Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/templates/template_single_post.php on line 757

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/templates/template_single_post.php on line 758

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/templates/template_single_post.php on line 759
Latest News

“ನಮ್ಮನ್ನು ಸಿನಿಮಾಗೆ ಕರೆದುಕೊಂಡು ಹೋಗಿ” ಎಂದ ವಿದ್ಯಾರ್ಥಿನಿ

- ಚೇತನ್ ಸಿ ರಾಯನಹಳ್ಳಿ

ಇಂದಿಗೆ ಎರಡು ವರ್ಷಗಳ ಹಿಂದೆ ಹಿಂದಿ ಸಿನಿಮಾ ‘ಉರಿ-ದ ಸರ್ಜಿಕಲ್ ಸ್ಟ್ರೈಕ್’ ಎನ್ನುವ ಸೈನಿಕರ ಬಗೆಗಿನ ಸಿನಿಮಾ ಬಂದಿತ್ತು. ಸ್ಕೌಟ್ ಬಳಗದ ಗೆಳೆಯರೆಲ್ಲರೂ ಸರ್‌ಗಳ ಜೊತೆಗೆ ಹೋಗಲು ತೀರ್ಮಾನಿಸಿದೆವು. ನಮ್ಮ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ವರ್ಮ ಸರ್‌ಗೂ ತಿಳಿಸಿದ್ದೆವು ಅವರು ಕೂಡ ನಿಗದಿಪಡಿಸಿದ ದಿನದಂದು ನಮ್ಮ ಜೊತೆಗೆ ಬರಲು ಒಪ್ಪಿದ್ದರು. ಆದರೆ ನಿಗದಿತ ದಿನಕ್ಕಿಂತ ಮೊದಲೇ ಅವರು ಕುಟುಂಬ ಸಮೇತರಾಗಿ ಹೋಗಿನೋಡಿಕೊಂಡು ಬಂದು ನಿಜಕ್ಕೂ ಒಂದೊಳ್ಳೆಯ ಸಿನಿಮಾ ತಪ್ಪದೇ ನೋಡಲು ತಿಳಿಸಿದರು. ನಾವುಗಳು ನೋಡಿಕೊಂಡು ಬಂದೆವು.
ಮರುದಿನಕ್ಕೆ ಶಾಲೆಯಲ್ಲಿರುವ ಮಕ್ಕಳಿಗೆ ಈ ಸಿನಿಮಾ ತೋರಿಸಿದರೆ ಹೇಗೆ ಎನ್ನುವ ಆಲೋಚನೆ ಶಿಕ್ಷಕರೆಲ್ಲರೂ ಸೇರಿ ಮಾಡಿದೆವು. ಮತ್ತು ಅದಕ್ಕೆ ಸಂಬಂಧಿಸಿದಂತೆ SSLC ತರಗತಿಯನ್ನು ಹೊರತುಪಡಿಸಿ ಉಳಿದೆಲ್ಲಾ ತರಗತಿಯಲ್ಲಿ ಯಾರಾದರೂ ಸಿನಿಮಾ ನೋಡಲು ಆಸಕ್ತಿ ಇದ್ದರೆ ತಿಳಿಸಿ ಎಂದೆವು. ಮರುದಿನಕ್ಕೆ ಬಹಳಷ್ಟು ಮಕ್ಕಳು ಬರಲು ಪೋಷಕರಿಂದ ಒಪ್ಪಿಗೆಯನ್ನು ಪಡೆದು ಖಚಿತ ಪಡಿಸಿದರು. ತದ ನಂತರದಲ್ಲಿ ಥಿಯೇಟರ್‌ನವರ ಜೊತೆಗೆ ಮಾತನಾಡಿದಾಗ ಒಂದು ಅವಧಿಯ ಥಿಯೇಟರ್ ಪೂರ್ತಿಯಾಗಿ ಒಂದಿಷ್ಟು ರಿಯಾಯಿತಿಯಲ್ಲಿ ನಿಮಗೆ ನೀಡುವೆವು ಎಂದರು. ನಿಗದಿತ ದಿನದಂದು ಎಲ್ಲಾ ವಿದ್ಯಾರ್ಥಿಗಳು ಶಾಲೆಯಿಂದ ಥಿಯೇಟರ್‌ಗೆ ಹೊರಟೆವು ಇಡೀ ಥಿಯೇಟರ್ ತುಂಬಾ ನಮ್ಮ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಮಾತ್ರ ಇದ್ದೆವು. ಇದು ತರಗತಿಯಾಗಿಲ್ಲದೇ ಇದ್ದುದ್ದರಿಂದ ಮಕ್ಕಳೆಲ್ಲ ಒಂದಷ್ಟು ಸಲುಗೆಯಿಂದ ಇಂದ ಶಿಕ್ಷಕರ ಜೊತೆಗೆ ಪಾಠ-ಪದ್ಯಗಳ ವಿಷಯವನ್ನು ಬಿಟ್ಟು ಲೋಕಾಭಿರಾಮವಾಗಿ ಮಾತನಾಡ ತೊಡಗಿದರು. ಸೈನಿಕರ ಬಗೆಗೆ ಹೆಮ್ಮೆಯ ಭಾವನೆ ಮೂಡಿಸುವ ನೈಜಘಟನೆಯಾದಾರಿತ ಒಂದೊಳ್ಳೆಯ ಚಿತ್ರವಾಗಿತ್ತು.


ಸಿನಿಮಾ ಅರ್ಧ ಮುಗಿದನಂತರದಲ್ಲಿ ಥಿಯೇಟರ್‌ನ ತಿನಿಸಿನ ಅಂಗಡಿಯಲ್ಲಿ ಪೂರ್ತಿ ಮಕ್ಕಳೇ ತುಂಬಿಹೋಗಿದ್ದರು, ಅದೆಷ್ಟೋ ಆಹಾರ ಪದಾರ್ಥಗಳು ಕ್ಷಣಮಾತ್ರದಲ್ಲಿ ಖಾಲಿಯಾಗಿ ಹೋಗಿದ್ದವು. ಇವರು ಮಾಡುವ ವ್ಯಾಪಾರದ ಒಂದು ಚಿತ್ರ ತೆಗೆದದ್ದೇ ತಡ ಸಿಕ್ಕಸಿಕ್ಕವರೆಲ್ಲಾ ‘ಸೆಲ್ಫಿ’ ಎಂದು ಸಿಕ್ಕಾಪಟ್ಟೆ ಪೋಟೋ ತೆಗೆಸಿಕೊಂಡು ಆಗಿತ್ತು. ಎಲ್ಲರೂ ಉಳಿದರ್ಧ ಸಿನಿಮಾ ನೋಡುವಾಗ, ಸೈನಿಕರು ಗೆಲ್ಲುವ ಸಮಯದಲ್ಲಿ ‘ಭೋಲೋ ಭಾರತ್ ಮಾತಾಕಿ ಜೈ’ ಎನ್ನುವ ಉದ್ಘೋಷಗಳು ಮಕ್ಕಳಿಂದ ಪ್ರತಿದಿನವೂ ಪಾಠ-ಪುಸ್ತಕವೆಂದು ಶಾಲೆಯಲ್ಲಿ ಕಳೆಯುತ್ತಿದ್ದ ಮಕ್ಕಳು ಯಾವ ಯೋಚನೆಗಳಿಲ್ಲದೇ ಸಿನಿಮಾ ನೋಡಿ ಎಲ್ಲರೂ ಖುಷಿಯಲ್ಲಿದ್ದಾಗ ‘HOW IS THE JOSH?’ ಎಂದರೆ ‘HIGH SIR’ ಎನ್ನುವ ಸಿನಿಮಾದ ಡೈಲಾಗ್ ಹೇಳತೊಡಗಿದರು.


ಪೋಷಕರ ಜೊತೆಗೆ ಸಿನಿಮಾ ನೋಡುವುದು ಇದ್ದದ್ದೇ ಆದರೆ ಎಲ್ಲಾ ಶಾಲೆಯ ವಿದ್ಯಾರ್ಥಿಗಳು/ ಶಿಕ್ಷಕರು ಒಟ್ಟಿಗೆ ಸಿನಿಮಾ ನೋಡುವುದು ಅಪರೂಪವಾದದ್ದರಿಂದ ಒಂದೆರಡು ದಿನಗಳ ಮಟ್ಟಿಗೆ ಎಲ್ಲರೂ ಅದೇ ಗುಂಗಲ್ಲಿ ಇದ್ದರು. ಆದರೆ SSಐಅಮಕ್ಕಳು ಮಾತ್ರ ಪರೀಕ್ಷೆ, Project ಅದು ಇದು ಎಂದು ಪಾಪ ಅವುಗಳಲ್ಲೇ ಮುಳುಗಿಹೋಗಿದ್ದರು ಕೂಡ. ಶಾಲೆಯ ಉಳಿದೆಲ್ಲಾ ಮಕ್ಕಳು ಸಿನಿಮಾಗೆ ಹೋಗಿ ಬಂದದ್ದನ್ನು÷ಕAಡ ಇವರು , ‘ನಮಗೆ ಸಿನಿಮಾಗೆ ಕರೆದುಕೊಂಡು ಹೋಗಿ, ಪ್ಲೀಸ್ ಸರ್..’ ಎಂದರು. ಅವರಿಗೆ ಪೂರ್ವಸಿದ್ದತಾ ಪರೀಕ್ಷೆ ನಡೆಯುತ್ತಿತ್ತು ಅದು ಮುಗಿದ ನಂತರ ನೋಡೋಣ ಎಂದು ತಿಳಿಸಿದೆವು.


ಒಂದು ದಿನ Project Work ಗಾಗಿ ತರಗತಿಯಲ್ಲಿ ಪತ್ರಲೇಖನವನ್ನು ನೀಡಲು ಮುಂದಾಗಿದ್ದೆ ಮಕ್ಕಳು ಸಿದ್ದರಾಗಿ ಬಂದಿದ್ದರು. ಅವರೆಲ್ಲರಿಗೂ ತಿಳಿಸಿದ್ದು ಒಟ್ಟು ಐದು ಪತ್ರಗಳನ್ನು ಬರೆಯಬೇಕಿದೆ ೧.ರಜೆ ಅರ್ಜಿ, ೨.ರಸ್ತೆ ಸರಿಪಡಿಸುವಂತೆ ವ್ಯವಹಾರಿಕ ಪತ್ರ, ೩.ಕವನಗಳನ್ನು ಪ್ರಕಟಿಸುವಂತೆ ಪತ್ರಿಕೆಗೆ, ೪.ಶಾಲಾವಾರ್ಷಿಕೋತ್ಸವದ ಬಗ್ಗೆ ಅಣ್ಣನಿಗೆ, ಮತ್ತೊಂದು ‘ನಿಮಗೆ ಇಷ್ಟವಾದ ವಿಷಯದ ಬಗ್ಗೆ’ಬರೆಯಿರಿ ಎಂದು ಸಮಯ ನೀಡಿದೆ. ಪತ್ರಲೇಖನ ಬರೆಯುವುದರಲ್ಲಿ ಎಲ್ಲರೂ ನಿಸ್ಸೀಮರೇ ಆಗಿದ್ದರು. ಆದಷ್ಟು ಬೇಗ ಬರೆದು ಮುಗಿಸಿದರು. ಎಲ್ಲವನ್ನೂ ತಂದು ಅವುಗಳನ್ನು ಒಂದೊದನ್ನೇ ನೋಡುತ್ತಾ ಅಂಕಗಳನ್ನು ನೀಡುತ್ತಾ ಇದ್ದಾಗ ಅದರಲ್ಲಿ ಒಂದು ಪತ್ರ ಗಮನ ಸೆಳೆಯಿತು. ನಿಮಗೆ ಇಷ್ಟದ ವಿಷಯದ ಬಗ್ಗೆ ಪತ್ರಬರೆಯಿರಿ ಎಂದದ್ದಕ್ಕೆ ಅನುಕೀರ್ತನ ಎಂಬ ವಿದ್ಯಾರ್ಥಿನಿ, ‘ನಮ್ಮನ್ನು ಸಿನಿಮಾಗೆ ಕರೆದುಕೊಂಡು ಹೋಗುವ ಬಗ್ಗೆ ಪತ್ರ’ ಎಂಬ ವಿಷಯವನ್ನು ಕುರಿತು ಬರೆದಿದ್ದಳು. ಅದರಲ್ಲಿ ಹೀಗಿತ್ತು, ‘ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಸಿನಿಮಾಗೆ ಕರೆದುಕೊಂಡು ಹೋಗಿದ್ದಿರಿ, ಎಲ್ಲರೂ ಖುಷಿಯಾಗಿ ಇದ್ದಾರೆ, ಅವರುಗಳು ಹೇಳುವುದನ್ನು ನೋಡಿದರೆ ನಾವು ಬಹಳ ಮಿಸ್ ಮಾಡಿಕೊಂಡೆವು ಎನಿಸುತ್ತಿದೆ, ನಮ್ಮ ಪೂರ್ವಸಿದ್ದತಾ ಪರೀಕ್ಷೆಗಳು ಮುಗಿದಿರುವುದರಿಂದ ಎಲ್ಲಾ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡಲು ದಯಮಾಡಿ ನಮ್ಮನ್ನು ಸಿನಿಮಾಗೆ ಕರೆದುಕೊಂಡು ಹೋಗಬೇಕಾಗಿ ವಿನಂತಿ’ ಎಂಬ ಪತ್ರವನ್ನು ಓದಿ ನಗೆಬಂದಿತು, ಒಂದೆಡೆ ಆಶ್ಚಯರ್ವೂ ಆಯಿತು, SSLC ವಿದ್ಯಾರ್ಥಿಗಳನ್ನು ನೆನೆಸಿಕೊಂಡು ಅಯ್ಯೋಪಾಪ ಎನಿಸಿತು.


ಆ Project Work ನ್ನು ಮುಖ್ಯೋಪಾಧ್ಯಾಯರಿಗೆ ತೋರಿಸಿದೆ, ಅವರೂ ಕೂಡ ಕಿರುನಗೆಯನ್ನು ನಕ್ಕು, ಸರಿ ಇನ್ನೆರೆಡು ದಿನ ಬಿಟ್ಟುಹೋಗೋಣವೆಂದು ಮಕ್ಕಳಿಗೆ ತಿಳಿಸಿ ಎಂದರು, ತರಗತಿಗೆ ಹೋಗಿ ಪತ್ರವನ್ನು ಬರೆದಿದ್ದರ ಬಗ್ಗೆ ಮೇಲ್ನೋಟಕ್ಕೆ ಜೋರಾಗಿ, ‘ಇಷ್ಟವಾದ ಪತ್ರ ಬರೆಯಿರಿ ಎಂದರೆ ಸಿನಿಮಾಗೆ ಕರೆದುಕೊಂಡು ಹೋಗಿ ಅಂತನಾ ಬರಿಯೋದು? ನಾನಂತೂ ಮುಲಾಜಿಲ್ಲದೆ ಅದನ್ನು ಹೆಚ್.ಎಂ ಗೆ ತೋರಿಸಿದೆ.. ಏನಂದ್ರು ಗೊತ್ತಾ? ಅದನ್ನು ನೋಡಿ.. (ಎಲ್ಲರೂ ಏನೋ ಆಗಿದೆ ಅನ್ನೋ ತರದಲ್ಲಿ ಕಾತರದಿಂದ ಕಾಯ್ತಾ, ಕೇಳುವ ಕೂತುಹಲದಿಂದಿದ್ದರು) ಏನಂದ್ರು ಅಂದರೆ, ಯಾರುಯಾರು ಬರ್ತಾರೋ ಅವರನ್ನೆಲ್ಲ ಕರೆದುಕೊಂಡು ಸಿನಿಮಾಗೆ ಹೋಗೋಣ ಅಂದ್ರು.. ಉಸ್ಸಪ್ಪಾ ಎನ್ನುವ ಅದೇನೋ ಸಾಧಿಸಿದ ಉದ್ಘಾರ.. ಎಲ್ಲರೂ ಹೋ ಎನ್ನಲು ಶುರುಮಾಡ ತೊಡಗಿದರು. ಅಂತೂ ಇಂತೂ ಅಂಕಗಳಿಗಾಗಿ ಬರೆದ ಒಂದು ಪತ್ರ ಎಲ್ಲಾ ಮಕ್ಕಳನ್ನು ಸಿನಿಮಾಗೆ ಕರೆದುಕೊಂಡು ಹೋಗುವಂತೆ ಮಾಡಿತು.
SSLC ವಿದ್ಯಾರ್ಥಿಗಳು ಎಂದರೆ ಮೊದಲೇ ಎಲ್ಲಾ ಕಡೆಗಳಿಂದಲೂ ಒತ್ತಡದ ವಾತಾವರಣವನ್ನು ಎಲ್ಲರೂ ತಿಳಿದೋ ತಿಳಿಯದೆಯೋ ಸೃಷ್ಟಿಸಿರುತ್ತೇವೆ. ಓದಿನ ನಡುವೆ ಒಂದು ಬಿಡುವನ್ನು ಕೊಡುವ, ಒತ್ತಡವನ್ನು ಕಡಿಮೆ ಮಾಡುವ ಕೆಲಸ ಶಾಲೆಯಲ್ಲಿ ಮಾಡಿಯೇ ಮಾಡುತ್ತಾರೆ ಆದರೆ ಅದು ಮಗು ಬರೆದ ಬರಹದಿಂದ ಆಗಿದ್ದು ವಿಶೇಷವೇ ಸರಿ. ಅಂದ ಹಾಗೆ ಆ ಮಗು SSLC ಲಿ 618 ಅಂಕಗಳನ್ನು ಪಡೆದುಕೊಂಡಿತು.

 

error: Content is protected !!