Davanagere

ಲಂಚಬಾಕ ದಾವಣಗೆರೆಯ ಮಾಜಿ, ಎನ್.ಆರ್ ಪುರದ ಹಾಲಿ ಸಬ್ ರಿಜಿಸ್ಟ್ರರ್ ಗೆ ಶಿಕ್ಷೆಯಾಗಲಿ ; ಮಾನ್ಯ ಹೈಕೋರ್ಟ್ ನ್ಯಾಯಾಧೀಶರೆ ಹಗಲು ದರೋಢೆಕೋರ ಸಬ್ ರಿಜಿಸ್ಟ್ರಾರ್ ಹೇಮೇಶ್ ಗೆ ಜಾಮೀನು ನೀಡದಿರಿ

filter: 0; fileterIntensity: 0.0; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: 32768; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;

ದಾವಣಗೆರೆ : ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಕೋಟಿ ಕೋಟಿ ರೂಪಾಯಿಗಳ ಆದಾಯ ಸಂಗ್ರಹದೊಂದಿಗೆ ಕರ್ನಾಟಕ ಸರ್ಕಾರಕ್ಕೆ ಮೂರನೇ ಅತಿ ಹೆಚ್ಚು ಆದಾಯವನ್ನು ಉತ್ಪಾದಿಸುವ ಇಲಾಖೆಯಾಗಿದೆ. ನೋಂದಾಯಿತ ಒಟ್ಟು ದಾಖಲೆಗಳು ಸುಮಾರು 19.57 ಲಕ್ಷಗಳು. ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಯು ನೋಂದಾಯಿತ ಸಾರ್ವಜನಿಕ ದಾಖಲೆಗಳಾದ ಮದುವೆಗಳು ಮತ್ತು ಸಂಸ್ಥೆಗಳ ನೋಂದಣಿ, ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು ಅಂದರೆ ಮಾರಾಟ, ವರ್ಗಾವಣೆ ಅಥವಾ ಸ್ಥಿರ ಆಸ್ತಿಗಳ ಉಡುಗೊರೆ, ಅಡಮಾನ, ವಕೀಲರ ಅಧಿಕಾರ, ಉಯಿಲುಗಳು ಮತ್ತು ಇನ್ನೂ ಹೆಚ್ಚಿನವುಗಳ ಪಾಲಕರಾಗಿದ್ದಾರೆ. ಕೆಲವು ಹಳೆಯ ದಾಖಲೆಗಳು 1865 ರ ಹಿಂದಿನದು. ಈ ನಿರ್ಣಾಯಕ ಸಾರ್ವಜನಿಕ ದಾಖಲೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಇಲಾಖೆಯ ಪ್ರಧಾನ ಜವಾಬ್ದಾರಿಯಾಗಿದೆ. ನೋಂದಾಯಿತ ದಾಖಲೆಗಳಿಗೆ ಸಂಬಂಧಿಸಿದ ದಾಖಲೆಗಳು ಅಥವಾ ಮಾಹಿತಿಯನ್ನು ವ್ಯಾಖ್ಯಾನಿಸಲಾದ ಕಾರ್ಯವಿಧಾನಗಳ ಮೂಲಕ ವಿನಂತಿಸಿದಾಗ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ನಿಗದಿತ ವಹಿವಾಟುಗಳಿಗೆ ಸರ್ಕಾರದ ಪರವಾಗಿ ಮುದ್ರಾಂಕ ಶುಲ್ಕವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಇಲಾಖೆ ಹೊಂದಿದೆ. 1 ಜಿಲ್ಲಾ ರಿಜಿಸ್ಟ್ರಾರ್ ಕಛೇರಿಯ ನಿಯಂತ್ರಣದಲ್ಲಿರುವ 5 ಉಪ-ರಿಜಿಸ್ಟ್ರಾರ್ ಕಛೇರಿಗಳ (SROs) ಮೂಲಕ ಸೇವೆಗಳನ್ನು ಒದಗಿಸಲಾಗುತ್ತದೆ.

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
‘ಕಾವೇರಿ’ ಎಂದು ನಾಮಕರಣ ಮಾಡಲಾದ ಸಾಫ್ಟ್ವೇರ್ ಅಪ್ಲಿಕೇಶನ್ನ ಅನುಷ್ಠಾನದ ಮೂಲಕ ಇಲಾಖೆಯ ಸೇವೆಗಳನ್ನು ಗಣಕೀಕರಣಗೊಳಿಸಲಾಗಿದೆ. ಕಾವೇರಿ ತಂತ್ರಾಂಶವನ್ನು 2004 ರ ಹೊತ್ತಿಗೆ ಎಲ್ಲಾ SRO ಗಳಲ್ಲಿ ಬೂಥ್ ಮಾದರಿಯಲ್ಲಿ ಯಶಸ್ವಿಯಾಗಿ ಹೊರತರಲಾಯಿತು ಮತ್ತು ಅಂದಿನಿಂದ ಇಂದಿನವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. KAVERI ಎಂಬುದು ವಿಕೇಂದ್ರೀಕೃತ ಅಪ್ಲಿಕೇಶನ್ ಸಾಫ್ಟ್ವೇರ್ ವ್ಯವಸ್ಥೆಯಾಗಿದ್ದು, ಪ್ರತಿ ಕಛೇರಿಯು ತನ್ನದೇ ಆದ ಸರ್ವರ್ ಅನ್ನು ಹೊಂದಿದ್ದು ಅಪ್ಲಿಕೇಶನ್ ಮತ್ತು ಡೇಟಾವನ್ನು ರಚಿಸಲಾಗಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಇಲಾಖೆಯು ಬ್ಯಾಕ್ಅಪ್ ಮತ್ತು ಹೆಚ್ಚುವರಿ ಸೇವೆಗಳನ್ನು ಸಲ್ಲಿಸಲು SDC ಯಲ್ಲಿ ಕೇಂದ್ರೀಕೃತ ಡೇಟಾಬೇಸ್ಗೆ ಡೇಟಾವನ್ನು ವರ್ಗಾಯಿಸುತ್ತಿದೆ. ಡೇಟಾ ಮತ್ತು ದಾಖಲೆಗಳ ನೋಂದಣಿ ಮತ್ತು ಡಿಜಿಟಲೀಕರಣದ ಪ್ರಕ್ರಿಯೆಗಳನ್ನು ವೇಗಗೊಳಿಸಲು ಕಾವೇರಿ ಸಹಾಯ ಮಾಡಿದೆ. ಆದರೆ ರಾಜ್ಯದ ಯಾವ ಮೂಲೆಯಲ್ಲಿರುವ ನೋಂದಣಾಧಿಕಾರಿಗಳ ಕಚೇರಿಯಲ್ಲೂ ಸಹ ಬಡಪಾಯಿ ಜನರ ಹಾಗೂ ಮಧ್ಯಮ ವರ್ಗದ ಜನರ ಕೆಲಸಗಳು ಸಲೀಸಾಗಿ ನಡೆಯುತ್ತಿಲ್ಲ. ಕಾರಣ ಆ ನೋಂದಣಾಧಿಕಾರಿಗಳ ಕಚೇರಿಯಲ್ಲಿರುವ ಭ್ರಷ್ಟ ಸಿಬ್ಬಂಧಿಗಳು, ಭ್ರಷ್ಟ ಅಧಿಕಾರಿಗಳು, ಕೆಚ್ಚಲಿಗೆ ಬಾಯಿ ಹಾಕಿ ರಕ್ತ ಹೀರುವ ಮಧ್ಯವರ್ತಿಗಳ ರೂಪದಲ್ಲಿರುವ ರಿಯಲ್ ಎಸ್ಟೇಟ್ ಏಜೆಂಟರುಗಳು. ಅದಕ್ಕಾಗಿಯೇ ಏನೋ ಯಾವ ಇಲಾಖೆಯಲ್ಲೂ ಇಲ್ಲದ ಆದಾಯ ರಾಜ್ಯದ ಎರಡೇ ಎರಡು ಇಲಾಖೆಗಳಲ್ಲಿ ಕಂಡುಬರುತ್ತದೆ. ಅದುವೇ ಒಂದು ಆರ್.ಟಿ.ಓ ಕಚೇರಿ, ಇನ್ನೊಂದು ನೋಂದಣಾಧಿಕಾರಿಗಳ ಕಚೇರಿ. ಹೌದು ಎಷ್ಟೇ ರಾಜ್ಯ ಸರ್ಕಾರ ಬದಲಾದರೂ ಸಹ ಕೆಲವು ಆದೇಶಗಳು, ಬದಲಾವಣೆಗಳೂ ಬಂದರೂ ಸಹ ಆನಲೈನ್ ಎಂದು ಬೊಬ್ಬೆಯೊಡೆದರೂ ಸಹ ಜನರ ಬಳಿ ಲಂಚದ ಹಣ ಕೀಳುವ ರಕ್ಕಸರೇ ಹೊಸ ಹೊಸ ಆಲೋಚನೆಗಳಿಂದ ಸೃಷ್ಠಿಯಾಗಿ, ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಾರೆ. ಇಂತಹ ಅಧಿಕಾರಿಗಳಲ್ಲಿ ಒಂದೊಳ್ಳೆ ಉದಾಹರಣೆ ಎಂದರೆ, ದಾವಣಗೆರೆ ಜಿಲ್ಲೆಯ ಮಾಜಿ ಉಪ ನೋಂದಣಾಧಿಕಾರಿ ಹಾಗೂ ಈಗ ಪ್ರಸ್ತುತ ಎನ್.ಆರ್.ಪುರ ಉಪನೋಂದಣಾಧಿಕಾರಿಯಾಗಿರುವ ಹೇಮೇಶ್.
filter: 0; fileterIntensity: 0.0; filterMask: 0; module:1facing:0;
hw-remosaic: 0;
touch: (-1.0, -1.0);
modeInfo: ;
sceneMode: 32768;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;
ಲಂಚಬಾಕ ಅಧಿಕಾರಿಯ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರು ಯಾರು ಎಂದು ಸಂಬಮಧಪಟ್ಟ ಮಂತ್ರಿಗಳೇ ಉತ್ತರಿಸಬೇಕಾಗಿದೆ. ಪ್ರತಿ ಫೈಲ್ ಗೆ ಸಹಿ ಹಾಕಲು ಹೆಚ್ಚುವರಿ ಹಣ ಪಡೆಯುವ ಹೇಮೇಶಪ್ಪ… ಈ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಉಪ ನೋಂದಣಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಲವು ಆರೋಪ ಕೇಳಿಬಂದಿದ್ದರಿಂದ ಮಹಾಸ್ವಾಮಿಗಳನ್ನ ಜಿಲ್ಲಾಡಳಿತ ಹಾಗೂ ಮಂತ್ರಿಗಳು ಯಾವುದೇ ಮುಲಾಜಿಲ್ಲದೇ ಎನ್.ಆರ್. ಪುರಕ್ಕೆ ವರ್ಗಾವಣೆ ಮಾಡಿದ್ದರು. ಈಗ ಅಲ್ಲಿ ಯಾವ ರೀತಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿ ಸಿ ಕ್ಯಾಮರಾ ಅಳವಡಿಸದೆ ಮನಸೋ ಇಚ್ಛೆ ಹಣಕ್ಕೆ ಬೇಡಿಕೆ ಇಡುತ್ತಿದ್ದನೋ ಒಂದು ಗೊತ್ತಿಲ್ಲ.
( ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ….)
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು

error: Content is protected !!