
Davanagere: ಇಷ್ಟು ದಿನ ಟಿ-೨೦ ವಿಶ್ವಕಪ್ (T-20 World Cup-2024) ಸಂಭ್ರಮದಲ್ಲಿ ಮಿಂದೆದ್ದ ಕ್ರೀಡಾ ಅಭಿಮಾನಿಗಳಿಗೆ ಮತ್ತೊಂದು ರಸದೌತಣ ನೀಡಲು ಪ್ರೊ ಕಬಡ್ಡಿ ಲೀಗ್ನ 11ನೇ (Pro Kabaddi League Season 204-25) ಸೀಸನ್ ಸಿದ್ದವಾಗಿದೆ. ಈ ಲೀಗ್ ಡಿಸೆಂಬರ್ ರಿಂದ ಆರಂಭವಾಗಲಿದ್ದು, ಒಟ್ಟು 12 ನಗರಗಳು ಈ ಲೀಗ್ಗೆ ಆತಿಥ್ಯವಹಿಸುತ್ತಿವೆ. ಎಲ್ಲಾ ತಂಡಗಳು ಪ್ರತಿ ನಗರದಲ್ಲಿ ತಲಾ ೬ ಪಂದ್ಯಗಳನ್ನು ಆಡಲಿವೆ. ಮೊದಲ ೬ ದಿನಗಳ ಪಂದ್ಯಗಳು ಪ್ರಮುಖ ನಗರಗಳಲ್ಲಿ ನಡೆಯಲಿವೆ. ಈ ಒಂದು ಪ್ರೋ ಕಬಡ್ಡಿ ಲೀಗ್‌ಗೆ ದಾವಣಗೆರೆಯ ಹುಡುಗ ಚಂದ್ರನಾಯ್ಕ್ ಆಯ್ಕೆಯಾಗಿರುವುದು ಜಿಲ್ಲೆಗೆ ಹೆಮ್ಮೆ ಎನಿಸಿದೆ.
ವರದಿ : ಸಂದೀಪ್.ಎನ್,