬಿಡಿ ಮಹಾಶೂರ ಪ್ರವೀಣ ಹೇಳಿದ್ರಂತೆ ಆಗಲಿ ನಮ್ಮ ಪತ್ರಿಕೆಯ ಸಂಪಾದಕರಿಗೆ ದಿನಾಂಕ 08-08-2024ರಂದು ಅಂತಿಮ ಆದೇಶ ಪ್ರತಿ ನೀಡಿದ್ದೀರಿ, ಶಾಲಾಡಳಿತ ಮಂಡಳಿಯು ದಿನಾಂಕ 19-08-2024ರಂದು ತಮಗೆ ಪತ್ರ ವ್ಯೆವಹಾರದ ಮೂಲಕ ನೋಟೀಸ್ ನೀಡಿದ್ದಾರೆ, ನಮ್ಮ ಪತ್ರಿಕೆ ಸಂಪಾದಕರೋ ಬಲಿಕಾ ಬಕ್ರಾ ಎಂಬಂತೆ, ಅವರೇನೋ ಅವರ ಮನೆ ಕೆಲಸಕ್ಕೆ ಓಡಾಡುತ್ತಿರುವಂತೆ ನಿಮ್ಮ ಬಳಿ ಬಂದು ಮಾಹಿತಿ ಕೇಳುತ್ತಿದ್ದಾಗ ನೀವು ಮತ್ತು ನಿಮ್ಮ ಮರೆಗುಳಿ ಕಿರಿಯ ಸಹಾಯಕಿ ಶೃತಿಯವರು ಚರ್ಚೆ ಮಾಡಿಲ್ಲ. ಅದು ಹೋಗಲಿ ಸ್ವಾಮಿ ನಿಮ್ಮ ಪಾಲಿಕೆಯೊಳಗೆ ಇಂತಹ ತಕರಾರುಗಳು ಬಂದರೆ, ಕೋರ್ಟ್ ಕೆಲಸಗಳು ಬಂದರೆ ಅದಕ್ಕೆ ಪರಿಹಾರ ಪಡೆದುಕೊಂಡು ಕಾನೂನು ಹೋರಾಟ ಮಾಡಲಿಕ್ಕೇಂದೆ ಕಾನೂನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬ ಅರಿವಾದರೂ ನಿಮಗೆ ನಿಮ್ಮ ಮೇಲಾಧಿಕಾರಿಗಳಿಗೆ ತಿಳಿದಿಲ್ಲವೆ.? ಶಾಲಾಡಳಿತ ಮಂಡಳಿಯು ದಿನಾಂಕ 19-08-2024ರಂದು ನಿಮಗೆ ನೋಟೀಸ್ ಕಳುಹಿಸಿದ್ದರೆ, ಅದನ್ನು ಸ್ವೀರಕರಿಸಿಕೊಂಡಿರುವುದು ದಿನಾಂಕ 21-08-2024ರಂದು, ಅಲ್ಲಿಂದ ಇಲ್ಲಿಯವರೆಗೂ ಆದರೂ ನೀವು ನಿಮ್ಮ ಪಾಲಿಕೆಯಲ್ಲಿರುವ ಹಿರಿಯ ನಿವೃತ್ತ ನ್ಯಾಯಾಧೀಶರಾದ ಶ್ರೀ ಈಶ್ವರಪ್ಪ ಜಂತಲಿ ಎಂಬ ಕಾನೂನು ಅಧಿಕಾರಿಗಳನ್ನು ಭೇಟಿ ಮಾಡದೆ, ಮಾಹಿತಿ ಕೇಳಿರುವವರಿಗೆ ಮತ್ತು ದೂರು ನೀಡಿದವರಿಗೆ ಕೇವಲ ಅವರ ಬಳಿ ಎಂಜಲ ಆಸೆಗೆ ಬಲಿಯಾಗಿ ಕರ್ತವ್ಯವನ್ನು ಮರೆತು ನಮಗ್ಯಾಕ್ ಬೇಕು ಊರ್ ಉಸಾಬುರಿ….ಅಂದುಕೊಂಡು ಬಂದವರ ಬಳಿ ಸತ್ಯಾ ಹರಿಶ್ಚಂದ್ರರಂತೆ ಬಿಲ್ಡಪ್ ಕೊಡೋದ್ ಕಡಿಮೆ ಮಾಡಿ ಮಹಾಶೂರ ಪ್ರವೀಣರೇ…
ಪ್ರಿಯ ಓದುಗ ಮಿತ್ರರೆ ಪಾಲಿಕೆಯೊಳಗೆ 2017-18ರಿಂದಲೂ ಅಂದರೆ ಶ್ರೀ ಮಂಜುನಾಥ್ ಬಳ್ಳಾರಿವರು ಪಾಲಿಕೆಗೆ ನೂತನ ಆಯುಕ್ತರಾಗಿ ಬಂದ ನಂತರ ಪಾಲಿಕೆಯಲ್ಲಿ ಕೋರ್ಟ್ – ಕಚೇರಿಗಳಂತಹ ವಹಿವಾಟನ್ನು ನಡೆಸಲು ಹಾಗೂ ತಂಟೆ – ತಕರಾರುಗಳು ಬಂದರೆ ಅವುಗಳಿಗೆ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಿಕ್ಕೆ ಕಾನೂನು ಸಲಹೆಗಾರರ ಕೊಠಡಿಯ ನಿರ್ಮಿಸಿದ್ದು, ಮಂಜುನಾಥ್ ಬಳ್ಳಾರಿ ಸಾಹೇಬರೂ ಇದ್ದಾಗ ನಡೆದ ಕಾರ್ಯಗಳೇ ಕೊನೆಯದ್ದು… ಅಲ್ಲಿಂದ ಇಲ್ಲಿಯವರೆಗೆ ಭ್ರಷ್ಟಚಾರಿ ಮುದಜ್ಜಿಯಾಗಲಿ, ಈಗ ಪಾಲಿಕೆಗೆ ಬಂದಿರುವ ಡೈನಾಮಿಕ್ ಸ್ಟಾರ್ ಶ್ರೀಮತಿ ರೇಣುಕಾರವರಾಗಲಿ ಇಂತಹ ಕೋರ್ಟ್ ವ್ಯವೆಹಾರಗಳಿಗೆ ಸಂಬಂಧಿಸಿದ ಸಲಹೆಗಳನ್ನು ಪಡೆದುಕೊಂಡಿಲ್ಲ. ಇದು ಖುದ್ಧು ಮೊನ್ನೆ ಪುಷ್ಪ ಮಹಾಲಿಂಗಪ್ಪ ಶಾಲೆಯ ಕೋರ್ಟ್ ನೋಟೀಸ್ ಬಗ್ಗೆ ಚರ್ಚೆ ಮಾಡಲಿಕ್ಕೆ ಕಾನೂನು ಸಲಹೆಗಾರರ ಬಳಿ ಹೋದಾಗ, ಇದು ನಮಗೆ ಗೊತ್ತಿಲ್, ಯಾವೊಬ್ಬ ಇಂಜಿನೀಯರ್ ಆಗಲಿ , ಸಂಬಂಧಪಟ್ಟ ಅಧಿಕಾರಿಯಾಗಲಿ ನಮ್ಮನ್ನು ಕಂಡಿಲ್ಲವೆಂದು ಹೇಳಿದ್ದಾರೆ. ಇದರಿಂದ ನಮಗೆ ತಿಳಿಯುವುದೇನೆಂದರೆ ಪಾಲಿಕೆ ಬೇಲಿಯೇ ಎದ್ದು ಹೊಲ ಮೇಯ್ದಂತೆ…. ಪಾಲಿಕೆಯ ಸಿಬ್ಬಂಧಿಗಳೇ ನಗರದ ಕೆಲವು ಭೂ ಬಾಕರಿಗೆ, ಭ್ರಷ್ಟರಿಗೆ ಸಾಥ್ ನೀಡಿ ತಮ್ಮ ಮನೆಯ ಹೆಂಡತಿ ಮಕ್ಕಳಿಗೆ ಅವರು ನೀಡುವ ಎಂಜಲಿನ ದುಡ್ಡಿನಲ್ಲಿ ಅನ್ನ ಹಾಕುತ್ತಿದ್ದಾರೆ ಎಂಬುದು. ಇಂತಹ ನಾಲಾಯಕ್ ಮುಟ್ಟಳ್ ಮೂರ್ಖರಿಗೆ ಸರ್ಕಾರದ ಕೆಲಸವಾದರೂ ಏಕೆ ಬೇಕು..? ಸರ್ಕಾರದ ಸಂಬಳವಾದರೂ ಏಕೆ ಬೇಕು..? ಸುಮ್ಮನೆ ಹೊರಗಡೆಯೇ ಇಂತಹ ಲಜ್ಜೆಗೇಡಿತನದ ಕೆಲಸ ಮಾಡಿಕೊಂಡು ಜೀವನ ಸಾಗಿಸದರೆ ಸಾಕಲ್ಲವೆ….? ಎಂಬುದು ನಮ್ಮ ಪತ್ರಿಕೆಯ ಅನಿಸಿಕೆಯಷ್ಟೆ. ಅದು ಬಿಟ್ಟು ಈ ವರದಿಯ ನೋಡಿ ಶೂರಾಧಿಶೂರರು ನಮಗೆ ಮತ್ತು ನಮ್ಮ ಪತ್ರಿಕೆಯ ಸಂಪಾದಕರಿಗೆ ಶಾಪ ಹಾಕುವುದು, ಬೇರೆ ಯಾರೋ ಅನಧಿಕೃತ ವ್ಯೆಕ್ತಿಗಳಿಂದ ಕರೆ ಮಾಡಿಸಿ ಬೆದರಿಕೆ ಒಡ್ಡುವುದೋ… ಮಾಡಬೇಡಿ, ನಾವು ನಿಮ್ಮ ಹಾಗೆ ಮನುಷ್ಯರು ನಮಗೆ ಸ್ವಲ್ಪನಾದರೂ ದೇಶಭಕ್ತಿಯಿದೆ, ಅದಕ್ಕೆ ಇಂತಹ ನಿಮ್ಮ ಲಜ್ಜೆಗಟ್ಟ ಭಂಡತನದ ಮುಖವಾಡವ ಜನರಿಗೆ ಪತ್ರಿಕೆಯ ಮೂಲಕ ಅರ್ಥ ಮಾಡಿಸುತ್ತಿರುವೆವು. ಇಲ್ಲ ನೀವೂ ಕೂಡ ನಮ್ಮ ದೇಶದ ಹೆಮ್ಮೆಯ ಭಾರತೀಯ ಪ್ರಜೆಗಳಾಗಿದ್ದರೆ ನಿಮ್ಮ ಒಂದು ಕರ್ತವ್ಯ ಪರಿಪಾಲನೆ ಮಾಡಿ, ನಿಮ್ಮ ಮಕ್ಕಳಿಗೆ ಒಂದು ದಿನವಾದರೂ ಒಳ್ಳೆಯ ಹಿರೋ ಆಗಿ ಬಾಳಿ ಎಂದು ಸಲಹೆಯ ನೀಡುತ್ತ… ಮುಂದಿನ ಸಂಚಿಕೆಯಲ್ಲಿ ನಿಮ್ಮ ಒಳ್ಳೆಯತನದ ಸುದ್ಧಿಯ ವರದಿಯ ಮಾಡುವಂತೆ ಮಾಡಿ… ಜೈ ಹಿಂಧ್
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು

error: Content is protected !!