Davanagere

ಭಾರತದ ಇತಿಹಾಸದಲ್ಲೇ ಮೊದಲು ಮೋದಿ 3.0ರ ಕ್ಯಾಬಿನೆಟ್ನಲ್ಲಿ ಮುಸ್ಲಿಮರಿಗಿಲ್ಲ ಪ್ರಾತಿನಿಧ್ಯ

ಇದು ಮೋದಿಯ ಪ್ರಜಾತಂತ್ರ ವ್ಯೆವಸ್ಥೆ....!!

ನವದೆಹಲಿ: ಮೊನ್ನೆ ಅಂದರೆ ಭಾನುವಾರದ ವಿಶೇಷ ದಿನದಂದು ಭಾರತದ ಸಿಂಹಾಸನಕ್ಕೆ ಮೂರನೇಯ ಬಾರಿ ಕುಳಿತುಕೊಳ್ಳಲು ಸಜ್ಜಾಗಿ ಪ್ರಮಾಣ ವಚನ ಓದಿದ ಮಾನ್ಯ ಮೋದಿಜಿಯವರು “ನಾನು ನರೇಂದ್ರ ದಾಮೋದರ್ ಮೋದಿ, ಈ ದೇಶದ ಪ್ರತಿಯೊಬ್ಬ ಸರ್ವಧರ್ಮ ಪ್ರಜೆಗಳ ಇಚ್ಚಾಶಕ್ತಿಗೆ ವಿರೋಧ ಒಡ್ಡದೆ, ಎಲ್ಲರನ್ನೂ ಎಲ್ಲಾ ರೀತಿಯಿಂದಲೂ ಸಮಾನತೆಯ ದೃಷ್ಠಿಯಲ್ಲಿ ನೋಡುವೆನೆಂದು ಸಂವಿಧಾನದಡಿಯಲ್ಲಿಯೇ ಈ ದೇಶದ
ಆಗು-ಹೋಗುಗಳ ಕಾರ್ಯಗಳನ್ನು ಮಾಡುತ್ತ, ಪ್ರಜೆಗಳಲ್ಲಿ ಏಕತೆಯ ಭಾವನೆಯನ್ನು ಮೂಡಿಸುತ್ತೇನೆಂದು ಈಶ್ವರನ ಮೇಲೆ ಪ್ರಮಾಣೀಕರಿಸುತ್ತೇನೆ” ಎಂದು ಹೇಳಿದವg ಮಂತ್ರಿಮಂಡಲದೊಳಗೆ ಮುಸ್ಲೀಂ ಜನಾಂಗದವರಿಗೆ ಯಾವುದೇ ರೀತಿಯ ಕ್ಯಾಬಿನೆಟ್ ದರ್ಜೆಯ ಸ್ಥಾನವನ್ನು ನೀಡದೆ ಇರುವುದು ದುಃಖಕರವಾಗಿದೆ.ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಮುಸ್ಲಿಂ ಸಚಿವರಿಲ್ಲದ ಕೇಂದ್ರ ಸಚಿವ ಸಂಪುಟ ರಚನೆಯಾಗಿದೆ. ಭಾನುವಾರ ರಾತ್ರಿ ಅಸ್ತಿತ್ವಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಹಲವು ರಾಜ್ಯಗಳು, ವರ್ಗಗಳು ಮತ್ತು ಜಾತಿಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಆದರೆ ದೇಶದ 200 ಮಿಲಿಯನ್ ಮುಸ್ಲಿಂ ಜನಸಂಖ್ಯೆಗೆ ಒಂದೇ ಒಂದು ಸಚಿವ ಸ್ಥಾನ ನೀಡಿಲ್ಲ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ವರ್ಷಗಳ ನಂತರ ರಾಜ್ಯಸಭೆಗೆ ಮರು ಆಯ್ಕೆಯಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿ ಸರ್ಕಾರದ ಸಂಪುಟದಲ್ಲಿ ನಖ್ವಿ ಒಬ್ಬರೇ ಮುಸ್ಲಿಂ ಸಚಿವರಾಗಿದ್ದರು. 2014ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ, ಆಗಿನ ರಾಜ್ಯಸಭಾ ಸಂಸದ ನಜ್ಮಾ ಹೆಪ್ತುಲ್ಲಾ ಅವರನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು. 1999ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಇಬ್ಬರು ಮುಸ್ಲಿಮ ಸಚಿವರನ್ನು ಹೊಂದಿತ್ತು – ಶಾನವಾಜ್ ಹುಸೇನ್ ಮತ್ತು ಒಮರ್ ಅಬ್ದುಲ್ಲಾ. 1998ರಲ್ಲಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ನಖ್ವಿ ಅವರು ರಾಜ್ಯ ಸಚಿವರಾಗಿದ್ದರು. 2004 ಮತ್ತು 2009ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಗಳಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದು ಮುಸ್ಲಿಂ ಸಚಿವರನ್ನು ಹೊಂದಿತ್ತು. ಈ ಹಿಂದೆಯೂ ಸಹ, ಸಾರ್ವತ್ರಿಕ ಚುನಾವಣೆಯ ನಂತರ ಕೇಂದ್ರ ಸಂಪುಟದಲ್ಲಿ ಯಾವಾಗಲೂ ಕನಿಷ್ಠ ಒಬ್ಬ ಮುಸ್ಲಿಂ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಆದರೆ ಇದೇ ಮೊದಲು ಬಾರಿಗೆ ಕೇಂದ್ರದಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣ ಪ್ರಾತಿನಿಧ್ಯದಿಂದ ವಂಚಿತವಾಗಿದೆ.

error: Content is protected !!