ಪಾಲಿಕೆಯೊಳಗೆ ಕೆಲಸಕ್ಕೆ ಬಾರದ ನಾಲಾಯಕ್ ಅಧಿಕಾರಿಗಳು;ಪಾಲಿಕೆಯ ಲಜ್ಜೆಗೇಡಿ ನೋಟಿಸುಗಳಿಗೆ ಕ್ಯಾರೇ ಎನ್ನದ ಮಹಾಲಿಂಗಪ್ಪ ಶಾಲೆ
ಅಕ್ರಮವಾಗಿ ಬೆಸ್ಕಾಂನ ಹೈಟೆನ್ಸ್ ಲೈನ್ ಹಾಗೂ ಪಾಲಿಕೆಯ ರಾಜಕಾಲುವೆಯ ಮೇಲೆ ಅಕ್ರಮ ಭೂಕಬಳಿಕೆ & ಕಟ್ಟಡ ನಿರ್ಮಾಣ

ದಾವಣಗೆರೆ: ನಗರದಲ್ಲಿ ದುರ್ಬಲ ವರ್ಗದ, ಬಡತನ ರೇಖೆಗಿಂತ ಕಡಿಮೆಯಿರುವ ಜನ ಸಾಮಾನ್ಯರು ಏನಾದರೂ ಖಾಲಿ ಇರುವ ಜಾಗಗಳಲ್ಲಿ ತಮ್ಮ ಕುಟುಂಬದವರೊAದಿಗೆ ಜೀವನಕ್ಕೆ ಗುಡಿಸಲು ಹಾಕಿಕೊಂಡರೆ, ತಕ್ಷಣ ದೊಡ್ಡ ದೊಡ್ಡ ಖದೀಮ ಕಳ್ಳರು ಪಾಲಿಕೆಯಿಂದ ಹಿಡಿದು ಜಿಲ್ಲಾಡಳಿತ, ಶಾಸಕರಕಿವಿಯವರೆಗೂ ತಕ್ಷಣವೇ ಖಾಲಿ ಸರ್ಕಾರಿ ಸೌಮ್ಯಕ್ಕೇ ಸೇರಿದ ಸ್ವತ್ತು ಎಂದು ಬೋರ್ಡನ್ನು ತಗಲು ಹಾಕಿ ಬಿಡುತ್ತಾರೆ. ಅದೇ ದೊಡ್ಡ ದೊಡ್ಡ ತಿಮಿಂಗಿಲಗಳು ಜೀವನಕ್ಕಿರಲಿ ಸ್ವಾಮಿ ತಮ್ಮ ದುಡಿಮೆಗಾಗಿ ಲಕ್ಷ ಲಕ್ಷ ಹಣ ಮಾಡುವುದಕ್ಕಾಗಿ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ಜಾಗವನ್ನು ಕಬಳಿಸಿ ವರುಷವಲ್ಲ ಅವರ ಜನುಮವೇ ಮುಗಿಯುವುದಕ್ಕೆ ಬಂದರೂ ಸಹ ಅಲ್ಲಿಂದ ಅವರನ್ನು ಖಾಲಿ ಮಾಡಿಸುವುದಿರಲಿ, ಅವರಿಗೆ ಒಂದೇ ಒಂದು ನೋಟಿಸು ಕೊಡುವುದಕ್ಕೆ ಧೈರ್ಯವಿರುವುದಿಲ್ಲ. ಇದು ನಮ್ಮ ದೇಶದ ಸ್ಥಿತಿ, ಮೋದಿ ಬಂದರೂ ಗಾAಧಿ ಬಂದರೂ ಅಷ್ಟೇ ಆಗಿದೆ. ಇದಕ್ಕೆ ಜ್ವಲಂತ ನಿದರ್ಶನವೆAದರೆ ನಗರ ಭಾಗದಲ್ಲಿ ಮಾಡಿರುವ ಒಂದು ದೊಡ್ಡ ಶಿಕ್ಷಣ ಸಂಸ್ಥೆಯು, ತಮ್ಮ ಸ್ವಾರ್ಥ ದುಡಿಮೆಗಾಗಿ ಪಾಲಿಕೆ ಮತ್ತು ದೂಢಾದಿಂದ ಲೇಔಟ್ ಪ್ಲಾನ್ ಇಟ್ಟುಕೊಂಡಿದ್ದರೂ ಸಹ ಅನಧಿಕೃತವಾಗಿ ಕಟ್ಟಡ ಕಟ್ಟಿಕೊಂಡಿದೆ. ಅಲ್ಲದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸುತ್ತೋಲೆಗಳ ಪ್ರಕಾರ ಅತಿ ಹೆಚ್ಚಿನ ಅಂದರೆ ಅಧಿಕ ಒತ್ತಡ ಪ್ರಸರಣ ಮಾರ್ಗಗಳ ಗೋಪುರಗಳ ಮಾರ್ಗಗಳಲ್ಲಿ ಯಾವುದೇ ರೀತಿಯ ಕಟ್ಟಡ, ಮನೆ ಕಟ್ಟುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ಅಲ್ಲಿಯ ಜಾಗವನ್ನು ಅತಿಕ್ರಮಿಸಿ ತಮ್ಮ ಸ್ವಂತ ದುಡಿಮೆಗೆ ದುರುಪಯೋಗ ಪಡಿಸಿಕೊಂಡು ಜೀವ ಹಾನಿ ತರುವುದು ಮತ್ತು ವಿದ್ಯುತ್ ಪೂರೈಕೆಗೂ ಆಡಚಣೆ ಮಾಡುವುದು, ಇಂಡಿಯನ್ ಎಲೆಕ್ಟಿçಕ್ ಸಿಟಿ ಅಧಿನಿಯಮ-1956, ಇಂಡಿಯನ್ ಎಲೆಕ್ಟಿçಕ್ ಸಿಟಿ ಆಯಕ್ಟ್ 1910 ಮತ್ತು 2003ರನ್ವಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕರ್ನಾಟಕ ಪೌರ ಮಹಾನಗರಪಾಲಿಕೆಗಳ ಅಧಿನಿಯಮ 1976 ಹಾಗೂ ನಿಯಮ-1977 ರಂತೆ ಕಲಂ 233, 234, 241 ರಂತೆ, ಅನುಮತಿಯಿಲ್ಲದ್ ಚರಂಡಿ ಮೇಲೆ ಕಟ್ಟಡಗಳನ್ನು ನಿರ್ಮಿಸುವುದು, ಚರಂಡಿಗಳ ಜೊತೆ ಸಂಪರ್ಕ ಸಾಧಿಸುವುದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಅಂತಹ ಅಪರಾಧವನ್ನು ಶ್ಯಾಮನೂರು ಎಜ್ಯುಕೇಸನಲ್ ಟ್ರಸ್ಟನ ಅಧೀನದಲ್ಲಿರುವ ಪುಷ್ಪಾ ಮಹಾಲಿಂಗಪ್ಪ ಶಿಕ್ಷಣ ಸಂಸ್ಥೆಯ ಮಾಲೀಕರು ಹಾಗೂ ಅವರ ಸಹೋದರರು ಕೃತ್ಯ ಎಸಗಿದ್ದಾರೆ. ದಾವಣಗೆರೆ ತಾಲ್ಲೂಕಿನ ನಗರ ಭಾಗಕ್ಕೆ ಹೊಂದಿಕೋAಡಿರುವ ಶಾಲೆಯ ಮಾಲೀಕರು ಮಹಾನಗರ ಪಾಲಿಕೆಗೆ ಸೇರಿರುವ ಜಾಗವನ್ನು ಕರ್ನಾಟಕ ಬ್ಯಾಂಕ್ ಹಾಗೂ ಪ್ರಗತಿ ಕೃಷ್ಣ ಬ್ಯಾಂಕ್ ಗಳಲ್ಲಿ ಕೋಟಿಗಟ್ಟಲೇ ಸಾಲವನ್ನು ಪಡೆದುಕೊಂಡು, ಸರ್ಕಾರದ ಸುತ್ತೋಲೆಗೂ ಮೀರಿದ ಹಣವನ್ನು ವಸೂಲಿ ಮಾಡಿಕೊಂಡು,ಸAವಿಧಾನದ ಮೂಲ ಹಕ್ಕುಗಳಲ್ಲಿ ಒಂದಾಗಿರುವ ಶಿಕ್ಷಣವನ್ನು ಉದ್ಧಿಮೆಯನ್ನಾಗಿಸಿಕೊಂಡು ಪಾಲಿಕೆಗೆ ಮತ್ತು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಪಾಲಿಕೆಯ ರಾಜಕಾಲುವೆ ಜಾಗವನ್ನು ಕಬಳಿಸಿದ್ದಲ್ಲದೆ, ಅನಧಿಕೃತವಾಗಿ ಕಾಂಪೌAಡ್ ಕಟ್ಟಡವನ್ನು ಕಟ್ಟಿ, ರಾಜಕಾಲುವೆಯ ಮೇಲೆಯೇ ವೇದಿಕೆಯ ನಿರ್ಮಿಸಿಕೊಂಡಿದ್ದಾರೆ. ಅಲ್ಲದೆ ಶಾಲೆಯು ವಿದ್ಯಾರ್ಥಿಗಳಿಂದ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದಲ್ಲದೆ, ಬೆಸ್ಕಾಂನ ಆದೇಶವನ್ನು ಮೀರಿ ಬೆಸ್ಕಾಂನ ಹೈಟೆನ್ಸನ ಲೈನ್ ಅನ್ನು ತಮ್ಮ ಬೆನಾಮಿ ಕಟ್ಟಡದೊಳಗೆ ಮುಚ್ಚಿಕೊಂಡು ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡುತ್ತಿದೆ. ಇನ್ನು ಶ್ಯಾಮನೂರು ಗ್ರಾಮ ಸರ್ವೇ ನಂ 124 ರಿಂದ 127ರವರೆಗೆ ಇರುವ ಜಮೀನನ್ನು ಮಹಾಲಿಂಗಪ್ಪ ಅವರ ಸಹೋದರ ಭೀಮ ೧೯೮೪ರ ಜುಬಾನಿ ಪಾಲು ವಿಭಾಗದ ಮೂಲಕ ತಮ್ಮ ಪೂರ್ವಿಕರ ಆಸ್ತಿಯನ್ನು ಪಾಲು ವಿಭಾಗ ಮಾಡಿಕೊಂಡಿದ್ದು, ಅಲ್ಲಿAದ ತಮ್ಮ ಸ್ವಂತ ಜಮೀನನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇ ಔಟ್ ಪ್ಲಾ÷್ಯನ್ ಕೂಡ ತಯಾರಿಸಿಕೊಂಡು, ಹೆಸರಿಗೆ ಮಾತ್ರ ರಸ್ತೆ, ಡ್ರೆöÊನೇಜ್, ಪಾರ್ಕ್ ಅಂತ ಬಿಟ್ಟಿದ್ದು ಈಗ ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ತಮ್ಮ, ಪಾಲಿಕೆಯ ಡ್ರೆöÊನೇಜ್ ರಾಜಕಾಲುವೆ ಚರಂಡಿಗಳನ್ನು ಮತ್ತು ಬೆಸ್ಕಾಂನ ಹೈ ಟೆನ್ಸನ್ ಲೈನ್ ಗಳನ್ನು ಸಹ ಕಟ್ಟಡದೊಳಗೆ ವಿಲೀನಗೊಳಿಸಿಕೊಂಡು ಬಹುಅಂತಸ್ತಿನ ಕಟ್ಟಡ ನಿರ್ಮಿಸಿಕೊಂಡು ಬಾಡಿಗೆಗೆ ಜನರಿಗೆ ಭೋಗ್ಯಕ್ಕೆ ನೀಡಿದ್ದಾರೆ. ಅಲ್ಲದೆ ಜನರಿಗೆ ಗೊತ್ತಾಗದಂತೆ ಪಾಲಿಕೆಯ ಡ್ರೆöÊನೇಜ್, ರಾಜಕಾಲುವೆಯ ಮೇಲೆ ಮಣ್ಣನ್ನು ಹಾಕಿ ಖಾಲಿ ನಿವೇಶನದಂತೆ ಮಾಡಿ ತಮ್ಮ ಸ್ವಂತ ಜಾಗವೆಂದು ಕಾAಪೌAಡ್ ಹಾಕಿಕೊಂಡಿದ್ದಾರೆ. ಇAತಹ ಕಮರ್ಶಿಯಲ್ ಆಲೋಚನೆ ಹೋಂದಿರುವ ಹಾಗೂ ಶಿಕ್ಷಣವನ್ನ ಮಾರಾಟ ಮಾಡಿ ದುಡ್ಡು ಮಾಡುತ್ತಿರುವ ವ್ಯೆಕ್ತಿಗಳ ವಿರುದ್ಧ ಜಿಲ್ಲಾಡಳಿತಕ್ಕೆ, ಮಹಾನಗರಪಾಲಿಕೆಗೆ ದೂಢಾ ಕಛೇರಿಗೆ, ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಇಲ್ಲಿಯವರೆಗೂ ನಿರ್ಲಕ್ಷ÷್ಯದ ವ್ಯೆವಹಾರಿಕತೆಯನ್ನು ಹೊಂದಿದ್ದಾರೆ ನಮ್ಮ ಜಿಲ್ಲೆಯ ಅಧಿಕಾರಿಗಳು. ಅದರಲ್ಲಿಯೂ ಮಹಾನಗರಪಾಲಿಯೆ ಆಯುಕ್ತೆ ನಿಜಕ್ಕೂ ಕೆಲಸಕ್ಕೆ ಬಾರದ ಒಬ್ಬ ಅನಕ್ಷರಸ್ಥರಾಗಿದ್ದಾರೆ. ಇವರ ಜೊತೆ ಈ ಹಿಂದೆ ಸ್ಥಳ ಪರಿಶೀಲನೆ ಮಾಡಿದ ವಲಯ ಕಚೇರಿ-೩ರ ಸಿಬ್ಬಂಧಿಗಳಾದ ಎ.ಆರ್.ಓ ಈರಮ್ಮ, ಅಂದು ಪ್ರಭಾರ ವಲಯ ಆಯುಕ್ತ ಗಡ್ಡಬಾಬಾ ಇಸ್ಮಾಯಿಲ್, ಖದೀಮರ ಖದೀಮ ಎ.ಇ ಅನೂಪ್, ಗೊತ್ತು ಗೊತ್ತಿಲ್ಲದಂತ ನಟಿಸುವ ಜೆ.ಇ ಶೃತಿ ಎಲ್ಲರೂ ಸೇರಿ ಸಂಸ್ಥೆಯ ಎAಜಲಾಸೆಗೆ ಸಂಸ್ಥೆಯ ಅಕ್ರಮವನ್ನು ಮುಚ್ಚಲು ನಮ್ಮ ಪತ್ರಿಕೆಯ ಸಂಪಾದಕರಿಗೆ ಬರೋಬ್ಬರಿ ೧ ವರ್ಷ ೪ ತಿಂಗಳವರೆಗೂ ಕೇವಲ ನೋಟೀಸ್ ನೀಡಿದ್ದೇವೆ ಎಂಬ ಬೇಜಾವಾಬ್ದಾರಿ ಮಾತುಗಳೇ ಹೆಚ್ಚಾಗಿವೆ. ಇವರ ಹಿಡಿತ ಕಂಡುಕೊAಡ ಮಹಾಲಿಂಗಪ್ಪ ಕೊನೆಗೆ ನಮ್ಮ ಪತ್ರಿಕೆಯ ಸಂಪಾದಕರಿಗೇ ಹಣದ ಆಮೀಷವನ್ನು ಒಡ್ಡಿ ಒಬ್ಬ ಸರ್ಕಾರಿ ಅಧಿಕಾರಿಯ ಬಳಿ ೨೦೦೦೦/- ರೂಗಳ ಲಂಚವ ಕೊಟ್ಟು ಕಳುಹಿಸಿದ್ದಾರೆ. ಅಲ್ಲದೆ ನಾವು ಪಾಲಿಕೆಯ ಬಳಿ ಇದರ ಬಗ್ಗೆ ಮಾತನಾಡಿದರೆ ಕೋರ್ಟ್ ಮೊರೆ ಹೋಗಿ ನೋಟಿಸಿಗೆ ತಡೆಯಾಜ್ಷೆ ತರುತ್ತೇವೆ ಎಂದು ಬೊಬ್ಬೆ ಹೊಡೆದಿದ್ದಾನೆ. ಇದರ ಬಗ್ಗೆ ಮಾಹಿತಿ ಕೇಳಲು ಹೋದರೆ ಅನೂಪ್ ಎಂಬ ಖದೀಮರ ಖದೀಮ ಮಹಾಲಿಂಗಪ್ಪರ ಸಾಲೆಯ ಬಳಿಯೇ ಮನೆ ಮಾಡಿದ್ದಾನೆ ಅನಿಸುತ್ತೇನೋ ನಮ್ಮ ಪತ್ರಿಕೆಯ ಸಂಪಾದಕರು ಮಹಾನಗರಪಾಲಿಕೆಗೆ ಬಂದು ಹೋದ ಎರಡು ಸೆಕೆಂಡಿಗೆ ಮಾಹಿತಿ ರವಾನಿಸುತ್ತಾನೆ. ಇಂತಹ ಕೆಟ್ಟ ಹುಳುಗಳನ್ನು ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಲು ಅನುಮತಿ ನೀಡಿರುವ ಪಾಲಿಕೆ ಆಯುಕ್ತೆ ಹೇಗೆ ಇರುತ್ತಾರೋ… ಶಿವನಿಗೆ ಗೊತ್ತು. ಇಂತಹ ಲಜ್ಜೆಗೇಡಿತನ ಕೆಲಸವನ್ನು ಜನ ಸಾಮಾನ್ಯರೂ ಮಾಡಿಕೊಳ್ಳುವುದು ತಪ್ಪೇ ಎಂಬ ಯಕ್ಷ ಪ್ರಶ್ನೆ ನಮ್ಮ ಪತ್ರಿಕಯದ್ದಾಗಿದೆ. ಅಲ್ಲದೇ ಈ ಒಂದು ಲೇಖನವನ್ನು ಓದಿಯೂ ಸಹ ಸಂಬAಧಪಟ್ಟ ಪಾಲಿಕೆ ಅಧಿಕಾರಿಗಳು, ಜಿಲ್ಲಾಡಳಿತಾಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ದೂಢಾ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೊAದು ದಿನ ನಮ್ಮ ಪತ್ರಿಕಾ ತಂಡವೂ ಸಹ ಬೇನಾಮಿಯಾಗಿ ಶಿಕ್ಷಣ ಸಂಸ್ಥೆಗಳ ಪಕ್ಷದಲ್ಲಿಯೇ ಕಟ್ಟಡ ಕಟ್ಟಲೂ ಸಿದ್ದವಾಗುತ್ತದೆ ಎಂಬ ಅಂಶವನ್ನು ತಿಳಿಯಪಡಿಸಲು ಇಚ್ಚಿಸುತ್ತದೆ.
ವರದಿ : ಸೂರ್ಯಪ್ರಕಾಶ್ ಆರ್, ಸಂಪಾದಕರು
hw-remosaic: 0;
touch: (-1.0, -1.0);
modeInfo: ;
sceneMode: Night;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;