Davanagere

ಜಿಲ್ಲಾಡಳಿತ ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಇಲಾಖಾವಾರು ಟ್ಯಾಗ್ ನೀಡಿದರೂ ಸಹ ಹಾಕಿಕೊಳ್ಳುವುದಕ್ಕೆ ಮುಜುಗರ ಪಡುತ್ತಿರುವ ಸರ್ಕಾರಿ ನೌಕರರು

Kadamabakesari.com

ದಾವಣಗೆರೆ : ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು (Employee ID card) ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಂದು ದಿನಾಂಕ 16-08-2024ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಂದಿಗೆ ಇಪ್ಪತ್ತು ದಿನಗಳ ಮೇಲಾಗಿ ಸರ್ಕಾರ ಆದೇಶ ಹೊರಡಿಸಿದ್ದು ಜಿಲ್ಲೆಯ ಯಾವೊಬ್ಬ ಸರ್ಕಾರಿ ನೌಕರರ ಕೊರಳಿಗೆ ಮಾತ್ರ ಯಾವುದೇ ಗುರುತಿನ ಚೀಟಿ ಕಾಣುತ್ತಿಲ್ಲ. ಈ ಬಗ್ಗೆ ನಮ್ಮ ಪತ್ರಿಕೆಯಲ್ಲಿ ನಿನ್ನೆ ಸುದ್ಧಿ ಮಾಡಿ ಜಿಲ್ಲಾಡಳಿತ ಭವನದಲ್ಲಿರುವ ಪ್ರತಿ 50 ಇಲಾಖೆಗಳ ಕೊಠಡಿಗಳಿಗೆ ಪತ್ರಿಕೆಯ ವಿತರಿಸಿ, ನಗರ ಭಾಗದಲ್ಲಿರುವ ಕೆಲವು ಸರ್ಕಾರಿ ಇಲಾಖೆಗಳಿಗೂ ಪತ್ರಿಕೆ ನೀಡಿ, ಸರ್ಕಾರದ ಆದೇಶವನ್ನು ಪರಿಪಾಲನೆ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಿದಾಗ ನಮ್ಮ ತಂಡಕ್ಕೆ ಸಿಕ್ಕ ಉತ್ತರ ಮಾತ್ರ ಶೂನ್ಯ.

ಕೆಲವೇ ಕೆಲವು ಸಿಬ್ಬಂಧಿಗಳು ತಮ್ಮ ಕರ್ತವ್ಯದ ಸಮಯದಲ್ಲಿ ಸರ್ಕಾರ ಹೊರಡಿಸಿರುವ ಕನ್ನಡ ಬಾವುಟದ ಬಣ್ಣದ ಕೊರಳದಾರ(ಟ್ಯಾಗ್)ವನ್ನು ತಮ್ಮ ಗುರುತಿನ ಚೀಟಿಯೊಂದಿಗೆ ಧರಿಸಿ ಕರ್ತವ್ಯ ಪಾಲಿಸುತ್ತಿದ್ದರೆ, ಇನ್ನೂ ಕೆಲವರು ಬೇಕು ಅಂತಲೇ “ಹೇ ಅದ್ಯಾಕ್ ನಮಗೆ, ಇಷ್ಟು ದಿನ ಇಲ್ಲದ್ದು ಈಗ” ಎಂಬ ನಿರ್ಲಕ್ಷ್ಯ , ಉಡಾಫೆ ಮಾಡಿ ತಮ್ಮ ಕರ್ತವ್ಯದ ಸಮಯದಲ್ಲಿ ಸರ್ಕಾರ ನೀಡಿರುವ ಕಚೇರಿ ಟೇಬಲನ ಡ್ರಾದೊಳಗೆ ಇಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಅದರಲ್ಲಿಯೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಸಿಬ್ಬಂಧಿಗಳು ಟ್ಯಾಗ್ ಧರಿಸದೆ ಸುಮ್ಮನೆ ಕುಳಿತಿರುವುದು ಸಾಮಾನ್ಯವಾಗಿ ಕಂಡುಬಂದಿದೆ. ಇನ್ನು ತಾಲ್ಲೂಕು ವಿಭಾಗಾಧಿಕಾರಿಗಳ ಕಚೇರಿ, ದಾವಣಗೆರೆ ಮಹಾನಗರಪಾಲಿಕೆ ಕಚೇರಿ, ತಹಸೀಲ್ದಾರ್ ರವರ ಕಚೇರಿ ಮತ್ತು ಜಿಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಯಾವೋಬ್ಬ ಅಧಿಕಾರಿಯೂ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಸರ್ಕಾರ ನಿಗಧಿಪಡಿಸಿರುವ ಹಳದಿ-ಕೆಂಪು ಬಣ್ಣದ ಟ್ಯಾಗ್ ಧರಿಸದೆ ಇರುವುದು ನಿಜಕ್ಕೂ ಜಿಲ್ಲಾಧಿಕಾರಿಗಳ ಆಡಳಿತ ವೈಖರಿ ಅಪಹಾಸ್ಯಕ್ಕೆ ಹೆಡೆಮಾಡಿಕೊಟ್ಟಿದೆ. ಸಂಬಂಧಪಟ್ಟ ಜಿಲ್ಲಾಡಳಿತಭವನದಲ್ಲಿರುವ ಆಡಳಿತ ಶಾಖೆಯ ಶಿರೆಸ್ಥೆದಾರರಿಗೆ ಇದರ ಬಗ್ಗೆ ವಿಚಾರಿಸಿದರೆ, ಸರ್ ನಾವು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಲಾಖಾವಾರು ಎಲ್ಲಾ ಸಿಬ್ಬಂಧಿಗಳಿಗೂ ಕೊರಳದಾರದ ಟ್ಯಾಗ್ ಅನ್ನು ನೀಡಿದ್ದೇವೆ, ಆದರೆ ಯಾರು ಧರಿಸುತ್ತಿಲ್ಲ, ನಿಮ್ಮಂತಹವರು ಬಂದು ಕೇಳಿದರೆ ಸರಿಯಾಗುತ್ತೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರ್ಕಾರದ ಆದೇಶವನ್ನೇ ಪರಿಪಾಲಿಸದೆ ಇರುವ ಇಂತಹ ನಿರ್ಲಕ್ಷ್ಯ, ಉಡಾಫೆಯಂತಹ ಅಧಿಕಾರಿಗಳು ಜನರ ಕೆಲಸಗಳನ್ನು ಮಾಡುವರೆ…? ಕೇವಲ ಬಾಯಿ ಮಾತಿಗೆ ಅಷ್ಟೇ ಕನ್ನಡಾಭಿಮಾನ, ದೇಶಾಭಿಮಾನ ತೋರಿಸುವ ಇವರುಗಳು ತಮ್ಮ ಮಕ್ಕಳಿಗೆ ಯಾವ ನೀತಿ-ಬೋಧನೆಗಳನ್ನು ತಿಳಿಸುತ್ತಾರೋ ದೇವರೇ ಬಲ್ಲ… ಅಂತ ಹೇಳುತ್ತ ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಬರೆಯುವೆ, ನನಗೆ ನನ್ನ ಲೇಖನಗಳಿಂದ ಸ್ವಲ್ಪ ಮಟ್ಟಿಗಾದರೂ ಜಿಲ್ಲೆಯಲ್ಲಿರುವ ಅಧಿಕಾರಿಗಳ ಎಚ್ಚೆತ್ತುಕೊಳ್ಳುವಂತೆ ಮಾಡುವುದು ಪ್ರಮುಖ ಉದ್ಧೇಶವಾಗಿದೆ. ಅದು ಬಿಟ್ಟು ಎಲ್ಲಾ ಅಧಿಕಾರಿಗಳನ್ನು ಟ್ರ್ಯಾಫ್ ಮಾಡಿದೆ ಅವರಿಂದಲೇ ಹಣ ಸುಲಿಗೆ ಮಾಡಿದೆ, ಲೋಕಾಯುಕ್ತ ದೂರು ದಾಖಲಿಸಿದೆ ಎಂಬ ಮನಸ್ಸು ನನಗಿಲ್ಲ, ಸರ್ಕಾರಿ ನೌಕರರು ಸರಿಯಾದ ರೀತಿಯಲ್ಲಿ ಕರ್ತವ್ಯ ಪರಿಪಾಲನೆ ಮಾಡಿದರೆ ಮಾತ್ರ ಬಡ ಸಾಮಾನ್ಯರ ಕಷ್ಟಗಳಿಗೆ ಪರಿಹಾರ ಸಿಗಲು ಸಾಧ್ಯ, ಅದಕ್ಕಲಾಗಿ ನನ್ನ ಹೋರಾಟ, ೀ ಹೋರಾಟಕ್ಕೆ ಕೆಲವು ಕಿಡಿಗೇಡಿಗಳು ಪುಂಡರು-ಪರೋಡಿಗಳಿಂದ, ದೊಡ್ಡಸ್ಥಿಕೆ ಇರುವ ಮುಟ್ಟಾಳರಿಂದ, ಿನ್ನೂ ಊರು ಉದ್ದಾರ ಮಾಡ್ತಿವೀ ಅಂತ ಜನರೆದುರು ಹೇಳಿ, ಬೆನ್ನ ಕೋಟಿ ಕೋಟಿ ಹಣ ಲೂಟಿ ಹೊಡೆಯುವ ಖದೀಮರಿಂದ ಬೆದರಿಕೆ ತರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದು ನನಗೆ ಲೆಕ್ಕಕ್ಕಿಲ್ಲ, ನಾನು ಸರಿಯಾದ ದಾರಿಯಲ್ಲಿದ್ದರೆ ಆ ದೇವಿಯ ಆರಾಧಕನೇ ಆಗಿದ್ದರೆ, ನನ್ನನ್ನು ದೇವಿಯೇ ಕಾಪಾಡುತ್ತಾಳೆ ಅಂತ ನಂಬಿಕೆ ಇರುವವನು ಎಂದು ಹೇಳಿ ನನ್ನ ಈ ಲೇಖನದ ವರದಿಯ ಮುಕ್ಯಾಯಗೊಳಿಸುವೆ…“

ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂದೀಪ್ ಬಿ.ಕೆ. ಸುತ್ತೋಲೆ ಹೊರಡಿಸಿದ್ದಾರೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಳಿಸಿ 50 ವರ್ಷಗಳು ಪೂರೈಸಿರುವ ಸುಸಂದರ್ಭದಲ್ಲಿ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ರಾಜ್ಯ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು ಒಳಗೊಂಡಿರುವ ಕೊರಳುದಾರ (ಟ್ಯಾಗ್) ಹೊಂದಿದ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕೆಂದು ಸರ್ಕಾರವು ನಿರ್ಣಯಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ, ಸಿಬ್ಬಂದಿ ತಮ್ಮ ಇಲಾಖೆ, ಸಂಸ್ಥೆಯ ಗುರುತಿನ ಚೀಟಿಯನ್ನು ಧರಿಸಲು ಅನುವಾಗುವಂತೆ ಹಳದಿ ಮತ್ತು ಕೆಂಪು ಬಣ್ಣದ ಕೊರಳುದಾರವನ್ನು ಒದಗಿಸಲು ತಮ್ಮ ಇಲಾಖೆ/ಸಂಸ್ಥೆಯ ಸಕ್ಷಮ ಪ್ರಾಧಿಕಾರಗಳು ಕೂಡಲೇ ನಿಯಮಗಳನುಸಾರ ಕ್ರಮವಹಿಸುವಂತೆ ತಿಳಿಸಲಾಗಿದೆ. ಆದರೆ ನಮ್ಮ ದಾವಣಗೆರೆ ಜಿಲ್ಲೆಯಲ್ಲಿರುವ ಪ್ರತಿಯೊಂದು ಸರ್ಕಾರಿ ಇಲಾಖೆಯ ನೌಕರರು ಸರ್ಕಾರದ ಆದೇಶವಿರಲಿ, ಈ ಹಿಂದೆ ಇರುವ ಸರಕಾರಿ ಅಧಿಕಾರಿಗಳು ಮತ್ತು ನೌಕರರು ಕಚೇರಿಗಳಲ್ಲಿ ಐಡಿ ಕಾರ್ಡ್ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿರುವುದನ್ನೇ ಪರಿಪಾಲನೆ ಮಾಡದೆ ಇರುವುದು ಕಂಡುಬಂದಿದೆ. ಉದಾಹರಣೆಗೆ ನಮ್ಮ ಪತ್ರಿಕೆಯ ಸಂಪಾದಕರು ಮತ್ತು ತಂಡ ಭೇಟಿ ನೀಡುವ ಪ್ರತಿಯೊಂದು ಇಲಾಖೆಗಳಲ್ಲಿಯೂ ಸಹ ಸರ್ಕಾರಿ ನೌಕರರ ವಸ್ತ್ರಧಾರಣೆಯೇ ಕಂಡುಬರುತ್ತಿದೆ. ಇದರಿಂದ ನಾನಾ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳ ಹೆಸರು ಹಾಗೂ ಹುದ್ದೆಗಳ ಗುರುತು ಸಿಗದೆ ಪರದಾಡುವುದು ಸಾಮಾನ್ಯವಾಗಿದೆ. ಇದರಿಂದ, ನಿಗದಿತ ವೇಳೆಗೆ ಕೆಲಸ, ಕಾರ್ಯಗಳಾಗದೆ ಹಾಗೂ ಸಂಬಂಧಪಟ್ಟ ಅಧಿಕಾರಿ ಮತ್ತು ನೌಕರರನ್ನು ಭೇಟಿ ಮಾಡಲಾಗದೇ ಸಾರ್ವಜನಿಕರು ಬರಿಗೈಲಿ ವಾಪಸ್ ತೆರಳಿದ ಸಾಕಷ್ಟು ಉದಾಹರಣೆಗಳಿವೆ. ವರ್ಷಕ್ಕೊಮ್ಮೆ ಎಚ್ಚರಗೊಂಡು, ಕನ್ನಡಪರ ಕೂಗಾಟಗಳನ್ನು ಮಾಡುತ್ತ ಒಂದುವಾರದ ಮಟ್ಟಿಗೆ ಪತ್ರಿಕೆಯಲ್ಲಿ ಸುದ್ದಿಪ್ರಸಾರಕ್ಕಾಗಿ ಪ್ರಚಾರಗಿಟ್ಟಿಸಿಕೊಳ್ಳುವ ಹೋರಾಟಗಾರರಿಗೆ ಈ ಆದೇಶ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ… ಈ ಸುದ್ದಿಯ ನೋಡಿಯಾದ್ರೂ ಕನ್ನಡಪರ ಹೋರಾಟಗಾರರು ಪ್ರತಿ ಇಲಾಖೆಗೆ ಭೇಟಿ ನೀಡಿ ಸರ್ಕಾರ ಹೊರಡಿಸಿರುವ “ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು (Employee ID card) ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಕಡ್ಡಾಯವಾಗಿ ಹಾಕಿಕೊಳ್ಳಬೇಕೆಂಬ” ಹೊಸ ಆದೇಶವನ್ನು ಪಾಲಿಸುವಂತೆ ಮಾಡಿ, ತಾವುಗಳು ಕುಂಭಕರ್ಣನಂತೆ ವರ್ಷಕ್ಕೊಮ್ಮೆ ಎಚ್ಚರಗೊಂಡು ಪ್ರಚಾರಕ್ಕಾಗಿ ಹೋರಾಟಗಾರರೆನಿಸಿಕೊಳ್ಳದಿರಿ, ಸರ್ಕಾರದ ಪ್ರತಿ ನೌಕರರೂ ಕೊರಳುದಾರವ ಧರಿಸಿ, ಕನ್ನಡಾಭಿಮಾನ ವ್ಯೆಕ್ತಪಡಿಸುವಂತೆ ಮಾಡಿ ಎಂಬುದೇ ಇಂದಿನ ವರದಿಯ ಮುಖ್ಯ ಉದ್ದೇಶ.
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು

error: Content is protected !!