ಜನವರಿ 26 ಗಣರಾಜ್ಯೋತ್ಸವ ಮಾಡುವ ನಾವುಗಳು…. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನುಮದಿನವನ್ನು ಮರೆಯುತ್ತಿದ್ದೇವೆ ಏಕೆ…???
KADAMBAKESARI

ಇನ್ನೂ ಕೆಲವೇ ಕೆಲವು ದಿನಗಳು ಕಳೆದರೆ ದೇಶದೆಲ್ಲಡ ವಿಜೃಂಭಣೆಯ ಗಣರಾಜ್ಯೋತ್ಸವದ ಉತ್ಸಾಹವನ್ನು ಮಾಡುತ್ತಾ ಖುಷಿಯ ನೆನಪನ್ನು ಹೊತ್ತು ಮನೆಗೆ ತೆರಳುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿ ನಾವು-ನೀವೂಗಳೆಲ್ಲ ಸಂತೋಷದಿಂದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವವನ್ನು ಎಲ್ಲಾ ಕಡೆಯೂ ಆಚರಿಸುತ್ತಿದ್ದೇವೆ. ಆದರೆ ಈ ಒಂದು ಸಂತೋಷಕ್ಕೆ ಕಾರಣೀಭೂತರಾಗಿರುವ ಶ್ರೀಯುತ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜನುಮ ದಿನವನ್ನು ಮಾತ್ರ ಒಮ್ಮೆಯೂ ಸಹ ಸರ್ಕಾರಿ ಗೌರವಗಳೊಂದಿಗೆ, ಎಲ್ಲಾ ಜಾತಿ ಜನಾಂಗದವರೊಂದಿಗೆ, ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ, ಪ್ರತಿಯೊಬ್ಬ ಮಹಿಳೆಯರೊಂದಿಗೆ ಸರ್ಕಾರಿ ಅಧಿಕಾರಿಗಳೊಂದಿಗೆ ನಿಗಧಿತ ಸಮಯದಲ್ಲಿ ಆಚರಿಸುತ್ತಿರದೆ, ಬೇಕಾಬಿಟ್ಟಿಯಾಗಿ ಜನರಲ್ಲಿ ಅಂಬೇಡ್ಕರ್ ರವರ ಬಗ್ಗೆ ಜನಜಾಗೃತಿಯ ಮೂಡಿಸದೆ ಬಾಬಾ ಸಾಹೇಬರು ನೀಡಿದ ಸಂವಿಧಾನದಡಿ ಕೆಲಸಗಿಟ್ಟಿಸಿಕೊಂಡು ಅವರು ನೀಡಿದ ಭಿಕ್ಷೆಯಲ್ಲಿ ತಮ್ಮ ಸಂಸಾರವನ್ನು ನೀಗಿಸಿಕೊಳ್ಳುತ್ತಿರುವ ತಾವೂಗಳು ಹಾಗೂ ತಮ್ಮ ಅಧಿಕಾರಿಗಳು ಬಾಬಾ ಸಾಹೇಬರ ಜನುಮದಿನವನ್ನು ಮರೆತಂತೆ ಕಾಣುತ್ತಿದೆ, ಪ್ರಸ್ತುತ ರಾಜ್ಯ ರಾಜಕೀಯದಲ್ಲಿ ಕಳೆದ ವರ್ಷ ಬಿಜೆಪಿಯ ಆರ್.ಎಸ್.ಎಸ್ ಸಿದ್ಧಾಂತಗಳು ಜನರಲ್ಲಿ ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ನೀಡುತ್ತಿವೆ. ಇದಕ್ಕೆ ಉದಾಹರಣೆ ಕಳೆದ ಬಾರಿ ರಾಜ್ಯದಲ್ಲಿ ನಡೆದ ಹಿಜಾಬ್, ಹಲಾಲ್, ಆಜಾನ್.. ಹೀಗೆ ಸಾಲು ಸಾಲು ವಿವಾದಗಳೇ ಸಾಕು. ಬಿಜೆಪಿ ಪಕ್ಷದಿಂದ ಹಿಂದೂ – ಮುಸ್ಲಿಂ ಧಾರ್ಮಿಕ ಭಾವೈಕ್ಯತೆಗೆ ತೊಂದರೆಯಾಗುತ್ತಿರುವುದು ಹಾಗೂ ಅನಂತ್ ಕುಮಾರ್ ಹೆಗಡೆ ಎಂಬ ಅರೆ ಹುಚ್ಚರ “ ಸಂವಿಧಾನ ಬದಲಾವಣೆಯ “ ಮಾತುಗಳು ಜನರಲ್ಲಿ ಭಾರತೀಯ ಪ್ರಜೆ ಎಂಬ ಭಾವನೆಯೇ ಮರೆಯಾಗುತ್ತಿದೆ ಅಲ್ಲದೇ ಮೊನ್ನೆ ಸಂಸತ್ತ್ ಭವನದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಕೆಳಮಟ್ಟದ ಮನಸ್ಥಿತಿಯ ಮಾತುಗಳು ಅಂಬೇಡ್ಕರ್ ರವರ ವ್ಯೆಕ್ತಿತ್ವಕ್ಕೆ ಧಕ್ಕೆ ತರುವಂತಹದ್ದಾಗಿದೆ ಎಂಬ ಭೀತಿಯ ನಡುವಲ್ಲೇ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದವು ಸಹ ಶಾಲಾ – ಕಾಲೇಜುಗಳಿಗೆ ಹೋಗುವ ಎಳೆಯ ಮನಸುಗಳ ಮೇಲೆ ಕೆಟ್ಟ ಪ್ರಭಾವ ಬೀರಿದೆ.
“ಜಗತ್ತಿನ ಅತಿದೊಡ್ಡ ದೈವವಾಗಿದ್ದ ಅಂಬೇಡ್ಕರ್ ಅವರನ್ನು ಅಪಮಾನಿಸುತ್ತಿರುವ ಅದೆಷ್ಟೋ ನೀಚರಿಗೆ ಸರ್ಕಾರ ಮತ್ತು ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಅಧಿಕಾರಿಗಳು ಮಾತ್ರ ಉತ್ತರ ನೀಡದೆ ಮೌನವಾಗಿರುವುದು ನಮಗೆಲ್ಲಾ ಅಸಹ್ಯವೆನಿಸುತ್ತಿದೆ. ಆದ್ದರಿಂದ ಈ ಬಾರಿ ಅಂದರೆ ಬಾಬಾ ಸಾಹೇಬರ 135ನೇ ಜನುಮದಿನಕ್ಕೆ ನಾವು-ನೀವೂಗಳೆಲ್ಲ ಎಲ್ಲಾ ಜಾತಿ-ಜನಾಂಗದವರಿಂದ ಹಿಡಿದು, ಸರ್ಕಾರದ ಪ್ರತಿಯೊಬ್ಬ ಜವಾನರಿಂದ ಹಿಡಿದು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳವರೆಗೂ ಮಂದಿರ-ಮಸೀದಿಗಳ ಕಮಿಟಿ ಸದಸ್ಯರಿಂದ ಹಿಡಿದು ಪೌರೋಹಿತ್ಯ ವಹಿಸಿರುವ ಮುಖಂಡರುಗಳವರೆಗೂ ಮತ್ತು ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರವರೆಗೂ ಸ್ವಯಂ-ಪ್ರೇರರ್ಪಣೆ ಮೂಲಕ ಅವರಲ್ಲಿ ಅಂಬೇಡ್ಕರ್ ರವರ ಬಗ್ಗೆ ಜನ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನ ಮಾಡೋಣ. ಅದಕ್ಕಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಅಧಿಕಾರಿಗಳು ಸ್ವಯಂಕೃತರಾಗಿ ಬಾಬಾ ಸಾಹೇಬರ ಸಾಧನೆ ಹಾಗೂ ಅವರು ಜನಸಾಮಾನ್ಯರಿಗೆ, ಸಂಘ-ಸಂಸ್ಥೆಗಳಿಗೆ, ಮಹಿಳೆಯರಿಗೆ, ಮಕ್ಕಳಿಗೆ ನೀಡಿರುವ ಸಂವಿಧಾನದ ಬಳುವಳಿಗಳ ಬಗ್ಗೆ ಮತ್ತು ಅಸ್ಪಶ್ಯತೆಯ ಮೇಲೆ ಅವರು ನಡೆಸಿದ ಹೋರಾಟದ ದಿನಗಳ ಬಗ್ಗೆ ಫ್ಲೆಕ್ಸ್-ಬ್ಯಾನರ್ ಗಳನ್ನು ಎಲ್ಲಾ ಕಡೆಯೂ ಅದರಲ್ಲಿಯೂ ದಾವಣಗೆರೆ ನಗರಭಾಗದ ಗಲ್ಲಿ-ಗಲ್ಲಿಗಳಲ್ಲಿ ರಾರಾಜಿಸುವಂತೆ ಹಾಕಿ ಜನರಲ್ಲಿ ಅವರ ಜನುಮದಿನಕ್ಕೆ ಭಾಗಿಯಾಗಲು ಜಾಗೃತಿ ಮೂಡಿಸಬೇಕಾಗಿ ಅದಕ್ಕೆ ತಗಲುವ ಖರ್ಚು-ವೆಚ್ಚಗಳನ್ನು ಸರ್ಕಾರದಿಂದ ನಿರ್ವಹಿಸಿ ಜನ ಜಾಗೃತಿಯ ಮೂಢಿಸಬೇಕಿದೆ.
ಆದರೆ ಇದರ ಬಗ್ಗೆ ಜನರಲ್ಲಿ ಸರ್ಕಾರಿ ಅಧಿಕಾರಿಗಳಲ್ಲಿ ಅರಿವು ಮೂಢಿಸುವ ಪ್ರಶ್ನೆ ಮಾಡುವ ಶಕ್ತಿಯನ್ನು ಹೊಂದಿರುವ ಮಾಧ್ಯಮಗಳು ಮತ್ತು ಪತ್ರಿಕೆಗಳು ತಮ್ಮ ಪ್ರಾಮಾಣಿಕ ಕೆಲಸವನ್ನು ಮರೆತಿದ್ದೇವೆ. ಇದರಿಂದ ಜನರಲ್ಲಿಯೂ ಸಹ ಬಾಬಾ ಸಾಹೇಬರ ಕುರಿತು ಬೆಳೆಸಿಕೊಳ್ಳಬೇಕಾದ ಅರಿವಿನ ಪ್ರಜ್ಞೆ ಮರೆಯಾಗಿದೆ. ಆದ್ದರಿಂದ ಿನ್ನು ಮೇಲಾದರೂ ನಾವು-ನೀವುಗಳೆಲ್ಲ ಸರ್ಕಾರಿ ಅಧಿಕಾರಿಗಳೊಂದಿಗೆ ಜೊತೆಗೂಡಿ, ದಲಿತರಲ್ಲಿ ಒಳ ಒಡಕು ಮೂಢಿಸಿಕೊಳ್ಳದೆ ಜಾತಿ ಧರ್ಮವನ್ನು ಅನುಸರಿಸದೆ ಎಲ್ಲರೂ ಕೂಡಿ ಒಮ್ಮೆಲೆ ಇಡೀ ದೇಶದೆಲ್ಲೆಡೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹುಟ್ಟುಹಬ್ಬವನ್ನು ಇತಿಹಾಸದ ಪುಟಗಳಲ್ಲಿ ಹಚ್ಚಳೆಯದಂತೆ ಮರೆಯದ ದಿನವನ್ನಾಗಿ ಮಾಡೋಣ ಎಂಬುದೇ ಇಂದಿನ ಆಶಯ.
ಲೇಖನ : ಸೂರ್ಯಪ್ರಕಾಶ್.ಆರ್, ಸಂಪಾದಕರು