
ರಸ್ತೆ ಬದಿಯಲ್ಲಿ ಸಾಲುಮರಗಳನ್ನು ನೆಟ್ಟ ಸಾಲುಮರದ ತಿಮ್ಮಕ್ಕರನ್ನ ನೆನಪಿಸಿಕೊಂಡರೆ, ಇಂದಿನ ಕಾಲದ ಯುವ ಜನಾಂಗ, ತಮ್ಮ ಶಕ್ತಿಗೆ ಅನುಸಾರವಾಗಿ ರಸ್ತೆ ಬದಿಯಲ್ಲಿ, ಖಾಲಿ ಇರುವ ಜಾಗಗಳಲ್ಲಿ, ಸಾಲುಮರಗಳ, ಸಸಿಗಳನ್ನು ನೆಟ್ಟು ಬೆಳೆಸಿ, ಸಾರ್ವಜನಿಕರಿಗೆ ನೆರಳು ನೀಡುವಂತಹ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಹಾಗೆ ಪರಿಸರ ನಿರ್ವಹಣೆಯಲ್ಲೂ ಸಹ ಹೆಚ್ಚಿನ ಪಾತ್ರವನ್ನು ವಹಿಸಬೇಕು ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಸ್ವಾಮಿಯವರು ಕರೆ ನೀಡಿದ್ದಾರೆ.
ಅವರು ಟೆನ್ ತೌಸಂಡ್ ಗ್ರೂಪ್ ನವರು ಕೆಎಸ್ಆರ್ ಟಿ ಸಿ ಡಿಪೋರಸ್ತೆಯಲ್ಲಿ, ರಸ್ತೆ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನ ಪ್ರೋತ್ಸಾಹಿಸಿ, ಇನ್ನೊಂದಿಷ್ಟು ಹೆಚ್ಚಿನ ಕಾರ್ಯಕ್ರಮಗಳಾಗಲಿ ಎಂದು ಆಶಿಸುತ್ತಾ ಮಾತನಾಡುತ್ತಿದ್ದರು.
ಸಣ್ಣ ಮಕ್ಕಳಿದ್ದಾಗಲೇ ಅವರಿಗೆ ಪರಿಸರ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಬೇಕು, ಹಾಗಾಗಿ ರಸ್ಥೆ ಬದಿಯ ಸಸಿಗಳನ್ನು ನಡೆಯುವ ಕಾರ್ಯಕ್ರಮಗಳಲ್ಲಿ, ಶಾಲಾ ಮಕ್ಕಳು ಭಾಗವಹಿಸಿದಷ್ಟು, ಹೆಚ್ಚಿನ ಪರಿಸರ ಜಾಗೃತಿ ಉಂಟಾಗುತ್ತದೆ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನಾಂಗ ಸಸಿ ನೆಡುವುದರ ಬಗ್ಗೆ, ಸಸಿಗೆ ಪಾತಿ ಮಾಡುವುದರ ಬಗ್ಗೆ, ಅವುಗಳಿಗೆ ರಕ್ಷಣೆ ನೀಡುವುದರ ಬಗ್ಗೆ ಸಾಕಷ್ಟು ಕೈಕಾಲುಗಳನ್ನು ಬಳಸಿ ಕೆಲಸ ಮಾಡುವಂತಹ ಸಂದರ್ಭದಲ್ಲಿ, ಉತ್ಸಾಹದಿಂದ ಭಾಗವಹಿಸಿ, ಅವರಿಗೆ ಪ್ರೋತ್ಸಾಹ ನೀಡಬೇಕು. ಸರ್ಕಾರದವರು, ಸಾರ್ವಜನಿಕರು ನೆಟ್ಟಂತ ಗಿಡ ಸಸಿಗಳಿಗೆ ನೀರು ಉಣಿಸುವ ಕಾರ್ಯಕ್ರಮದಲ್ಲಿ ಸಹ, ನೀರಿನ ಟ್ಯಾಂಕರ್ ಗಳನ್ನು ಒದಗಿಸುವುದು ಅಥವಾ ಹೆಚ್ಚಿನ ಉಪಕರಣಗಳನ್ನು, ಸಲಕರಣೆಗಳನ್ನು ನೀಡಿ ಪ್ರೋತ್ಸಾಹಿಸುವುದು, ಅವರ ಖರ್ಚು ವೆಚ್ಚಗಳಿಗೆ ಸಾಕಷ್ಟು ಸಹಾಯಧನ ನೀಡುವುದನ್ನು ಮಾಡಿ, ಊರಿನಲ್ಲಿರುವ ಎಲ್ಲಾ ಯುವಕರನ್ನ, ಸೈನ್ಯದ ರೀತಿಯಲ್ಲಿ, ಪರಿಸರ ಸಂರಕ್ಷಣೆಗೆ ಬಳಸಿಕೊಂಡಾಗ, ಉತ್ತಮ ಪರಿಸರ ನಿರ್ವಹಣೆ ಮಾಡಲು ಅನುಕೂಲಕರವಾಗುತ್ತದೆ ಎಂದರು.
ರಜ ದಿನಗಳಲ್ಲಿ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ, ಯುವಕರು ಈ ರೀತಿ ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅರಣ್ಯ ಇಲಾಖೆ ಜೊತೆ ಕೈಜೋಡಿಸಿ, ಸಾಕಷ್ಟು ಗಿಡ ಮರಗಳನ್ನ ಬೆಳೆಸಿ, ಉಳಿಸಿ, ಪರಿಸರ ಸಮತೋಲನ ಕಾಯ್ದು ಇಟ್ಟುಕೊಳ್ಳಲು ಅನುಕೂಲಕರ ಮಾಡಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಕೆಲವೊಂದು ಸಂಘ ಸಂಸ್ಥೆಗಳು, ಹತ್ತಾರು ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುತ್ತಾ, ಖಾಲಿ ಇರುವ ಜಾಗಗಳಲ್ಲಿ, ಪಾರ್ಕ್ ಗಳಲ್ಲಿ, ಸರ್ಕಾರಿ ಇಲಾಖೆಗೆ ಸೇರಿದಂತ ಖಾಲಿ ಜಾಗಗಳಲ್ಲಿ, ಖಾಸಗಿಯವರ ಪ್ರೋತ್ಸಾಹದಿಂದ ಅವರಿಗೆ ಸಂಬಂಧಪಟ್ಟ ಜಾಗದಲ್ಲೂ ಸಹ, ನೂರಾರು ಸಸಿಗಳನ್ನು ನೆಟ್ಟು, ಪ್ರೋತ್ಸಾಹಿಸಿ, ಪರಿಸರ ಉಳಿಸಿಕೊಳ್ಳುವಂತ ಕಾರ್ಯಕ್ರಮಗಳನ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬಿಸಿಲ ತಾಪ ಹೆಚ್ಚಾಗುತ್ತಿರುವುದರಿಂದ, ಹೆಚ್ಚಿನ ಸಸಿಗಳನ್ನು ನೆಟ್ಟುಕೊಂಡು, ನೆರಳನ್ನ ಹೆಚ್ಚಿಸಿಕೊಂಡರೆ, ಜನರು ಸರಾಗವಾಗಿ ಮರದ ಕೆಳಗೆ ನಿಂತು, ನಡೆದು ಜೀವನ ನಿರ್ವಹಿಸಿಕೊಳ್ಳಬಹುದು. ರಸ್ತೆಯಾಗಲೀಕರಣದಲ್ಲಿ ನಾವು ಸಾವಿರಾರು ಮರಗಳನ್ನು ಕಳೆದುಕೊಂಡು, ಬಿಸಿಲಲ್ಲಿ ಓಡಾಡಿಕೊಂಡು ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಅರಣ್ಯದ ಬಗ್ಗೆ ಇನ್ನೂ ಹೆಚ್ಚಿನ ಮಟ್ಟದ ಜಾಗೃತಿ ಮೂಡಿಸಿ, ಪರಿಸರ ಉಳಿಸಿಕೊಳ್ಳುವುದು ಬಗ್ಗೆ ಜನರಲ್ಲಿ ತಿರಸ್ಕಾರ ಮನೋಭಾವನೆಯನ್ನು ನಿವಾರಿಸಬೇಕಾಗಿದೆ ಎಂದರು.
ಯಾರಾದರೂ ಸಸಿಗಳನ್ನ, ಮರಗಳನ್ನು ನೆಟ್ಟರೆ, ಅವುಗಳನ್ನು ಉಳಿಸಿಕೊಳ್ಳುವಂತಹ ಮನಸ್ಸನ್ನು ನಾವು ರೂಡಿಸಿಕೊಳ್ಳಬೇಕು, ಬಹಳಷ್ಟು ಸಾರಿ ರಸ್ತೆ ಬದಿಯ ಗಿಡಗಳನ್ನು ಮುರಿದು ಹಾಕುವುದು, ಪ್ರಾಣಿಗಳಿಗೆ ಆಹಾರವಾಗಿ ಸೇವನೆ ಮಾಡಲು ಅವಕಾಶ ಮಾಡಿಕೊಡುವುದು, ಅವುಗಳಿಗೆ ರಕ್ಷಣೆ ನೀಡಿದಂತಹ ಮರದ ಅಥವಾ ಕಬ್ಬಿಣದ ಸಲಕರಣೆಗಳನ್ನು ಕಿತ್ತು ಬಿಸಾಡುವುದು, ಅವುಗಳಿಗೆ ಮುಳ್ಳು ಕಟ್ಟಿದ್ದರೆ ಅವುಗಳನ್ನು ಸರಿಪಡಿಸುವುದು, ಈ ರೀತಿ ಯಾವುದಾದರೂ ಒಂದು ಕಾರ್ಯಕ್ರಮದಲ್ಲಿ ನಾವು ಸೇವಾ ಮನೋಭಾವನೆ ಮೂಡಿಸಿಕೊಂಡರೆ, ಉತ್ತಮ ಪರಿಸರ ನಿರ್ವಹಣೆ ಮಾಡಲು ಅನುಕೂಲಕರವಾಗುವುದು. ಮನೆಗೊಂದು ಮರ, ಬೀದಿಗೂಂದು ವನ ಎಂದು ಹೆಚ್ಚಿನ ಮಟ್ಟದಲ್ಲಿ ಹಸರೀಕರಣ ಮಾಡಿದರೆ, ಭೂಮಿಯ ತಾಪಮಾನ ಹೆಚ್ಚಿದ್ದು, ಸಾಕಷ್ಟು ಮಳೆ ಸಹ ನಮಗೆ ದೊರೆತು, ರೈತರಿಗೂ ಸಹ ಅನುಕೂಲಕರವಾಗುವುದು. ಈ ಪರಿಸರದ ಚಕ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಬದುಕುವುದನ್ನು ನಾವು ಜನರಿಗೆ ಮೂಡಿಸಬೇಕಾಗಿದೆ ಎಂದು ಪತ್ರಿಕ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.
ಸಸಿ ನೆಡುವ ಕಾರ್ಯಕ್ರಮದಲ್ಲಿ 10,000 ಗ್ರೂಪಿನ ಅಧ್ಯಕ್ಷರು, ಸದಸ್ಯರುಗಳು, ಕಾರ್ಯದರ್ಶಿಗಳು ಹಾಗೂ ಇನ್ನಿತರ ಸಾರ್ವಜನಿಕರು, ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟಿದ್ದಾರೆ, ಅವರೆಲ್ಲರಿಗೂ ಸಹ ಇನ್ನು ಹೆಚ್ಚಿನ ಸಹಕಾರ ದೊರಕಲಿ ಎಂದು ಹಾರೈಸಿದ್ದಾರೆ.