ಹರಿಹರದ ಗೌಸಿಯಾ ಕಾಲೋನಿಯಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ;
ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ಸಾಗಾಟ ತಡೆಯುವಲ್ಲಿ ಆಹಾರ ಇಲಾಖೆ ಸಿಬ್ಬಂಧಿಗಳು ವಿಫಲ

ಬಡವರ ಹೊಟ್ಟೆ ತುಂಬಿಸುವ ಸಿದ್ದರಾಮಯ್ಯನವರ ವರುಷಗಳ ಕನಸು ಬಡವರಿಗೆ ದೇನರಿಗೆ, ವಯಸ್ಸಾದ ವೃದ್ದರಿಗೆ ಅನುಕೂಲ ಮಾಡಿಸಿದ ಅನ್ನಭಾಗ್ಯದ ಅಕ್ಕಿಯನ್ನು ಹರಿಹರದ ಗೌಸಿಯಾ ಕಾಲೋನಿಯಲ್ಲಿ ರಾಜಾರೋಷವಾಗಿ ಮಾರಾಟ ಮಾಡುವ ದಂಧೆ ಜೋರಾಗಿಯೆ ನಡೆಯುತ್ತಿದೆ. ಇದಕ್ಕೆ ಅನೌಪಚಾರಿಕವಾಗಿ ಇಲಾಖೆಯ ಅಧಿಕಾರಿಗಳು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಸಾಥ್ ನೀಡುತ್ತಿರುವುದು ನಿಜಕ್ಕೂ ಇದು ದುರ್ಧೈವವಾಗಿದೆ. ಹರಿಹರದ ಗೌಸಿಯಾ ಕಾಲೋನಿಯಲ್ಲಿ ಸ್ಟಾರ್ ಟ್ರೇಡರ್ಸ್ ಮಾಲೀಕ ತಾಜುದ್ಧೀನ್ ಬಿನ್ ಸೈಯದ್ ಬಶೀರ್ ಅಹಮದ್ ಎಂಬ ವ್ಯೆಕ್ತಿಯೂ ಯಾರ ಭಯವೂ ಇಲ್ಲದೆ, ಪೊಲೀಸ್ ಇಲಾಖೆಯ ಹೆದರಿಕೆಯೂ ಇಲ್ಲದೆಬಾಡಿಗೆಗೆಂದು ಪಡೆದುಕೊಂಡಿದ್ದ ಹಳೆಯ ಕಾಲದ ಕೆಂಪು ಹಂಚಿನ ಮನೆಯಲ್ಲಿ ರಾಗಿ, ಅಕ್ಕಿಯನ್ನು ನೆಲದ ಮೇಲೆ ರಾಶಿ ರಾಶಿ ಹಾಕಿಕೊಂಡು, ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಕಿವಂಟಲ್ ಗಟ್ಟಲೆ ಶೇಖರಣೆ ಮಾಡಿಕೊಂಡು ವ್ಯಾಪಾರ ಮಾಡಲು ರೆಡಿಮಾಡಿಕೊಂಡಿದ್ದು, ಸದರಿ ವಿಷಯವನ್ನು ತಿಳಿದುಕೊಂಡ ಸ್ಥಳೀಯ ವ್ಯೆಕ್ತಿ ನಜರುಲ್ಲಾ ಎಂ ಎಂಬುವವರು ಕದಂಬ ಸೇನೆಯ ದ್ವಾರಕೀಶ್ ಮತ್ತು ಅವರ ತಂಡದೊಂದಿಗೆ ಸೇರಿ ಅಕ್ರಮವಾಗಿ ಶೇಖರಣೆಯಾಗಿದ್ದ ಅನ್ನಭಾಗ್ಯದ ಅಕ್ಕಿ ಹಾಗೂ ರಾಗಿಯನ್ನು ವಶಕ್ಕೆ ಪಡೆದು ಹರಿಹರ ನಗರದ ಪೊಲೀಸ್ ಠಾಣೆ, ಮತ್ತು ತಾಲ್ಲೂಕು ಕಚೇರಿಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರಿಗೆ ದೂರನ್ನು ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪ್ರಕರಣ ದಾಖಲಿಸಿದ್ದಾರೆ. ಇಂತಹ ಖದೀಮ ಕಳ್ಳರಿಗೆ ಸರ್ಕಾರ ಬಡಪಾಯಿಗಳಿಗೆ ನೀಡಿದ್ದ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ವ್ಯಾಪಾರಕ್ಕಾಗಿ ಪಾಲೀಸ್ ಹೊಡೆದು ಅಕ್ರಮತೆಯ ಮಾಡುವವರ ವಿರುದ್ಧ ಇಲಾಖೆಯಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಸೂಕ್ತ ಕಾನೂನು ಕ್ರಮ ಜರುಗಿಸಲಿ.ರೇಶನ್ ಸೊಸೈಟಿಯೊಂದರಿಂದ ವಿತರಿಸಲಾದ ಅಕ್ಕಿಯನ್ನು ಖಾಸಗಿ ರೈಸ್ಮಿಲ್ಲಿಗೆ ಸಾಗಿಸಿ, ಅಲ್ಲಿ ಫಾಲಿಶ್ ಹಾಕಿ ಕಾಳಸಂತೆಯನ್ನು ಮಾರಾಟ ಮಾಡುತ್ತಿದೆ. ಬಡ ಕುಟುಂಬಗಳಿಗೆ ಸರಕಾರ ಸಹಕಾರಿ ಸೊಸೈಟಿ ಹಾಗೂ ನ್ಯಾಯಬೆಲೆ ಅಂಗಡಿ ಮೂಲಕ ಪೂರೈಸುವ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ಪಡಿತರ ಗ್ರಾಹಕರಿಗೆ ಅಕ್ಕಿ ದೊರಕುತ್ತಿಲ್ಲ. ಸರಕಾರ ಬಿಪಿಎಲ್ ಪಡಿತರ ಕಾರ್ಡ್ಗೆ ಉಚಿತವಾಗಿ ನೀಡುವ ಈ ಅಕ್ಕಿ ಕಾಳಸಂತೆಯಲ್ಲಿ ಭಾರೀ ಬೆಲೆಗೆ ಮಾರಾಟವಾಗುತ್ತಿದೆ. ರೇಶನ್ ಅಕ್ಕಿಗೆ ರೈಸ್ಮಿಲ್ನಲ್ಲಿ ಫಾಲಿಶ್ ಮಾಡಿ ದುಬಾರಿ ಅಕ್ಕಿಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ. ಈ ಅಕ್ಕಿಯನ್ನುನಾನಾ ಬಗೆಯ ಅಕ್ಕಿ ಹುಡಿ ತಯಾರಿಸಿ ಪ್ಯಾಕೇಟ್ ಮಾಡಿ ಮಾರಲಾಗುತ್ತಿದೆ ಎಂದು ಪಡಿತರ ಮಾಹಿತಿ ನೀಡಿದ್ದಾರೆ. `ಹಸಿವು ಮುಕ್ತ ಕರ್ನಾಟಕದ ಆಶಯದಂತೆ ಸರಕಾರ ಬಡವರಿಗೆ ನೀಡುವ ಅಕ್ಕಿ ವ್ಯಾಪಾರಿಗಳ ಪಾಲಾಗಬಾರದು. ಈ ನಿಟ್ಟಿನಲ್ಲಿ ಕಾಳಸಂತೆ ನಡೆಸುವ ವ್ಯಾಪಾರಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು. ಈ ದಂಧೆಯ ವಿರುದ್ಧ ಸಾರ್ವಜನಿಕರು ದೂರು, ಸಲಹೆ, ಮಾಹಿತಿ ನೀಡಿ ಸಹಕರಿಸಬೇಕು.
ವರದಿ : ಸೂರ್ಯಪ್ರಕಾಶ್.ಆರ್