ಆಶ್ರಯ ಮನೆಗಳನ್ನು ಕಾಲಾವಧಿಗೂ ಮುನ್ನವೇ ಕುಟುಂಬದ ವ್ಯಕ್ತಿಗಳಿಗೆ ಪರಭಾರೆ ಮಾಡಿದ ಪಾಲಿಕೆಯ ಮಾಜಿ ಗೋಲ್ ಮಾಲ್ ಕೃಷ್ಣ
ಜಮೀರ್ ಸಾಹೇಬರಿಗೂ ದೂರು ನೀಡಿದರೂ ಕ್ರಮ ತೆಗೆದುಕೊಳ್ಳದ ಪಾಲಿಕೆ ಆಯುಕ್ತೆ ರೇಣುಕಾ...??

ದಾವಣಗೆರೆ : ದಾವಣಗೆರೆ ನಗರ ಭಾಗದಲ್ಲಿ ಸರ್ಕಾರದ ಸುತ್ತೋಲೆ- ಎಂಡಿ ಆರ್.ಜಿ ಆರ್.ಹೆಚ್.ಸಿ.ಎಲ್ ೫೮ ವಿಎಸ್ ಎಲ್ ೨೦೧೯/೩೪೪೩ ರಂತೆ, ಸರ್ಕಾರದ ಪತ್ರ ಸಂಖ್ಯೆ ವ.ಇ ೨೯ ಹೆಚ್.ಎ.ಹೆಚ್/೨೦೧೧, ದಿನಾಂಕ ೧೭/೦೬/೨೦೧೦ ರಂತೆ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ರಾಜೀವ್ ಗಾಂಧಿ ಆಶ್ರಯ ಯೋಜನೆ ಹಾಗೂ ವಾಜಪೇಯಿ ನಗರ ನಿವೇಶನ ಯೋಜನೆಗಳಡಿ, ಸರ್ಕಾರದ ಮಾರ್ಗಸೂಚಿಯಂತೆ ಅಂದಿನ ಜಿಲ್ಲಾಧಿಕಾರಿಗಳಾದ ಕೆ.ಶಿವರಾಂ ರವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವಸತಿ ರಹಿತರಿಗೆ ಮತ್ತು ಪರಿಶಿಷ್ಟ ಜಾತಿ/ ಪಂಗಡದ ಜನರಿಗೆ ಶೇ ೧೭.೫೦% ರಷ್ಟು ಮೀಸಸಲಾತಿಯಡಿ ಮಂಜೂರು ಮಾಡಿರುತ್ತಾರೆ. ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆ / ಪ್ರದೇಶಗಳಲ್ಲಿ ಅದರಂತೆ ಫಲಾನುಭವಿಯು ಆರ್ಥಿಕವಾಗಿ ಹಿಂದುಳಿದಿದ್ದು, ವಾರ್ಷಿಕ ಆದಾಯ ಬಡತನ ರೇಖೆಗಿಂತ ಕೆಳಗಿರುವವರಿಗೆ ನಿಗದಿಪಡಿಸಿದ ಮಿತಿಗಿಂತ ಕಡಿಮೆ ಇರುವ, ಬೇರೆ ಯಾವುದೇ ಯೋಜನೆ / ಇಲಖೆಯ ಸೌಲಭ್ಯ ಹೊಂದಿರದ, ಸರ್ಕಾರಿ ಕೆಲಸದಲ್ಲಿಲ್ಲದ ಫಲಾನುಭವಿಗಳಿಗೆ ನೀಡಬೇಕೆಂದು ಆದೇಶಿಸಿದ್ದು, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಾತ್ರ ಬೇಲಿಯೇ ಎದ್ದು
ಹೊಲ ಮೇಯ್ದಂತೆ ಕೆಲವು ಅಧಿಕಾರಿಗಳೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ದೊರಕಿದ್ದ ನಿವೇಶನಗಳನ್ನು / ಮನೆಗಳನ್ನು ಬೇರೆ ಜನಾಂಗದ ವ್ಯೆಕ್ತಿಗಳಿಗೆ ಯಾವುದೇ ಸರ್ಕಾರದ ನಡಾವಳಿಗಳನ್ನು ರೂಪಿಸದೆ ವರ್ಗಾಯಿಸಿರುತ್ತಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಕೆಲವು ದಾಖಲಾತಿಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದುಕೊಂಡಿದ್ದು, ಅವುಗಳ ಸಂಪೂರ್ಣ ವಿವರಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.
hist0~15: 0.0;
ರಾಜೀವ್ ಗಾಂಧೀ ಬಡಾವಣೆಯ ಪಾಲಿಕೆಯ ಚಾಲ್ತಿ ಡೋರ್ ನಂಬರ್ ೨೨೯ ಮೂಲ ಮಾಲೀಕರು ಜಯ್ಯಮ್ಮ ಕೋಂ ಲೇಟ್ ತಿಮ್ಮನಗೌಡ (ಹಕ್ಕುಪತ್ರದಲ್ಲಿ ತಿದ್ದುಪಡಿ ಮಾಡಿದ್ದು ಲೇಟ್ ತಮ್ಮನಗೌಡ ಆಗಿದೆ) ಮತ್ತು ೨೨೫ ಮೂಲ ಮಾಲೀಕರು ಹೊನ್ನಮ್ಮ ಕೋಂ ದೇವರಾಜ್ ಆಗಿದ್ದು, ಪಾಲಿಕೆ ಈ ಹಿಂದೆ ನಗರಸಭೆ ಆಗಿದ್ದಾಗ ಆ ನಗರಸಭೆ ಕಚೇರಿಯಲ್ಲಿ ನಿವೇಶನ ಶಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ , ಪ್ರಸ್ತುತ ಪಾಲಿಕೆಯ ವಲಯ ಕಚೇರಿ-೦೩ರ…. ಎಕ್ಸಟ್ರಾ ಮಾಜಿ ನೌಕರ…/>(ಈಗ ಬೇರೆ ಕಡೆ) ಕಂದಾಯಾಧಿಕಾರಿಯಾಗಿರುವ ಕೃಷ್ಣ ಎಂಬ ವ್ಯೆಕ್ತಿಯೇ ಸರ್ಕಾರದ ಷರತ್ತುಗಳನ್ನೇ ಉಲ್ಲಂಘಿಸಿ, ಬೇರೆ ಯಾರೋ ವ್ಯೆಕ್ತಿಗಳನ್ನು ಕರೆಯಿಸಿ ಜಿ.ಪಿ.ಎ ಮೂಲಕ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ನೋಂದಾಯಿಸಿಕೊಂಡು, ಬಡ ವರ್ಗದವರು ಇರಬೇಕಾದ ಸರ್ಕಾರದ ನಿವೇಶನಗಳಲ್ಲಿ ತನ್ನ ಗೋಲ್ ಮಾಲ್ ಆಟದ ಮೂಲಕ ಪಾಲಿಕೆ ಖಾತೆ ವಹಿಯಲ್ಲಿ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾಯಿಸರುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರ ಬಗ್ಗೆ ಸುಮಾರು ಬಾರಿ ಈಗಿನ ಪಾಲಿಕೆಯ ಆಯುಕ್ತರಿಗೆ ದೂರು ನೀಡಿದರೂ ಆಡಿದ್ದೇ ಆಡು ಕಿಸ ಬೈ ದಾಸ ಎಂಬಂತೆ ನಮ್ಮ ಆಯುಕ್ತರು, ನೋಡೋಣ ತಗೋಳ್ಳಿ, ನಮ್ಮವರಿಗೆ ಹೇಳ್ತೀನಿ, ಡೆಪ್ಯೂಟಿ ಕಮಿಷನರ್ ಲಕ್ಷ್ಮೀ ಅವರಿಗೆ ತಿಳಿಸುತ್ತೇನೆ ಎಂದು ಜಾರಿಕೊಳ್ಳುತ್ತಾರೆ. ಇನ್ನು ಲಕ್ಷ್ಮೀ ಅವರು, ಆಯ್ಯೋ ನಮಗೆ ಗಮನಕ್ಕೆ ಇಲ್ಲಾರಿ, ನಾನು ಹೇಗೆ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ. ಕೊನೆಗೆ ಮಾನ್ಯ ವಸತಿ ಸಚಿವರಿಗೂ ಮತ್ತು ರಾಜೀವ್ ಗಾಂಧಿ ವಸತಿ ನಿಗಮ ಮಂಡಳಿಗೂ ದೂರು ನೀಡಿದರೂ ಇಲ್ಲಿಯವರೆಗೂ ಯಾವುದೇ ರೀತಿಯ ಕ್ರಮ ಜರುಗಿಲ್ಲ.
ಇವಷ್ಟೇ ಅಲ್ಲದೇ ಪರಿಶಿಷ್ಟರಿಗೆ ನೀಡಿರುವ ಮನೆ ಮತ್ತು ನಿವೇಶನಗಳು ಮೇಲ್ವರ್ಗದ ಜನರಿಗೆ ಇದೇ ಪಾಲಿಕೆಯ ಸಿಬ್ಬಂಧಿಗಳು ಬೇರೆ ಬೇರೆ ವ್ಯೆಕ್ತಿಗಳಿಗೆ ಖಾತೆ ಮಾಡಿ ಕೊಟ್ಟಿರುವುದು ನಿಜಕ್ಕೂ ಶೋಚನೀಯವಾಗಿದೆ. ಹೆಸರಿಗೆ ಮಾತ್ರ ಪರಿಶಿಷ್ಟರ ಮನೆ ಅಥವಾ ನಿವೇಶನಗಳನ್ನು ಯಾವುದೇ ಕಾರಣಕ್ಕೂ ಮೇಲ್ವರ್ಗದ ಜನರು ಲಪಟಾಯಿಸಿದರೆ ಶಿಕ್ಷೆ ಖಂಡಿತ ಎಂದು ಹೇಳುವ ಪೊಲೀಸ್ ಇಲಾಖೆಯೂ ಸಹ,
ಇದರ ಬಗ್ಗೆ ದೂರು ನೀಡಿದರೇ, ರೀ ಇದು ಸಿವಿಲ್ ವ್ಯಾಜ್ಯ ನಮಗೆ ಬರುವುದಿಲ್ಲ, ನೀವೇನಿದ್ರೂ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಿ ಎನ್ನುವರು. ಅದೇ ಪರಿಶಿಷ್ಟರು ಬೇರೆ ಯಾರದ್ದೂ ಅಲ್ಲದ ಸರ್ಕಾರಿ ನಿವೇಶನವನ್ನೇ ಹೊಂದಿದರೆ, ಅವರನ್ನು ಇರೋ-ಬರೋ ಕಾನೂನು ಕಟ್ಟಲೆಗಳಲ್ಲಿ ವಿಚಾರಣೆ ನಡೆಸಿ ದೊಡ್ಡವರ ಬಳಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಾರೆ. ಇದು ನಮ್ಮ ದೇಶದ ನ್ಯಾಯ ವ್ಯೆವಸ್ಥೆ… ಇಂತಹ ನ್ಯಾಯ ವ್ಯವಸ್ಥೆಗೆ ಪರಿಶಿಷ್ಟರಾದ ನಾವುಗಳು ಮಾತ್ರ ತಲೆ ಬಾಗಬೇಕು, ಮೇಲ್ಜಾತಿಯವರೇನೋ ಅನ್ಯಾಯ, ಅಕ್ರಮ, ಅಧರ್ಮದ ಹಾದಿ ಹಿಡಿಯಬೇಕು… ಪ್ರಶ್ನೆ ಕೇಳುವ ನಮ್ಮಂತಹ ಮಾಧ್ಯಮದವರಿಗೆ ಬೆದರಿಕೆ, ಅಪಪ್ರಚಾರ ಇತ್ಯಾದಿ… ಆದರೂ ನಾವುಗಳು ಇವೆಲ್ಲದಕ್ಕೂ ಬಗ್ಗುವ ಜಾಯಮಾನದವರಲ್ಲ… ಉಸಿರು ಇರುವವರೆಗೂ ಅನ್ಯಾಯ ಮಾಡುವ ಅಧರ್ಮಿಗಳು ಯಾರೇ ಇರಲಿ ಸಮಾಜದ ಕಣ್ಣಿಗೆ ಬೀಳೀಸಿಯೇ ಬೀಳಿಸುತ್ತೇವೆ. ನಾಳೆ ಸಂಚಿಕೆಯಲ್ಲಿ ಪರಿಶಿಷ್ಟರಿಗೆ ಸಂಬಂಧಿಸಿದ ಪಾಲಿಕೆಯ ವ್ಯಾಪ್ತಿಗೆ ಇರುವ ಇತರೆ ನಿವೇಶನಗಳು ಯಾರ ಪಾಲಿವೆ ಎಂಬುದನ್ನು ತಿಳಿಯೋಣ..
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು