ಮಳೆಯಿಂದಾಗಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ವಾರ್ಡುಗಳಲ್ಲಿ ಬಾಯ್ದೆರೆದ ರಸ್ತೆಗುಂಡಿಗಳು;
ರಸ್ತೆ ಕಾಮಗಾರಿ ನಡೆಸುವ ಕಂಟ್ರ್ಯಾಕ್ಟರ್ ಗಳ ಮೇಲೆ ಶಿಸ್ತುಕ್ರಮ ಜರುಗಿಸವುವವರು ಯಾರು..??

ದಾವಣಗೆರೆ: ಕಳೆದ ಕೆಲ ದಿನಗಳಿಂದ ದಾವಣಗೆರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ,ಇದಕ್ಕೆ ಕಳಪೆ ಗುಣಮಟ್ಟದ ರಸ್ತೆಗಳ ಡಾಂಬಾರು ಕಿತ್ತು ಬರುತ್ತಿದೆ. ಹೀಗಾಗಿ ನಗರದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು 15 ದಿನದ ಮಳೆಗೆ ಹಲವು ಭಾಗಗಳಲ್ಲಿ ರಸ್ತೆಗುಂಡಿ ಸೃಷ್ಟಿಯಾಗಿವೆ. ಇದರಿಂದ ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ, ಬಾರೋ ಬಾರೋ ಮಳೆರಾಯ ಅಂತಿದ್ದ ಸಿಟಿಮಂದಿಗೆ ಇದೀಗ ಮಳೆರಾಯನ ಎಂಟ್ರಿಯಿಂದ ಒಂದಷ್ಟು ಸಮಸ್ಯೆ ತಲೆದೂರಿದೆ. ಮಳೆರಾಯನ ಆಗಮನದಿಂದ ದಾವಣಗೆರೆ ಮಹಾನಗರ ಪಾಲಿಕೆಗಳ ಕೆಲವು ರಸ್ತೆಗಳ ಬಂಡವಾಳ ಮತ್ತೆ ಬಟಾಬಯಲಾಗಿದ್ದು, ಸಿಟಿಮಂದಿಯನ್ನ ಬೆಂಬಿಡದೇ ಕಾಡಿದ್ದ ರಸ್ತೆಗುಂಡಿಗಳು (potholes) ಮತ್ತೆ ಬಲಿಗಾಗಿ ಬಾಯ್ದೆರೆದಿವೆ.
ನಮ್ಮ ಜಿಲ್ಲೆಯ ಮಾನವನ್ನ ರಾಷ್ಟ್ರ ಮಟ್ಟದಲ್ಲಿ ಹರಾಜ್ ಹಾಕಿದ್ದ ರಸ್ತೆಗುಂಡಿಗಳು ಇದೀಗ ಮತ್ತೆ ಬಾಯ್ದೆರೆದಿವೆ. ಒಂದಷ್ಟು ದಿನದ ಮಳೆಗೆ ದಾವಣಗೆರೆಯ ಹಲವೆಡೆ ರಸ್ತೆಗುಂಡಿಗಳು ಕಾಣಿಸಿಕೊಂಡಿದ್ದು, ವಾಹನ ಸವಾರರಿಗೆ ಕಂಟಕವಾಗ್ತಿವೆ. ವಾರ್ಡು ನಂಬರ್ 41, ಎಪಿಎಂಸಿ ಮಾರ್ಕೆಟ್ ಹಿಂಭಾಗ, ಹಳೆ ಚಿಕ್ಕನಹಳ್ಳಿ, ಶ್ರೀರಾಂನಗರ , ಟಿವಿ ಸ್ಟೇಷನ್ ಮುಖ್ಯರಸ್ತೆಯಲ್ಲಿ ಡೆಡ್ಲಿಗುಂಡಿಗಳು ಕಾಣಿಸಿಕೊಂಡಿದ್ದು ಪ್ರತಿನಿತ್ಯ ಗುಂಡಿ ಮುಚ್ಚಿಲ್ಲ ಅಂತಾ ಜನರು ಕಿಡಿಕಾರುತ್ತಿದ್ದಾರೆ ಇನ್ನು ಈ ರಸ್ತೆಯಲ್ಲಿ ಮಳೆ ಬಂದಾಗ ನೀರು ತುಂಬಿ ರಸ್ತೆಗುಂಡಿಗಳು ಕಾಣದೇ ವಾಹನ ಸವಾರರಿಗೆ ಅಪಾಯ ತಂದಿಡ್ತಿದೆ. ಕಿತ್ತೋದ ರಸ್ತೆಯಲ್ಲೇ ಜಲಮಂಡಳಿಯ ಕಾಮಗಾರಿ ಕೂಡ ನಡಿತೀರೋದರಿಂದ ಜನರು ಮತ್ತಷ್ಟು ಅಪಾಯಕ್ಕೆ ಸಿಲುಕಿದ್ದಾರೆ. ಇಷ್ಟಾದ್ರೂ ಎಚ್ಚೆತ್ತುಕೊಳ್ಳದ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧ ಜನ ಕಿಡಿಕಾರುತ್ತಿದ್ದಾರೆ. ಮತ್ತೊಂದೆಡೆ ಸಿಟಿ ಮಂದಿಯ ನೆಮ್ಮದಿ ಕೆಡಿಸಿದ್ದ ರಸ್ತೆಗುಂಡಿಗಳು ನಿಧಾನಕ್ಕೆ ಕಣ್ತೆರೆಯುತ್ತಿವೆ. ಸದ್ಯ ಮಳೆಗಾಲ ಕೂಡ ಆರಂಭವಾಗ್ತಿದ್ದು ಅಪಾಯ ಆಗೋ ಮೊದಲೇ ಪಾಲಿಕೆ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು