
ದಾವಣಗೆರೆ : ನಗರ ಭಾಗದಲ್ಲಿ ಹೆಸರು ಮಾಡಿರುವ ಒಂದು ದೊಡ್ಡ ಶಿಕ್ಷಣ ಸಂಸ್ಥೆಯು, ತಮ್ಮ ಸ್ವಾರ್ಥ ದುಡಿಮೆಗಾಗಿ ಪಾಲಿಕೆ ಮತ್ತು ದೂಢಾದಿಂದ ಲೇಔಟ್ ಪ್ಲಾನ್ ಇಟ್ಟುಕೊಂಡಿದ್ದರೂ ಸಹ ಅನಧಿಕೃತವಾಗಿ ಕಟ್ಟಡ ಕಟ್ಟಿಕೊಂಡಿದೆ. ಅಲ್ಲದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸುತ್ತೋಲೆಗಳ ಪ್ರಕಾರ ಅತಿ ಹೆಚ್ಚಿನ ಅಂದರೆ ಅಧಿಕ ಒತ್ತಡ ಪ್ರಸರಣ ಮಾರ್ಗಗಳ ಗೋಪುರಗಳ ಮಾರ್ಗಗಳಲ್ಲಿ ಯಾವುದೇ ರೀತಿಯ ಕಟ್ಟಡ, ಮನೆ ಕಟ್ಟುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ಅಲ್ಲಿಯ ಜಾಗವನ್ನು ಅತಿಕ್ರಮಿಸಿ ತಮ್ಮ ಸ್ವಂತ ದುಡಿಮೆಗೆ ದುರುಪಯೋಗ ಪಡಿಸಿಕೊಂಡು ಜೀವ ಹಾನಿ ತರುವುದು ಮತ್ತು ವಿದ್ಯುತ್ ಪೂರೈಕೆಗೂ ಆಡಚಣೆ ಮಾಡುವುದು, ಇಂಡಿಯನ್ ಎಲೆಕ್ಟ್ರಿಕ್ ಸಿಟಿ ಅಧಿನಿಯಮ-1956, ಇಂಡಿಯನ್ ಎಲೆಕ್ಟ್ರಿಕ್ ಸಿಟಿ ಆ್ಯಕ್ಟ್ 1910 ಮತ್ತು 2003ರನ್ವಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕರ್ನಾಟಕ ಪೌರ ಮಹಾನಗರಪಾಲಿಕೆಗಳ ಅಧಿನಿಯಮ 1976 ಹಾಗೂ ಮಹಾನಗರಪಾಲಿಕೆಗಳ ನಿಯಮ-1977 ರಂತೆ ಕಲಂ 233, 234, 241 ರಂತೆ, ಮಹಾನಗರಪಾಲಿಕೆಯ ಅನುಮತಿಯಿಲ್ಲದ್ಎ ಚರಂಡಿ ಮೇಲೆ ಕಟ್ಟಡಗಳನ್ನು ನಿರ್ಮಿಸುವುದು, ಚರಂಡಿಗಳ ಜೊತೆ ಸಂಪರ್ಕ ಸಾಧಿಸುವುದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಅಂತಹ ಅಪರಾಧವನ್ನು ಶ್ಯಾಮನೂರು ಎಜ್ಯುಕೇಸನಲ್ ಟ್ರಸ್ಟನ ಅಧೀನದಲ್ಲಿರುವ ಪುಷ್ಪಾ ಮಹಾಲಿಂಗಪ್ಪ ಶಿಕ್ಷಣ ಸಂಸ್ಥೆಯ ಮಾಲೀಕರು ಹಾಗೂ ಅವರ ಸಹೋದರರು ಕೃತ್ಯ ಎಸಗಿದ್ದಾರೆ. ಇದರ ಬಗ್ಗೆ ಪತ್ರಿಕೆಯಲ್ಲಿ ಸಂಪಾದಕರು ಸುದ್ಧಿ ಮಾಡಿದರೆ, ಕಾಲೇಜಿನ ಆಡಳಿತಾಧಿಕಾರಿ ಶ್ರೀಮಾನ್ ಮಹಾಲಿಂಗಪ್ಪನವರು ತಮ್ಮ ಹಣಬಲ ತೋರಿಸಿ ಸುಮ್ಮನಾಗುವಂತೆ ಮಾಡಲು ಪ್ರಯತ್ನಿಸಿ, ಅದ್ಯಾವುದೋ ವ್ಯೆಕ್ತಿಯಿಂದ ಹೇಳಿ ಕಳುಹಿಸಿದ್ದರೂ, ಅದಕ್ಕೆ ಜಗ್ಗದೆ ಸಂಪಾದಕರೂ ಹೈ ಕೋರ್ಟ್ ವರೆಗೂ ಮುನ್ನಡೆಸಿದಾಗ, ಶ್ರೀಮಾನ್ ಸಾಹೇಬರೂ ಇನ್ನೂ ದೂರ ಹೋಗಿ, ನಮ್ಮ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಯಕರುಗಳಿಗೆಯೇ ಸಂಪಾದಕರ ಬಗ್ಗೆ ಹೇಳಿ ಬಾಯಿ ಮುಚ್ಚಿಸಲು ಬೆದರಿಕೆಯ ಒಡ್ಡಿಸಿದ್ದರೂ ಸಹ ನಾಳೆಯ ಪಾಲಿಕೆಯ ಅಂತಿಮ ಆದೇಶದವರೆಗೂ ಸಂಪಾದಕರು ಯಾರಿಗೂ ಜಗ್ಗದೆ ಕಾನೂನು ಕ್ರಮ ಜರುಗಿಸುವಲ್ಲಿ ಸಫಲರಾಗಿದ್ದಾರೆ.
ಮಹಾಲಿಂಗಪ್ಪನಂತಹ ನೂರು ಜನ ಭಯ ಪಡಿಸಲು ಬಂದರೆ ಕಾಪಾಲಿಕ್ಕೆ ಶ್ರೀ ಕ್ಷೇತ್ರ ಸಿಗಂಧೂರೂ ಚೌಢೇಶ್ವರಿ ಮತ್ತು ಮಹಾಕಾಳೇ ರೌದ್ರೆ ಜಗನ್ಮಾತೆ ಕಾಪಾಡುತ್ತಾಳೆ ಎಂಬುದು ಎಲ್ಲರಿಗೂ ಗೊತ್ತಿರಲಿ….
ವರದಿ: ಸೂರ್ಯಪ್ರಕಾಶ್.ಆರ್, ಸಂಪಾದಕರು