ವಲಯ ಕಚೇರಿ-೧ ರಲ್ಲಿ ಕರವಸೂಲಿಗಾರರಿಂದ ಹಿಡಿದು ವಲಯ ಆಯುಕ್ತರವರೆಗೂ ಆಡಿದ್ದೇ ಆಟ… ಮಾಡಿದ್ದೇ ಪಾಠವಾಗಿದೆ
ದೂರಿನ ಮೇಲೆ ದೂರು ನೀಡಿದರೂ ಕಣ್ಣು ಬಾಯಿ ಮುಚ್ಚಿಕೊಂಡಿರುವ ಪಾಲಿಕೆ ಆಯುಕ್ತರು

ದಾವಣಗೆರೆ: ಹೌದು ಮಹಾನಗರ ಪಾಲಿಕೆ ಅದರಲ್ಲೂ ಸಾರ್ವಜನಿಕರ ಅನುಕೂಲಕ್ಕಾಗಿ ಆಯಾ ವಾರ್ಡುಗಳ ಜನರಿಗೆ ಪಾಲಿಕೆ ಮನೆಯ ಬಳಿಯೇ ಸಿಗುವ ಉದ್ಧೇಶಕ್ಕಾಗಿ ವಲಯ ಕಚೇರಿಗಳನ್ನು ಚಾಲನೆಗೊಳಿಸಿ, ಸಂಬಂಧಪಟ್ಟ ವಲಯ ಕಚೇರಿಗಳಿಗೆ ಜನರ ಕೆಲಸ ಮಾಡಲು ಜವಾಬ್ದಾರಿ ನೀಡಿದರೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿರುವ ರಾಜೀವ್ ಗಾಂಧಿ ಬಡಾವಣೆಯ ವಲಯ ಕಚೇರಿ -೦೧ ನಿಜಕ್ಕೂ ಭ್ರಷ್ಟಚಾರದ ಕೂಪವಾಗಿ ಪರಿಣಮಿಸಿದೆ. ಅಲ್ಲಿರುವ ಪ್ರತಿಯೊಬ್ಬ ಸಿಬ್ಬಂಧಿಗಳಿಗೆ ಸಮಯದ ಜ್ಞಾನವಿಲ್ಲ, ಬೇಕಾಬಿಟ್ಟಿಯಾಗಿ ಯಾವಾಗಲೋ ಬರುವುದು ಯಾವಾಗಲೋ ಹೋಗುವುದು, ಏನಾದರೂ ಕೇಳಿದರೆ ಸ್ಥಳ ಪರಿಶೀಲನೆಗೆಂದು ವಾರ್ಡಗೆ ಭೇಟಿ ನೀಡಲಾಗಿದೆ ಎಂದು ಸಬೂಬು ಹೇಳುವುದು ಸಾಮಾನ್ಯವಾಗಿದೆ. ಇನ್ನು ಈ ವಲಯ ಕಚೇರಿಯಲ್ಲಿ ಖಾತೆ ವರ್ಗಾವಣೆಯಿಂದ ಹಿಡಿದು ಇಸ್ವತ್ತು ಪಡೆದುಕೊಳ್ಳಲು ಅರ್ಜಿಯ ಹಾಕಿದರೆ ಮುಗೀತು, ಸಂಬಂಧಪಟ್ಟ ಕರವಸೂಲಿಗಾರರಿಗೆ ಹಣ ನೀಡಿದರೆ ಕೆಲಸ ಬೇಗವಾಗುತ್ತೆ, ಇಲ್ಲದಿದ್ದರೆ ಕೆಲಸ ೬ ತಿಂಗಳೂ ಆದರೂ ಮುಗಿದಿರುವುದಿಲ್ಲ. ಏನಾದರೂ ಪ್ರಶ್ನೆ ಮಾಡಿದರೆ ನೋಡಿ ತಾಂತ್ರಿಕ ನಿರ್ವಹಣೆಯಲ್ಲಿ ಲೋಪದೋಷಗಳಾಗಿವೆ, ತಂತ್ರಾಂಶದಲ್ಲಿ ತೊಂದರೆಯಾಗಿದೆ ಇನ್ನೊಂದು ಎರಡು ದಿನವೆಂದು ಸಾರ್ವಜನಿಕರಿಗೆ ಸಬೂಬು ಹೇಳಿ ಕಳುಹಿಸುತ್ತಾರೆ. ಮೊನ್ನೆ ಲೋಕಾಯುಕ್ತ ದಾಳಿಯು ಸಹ ಇದೇ ವಲಯ ಕಚೇರಿಯಲ್ಲಿದ್ದ ಸಹಾಯಕ ಕಂದಾಯಾಧಿಕಾರಿ ಅನ್ನಪೂರ್ಣಮ್ಮ ಎಂಬ ಸಿಬ್ಬಂಧಿಯ ಮೇಲಾಗಿರುವುದು ಇದಕ್ಕೆ ನಿದರ್ಶನವಾಗಿದೆ.
ಇನ್ನು ಯಾವುದೇ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಕೇಳಿದರೂ ಸಹ ಕರವಸೂಲಿಗಾರರು ತಮ್ಮ ಕರ್ತವ್ಯ ಮರೆತು ೮ ತಿಂಗಳು, ೧೦ ತಿಂಗಳು ಆದರೂ ಮಾಹಿತಿ ನೀಡಿರುವುದಿಲ್ಲ, ಏನಾದರೂ ಜೋರಾಗಿ ಕೇಳಿದರೆ ಸಿಬ್ಬಂಧಿಗಳೋ ತಮ್ಮ ಮನೆಯ ಸದಸ್ಯರಿಂದ ಹಿಡಿದು ಹೊರಗಡೆ ಇರುವ ತಮ್ಮ ಚೇಲಾಗಳವರೆಗೂ ನಮ್ಮ ಪತ್ರಿಕೆಯ ಸಂಪಾದಕರಿಗೆ ಬೆದರಿಕೆಯ ಒಡ್ಡುವುದು ಸಾಮಾನ್ಯವಾಗಿದೆ. ಅಲ್ಲದೆ ಮಾಹಿತಿ ಹಕ್ಕಿನಲ್ಲಿ ಮಾಹಿತಿ ನೀಡಬೇಕಾದ ಮಾಹಿತಿಗಳನ್ನು ಇನ್ಯಾರದೋ ಹೊರಗಿನ ವ್ಯೆಕ್ತಿಗಳ ಮೂಲಕ ನೀಡುತ್ತೇವೆ ದಯಮಾಡಿ ನೀವು ಪಡೆದುಕೊಳ್ಳಿ ಎಂದು ಗೋಗರೆಯುತ್ತಾರೆ. ಇನ್ನೂ ಸಂಬಂಧಪಟ್ಟ ವಲಯ ಕಚೇರಿ ಆಯುಕ್ತರು ಮತ್ತು ಕಂದಾಯಾಧಿಕಾರಿಗಳು ಮಾಹಿತಿ ನಮಗೆ ಬರೋಲ್ಲ ನಿಮಗೆ ಬರೋಲ್ಲ ಅಂತ ಆವಾಗ ಬನ್ನಿ ಇವಾಗ ಬನ್ನಿ ಎಂದು ಉಡಾಫೆ ಉತ್ತರ ಹೇಳಿ ಕಳುಹಿಸುತ್ತಿದ್ದಾರೆ. ಇನ್ನು ಖಾತೆ ಬದಲಾವಣೆಗೆ ಅರ್ಜಿ ಹಾಕಿದರೆ ಮಾನ್ಯ ವಲಯ ಕಚೇರಿ ವ್ಯೆವಸ್ಥಾಪಕರೂ ಆಶ್ರಯ ಶಾಖೆಯಿಂದ ಆದೇಶ ಕಾಫೀ ಪಡೆದುಕೊಳ್ಳಿ ಎಂದು ಹೇಳಿ ವಿಲೇ ಪಡಿಸಿದರೆ, ಕರವಸೂಲಿಗಾರರು ೪ ತಿಂಗಳು ೬ ತಿಂಗಳು ಆದರೂ ಕೊನೆಗೆ ಈ ರೀತಿ ಬರದಿದ್ದಾರೆ ನಾವೇನು ಮಾಡೋದು ಅಂತ ಮೂಗಿನ ಮೇಲೆ ಬಾಯಿ ಇಟ್ಟುಕೊಂಡು ಜನರಿಗೆ ಪೀಡಿಸುತ್ತಿದ್ದಾರೆ. ಇನ್ನು ಕೆಲವು ಕರವಸೂಲಿಗಾರರು ಕೆಲವು ಏರಿಯಾಗಳ ಜನರಿಗೆ ಆಧಾರ್ ಖುಲಾಸೆ ನೀಡದ ಪಾಲಿಕೆಯ ತಪ್ಪನ್ನು ತೋರಿಸದೆ, ೩ ತಿಂಗಳು ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರಿಂದ ಪಡೆದುಕೊಂಡು, ಕೊನೆಗೆ ೩ ತಿಂಗಳ ನಂತರ ಆಧಾರ್ ಖುಲಾಸೆಯಿಲ್ಲ ಅದಕ್ಕೆ ವಿಲೇ ಪಡಿಸುತ್ತಿದ್ದೇವೆ ಎಂದು ಕಾರಣ ತಿಳಿಸಿ ಕರ್ತವ್ಯಲೋಪವೆಸಗುತ್ತಿದ್ದಾರೆ. ಸಾಮಾನ್ಯ ಜನರಿಗೆ ಆಧಾರ್ ಖುಲಾಸೆ ನೀಡುವುದು ಪಾಲಿಕೆಯ ಕರ್ತವ್ಯವಾಗಿದ್ದು, ಇಲ್ಲಿಯವರೆಗೂ ನೀಡಿರುವ ಆಧಾರ್ ಖುಲಾಸೆ ಪತ್ರಗಳ ಹೊರತುಪಡಿಸಿ, ನೀಡದೆ ಇರುವ ವ್ಯೆಕ್ತಿಗಳ ಮನೆ / ನಿವೇಶನಗಳಿಗೆ ಆಧಾರ್ ಖುಲಾಸೆ ನೀಡುವುದು ಕರವಸೂಲಿಗಾರರ, ಕಂದಾಯಾಧಿಕಾರಿಗಳ, ಆಶ್ರಯ ಶಾಖೆಯ ಸಿಬ್ಬಂಧಿಗಳ, ಮತ್ತು ಆಯುಕ್ತರ ಜವಾಬ್ದಾರಿಯಾಗಿದೆ ಆದರೆ ಇದು ಯಾವುದನ್ನು ಮಾಡದೆ ಸಿಬ್ಬಂಧಿಗಳು ಬೇಕು ಅಂತಾನೇ ತಿಂಗಳುಗಟ್ಟಲೇ ತಮ್ಮ ಬಳಿಯೇ ದಾಖಲೆಗಳನ್ನು ಇಟ್ಟುಕೋಂಡು ತದನಂತರ ಆ ದಾಖಲೆ ಇಲ್ಲ- ಈ ದಾಖಲೆ ಇಲ್ಲವೆಂದು ಅರ್ಜಿ ವಿಲೇ ಪಡಿಸುವುದು ಎಷ್ಟು ಸರಿ ಅಲ್ಲವೇ. ಇನ್ನು ವಲಯ ಕಚೇರಿಯಲ್ಲಿ ದಿನಾಂಕ ೦೫-೧೨-೨೦೨೦ ರಂದು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಶಾಸಕರಿಂದ ಸಾಮಾನ್ಯ ಸಭೆ ನಡೆಸಿದ್ದು, ಅದರಲ್ಲಿ ಸ್ಪಷ್ಟವಾಗಿ ಅಂದಿನ ಆಯುಕ್ತರು ಸ್ಪಷ್ಟವಾಗಿ ಆಶ್ರಯ ನಿವೇಶನಗಳಲ್ಲಿ / ಮನೆಗಳಲ್ಲಿರುವ ಫಲಾನುಭವಿಗಳಿಗೆ ತೊಂದರೆಯಾಗಬಾರದೆಂಬ ಉದ್ಧೇಶದಿಂದ ಖಾತೆ ಬದಲಾವಣೆ ಮಾಡಲು ಕೆಲವು ಮಾರ್ಗಸೂಚಿಗಳನ್ನು, ಷರತ್ತುಗಳ ಒಡಂಬಡಿಕೆಯನ್ನು ಮತ್ತು ಆಧಾರ್ ಖುಲಾಸೆ ಇಲ್ಲದಿದ್ದರೂ ಸ್ವಾಧೀನಪತ್ರ / ಹಕ್ಕು ಪತ್ರದ ಮೂಲಕ ಖಾತೆ ಮಾಡಬಹುದೆಂಬ ಠರಾವು ಹೊರಡಿಸಿದ್ದು, ಇಲ್ಲಿಯವರೆಗೂ ಆದರೂ ಹೊಸದಾಗಿ ಬಂದಿರುವ ಆಯುಕ್ತರಾಗಲಿ, ಉಪಾಯುಕ್ತರಾಗಲಿ, ಸಂಬಂಧಿಸಿದ ಆಶ್ರಯ ಕಮಿಟಿ ಸಿಬ್ಬಂಧಿಗಳಾಗಲಿ, ವಲಯ ಕಚೇರಿಯ ಕಂದಾಯಾದಿಕಾರಿಗಳಾಗಲಿ, ಕರವಸೂಲಿಗಾರರಾಗಲಿ ಪಾಲಿಕೆಯ ಮುಖ್ಯ ಕಚೇರಿಯಿಂದ ತರಿಸಿಕೊಳ್ಳದೆ ಜನರ ಸಮಯದ ಜೊತೆ ಆಟವಾಡುತ್ತಾ ಕೆಲಸವನ್ನು ವಿಳಂಬ ಮಾಡುತ್ತ ಬಹಳಷ್ಟ ಅರ್ಜಿಗಳನ್ನು ವಿಲೇ ಮಾಡುತ್ತ, ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸದೆ ಕರ್ತವ್ಯ ಲೋಪವೆಸಗುತ್ತ ಭ್ರಷ್ಟತೆಯಲ್ಲಿ ತೊಡಗಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ, ಕರ್ತವ್ಯ ಲೋಪವೆಸಗುತ್ತಿರುವ ಸಿಬ್ಬಂಧಿಗಳ ವಿರುದ್ದ ಪಾಲಿಕೆಯ ಆಯುಕ್ತರು ಶಿಸ್ತುಕ್ರಮ ಜರುಗಿಸಲಿ, ಇಲ್ಲದಿದ್ದರೆ ಜಿಲ್ಲಾಧಿಕಾರಿಗಳು ಆಯುಕ್ತರ ಮೇಲೆ ಶಿಸ್ತುಕ್ರಮ ಜರುಗಿಸಲಿ ಎಂಬುದೇ ನಮ್ಮ ಈ ದಿನದ ಪತ್ರಿಕೆಯ ವಿಶೇಷ ವರದಿಯಾಗಿದೆ.
ವರದಿ:- ಸೂರ್ಯಪ್ರಕಾಶ್.ಆರ್, ಸಂಪಾದಕರು