Davanagere

ದಾವಣಗೆರೆ ಬಿಗ್ ಫೈಟ್ | ಭಾರೀ ಮೆರವಣಿಗೆ ಮೂಲಕ ಕಾಂಗ್ರೆಸ್ ಅಭ್ಯರ್ಥಿ “ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್” ನಾಮಪತ್ರ ಸಲ್ಲಿಕೆ: ದಾವಣಗೆರೆ ಕಾಂಗ್ರೆಸ್ ಪಕ್ಷದ ʼಶಕ್ತಿ ಪ್ರದರ್ಶನʼ

kadambakesari


ದಾವಣಗೆರೆ-18: ಸಾವಿರಾರು ಕಾರ್ಯಕರ್ತರೊಂದಿಗೆ ನಗರದಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ “ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ವೇಳೆ ಈ ಮಟ್ಟಿನ ಜನಸಾಗರ ಹರಿದು ಬಂದಿದೆ. ತೆರೆದ ವಾಹನದಲ್ಲಿ ನಗರದ ದುಗ್ಗಮ್ಮ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಹಗೆದಿಬ್ಬ ವೃತ್ತ ಚೌಕಿಪೆಟೆ, ಮಂಡಿಪೇಟೆ, ಮಹಾನಗರಪಾಲಿಕೆ, ಪಿ.ಬಿ ರಥೆ, ಅರುಣಾ ಸರ್ಕಲ್, ಸಂಗೊಳ್ಳಿ ವೃತ್ತ ದ ಮೂಲಕ ಅಭಿಮಾನಿಗಳಿಂದಲೇ ಸ್ವಯಂ ಮೆರವಣಿಗೆ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಇಂದು ನಾಮಪತ್ರ ಸಲ್ಲಿಸುವ ಹಿನ್ನಲೆ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುವದರ ಮೂಲಕ ಎದುರಾಳಿಗಳಿಗೆ ತಮ್ಮ ಗೆಲುವಿನ ಸೂಚನೆಯ ನೀಡಿದ್ದಾರೆ. ಅಲ್ಲದೆ ಇಂದು ದಾವಣಗೆರೆ ನಗರಭಾಗದಲ್ಲಿ ಅಂದರೆ ಪಿ.ಬಿ ರಸ್ತೆಯಲ್ಲಿ ಸರಿ ಸುಮಾರು ಇಳಿ ಸಂಜೆಯವರೆಗೂ ಅಂದರೆ 4 ಗಂಟೆಯವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಮೆರವಣಿಗೆಗೆ ಭಾಗಿಯಾಗಿ ಪಕ್ಷದ ತಮ್ಮ ನೆಚ್ಚಿನ ನಾಯಕರಾದ ಶ್ರೀ ಎಸ್.ಎಸ್ ಮಲ್ಲಣ್ಣನವರಿಗೆ, ಶ್ಯಾಮನೂರು ಶಿವಶಂಕರಪ್ಪನವರಿಗೆ ಮತ್ತು ಲೋಕಸಭೆ ಅಭ್ಯರ್ಥಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರಿಗೆ ಶುಭ ಆರೈಸಿದ್ದಾರೆ. ಅಲ್ಲದೆ ಮೆರವಣಿಗೆಯ ವೇಳೆ ಯಾವುದೇ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಪಕ್ಷದ ಕಾರ್ಯಕರ್ತರು ಭಾರೀ ಪೊಲೀಸ್ ಬಂದ್ ಬಸ್ತ್ ವ್ಯವಸ್ಥೆ ಮೂಲಕ ಪಕ್ಷದ ಅಭ್ಯರ್ಥಿಯೊಂದಿಗೆ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಆಗಮಿಸುವ ಮೂಲಕ ಅಭಿಮಾನ ವ್ಯೆಕ್ತಪಡಿಸಿದರು.

error: Content is protected !!