Davanagere

ಅದ್ದೂರಿಯಾಗಿ ಜರುಗಿದ ನಂದಿಬೇವೂರು ಬಸವೇಶ್ವರ ರಥೋತ್ಸವ

kadambakesari


ಹರಪನಹಳ್ಳಿ.ಏ.18: ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಅದ್ದೂರಿಯಾಗಿ ಶ್ರೀ ಬಸವೇಶ್ವರ ರಥೋತ್ಸವವು ಭಕ್ತರ ಸಮ್ಮುಖದಲ್ಲಿ ಜರುಗಿತು.ಬೆಳಿಗ್ಗೆಯಿಂದಲೇ ಶ್ರೀ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ತಳೀರು ತೋರಣ, ವಿವಿಧ ಬಣ್ಣಗಳ ಧ್ವಜಗಳನ್ನು ರಥೋತ್ಸವಕ್ಕೆ ಅಲಂಕರಿಸಲಾಗಿದ್ದು, ಸಂಜೆ ಚಿಗಟೇರಿ, ಬಾವಿಹಳ್ಳಿ, ನಂದಿಬೇವೂರು ತಾಂಡ, ಎಂ.ಕಲ್ಲಹಳ್ಳಿ, ಕಣಿವಿಹಳ್ಳಿ, ಮಹಜನದಹಳ್ಳಿ, ಕೊಂಗನಹೊಸೂರು ಸೇರಿದಂತೆ ಸುತ್ತಮುತ್ತಲಿನ ಭಕ್ತರು ನಂದಿಬೇವೂರು ಶ್ರೀ ಬಸವೇಶ್ವರರ ರಥೋತ್ಸವಕ್ಕೆ ಆಗಮಿಸಿ ಸಂಭ್ರಮ, ಸಡಗರದಿಂದ ರಥವನ್ನು ಎಳೆದರು. ಸೂಕ್ತ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಯಿತು.ಕೊಂಗನಹೊಸೂರು ಗ್ರಾಮದ ಡೈರಿ ಬಳಿ, ಪಶುವೈದ್ಯಾಧಿಕಾರಿ ಮಲ್ಲಿಕಾರ್ಜುನ ಮಸಲವಾಡ ರವರು ರಥೋತ್ಸವಕ್ಕೆ ತೆರಳುವ ಭಕ್ತರಿಗೆ ಉಚಿತವಾಗಿ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಿದರು. ಈ ವೇಳೆ ಬಿ.ವೀರಣ್ಣ, ಕೆಪಿಎಂ ಕೊಟ್ರಯ್ಯ, ಬೆಣ್ಣಿಹಳ್ಳಿ ಚನ್ನಬಸಪ್ಪ, ಯಲ್ಲಾಪುರ ನಿಂಗಪ್ಪ, ಮಹೇಶ್, ಕೆ.ಮಂಜುನಾಥ, ಸೇರಿದಂತೆ ಇತರರು ಇದ್ದರು.ತಾಲೂಕಿನ ಮುತ್ತಿಗಿ ಗ್ರಾಮದಲ್ಲಿ ಶ್ರೀ ದುರುಗಮ್ಮದೇವಿಯ ರಥೋತ್ಸವವ ನಡೆಯಿತು. ಬೆಳಿಗ್ಗೆ ಕುಂಕುಮ ವಿಶೇಷ ಪೂಜೆಯನ್ನು ನೇರವೇರಿಸಲಾಯಿತು. ರಥೋತ್ಸವಕ್ಕೆ ಆಗಮಿಸಿದ ಭಕ್ತರು ತೇರಿಗೆ ಕಾಯಿ ಒಡೆದು, ಬಾಳೆಹಣ್ಣು ಸಮರ್ಪಿಸಿದರು. ಸಕಲ ವಾದ್ಯಗಳೊಂದಿಗೆ ರಥೋತ್ಸವವನ್ನು ಎಳೆಯಲಾಯಿತು.ಈ ಸಂದರ್ಭದಲ್ಲಿ ಅರ್ಚಕ ಗುರುಬಸವರಾಜ, ಎ.ಎಂ.ಕೊಟ್ರಯ್ಯ, ಸಾಬಳ್ಳಿ ಮಂಜಪ್ಪ, ಕೆ.ರಾಮಪ್ಪ, ದುರುಗಪ್ಪ, ಡಿ.ಹನುಮಂತಪ್ಪ, ಕೆ.ಹಾಲಪ್ಪ, ಎಸ್.ಗೋಣೆಪ್ಪ, ಯು.ದುರುಗಪ್ಪ, ವಿರೇಶ್, ಚನ್ನಬಸಪ್ಪ, ಸೇರಿದಂತೆ ಭಕ್ತರು ಇದ್ದರು.ರಥೋತ್ಸವದ ಸಂದರ್ಭದಲ್ಲಿ ಪೋಲಿಸ್ ಬಂದೋಬಸ್ತ ಏರ್ಪಡಿಸಲಾಯಿತು.

error: Content is protected !!