Davanagere

ಸ್ವತಃ ಶಾಲಾ ಮಂಡಳಿಯೇ ತಮ್ಮ ತಪ್ಪು ಒಪ್ಪಕೊಂಡರೂ ಸಹ…. ಪಾಲಿಕೆ- ಬೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವಲ್ಲಿ ವಿಫಲ

ಸದರಿಯವರ ವಿರುದ್ಧ ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ನ್ಯಾಯಾಲಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ದಾವೆ ಮಾಡುವುದು ನಿಶ್ಚಿತ

ದಾವಣಗೆರೆ : ಜಿಲ್ಲೆ ಹಾಗೂ ದಾವಣಗೆರೆ ನಗರ ಭಾಗದಲ್ಲಿ ಕೆಲವು ವ್ಯೆಕ್ತಿಗಳು, ಕೆಲವು ಸಂಸ್ಥೆಯವರು ಸರ್ಕಾರಕ್ಕೆ ಸಂಬಂಧಿಸಿದ ಪಾಲಿಕೆಯ ವ್ಯಾಪ್ತಿಯಲ್ಲಿರುವ ರಾಜಕಾಲುವೆ, ಖಾಲಿ ನಿವೇಶನಗಳನ್ನು ಮತ್ತು ಬೆಸ್ಕಾಂನ ಹೈ ಟೆನ್ಸನ್ ಲೈನ್ ಗಳು ಹಾದು ಹೋಗಿರುವ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು, ತಮ್ಮ ಹಣದ ದಾಹಕ್ಕೆ, ತಮ್ಮ ಸ್ವಾರ್ಥಪರ ವ್ಯೆವಹಾರಗಳಿಗೆ ದುರುಪಯೋಗ ಪಡಿಸಿಕೊಂಡಿರುವುದು ಸರ್ವೇ ಸಾಮಾನ್ಯವಾಗಿದೆ. ಅದಕ್ಕೆ ಸಾಕ್ಷಿಯೆಂಬಂತೆ ನಮ್ಮ ಪತ್ರಿಕೆಯ ಸಂಪಾದಕರು ಕಳೆದ ವರ್ಷದಿಂದಲೂ ಒಂದು ಪುಷ್ಪಾಮಹಾಲಿಂಗಪ್ಪ ಶಾಲಾ ಆಡಳಿತ ಮಂಡಳಿಯ ವಿರುದ್ಧ ಮತ್ತು ಅವರ ಸಹೋದರ ಭೀಮಪ್ಪ ಬಿನ್ ಹಾಲಪ್ಪ, ವಿದ್ಯಾವೈಭವ ಶಾಲೆಯ ವಿರುದ್ಧ ಪಾಲಿಕೆ ಹಾಗೂ ಬೆಸ್ಕಾಂ ಕಚೇರಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಕರ್ತವ್ಯ ನಿಷ್ಠ ತೋರಬೇಕಿದ್ದ ಅಧಿಕಾರಿಗಳೇ ಸಾಕ್ಷಿಯಿಲ್ಲದವರಂತೆ ಅವರ ಬಳಿ ಹಣದ ಆಮೀಷಕ್ಕೆ ಒಳಗಾಗಿ ಇಲ್ಲಿಯವರೆಗೂ ಯಾವುದೇ ಕ್ರಮ ಜರುಗಿಸದೆ ಇರುವುದು ಸರ್ಕಾರಿ ಅಧಿಕಾರಿಗಳ ನೀಚ ಕೃತ್ಯ ಕಂಡು ಬರುತ್ತಿದೆ. ಅಂತಹದ್ದರಲ್ಲಿ ಪತ್ರಿಕೆಯ ಸಂಪಾದಕರೇ ಸಂಬಂಧಪಟ್ಟ ಇಲಾಖೆಗಳ ನಡುವೆ ಪತ್ರ ವ್ಯೆವಹಾರ ನಡೆಸಿ ದಾಖಲೆ ಕಲೆ ಹಾಕಿದ್ದು, ಸದರಿ ಶಾಲಾ ಆಡಳಿತ ಮಂಡಳಿಯವರೇ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದು, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಗೆ ತಾವು ಪಾಲಿಕೆಯ ರಾಜಕಾಲುವೆ ಹಾಗೂ ಹೈ ಟೆನ್ಸನ್ ಪ್ರದೇಶಗಳನ್ನು ಒತ್ತುವರಿ ಮಡಿಕೊಂಡಿದ್ದು, ಮಕ್ಕಳ ಹಿತದೃಷ್ಠಿಯಿಂದ ಈ ರೀತಿ ಮಾಡಿದ್ಧೇವೆ ಎಂದು ಹೇಳಿಕೊಂಡಿದ್ದಾರೆ. ಮಕ್ಕಳ ಹಿತದೃಷ್ಠಿ ಕಾಪಾಡುವುದು ನಿಜವೇ ಆದರೆ ಶಾಲಾ ಆಡಳಿತ ಮಂಡಳಿಯು ಮಕ್ಕಳ ಪೋಷಕರಿಂದ ಲಕ್ಷ ಲಕ್ಷ ಬೋಧನಾ ಶುಲ್ಕ ವಸೂಲಿ ಮಾಡುವ ಹಣದಿಂದ ಹೊಸದಾಗಿ ಖಾಲಿ ನಿವೇಶನವನ್ನು ಖರೀದಿಸಿ ಅವರ ಆಟ-ಪಾಠಕ್ಕೆ ಅನುಕೂಲ ಮಾಡಿಕೊಳ್ಳಬಹುದು ಅಲ್ಲವೇ… ಅದು ಅಲ್ಲದೆ ಸದರಿ ಆಡಳಿತ ಮಂಡಳಿಯು ಯಾವುದೇ ರೀತಿಯ ಸೇವಾ ಮನೋಭಾವನೆ ಹೊಂದಿರದೆ, ಶಿಕ್ಷಣವನ್ನು ವ್ಯೆವಹಾರಿಕವಾಗಿ ಬಳಸಿಕೊಂಡಿದ್ದು, ಮಕ್ಕಳ ಕಲಿಕೆಗಾಗಿ ತೆಗೆದುಕೊಳ್ಳುವ ಬೋಧನಾ ಶುಲ್ಕದಿಂದಲೇ ಸುಮಾರು ಜಾಗಗಳನ್ನು ತಮ್ಮ ಮತ್ತು ತಮ್ಮ ಪತ್ನಿಯವರ ಹೆಸರಿನಲ್ಲಿ ಶಾಲಾ ಸುತ್ತಮುತ್ತಲೂ ಖರೀದಿ ಮಾಡಿದ್ದಾರೆ. ಅಲ್ಲದೇ ಸದರಿ ಕಟ್ಟಡಗಳನ್ನು ತೋರಿಸಿಯೇ ಕೆಲವು ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಕೋಟಿಗಟ್ಟಲೇ ಲೋನ್ ಮಾಡಿಸಿರುವುದು ಸಾಕ್ಷಿ ಇದೆ.

ಮಕ್ಕಳ ಹಿತ ಕಾಪಾಡುವುದಕ್ಕೇ ರಾಜಕಾಲುವೆ ಹಾಗೂ ಹೈ ಟೆನ್ಸನ್ ಪ್ರದೇಶಗಳನ್ನು ಒತ್ತುವರಿಸುವುದಾದರೆ, ಇವರ ಸಹೋದರ ಭೀಮಪ್ಪ ಬಿನ್ ಹಾಲಪ್ಪ ಎಂಬುವವರು ಏಕೆ, ಕಟ್ಟಡ ಮಾಡಿ, ಮನೆ ಬಾಡಿಗೆ ನೀಡಿದ್ದಾರೆ ಎಂಬುದು ಅರ್ಥವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈಗಲಾದರೂ ಶಾಲಾ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಇಲ್ಲಿಯವರೆಗೂ ಅಂದರೆ ಯಾವ ವರ್ಷದಿಂದ ಶಾಲೆ ಆರಂಭಿಸಿ ಮಕ್ಕಳ ಪೋಷಕರಿಂದ ಹಣವನ್ನು ಶುಲ್ಕವಾಗಿ ಪಡೆದುಕೊಂಡಿದ್ದಾರೋ ಅಲ್ಲಿಂದಲೂ ಬಡ್ಡಿಯ ರೂಪದಲ್ಲಿ ಹಣದ ಮೂಲಕ ದಂಡ ವಿಧಿಸಿ, ಇಲ್ಲವೇ ಕರ್ನಾಟಕ ಮುನಿಸಿಫಲ್ ಆಕ್ಟ್ & ಕರ್ನಾಟಕ ಪೌರ ಮಹಾನಗರಪಾಲಿಕೆಗಳ ಅಧಿನಿಯಮ-೧೯೭೭, ಸರ್ಕಾರಕ್ಕೆ ದ್ರೋಹ ಎಸಗುವ ಮಾಲೀಕರಿಗೆ ಸಾಥ್ ನೀಡಿ ತಮ್ಮ ಕರ್ತವ್ಯವನ್ನು ಮರೆತು ಆಮೀಷಕ್ಕೆ ಒಳಗಾಗಿರುವ ಸಿಬ್ಬಂಧಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿ, ಕರ್ತವ್ಯದಿಂದ ಅಮಾನತ್ತು ಪಡಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ಒಂದುವೇಳೆ ಸದರಿ ವಿಷಯದ ಬಗ್ಗೆ ತಾವುಗಳು ಯಾವುದೇ ಕ್ರಮ ಜರುಗಿಸದೆ ಇದ್ದಲ್ಲಿ ತಮ್ಮ ಮತ್ತು ತಮ್ಮ ಸಿಬ್ಬಂಧಿಗಳ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತದೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.
ವರದಿ :- ಸೂರ್ಯಪ್ರಕಾಶ್.ಆರ್

error: Content is protected !!