ಪಾಲಿಕೆಯ ಸಾಮಾನ್ಯ ಶಾಖೆಯಲ್ಲಿ ಲೋಕಾಯುಕ್ತ ದೂರಿಗೆ ಒಳಗಾಗಿರುವ ಪಾಟೀಲನದೇ ಕಾರುಬಾರು
ಅಲೇಲೇ...ಸಿಂಗಲೀಕ...ಪಾಟೀಲ ಏನಪ್ಪ ನಿನ್ನ ಕರಾಮತ್ತು

ದಾವಣಗೆರೆ: ಪ್ರಿಯ ಓದುಗ ಮಿತ್ರರೇ, ಮೊನ್ನೆ ತಾನೇ ದಾವಣಗೆರೆ ಮಹಾನಗರ ಪಾಲಿಕೆಯ ಅವ್ಯೆವಸ್ಥೆ, ಭ್ರಷ್ಟಚಾರ, ಕರ್ತವ್ಯ ನಿರ್ಲಕ್ಷ್ಯತೆ, ಸಮಯಕ್ಕೆ ಸರಿಯಾಗಿ ಬಾರದ ಸಿಬ್ಬಂಧಿಗಳ ಬಗ್ಗೆ ನಮ್ಮ ಪತ್ರಿಕೆಯಲ್ಲಿ ನಮ್ಮ ಪತ್ರಿಕೆಯ ಸಂಪಾದಕರೂ ಎಳೆ ಎಳೆಯಾಗಿ ಬಿಡಿಸಿ ಸುದ್ಧಿ ಮಾಡಿದರೂ…. ಸಹ ಪಾಲಿಕೆ ಆಯುಕ್ತರು ಮಾತ್ರ ಯಾವುದೇ ರೀತಿಯ ಕ್ರಮ ಜರುಗಿಸದೆ ತಾವಾಯಿತು, ತಮ್ಮ ಕೆಲಸವಾಯಿತು ಅಂತ ಆರಾಮಾಗಿದ್ದಾರೆ ಅನಿಸುತ್ತೆ. ಆದ್ದರಿಂದಲೋ ಏನೋ ಈ ನಮ್ಮ ಸಿಂಗಲೀಕ ಪಾಟೀಲನೂ ಸಹ ಕತ್ತೆ ಮುಂದೆ ಕಿನ್ನರಿ ಬಾರಿಸಿದಂಗೆ ಅಂತೆ ನಮ್ಮ ಯಾವುದೇ ಸುದ್ದಿಯ ವರದಿಗೆ ಅಂಜದೆ ಅಳುಕದೆ ಆಯಾಗಿ ಬೇತಾಳನ ತರಹ ಅವರಿವರ ಟೇಬಲ್ ಬಳಿ ಹರಟೆ ಹೊಡೋಕಂತ ಓಡಾಡುತ್ತಿದ್ದಾನೆ. ಇನ್ನೂ ಈ ವ್ಯೆಕ್ತಿಯ ಕೆಲಸದ ರೀತಿ ಗಮನಿಸಿದರೆ ನಿಜಕ್ಕೂ ಬೇರೆ ಯಾರಾದರೂ ಆಯುಕ್ತರಾಗಿದ್ದರೆ ಕೂಡಲೇ ಅಮಾನತ್ತಿರಲಿ, ಕೆಲಸದಿಂದಲೇ ನಿಯುಕ್ತಿಗೊಳಿಸಲು ಆದೇಶ ಹೊರಡಿಸುತ್ತಿದ್ದರು. ಏಕೆಂದರೆ ಪಾಲಿಕೆಯ ಕೆಲಸದ ಸಮಯದಲ್ಲಿ ನಮ್ಮ ಪಾಟೀಲ್ ಸಾಹೇಬರೂ ತಮ್ಮ ವಿಕ್ರಮಾಧಿತ್ಯನ ಬೆನ್ನ ಹೇರಿಕೊಂಡು ಹೊರಗಡೆ ಅಂದರೆ ಕಚೇರಿಯ ಹೊರಗೆ ಜನತಾ ಬಜಾರ್ ಕೆ ಮುಖ ಮಾಡಿ ಟೀ ಕುಡಿಯಲಿಕ್ಕೆ ಹೋಗಿ, ಅಲ್ಲಿಂದ ೧೧ ಗಂಟೆ ೩೦ ನಿಮಿಷಕ್ಕೆ ಇಲ್ಲವೆ ೧೨ ಗಂಟೆಗೆ ಮಾವನ ಮನೆಗೆ ಬಂದವರಂತೆ ರಾರಾಜಿಸಿಕೊಂಡು ಬರುತ್ತಾನೆ. ಬೆಳಿಗ್ಗೆ ಬರುವ ಸಮಯ ೯ ಗಂಟೆ ೫೦ ನಿಮಿಷವಾದರೂ ಸಾಹೇಬರು ದುರ್ಗದ ಹುಲಿಯಲ್ವಾ ಅದಕ್ಕೆ ಆರಾಮಾಗಿ ೧೦ ಗಂಟೆ ೫೦ ನಿಮಿಷಕ್ಕೆ ಬರುತ್ತಾರೆ, ಬಂದು ಅರ್ಧ ಗಂಟೆಗೆ ಸಾಹೇಬರೂ ಟೀ ಕುಡಿಯಲಿಕ್ಕೆ, ಬಾತ್ ರೂಂ ಹೋಗಲಿಕ್ಕೆ ಸಮಯ ಕಳೆದರೆ ಇನ್ನು ಕೆಲಸ ಹೇಗೆ ಮಾಡುತ್ತಾರೆ ಎಷ್ಟೋತ್ತು ಮಾಡುತ್ತಾರೆ ಅನ್ನುವುದೇ ನಮಗೆ ಸಿಗಬೇಕಾದ ಉತ್ತರವಾಗಿದೆ.
ಇನ್ನು ಪಾಲಿಕೆ ಪಾಟೀಲನ ಸ್ವತ್ತಾಗಿರಬೇಕು ಅನಿಸುತ್ತೆ, ಪತ್ರಿಕೆಯಲ್ಲಿ ಸುದ್ಧಿ ಬಂದದ್ಧೇ ತಡ, ನಮ್ಮ ಪತ್ರಿಕೆಯ ಸಂಪಾದಕರೂ ಪಾಲಿಕೆಯಲ್ಲಿ ಯಾವುದಾದರೂ ಕೆಲಸದ ನಿಮಿತ್ತ ಹೋಗಿ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಮುಚ್ಚಿಟ್ಟು ಯಾರನ್ನು ಒಳಗಡೆ ಬಿಟ್ಟುಕೊಳ್ಳಬೇಡಿ ಎಂದು ಸಿಬ್ಬಂಧಿಗಳಿಗೆ ರೇಗಾಡಿದ್ದಾನಂತೆ… ಅಷ್ಟೇ ಅಲ್ಲ ಮೊನ್ನೆ ನಮ್ಮ ಪತ್ರಿಕೆಯ ಸಂಪಾದಕರು ಪಾಲಿಕೆಯ ಸಿಬ್ಬಂಧಿಗಳ ಮೇಲೆ ಅದರಲ್ಲೂ ಅಕ್ರಮವಾಗಿ ನಗರಸಭೆ ನಿವೇಶನಗಳನ್ನು ಏಜೆಂಟರುಗಳಿಗೆ, ಬ್ರೋಕರುಗಳಿಗೆ, ದುಡ್ಡಿರುವ ಆರ್.ಟಿ.ಐ ಕಾರ್ಯಕರ್ತರಿಗೆ ಅನಧಿಕೃತ ದಾಖಲೆಗಳ ಸೃಷ್ಠಿ ಮಾಡಿ ಖಾತೆ ಮಾಡುತ್ತಿದ್ದವರ ಮೇಲೆ ಲೋಕಾಯುಕ್ತ ದೂರು ದಾಖಲಾಗಿದ್ದು, ಪಾಲಿಕೆಯ ಆಯುಕ್ತರು ಸೂಕ್ತ ಕ್ರಮ ಜರುಗಿಸಿಲ್ಲವೆಂದು ಪತ್ರಿಕೆಯ ಸಂಪಾದಕರು ದೂರನ್ನು ನೀಡಿದರೆ, ಪಾಟೀಲ ಸಾಹೇಬ ಪಾಲಿಕೆಯ ವ್ಯೆವಸ್ಥಾಪಕನಾಗಿದ್ದು, ಆ ದೂರಿನ ಅರ್ಜಿಯನ್ನು ಸಿಬ್ಬಂಧಿಗಳು ಸ್ವೀಕರಿಸಿಕೊಳ್ಳದಂತೆ ತಡೆ ಹಿಡಿದಿದ್ದಾನೆ. ದೂರು ನೀಡಿ ಇಂದಿಗೆ ಒಂದು ವಾರಗಳೇ ಕಳೆದಿವೆ. ಇಂತಹ ಅವ್ಯವಸ್ಥೆಯ ನಡುವೆ ಪಾಟೀಲ ಸಾಹೇಬ ನಮ್ಮ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಿಬ್ಬಂಧಿಗಳಿಗೆ ಅದರಲ್ಲೂ ೫೨ ಜನ ಅಟೆಂಡರುಗಳು ಪೈಕಿ, ಇರುವ ೪೮ ಅಟೆಂಡರುಗಳಲ್ಲಿ ನಮ್ಮ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಿಬ್ಬಂಧಿಗಳಿಗೆ ಹೆಚ್ಚಿನ ಟಾರ್ಚರ್ ನೀಡುತ್ತಾನಂತೆ, ಕೇಳಿದರೆ ಅಹಂ ಮೂಲಕ ಗದರಿಸಿಕೊಳ್ಳುತ್ತಾನಂತೆ, ಕಣ್ಣ ಮುಂದೆಯೇ ಮೇಲ್ಜಾತಿಯವರಿಗೊಂದು ಕೆಳಜಾತಿಯವರಿಗೊಂದು ಕರ್ತವ್ಯ ನಿರ್ವಹಣೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದಾನೆ. ಇಂತಹ ನಾಲಾಯಕ್ ಅಧಿಕಾರಿ ನಮ್ಮ ಪಾಲಿಕೆಯ ಅಭಿವೃದ್ಧಿಗೆ ಉಪಯೋಗಕ್ಕೆ ಬಾರದ ಕಾರಣ ಮಾನ್ಯ ಪಾಲಿಕೆಯ ಶಿಸ್ತಿನ ಸಿಪಾಯಿಗಳಂತೆ ಕರ್ತವ್ಯ ನಿರ್ವಹಿಸುತ್ತಿರುವಂತೆ ತೋರ್ಪಡಿಕೆ ಮಾಡುವ ಆಯುಕ್ತರು ನಮ್ಮ ಪಾಟೀಲ್ ಸಾಹೇಬರನ್ನ ಕೂಡಲೇ ಕರ್ತವ್ಯದಿಂದ ಅಮಾನತ್ತುಗೊಳಿಸಿ, ಇಲ್ಲವೇ ಬೇರೆ ಕಡೆ ವರ್ಗಾವಣೆಯಾದರೂ ಮಾಡಲಿ ಎಂಬುದೇ ನಮ್ಮಯ ಮನವಿ.
ವರದಿ:- ಸೂರ್ಯಪ್ರಕಾಶ್.ಆರ್, ಸಂಪಾದಕರು