ಬೊಮ್ಮಾಯಿಯವರ ಹಿಂದಿನ ಬಿಜೆಪಿ ಸರ್ಕಾರದ ಯಡವಟ್ಟಿನಿಂದ ಶಿಧಿಲಾವಸ್ಥೆಯಲ್ಲಿರುವ ದಾವಣಗೆರೆ ತಾಲ್ಲೂಕು ಕಚೇರಿ
ಕಟ್ಟಿರುವ ನೂತನ ತಾಲ್ಲೂಕು ಸೌಧವ ಜಿಲ್ಲಾ ಮಂತ್ರಿಗಳು ಓಪನ್ ಮಾಡಲಿ ಎಂಬುದೇ ನಮ್ಮಯ ಮನವಿ

ದಾವಣಗೆರೆ: ದಾವಣಗೆರೆ ತಾಲ್ಲೂಕು ಕಛೇರಿಗೆ ಪ್ರತಿನಿತ್ಯ ನೂರಾರು ಕೆಲಸ-ಕಾರ್ಯಗಳಿಗಾಗಿ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಪ್ರತಿನಿತ್ಯ ಭೇಟಿ ನೀಡುತ್ತಾರೆ. ಆದರೆ ಈಗಿರುವ ದಾವಣಗೆರೆ ತಾಲ್ಲೂಕು ಕಚೇರಿಯು ಕಳೆದ ಬಾರಿಯಿದ್ದ ಬಿಜೆಪಿ ಸರ್ಕಾರದ ಕೆಟ್ಟ ರಾಜಕಾರಣ, ಯಡವಟ್ಟಿನ ನಿರ್ಧಾರಗಳಿಂದ ಶಿಥಿಲಾವಸ್ಥೆಯಲ್ಲಿದೆ. ಯಾವಾಗ ಯಾವ ಅವಘಡ ಸಂಭವಿಸುತ್ತೋ ಎಂಬುದು ಜನರ ಭಯವಾಗಿದೆ. ಕಾರಣ ಕಚೇರಿಯ ಹೊರಗಡೆ ಕಟ್ಟಡದ ಗೋಡೆ್ಗಳ ಚೆಕ್ಕಳಗಳು ಮುರಿದು ಬಿದ್ದಿವೆ, ಮಳೆಗಾಲದಲ್ಲಿ ಕಟ್ಟಡದ ಛಾವಣಿಗಳ ಮೇಲೆ ನೀರು ನಿಂತು ಕಟ್ಟಡದೊಳಗೆಲ್ಲ ನೀರು ಕಸಿಯಾಗಿ ಗೋಡೆಗಳೆಲ್ಲ ಹಸಿಯಾಗುತ್ತಿದೆ. ಇನ್ನೂ ಕಚೇರಿಯ ಆವರಣದಲ್ಲಿಯೇ ಕಸದ ರಾಶಿ, ಅಲ್ಲಿಯೇ ಗುಟ್ಕಾ ಹಾಕಿಕೊಂಡು ಉಗಿಯುವುದು ಹಾಗೂ ಕಾಫಿ ಕುಡಿದ ಲೋಟಗಳು, ತಾಲ್ಲೂಕು ಕಚೇರಿಯ ಆವರಣದ ಒಳಗೆ ಬಿದ್ದಿರುವ ಮರದ ಒಣಗಿದ ಎಲೆಗಳು ಮತ್ತು ಅವುಗಳನ್ನು ಆವರಣದೊಳಗೆ ಸುಟ್ಟು ಹಾಕಿರುವ ತಿಪ್ಪೆಯ ರಾಶಿಯೂ ನೋಡುವ ಜನರಿಗೆ ಅಸಹ್ಯವಾಗಿ ಕಾಣುತ್ತಿದೆ. ಕಚೇರಿಯ ಗೋಡೆ ಹಾಗೂ ಮೂಲೆಗಳಲ್ಲಿ ಕಸದ ರಾಶಿ ಇರುವುದರಿಂದ ಮತ್ತಷ್ಟು ಕಸ ಹಾಗೂ ಗುಟ್ಕಾ ತಿಂದು ಉಗಿಯುವುದರಿಂದ ಕಚೇರಿ ಗಬ್ಬಾಗುತ್ತಿದೆ. ಸಮಾರಂಭಗಳಲ್ಲಿ ಸ್ವಚ್ಛ ಭಾರತ ಎಂದು ಮಂತ್ರ ಜಪಿಸುವ ತಾಲ್ಲೂಕು ದಂಡಾಧಿಕಾರಿಗಳು ತಮ್ಮ ಕಚೇರಿಯೊಳಗೆ ಕಸ ಹೊಡೆಯುವುದಕ್ಕಾಗಿಯೇ ಅಟೆಂಡರುಗಳು ಇದ್ದೂ ಸಹ ಇದರ ಬಗ್ಗೆ ಗಮನ ಹರಿಸದೆ, ತಮಗೆ ವಾಸಿಸಲು ಸರ್ಕಾರ ನೀಡಿರುವ ವಸತಿ ನಿಲಯವನ್ನೂ ಮಾತ್ರ ಸುತ್ತಲೂ ಸ್ವಚ್ಚವಾಗಿಡಲು ಕಚೇರಿಯ ಕೆಲಸ ಕಾರ್ಯಗಳಿಗೆ ನೇಮಕವಾಗಿರುವ ಗ್ರಾಮ ಸಹಾಯಕರನ್ನು ಕರೆಯಿಸಿಕೊಂಡು ಕಸ ಗುಡಿಸಿಕೊಳ್ಳುವುದು, ಅಂಗಳಕ್ಕೆ ನೀರು ಹಾಕಿಸಿಕೊಳ್ಳುವುದು ದಿನ ನಿತ್ಯ ನಡೆಯುತ್ತಿದೆ
ಇದು ಕಳೆದ ಬಾರಿ ನಮ್ಮ ದಿನಪತ್ರಿಕೆಯಲ್ಲಿ ಸುದ್ಧಿ ಮಾಡಿದ ತಕ್ಷಣ ಕಚೇರಿಯ ತಹಸೀಲ್ದಾರ್ ಸಾಹೇಬರೂ ತಮಗೆ ಕೊಟ್ಟಿರುವ ಸರ್ಕಾರಿ ಮನೆಯ ಕಾಂಪೌಂಡ್ ಸುತ್ತಲೂ ಯಾವ ಮೇಲಾಧಿಕಾರಿಗಳಿಗೂ ಅನುಮತಿಯ ಪಡೆದುಕೊಳ್ಳದೆ ತಮ್ಮ ಮನೆಯ ಆವರಣದಲ್ಲಿ ಯಾವುದೇ ಕೆಲಸ ಕಾರ್ಯ ಜನರಿಗೆ ಗೊತ್ತಾಗದಂತೆ ಪೈಬರ್ ಸೀಟ್ ಮೂಲಕ ಸುತ್ತುವರಿಸಿಕೊಂಡಿದ್ದಾರೆ. ಇನ್ನೂ ಸಾಹೇಬರೂ ತಾವೇ ಓಡಾಡುವ ಇತ್ತ ತಹಸೀಲ್ದಾರ್ ಕಚೇರಿಯಲ್ಲಿ ಮಾತ್ರ ಹೊರಗಡೆಯಿಂದ ಬರುವ ಅನಧಿಕೃತ ವ್ಯೆಕ್ತಿಗೆ ತಿಂಗಳಿಗೆ 10 ಜನ ಅಟೆಂಡರುಗಳಿಂದ ತಲಾ 200 ರೂಗಳಂತೆ 2000 ರೂಗಳನ್ನು ನೀಡಿ ಕಸ ಹೊಡೆಯಲು ತಿಳಿಸಿರುವ ವ್ಯೆಕ್ತಿಗಳ ಬಗ್ಗೆ ಸ್ವಲ್ಪನೂ ವಿಚಾರಿಸಿಲ್ಲ. ಕಟ್ಟಡದ ದುರಸ್ಥಿ ಕಾರ್ಯದ ಬಗ್ಗೆ ಕ್ರಮ ಜರುಗಿಸಿಲ್ಲ. ಇದರ ಬಗ್ಗೆ ಖುದ್ಧು ಪತ್ರಿಕೆಯ ಸಂಪಾದಕರೇ ತಮ್ಮ ಡಿಜಿಟಲ್ ವಾಹಿನಿಯ ಮೂಲಕ ಭೇಟಿ ಮಾಡಿ ಕಟ್ಟಡದ ದುರಸ್ಥಿಯ ಬಗ್ಗೆ ಕೇಳಿದರೆ, ಸಾಹೇಬರೂ ಹಿಂದಿನ ಸರ್ಕಾರಕ್ಕೆ ನಾವು ಪತ್ರ ವ್ಯೆವಹಾರ ನಡೆಸಿದ್ದೇವೆ, ಈಗಿನ ಜಿಲ್ಲಾ ಮಂತ್ರಿಗಳಿಗೂ ವಿಷಯ ಪ್ರಸ್ತಾಪ ಮಾಡಿದ್ದೇವೆ, ಇನ್ನೂ ಯಾವುದೇ ಉತ್ತರ ಬಂದಿಲ್ಲ ಬಂದ ತಕ್ಷಣ ನಾವು ಹೊಸದಾಗಿ ನಿರ್ಮಿಸಿರುವ ತಾಲ್ಲೂಕು ಸೌಧಕ್ಕೆ ನಮ್ಮ ಕಚೇರಿಯನ್ನು ವರ್ಗಾಯಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಸಂಬಂಧಪಟ್ಟ ಪ್ರಸ್ತುತ ತಾಲ್ಲೂಕು ಕಚೇರಿ ನಡೆಸಲು ಬಾಡಿಗೆ ಕೊಟ್ಟಿರುವ ಎಪಿಎಂಸಿ ಕಮಿಟಿಯ ಮುಖಂಡರುಗಳಿಗೆ ಇದರ ಬಗ್ಗೆ ಕೇಳಿದರೆ ತಾಲ್ಲೂಕು ಕಚೇರಿ ನಡೆಸಲು ಅನುಮತಿ ನೀಡಿದ್ದೂ ಆದರೆ ಸಮಯಕ್ಕೆ ಸರಿಯಾಗಿ ಬಾಡಿಗೆಯನ್ನು ಜಿಲ್ಲಾಡಳಿತವಾಗಲಿ, ಜಕಿಲ್ಲಾ ಪಂಚಾಯತ್ ಕಚೇರಿಯಿಂದಾಗಲಿ ಜಮೆಯಾಗುತ್ತಿಲ್ಲ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಪ್ರಸ್ತುತ ತಾಲ್ಲೂಕು ಕಚೇರಿಯ ಬಾಡಿಗೆ 4 ರಿಂದ 5 ತಿಂಗಳಾದರೂ ಬಾಡಿಗೆ ಸಂದಿಸದೆ ಇರುವುದು, ಅಲ್ಲದೆ ಕಟ್ಟಡದ ದುರಸ್ಥಿಗೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ವ್ಯೆವಹಾರ ನಡೆಸದೆ ಇರುವುದರಿಂದ ನಾವುಗಳು ಕೂಡ ಕಟ್ಟಡದ ದುರಸ್ಥಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲವೆಂದಿದ್ದಾರೆ. ಇನ್ನೂ ತಹಸೀಲ್ದಾರ್ ರವರು ದಾವಣಗೆರೆ ತಾಲ್ಲೂಕು ದಂಡಾಧಿಕಾರಿಯಾಗಿ ಆಗಮಿಸಿ ಒಂದು ವರ್ಷವೇ ಆಗುವುದಕ್ಕೆ ಬಂದಿದೆಯಾದರೂ ತಾಲ್ಲೂಕು ಕಚೇರಿಯ ಶಿರೋನಾಮದ ಹೆಸರು ಮಾತ್ರ ಎಲ್ಲಿಯೂ ಕಂಡು ಬರುತ್ತಿಲ್ಲ. ಕಾರಣ ಈ ಕಚೇರಿಯೂ ಇರುವುದು ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ, ರೈತಭವನ ಕಟ್ಟಡದೊಳಗೆ. ಇಲ್ಲಿಯವರೆಗೂ ಆದರೂ ಯಾರೋಬ್ಬ ಅಧಿಕಾರಿಯೂ ತಾಕೀತು ಮಾಡಿಲ್ಲ ಅದರ ಬಗ್ಗೆ ಯೋಚಿಸಿಯೂ ಇಲ್ಲ. ಇನ್ನೂ ಕೋಟಿಗಟ್ಟಲೆ ರಾಜ್ಯ ಸರ್ಕಾರದ ಹಣವನ್ನು ಅನುದಾನದ ರೂಪದಲ್ಲಿ ಬಳಸಿಕೊಂಡು ನಿರ್ಮಿಸಿಕೊಂಡಿರುವ ತಾಲ್ಲೂಕು ತಹಸೀಲ್ದಾರ್ ರವರ ನೂತನ ಕಟ್ಟಡದ ಉದ್ಘಾಟನೆಯಾಗದೆ ಹಲವು ಅವ್ಯವಹಾರಗಳಿಗೆ ಎಡೆ ಮಾಡಿಕೊಟ್ಟಿದೆ. ನೂರಾರು ಕನಸುಗಳೊಂದಿಗೆ ದಾವಣಗೆರೆ ತಾಲ್ಲೂಕಿನ ಜನರಿಗೆ ಅನುಕೂಲವಾಗಲೆಂದು ಅಂದು ಇದ್ದ ತಾಲ್ಲೂಕು ದಂಢಾಧಿಕಾರಿಗಳಾದ ಮಂಜುನಾಥ್ ಬಳ್ಳಾರಿಯವರು ನೂತನ ತಾಲ್ಲೂಕು ಕಚೇರಿಯ ಕಟ್ಟಡಕ್ಕೆ ಬುನಾಧಿ ಹಾಕಿ ಹೋಗಿದ್ದು ಅದಕ್ಕೆ ಉದ್ಘಾಟನೆಯ ಭಾಗ್ಯ ಮಾತ್ರ ಮೂರರಿಂದ ನಾಲ್ಕು ಜನ ತಹಸೀಲ್ದಾರ್ ರವರು ಬಂದು ಹೋದರೂ ಮಾತ್ರ ಮುಕ್ತಿ ದೊರಕದೆ ಪಾಳುಬಿದ್ದ ಬಂಗಲೆಯಾಗಿ ಹೋಗಿದೆ. ಹಳೆಯ ಗಡಿಯಾರ ಕಂಬದ ಬಳಿ ಇದ್ದ ತಾಲ್ಲೂಕು ಕಚೇರಿ ಆವರಣದ ಹೊರಗಡೆ ಇದ್ದ ಬೆರಳಚ್ಚುಗಾರರ ಜೀವನ ಇಂದು ಮೂರಾಬಟ್ಟೆಯಾಗಿ ಹೋಗಿದೆ. 45 ವಾರ್ಡುಗಳ ಜನರಿಗೆ ಹತ್ತಿರವಾಗಿದ್ದ ಗಡಿಯಾರ ಕಂಬದ ತಾಲ್ಲೂಕು ಕಚೇರಿಯು ಎಲ್ಲಾ ರೀತಿಯಿಂದಲೂ ಅನುಕೂಲವಾಗಿದ್ದು, ಪ್ರಸ್ತುತ ಕಟ್ಟಡವಿದ್ದರೂ ಸರ್ಕಾರದ ಖಜಾನೆಗೆ ಖಾಸಗಿ ಕಟ್ಟಡದೊಳಗೆ ತಾಲ್ಲೂಕು ಕಚೇರಿ ನಡೆಸಲು ಬಾಡಿಗೆ ರೂಪದಲ್ಲಿ ನೀಡಿ ಬೊಕ್ಕಸಕ್ಕೆ ಹೊಡೆತ ನೀಡಿರುವುದು ನಿಜಕ್ಕೂ ಬೇಸರ ತಂದಿದೆ. ಆದ್ದರಿಂದ ಪ್ರಸ್ತುತ ಇರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಮಂತ್ರಿಗಳು ಮತ್ತು ನಮ್ಮ ಜಿಲ್ಲೆಯ ಉಕ್ಕಿನ ಮಹಿಳೆಯಾಗಿ ನೂತನ ಸಂಸದೆಯಾಗಿರುವ ನಮ್ಮ ಪ್ರಭಾ ಮೇಡಮ್ ಅವರಿಂದಲಾದರೂ ಕಣ್ಣಿಗೆ ಬೀಳದ ಕಟ್ಟಡವನ್ನೂ ಉದ್ಘಾಟಿಸಿ ಜನರಿಗೆ ಅನುಕೂಲವಾಗಿಸಲಿ ಎಂಬುದೇ ನಮ್ಮ ಪತ್ರಿಕೆಯ ಮನವಿ.
ವರದಿ : ಸೂರ್ಯಪ್ರಕಾಶ್.ಆರ್