ಅಂಗನವಾಡಿ ಶಿಕ್ಷಕಿಗೆ ಸರ್ಕಾರದ ನಿಯಮ ಗಾಳಿಗೆ ತೂರಿ ಜಿಲ್ಲೆಯಲ್ಲಿ ಕರ್ನಾಟಕ ಓನ್ ಸೇವಾಕೇಂದ್ರ….!
ದೂರದ ವಾರ್ಡುಗಳಲ್ಲಿ ಜನರ ಅನುಕೂಲಕ್ಕೆ ಸೇವಾಕೇಂದ್ರಕ್ಕೆ ಅನುಮತಿಗೆ ನೀಡಲಿ ನೂತನ ಡಿಸಿ ಸಾಹೇಬರು

ಇಡಿಸಿಎಸ್ ನಿರ್ದೇಶನಾಲಯ, ಡಿಪಿಎಆರ್ (ಇ-ಆಡಳಿತ), ಕರ್ನಾಟಕ ಸರ್ಕಾರವು ಒಂದೇ ಸೂರಿನಡಿ ವಿವಿಧ ಸರ್ಕಾರಿ ಖಾತೆಗಳ ಮತ್ತು ಖಾಸಗಿ ಸಂಸ್ಥೆಗಳ ಸೇವೆಗಳನ್ನು ನಾಗರೀಕರಿಗೆ ಸ್ನೇಹತ್ವ ರೀತಿಯಲ್ಲಿ ಒದಗಿಸಲು ಗ್ರಾಮಒನ್ ಕೇಂದ್ರಗಳನ್ನು ತೆರೆದಿದೆ. ಗ್ರಾಮಒನ್ನ ಕಾರ್ಯಾಚರಣೆಯ ಪಾಲುದಾರ ಮೂಲಕ ಇಡಿಸಿಎಸ್ ನಿರ್ದೇಶನಾಲಯವು ಪ್ರಾಯೋಗಿಕ ಯೋಜನೆಯಡಲ್ಲಿ ಫ್ರ್ಯಾಂಚೈಸಿ ಮಾದರಿಯಲ್ಲಿ ಗ್ರಾಮಒನ್ ಕೇಂದ್ರಗಳನ್ನು ಕರ್ನಾಟಕದ ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬೆಂಗಳೂರು, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ, ಹಾಸನ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಕಾರವಾರ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯನಗರ, ವಿಜಯಪುರ, ಯಾದಗಿರ ಜಿಲ್ಲೆಗಳಲ್ಲಿ ಸ್ಥಾಪಿಸಲು ಪ್ರಸ್ತಾಪಿಸಿದೆ. ಅದಕ್ಕೆ ತಕ್ಕಂತೆ ಗ್ರಾಮ ಓನ್ ಹಾಗೂ ಕರ್ನಾಟಕ ಓನ್ ಸೇವಾ ಕೇಂದ್ರಗಳು ತೆರೆಯಬೇಕೆಂದರೆ ಕೆಲವೊಂದು ಕಾನೂನು ನಿಯಮಗಳಿದ್ದು ಅವು ಇಂತಿವೆ, ಪ್ರಾಂಚೈನ್ ಮೂಲಕ ಸ್ಥಾಪಿಸಲಾಗುವ ಗ್ರಾಮ ಒನ್ ಕೇಂದ್ರವು ಒಂದು ವಿಶೇಷ (ಪ್ರತ್ಯೇಕ) ಪ್ರವೇಶವುಳ್ಳ ವಿಶೇಷ ವಿಭಜನೆ (ಪಾರ್ಟಿಷನ್) ಹೊಂದಿರಬೇಕು.
ಒಂದು ಕೌಂಟರ್ವುಳ್ಳ ಗ್ರಾಮಒನ್ ಕೇಂದ್ರಗಳು ಕನಿಷ್ಟ 100 ಚ.ಅಡಿಗಳ ಅಳತೆ ಹೊಂದಿರಬೇಕು. ಗ್ರಾಹಕರು ಕುಳಿತುಕೊಳ್ಳಲು ನಾಲ್ಕು ಕುರ್ಚಿಗಳು ಇರಬೇಕು.
ಬ್ರಾಂಡಿಂಗ್ (ಮುದ್ರೆಗಳು)ಗಳು ಗ್ರಾಮಒನ್ ಯೋಜನೆಯ ಬ್ರಾಂಡಿಂಗ್ ಗುಣಮಟ್ಟದ ರೀತಿಯಲ್ಲಿರಬೇಕು (ಹೆಸರಿನ ಫಲಕ/ದರಪಟ್ಟಿ/ ಕಟ್ಟಡದ ಬಣ್ಣ/ ಗ್ರಾಮಒನ್ ದ ಮನೋಗ್ರಾಂ).
ಫ್ರಾಂಚೈಸಿಗಳು ತಮ್ಮ ಸಮುಚ್ಛಯವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರಿಸಿರಬೇಕು.
ಕೊಠಡಿಯ ನೆಲಹಾಸು ಟೈಲ್ಸ್/ಗ್ರಾನೈಟ್ನಿಂದ ಕೂಡಿರಬೇಕು, ಆರ್.ಸಿ.ಸಿ. ಮೇಲ್ಛಾವಣಿ ಇರಬೇಕು ಮತ್ತು ಸೀಮೆಂಟ್ ಇಟ್ಟಿಗೆ/ ಸೀಮೆಂಟ್ ಕಲ್ಲಿನಿಂದ ಗೋಡೆಗಳು ನಿರ್ಮಾನವಾಗಿರಬೇಕು. ಯಾವುದೇ ಭಾಗದಲ್ಲೂ ನೀರು ಸೋರಿಕೆ ಕಂಡುಬರಬಾರದು.
ಕೊಠಡಿಯಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು ಹೊರಗಡೆ ವಾಹನ ನಿಲುಗಡೆಗೆ ಬೋರ್ಡ್ಗಳನ್ನು ಪ್ರದರ್ಶಿಸುವುದು ಇತ್ಯಾದಿಗಳಿಗಾಗಿ ಸಾಕಷ್ಟು ಸ್ಥಳಾವಕಾಶ ಇರಬೇಕು.
ಪೀಠೋಪಕರಣಗಳು ಗ್ರಾಮಒನ್ನಲ್ಲಿ ನಿರ್ಧಿಷ್ಟಗೊಳಿಸಿರದ ರೀತಿಯಲ್ಲಿರಬೇಕು (ಕೌಂಟರ್ಟೇಬಲ್/ ಆಪರೇಟರ್ರ ಕುರ್ಚಿ/ ಪ್ರಿಂಟರ್ಟೇಬಲ್/ ಗ್ರಾಹಕರು ಕಾಯುವ ಕುರ್ಚಿ).
ಪ್ರಾಂಚೈಸಿಗಳು ಸಿ.ಸಿ.ಟಿ.ವಿ. ಕಣ್ಗಾವಲು ಮತ್ತು ಎಲ್.ಸಿ.ಡಿ.ಟಿ.ವಿ. ಯನ್ನು ಹೊಂದಿರಬೇಕು.
ಆದರೆ ದಾವಣಗೆರೆ ನಗರ ಭಾಗದಲ್ಲಿ ಮಾತ್ರ ಈ ಮೇಲಿನ ನಿಯಮಗಳು ಯಾವುದೂ ಕೂಡ ಅನ್ವಯವಾಗಿಲ್ಲ. ಕಾರಣ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಬರುವ ಆಜಾದ್ ನಗರ, ಭಾಷಾನಗರ, ಅಹಮದ್ ನಗರ, ಮಾಗನಹಳ್ಳಿ ರಸ್ತೆ, ಅರಳಿಮರ ಸರ್ಕಲ್ ಬಳಿಯೇ ಕೇವಲ 500 ಮೀಟರ್ ಅಂತರದೊಳಗೊಂದು ಎಂಬಂತೆ ಕರ್ನಾಟಕ ಓನ್ ಸೇವಾ ಕೇಂದ್ರಗಳ ಹಿಂದೆ ಇದ್ದ ಶಾಂತರಾಜ್ ಎಂಬ ಹೊರಗುತ್ತಿಗೆ ಆಧಾರದ ಮೇಲೆ ಕೆಲಸಕ್ಕಿದ್ದ ಕಿಡಿಗೇಡಿ ಅನುಮತಿಯ ನೀಡಿ ಹೋಗಿದ್ದಾನೆ. ಅಷ್ಟೇ ಅಲ್ಲದೇ ಕರ್ನಾಟಕ ಓನ್ ಸೇವಾ ಕೇಂದ್ರದ ಫ್ರಾಂಚೈಸಿಯನ್ನು ಕಡ್ಡಾಯವಾಗಿ ನಿರುದ್ಯೋಗಿಗಳಿಗೆ ನೀಡಬೇಕೆಂಬ ನಿಯಮವಿದ್ದರೂ ಸಹ ಸರ್ಕಾರಿ ಕೆಲಸದಲ್ಲಿರುವ ಅಂಗನವಾಡಿ ಶಿಕ್ಷಕಿಯೊಬ್ಬರಿಗೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಮೂಲಭೂತ ಸೌಲಭ್ಯಗಳ ಸೇವೆಯನ್ನು ಸಾರ್ವಜನಿಕರೂ ಪಡೆಯಲೂ ರಾಜ್ಯ ಸರ್ಕಾರ ಮಾಡಿರುವ ಯೋಜನೆಯೂ ದಾವಣಗೆರೆ ನಗರಭಾಗದಲ್ಲಿ ಮಾತ್ರ ದುರುಪಯೋಗವಾಗಿದೆ. ಕಾರಣ 45 ವಾರ್ಡುಗಳಲ್ಲಿ ಕರ್ನಾಟಕ ಓನ್ ಸೇವಾ ಕೇಂದ್ರ ಇರಬೇಕಾಗಿದ್ದು ಕೇವಲ ಹಣಬಲ / ದೊಡ್ಡವರ ಪ್ರಾಬಲ್ಯದಿಂದ ಕೆಲವೇ ಕೆಲವು ಭಾಗಗಳಲ್ಲಿ ನೀಡಿದ್ದೂ, ಆ ಸೇವಾ ಕೇಂದ್ರಗಳಲ್ಲಿ ಕೆಲವು ಅಂದರೆ ಅಂಗನವಾಡಿ ಶಿಕ್ಷಕಿಗೆ ನೀಡಿರುವ ಸೇವಾ ಕೇಂದ್ರ, ಪಿ.ಜೆ ಬಡಾವಣೆಯಲ್ಲಿ ನೀಡಿರುವ ಸೇವಾಕೇಂದ್ರ, ನಿಟ್ಟುವಳ್ಳಿಯಲ್ಲಿ ನೀಡಿರುವ ಸೇವಾ ಕೇಂದ್ರಗಳಲ್ಲಿ ಸರಿಯಾದ ಸೇವೆಗಳ ಅರ್ಜಿ ಹಾಕಿರುವುದಾಗಲಿ, ಜನರಿಗೆರ ಸೌಲಭ್ಯ ನೀಡುವುದಾಗಲಿ ಕಂಡುಬಂದಿಲ್ಲ. ಅಲ್ಲದೆ ಇನ್ನೂ ಕೆಲವು ವಾರ್ಡುಗಳಲ್ಲಿ ಕರ್ನಾಟಕ ಓನ್ ಸೇವಾ ಕೇಂದ್ರಗಳಿಲ್ಲದೆ ಜನರು ಈ ಸೇವಾ ಕೇಂದ್ರಗಳಿಗೆ 100 ರಿಂದ 200 ರೂಗಳ ಆಟೋ ಬಾಡಿಗೆ ನೀಡಿ ಬಂದು ಸರತಿ ಸಾಲಿನಲ್ಲಿ ನಿಂತು ಸೌಲಭ್ಯ ಪಡೆದುಕೊಳ್ಳುವುದು ಕಷ್ಟಕರವಾಗಿದೆ. ಅದಕ್ಕಾಗಿ ನಮ್ಮ ಪತ್ರಿಕೆ ಸಂಪಾದಕರು ಕಳೆದ ತಿಂಗಳು ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿ, ಎಲ್ಲಾ ವಾರ್ಡುಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗಿ ಯುವಕ ಯುವಕರಿಗೆ ಮತ್ತು ಎಲ್ಲಾ ಜನಾಂಗದಲ್ಲಿರುವ ನಿರ್ಗತಿಕ ನಿರುದ್ಯೋಗಿ ಮಿತ್ರರಿಗೆ ಈ ಒಂದು ಸೇವಾ ಕೇಂದ್ರ ತೆರಯಲು ಅನುಮತಿ ನೀಡಬೇಕಾಗಿ, ಇದರಿಂದ ನಿರುದ್ಯೋಗಿ ಯುವಕರಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂಭವ ಕಡಿಮೆಯಾಗುತ್ತದೆ. ಮತ್ತು ಸೇವಾಕೇಂದ್ರ ಇಲ್ಲದೇ ಇರುವ ದೂರದ ವಾರ್ಡುಗಳಲ್ಲಿ ಅಂದರೆ ಶ್ರೀರಾಮನಗರ, ಹಳೆ ಚಿಕ್ಕನಹಳ್ಳಿ, ಶಿವಾನಗರ, ಯರಗುಂಟೆ, ಬಸಾಪುರ, ಶಾಮನೂರು, ಸರಸ್ವತಿ ಬಡಾವಣೆ.. ಇತ್ಯಾದಿ ನಗರ ಪ್ರದೇಶಗಳಲ್ಲಿ ಯಾವುದೇ ರೀತಿಯ ಹಣಬಲ / ಹೆಸರು ಬಲಕ್ಕೆ ಸೋಲದೆ, ನಿಜವಾದ ಅರ್ಜಿದಾರರಿಗೆ ಕಾನೂನಾತ್ಮಕವಾಗಿ ಸೇವಾಕೇಂದ್ರದ ಫ್ರಾಂಚೈಸಿ ನೀಡಬೇಕೆಂದು ಈ ವರದಿಯ ಮೂಲಕ ವಿನಂತಿಸಿಕೊಳ್ಳತ್ತೇವೆ.
ವರದಿ : ಸೂರ್ಯಪ್ರಕಾಶ್.ಆರ್