Davanagere

ಅನಧಿಕೃತ ಪತ್ರಕರ್ತರಿಂದ ನೈಜ ಸುದ್ದಿಗಾರರಿಗೆ ಅನ್ಯಾಯ ವಾಗುತ್ತಿದೆ ; ಶಾಸಕ ಬಿ.ಪಿ.ಹರೀಶ್

ಹರಿಹರ : ಅನಧಿಕೃತ ಪತ್ರಕರ್ತರಿಂದ ನೈಜ ಸುದ್ದಿಗಾರರಿಗೆ ಅನ್ಯಾಯವಾಗುತ್ತದೆ ಇದನ್ನು ತಡೆಯುವಲ್ಲಿ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು. ನಗರದ ಶ್ರೀಮತಿ ಗಿರಿಯಮ್ಮ ಪ್ರೌಢಶಾಲೆ ಆವರಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಹರಿಹರ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಇತ್ತೀಚೆಗೆ ಯೂಟ್ಯೂಬ್ ಚಾನಲ್, ಅನಧಿಕೃತ ಪತ್ರಕರ್ತರು ಹೆಚ್ಚಾಗುತ್ತಿದ್ದು ಅವರಿಂದ ನೈಜ ಸುದ್ದಿಗಾರರಿಗೆ ಸಮಸ್ಯೆಯಾಗುತ್ತಿದೆ ಇದನ್ನು ತಡೆಯುವಲ್ಲಿ ರಾಜ್ಯ ಸಂಘಟನೆಯ ಮುಖ್ಯರು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಅನಧಿಕೃತ ಪತ್ರಕರ್ತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಹೀರಾತು ನೀಡುವ ಸಂದರ್ಭದಲ್ಲಿ ನೈಜ ಪತ್ರಿಕೆಯ ವರದಿ ಗಾರರಿಗೆ ಬಹಳಷ್ಟು ಅನ್ಯಾಯವಾಗುತ್ತಿದೆ ಇದನ್ನು ನಾವು ಸಹ ಕೆಲವೊಮ್ಮೆ ಯೋಚಿಸಬೇಕಾದಂತ ಅನಿವಾರ್ಯತೆ ಇದೆ. ಇತ್ತೀಚಿನ ಪತ್ರಕರ್ತರು ತಮಗೆ ಬೇಕಾದ ವ್ಯಕ್ತಿಗಳ ಸುದ್ದಿಗಳನ್ನು ವೈಭವೀಕರಿಸುವುದು ನೈಜ ಸುದ್ದಿಗಳ ಕಡೆ ಗಮನಹರಿಸದೆ ಇರುವುದು ನಡೆಯುತ್ತಿದೆ ಇದಕ್ಕೂ ಸಹ ಕಡಿವಾಣ ಹಾಕಬೇಕು.
ನೈಜ ಸುದ್ದಿ ಬರೆಯುವ ಪತ್ರಕರ್ತರು ಕಡಿಮೆಯಾದಾಗ ಅನಧಿಕೃತ ಪತ್ರಕರ್ತರ ಸಂಖ್ಯೆ ಹೆಚ್ಚಾಗಲು ಸಾಧ್ಯವಾಗುತ್ತದೆ ಆದ್ದರಿಂದ ನಿಶ್ಚಯಯಿಂದ ಶ್ರದ್ಧೆಯಿಂದ ಮಾಡಿದಾಗ ಅನಿರೀಕೃತ ಪತ್ರಕರ್ತರ ಬೆಳವಣಿಗೆ ಕಡಿಮೆಯಾಗುತ್ತದೆ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿ, ಪತ್ರಕರ್ತರೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದರು.
ಇದೇ ವೇಳೆ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರ್, ಕಾಂಗ್ರೆಸ್ ಮುಖಂಡ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ನಾಗರಾಜ್ ಬಡದಾಳ, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಜಿಲ್ಲಾ ಅಧ್ಯಕ್ಷ ಮಂಜುನಾಥ್ ಎಕ್ ಬೋಟಿ, ಹಾಗೂ ಹರಿಹರ ತಾಲೂಕ್ ಘಟಕದ ಅಧ್ಯಕ್ಷ ಶಾಂಭವಿ ನಾಗರಾಜ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ್,
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ನೂತನ ಅಧ್ಯಕ್ಷ ನಾಗರಾಜ್ ಬಡದಾಳ, ಜಿಲ್ಲಾ ಅಧ್ಯಕ್ಷ ಮಂಜುನಾಥ್,ಪ್ರಧಾನ ಕಾರ್ಯದರ್ಶಿ ಪಕ್ರುದ್ದೀನ್ ಮುಂತಾದ ವರು ಪತ್ರಕರ್ತರ ಇತ್ತೀಚಿನ ಹಾಗೂ ಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಮಾತನಾಡಿದರು.
ಈ ಸಮಯದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಫಕ್ರುದ್ದೀನ್, ಪದಾಧಿಕಾರಿಗಳಾದ ವೀರೇಶ್, ವೇದಮೂರ್ತಿ,ಹರಿಹರ ಘಟಕ ಕಾರ್ಯದರ್ಶಿ ಎಚ್.ಸಿ.ಕೀರ್ತಿ ಕುಮಾರ್, ಪದಾಧಿಕಾರಿಗಳಾದ ಶೇಖರ್ ಗೌಡ ಪಾಟೀಲ್,ಬಿ.ಎಂ. ಚಂದ್ರಶೇಖರ್, ಎಚ್.ಸುಧಾಕರ್, ಆರ್.ಮಂಜುನಾಥ, ಹೆಚ್ ಶಿವಪ್ಪ, ಸಂತೋಷ್ ನೋಟದವರ, ಮಹಬೂಬ್ ಆದ್ವಾನಿ, ಮಂಜುನಾಥ ಪೂಜಾರ್, ಆರ್.ಬಿ.ಪ್ರವೀಣ್,ಕುಂಬಾರ ಚೆಂದ್ರ ಶೇಖರ್, ಚಿದಾನಂದ ಕಂಚಿಕೇರಿ, ಗಂಗನರಸಿ ಜಿ.ಕುಮಾರ್, ಎಂ.ಎಸ್.ಆನಂದ್ ಕುಮಾರ್, ವಿಶ್ವನಾಥ ಮೈಲಾಳ್, ಜಿ.ಎಂ. ಮಂಜುನಾಥ, ಶೇಕಿಲ್ ಅಹ್ಮದ್, ಮಲೆಬೆನ್ನೂರಿನ ದೇವರಾಜ್, ನಟರಾಜನ್, ರಾಮಶ್ರೇಷ್ಠಿ, ಸದಾನಂದ, ಶಿವಕುಮಾ‌ರ್, ಎಂ.ಬಿ. ಆಬಿದ್ ಅಲಿ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!