ಜಿಲ್ಲಾಸ್ಪತ್ರೆಯಲ್ಲಿ ರಾಯಚೂರು ಮೂಲದ ದೀಕ್ಷಾ ಏಜೆನ್ಸಿಯ ಗೋಲ್ ಮಾಲ್; ಆಸ್ಪತ್ರೆ ಆವರಣದ ಹೊರಗೆ ಹೊರ ಗುತ್ತಿಗೆ ನೌಕರರಿಂದ ಪ್ರತಿಭಟನೆ
ಅಧಿಕಾರಿಗಳ-ಏಜೆನ್ಸಿಯವರ ಲಾಭದ ಮೋಸಕ್ಕೆ ಬಲಿಯಾಗಿರುವ ಜಿಲ್ಲಾಸ್ಪತ್ರೆಯ ಹೊರಗುತ್ತಿಗೆ ನೌಕರರು

ದಾವಣಗೆರೆ: ತಿಂಗಳಿಗೆ ಸರಿಯಾಗಿ ವೇತನ ಕೊಡುತ್ತಿಲ್ಲ. ಪ್ರತಿನಿತ್ಯ ಗುತ್ತಿಗೆದಾರರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಹೊರ ಗುತ್ತಿಗೆ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು ೨೭೦ ಜನ ಹೊರ ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿದ್ದಾರೆ. ರಾಯಚೂರು ಮೂಲದ ದೀಕ್ಷಾ ಎಂಬ ಏಜೆನ್ಸಿ ಅವರಿಂದ ಸ್ಥಳೀಯ ಮಂಜುನಾಥ್ ಎನ್.ಕಕ್ಕರಗೊಳ್ಳ, ಲೋಹಿತ್, ಶರೀಫ್ ಎಂಬುವರು ಮಧ್ಯವರ್ತಿಗಳಾಗಿ ಕೆಲಸ ಮಾಡುವ ನೌಕರರಿಗೆ ಪ್ರತಿ ತಿಂಗಳು ವೇತನ ಕೊಡುತ್ತಿಲ್ಲ. ಸರಿಯಾಗಿ ಪಿಎಫ್, ಇಎಸ್ಐನ ಹಣ ಕಟ್ಟುತ್ತಿಲ್ಲ.
ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ರಾಯಚೂರಿನ ದೀಕ್ಷಾ ಏಜೆನ್ಸಿ ಪಡೆದಿರುವ ಹೊರ ಗುತ್ತಿಗೆ ಪದ್ಧತಿ ರದ್ದುಗೊಳಿಸುವುದರೊಂದಿಗೆ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಅಲ್ಲದೆ ಹೊಸದಾಗಿ ಟೆಂಡರ್ ಕರೆಯುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಕಾರ್ಮಿಕ ಮುಖಂಡ ಹನುಮಂತಪ್ಪ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಎಲ್ಲಾ ಕಾರ್ಮಿಕರು ಭಾಗವಹಿಸಿದ್ದರು.
ವರದಿ : ಪುಂಡಲೀಕ. ಎ.ಪಾಟೀಲ