ಭ್ರಷ್ಟರೇ…. ಪತ್ರಿಕಾ ಧರ್ಮ ಮಾಡಲು ಬಿಡಿ….. ಇಲ್ಲವೇ ನಿಮ್ಮ ವೃತ್ತಿ ಧರ್ಮ ಪಾಲಿಸಿ…. ಕಾರಣ ನಿಮ್ಮಗಳ ಪಾಪ ನಿಮ್ಮವರಿಗೆ ತಗುಲಿತ್ತೆ….!!

ಜನಸಾಮಾನ್ಯರು ಭ್ರಷ್ಟಾಚಾರ ಮಾಡುವುದಿಲ್ಲ; ಜನಪ್ರತಿನಿಗಳು, ಅಕಾರಿಗಳಿಂದಲೇ ಭ್ರಷ್ಟಾಚಾರ ನಡೆಯುತ್ತಿದೆ ದೇಶಕ್ಕಾಗಿಯೇ ಬದುಕಬೇಕು. ದೇಶಕ್ಕಾಗಿಯೇ ಸಾಯಬೇಕು ಎಂಬ ಪ್ರೇರಣ ಈ ಮಣ್ಣಿನಲ್ಲಿಯೇ ಇದೆ. ಯುವ ಸಮೂಹ ಯಾರಿಗೂ ಹೆದರದೆ ಧೈರ್ಯದಿಂದ ಬದುಕಬೇಕು. ನಮ್ಮ ದೇಶದ ಪ್ರತಿಯೊಬ್ಬ ಯುವಕನೂ ಈ ದೇಶದ ಸಂಪತ್ತು. ಯಾವುದು ಅಸಾಧ್ಯವಾದದ್ದೋ ಅದು ಯುವಕರಿಂದ ಸಾಧ್ಯ. ಸ್ವಾಮಿ ವಿವೇಕಾನಂದರು ಹೇಳಿದಂತೆ ಜೀವನದಲ್ಲಿ ಆಲಸ್ಯ ಹೋಗಲಾಡಿಸಿ ‘ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂಬುದು ನಮ್ಮ ಜೀವನದ ಧ್ಯೇಯವಾಗಲಿ. ಏನು ಮಾಡಬಹುದು ಎಂಬುದನ್ನು ಯೋಚಿಸಿ ಮುನ್ನಡೆಯಬೇಕೆಂದರು. ಭಗತಸಿಂಗ್, ಚೆನ್ನಮ್ಮ, ಶಿವಾಜಿ, ಮಹಾರಾಣಾ ಪ್ರತಾಪ ಸೇರಿದಂತೆ ಅನೇಕ ಮಹನೀಯರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಸಾವಿಗೆ ಯಾವತ್ತೂ ಅಂಜಬಾರದು.ಅದು ಎಲ್ಲೇ ಇದ್ದರೂ ಬಿಡುವುದಿಲ್ಲ. ಸಾವನ್ನು ಎದುರಿಸಿ ನಿಲ್ಲುವ ಗುಣ ಬೆಳೆಸಿಕೊಳ್ಳಬೇಕು. ಗೀತೆಯಲ್ಲಿ ಜ್ಞಾನಯೋಗ, ಕರ್ಮಯೋಗಗಳ ಬಗ್ಗೆ ಹೇಳಲಾಗಿದೆ. ಸೇವೆಯೇ ನಮ್ಮ ಧ್ಯೇಯವಾಗಬೇಕು. ಮನುಷ್ಯ ಶಿಕ್ಷಿತವಾದಾಗ ಅವನಲ್ಲಿರುವ ಅಂಧಕಾರ ಸರಿಯುತ್ತದೆ. ಅದರಂತೆ ದೇಶವು ಶಿಕ್ಷತವಾದಾಗ ಮಾತ್ರವೇ ಕತ್ತಲು ಸರಿದು ಬೆಳಕಿನ ಕಡೆ ಸಾಗಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಸರಿ ಸುಮಾರು ಒಂದು ವಾರದಿಂದ ನಮ್ಮ ಪತ್ರಿಕಾ ತಂಡವು ಹಾಗೂ ನಮ್ಮ ಪತ್ರಿಕೆಯ ಸಂಪಾದಕರು ಪಾಲಿಕೆಯ ಹಗರಣಗಳ ಬಗ್ಗೆ, ಭ್ರಷ್ಟತೆಯ ಬಗ್ಗೆ ದೊಡ್ಡ ದೊಡ್ಡ ಕುಳಗಳ ಅವ್ಯವೆಹಾರಗಳ ಬಗ್ಗೆ ನಿಷ್ಪಕ್ಷಪಾತವಾಗಿ, ನಿರರ್ಗರಳವಾಗಿ, ಯಾರಿಗೂ ಹೆದರದೆ, ಅಂಜದೆ ಅವರ ಕಣ್ಣ ಮುಂದೆಯೇ ಓಡಾಡಿಕೊಂಡು ಪತ್ರಿಕೆಯ ವೃತ್ತಿ ಧರ್ಮವನ್ನು ಮಾಡಿ ಸುದ್ಧಿ ಮಾಡಿದರೆ, ಕೆಲವು ಕಿಡಿಗೇಡಿಗಳು, ಅಜ್ಞಾನಿಗಳು, ಭ್ರಷ್ಟಚಾರಕ್ಕೆ ಸಹಕಾರ ನೀಡುವವರು, ಸರ್ಕಾರಕ್ಕೆ ದ್ರೋಹ ಬಗೆಯುವ ವಂಚಕರು ತಮ್ಮ ಕರ್ತವ್ಯದಲ್ಲಿ ನಿಷ್ಠೆ ತೋರಿಸುವ ಬದಲು ಜೀವ ಬೆದರಿಕೆಯ ಮಾತುಗಳು, ಹೊಡೆದು ಬೀಳಿಸುವ ಧಮ್ಕಿಯ ಮಾತುಗಳನ್ನಾಡುತ್ತಿರುವುದು ನಿಜಕ್ಕೂ ಈ ದೇಶದ ಪ್ರಜಾ ಸತ್ತಾತ್ಮಕ ವ್ಯವಸ್ಥೆಯಲ್ಲಿ ನಾಲ್ಕನೇಯ ಅಂಗವಾದ ಪತ್ರಿಕೆಯ ಹಾಗೂ ಪತ್ರಿಕೆಯಲ್ಲಿ ನಿಷ್ಠುರವಾಗಿ ಸುದ್ಧಿ ಮಾಡುವ ವರದಿಗಾರರಿಗೆ ಅತಿದೊಡ್ಡ ಬಹುಮಾನವಾಗಿದೆ. ಇಂತಹ ಲಜ್ಜೆಗೆಟ್ಟ ಜನರ ನಡುವೆ ಇಂದು ಏನಾದರೂ ನಮ್ಮ ಭಾರತ ದೇಶಕ್ಕೆ ಗೌರವ ತಂದುಕೊಡುವಲ್ಲಿ ಯಶಸ್ವಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇದ್ದಿದ್ದರೆ ಇಂತಹ ನಾಲಾಯಕ್ ಕ್ರಿಮಿಗಳಿಗೆಲ್ಲಾ ಹೊಸ ಕಾನೂನು ಪಾಠವ ಬರೆದು ಅಚ್ಚು ಹೊತ್ತಿಸುತ್ತಿದ್ದರೋ… ಏನು ಗೊತ್ತಿಲ್ಲ ಸ್ವಾಮಿ…?? ಪ್ರಿಯ ಸ್ನೇಹಿತರೆ ಈ ಮಾತುಗಳನ್ನು ಏಕೆ ನಾನು ಇಂದು ರಾಜಾರೋಷವಾಗಿ ನನ್ನ ಪತ್ರಿಕೆಯಲ್ಲಿ ಲೇಖನಿಯಾಗಿ ಬರೆಯುತ್ತಿರುವೆನೆಂದರೆ, ಇಂದು ಎಲ್ಲಾ ರಂಗಗಳಲ್ಲೂ ಎಲ್ಲಾ ವಿಧಗಳಲ್ಲಿಯೂ ಲಂಚ, ಭ್ರಷ್ಟತೆ, ಲಪಟತನ, ಮೋಸ, ಕೊಲೆ, ಸುಲಿಗೆ ವಂಚನೆ ಆಗುತ್ತಿದೆ, ಅದಕ್ಕೆ ಬಲಿಯಾಗುತ್ತಿರುವುದು ಮಾತ್ರ ಬಡಪಾಯಿ ಜನಸಾಮಾನ್ಯ. ಉದ್ದಾರ ಆಗ್ತಿರೋದು ಮಾತ್ರ ಒಳ್ಳೆಯ ಕೆಲಸ ಮಾಡುವವರಲ್ಲ ಬದಲಿಗೆ ಸುಲಿಗೆ,ದರೋಡೆ, ಲಪಟತನ, ಸುಳ್ಳು ಹೇಳುವ ಖದೀಮರೇ ಶ್ರೀಮಂತರಾಗುತ್ತಿದ್ದಾರೆ, ಉದ್ದಾರವಾಗುತ್ತಿದ್ದಾರೆ. ಇನ್ನು ಈ ಕಳ್ಳ ಕಾಕಾರು ತಮ್ಮ ಮನೆಯಲ್ಲಿರುವುದು ನೋಡಿದರೆ ಅವರಿಗೆ ಹುಟ್ಟಿರುವ ಮಕ್ಕಳು ಸಹ ನಮ್ಮ ತಂದೆ ತುಂಬಾ ಒಳ್ಳೆಯವರೋ ಜನನಾಯಕರು, ಸಮಾಜ ಸೇವಕರು ಅಂತ ಅಂದುಕೊಳ್ಳುತ್ತಾರೆ. ಕೊನೆಗೆ ನಮ್ಮಂತಹ ಯಾರಾದರೂ ಒಬ್ಬರು ಪತ್ರಿಕೆಯಲ್ಲೋ ಟಿವಿ ಮಾಧ್ಯಮದಲ್ಲೋ ಅವರ ಬಗ್ಗೆ ಋಣಾತ್ಮಕ ಅಂಶಗಳ ಬರೆದಾಗಲೇ ಅವರಿಗೆ ಗೊತ್ತಾಗೋದು…. ಅವರ ತಂದೆ ಒಬ್ಬ ಹುಟ್ಟು ಲೋಪರ್, ಕಚಡಾ, ಸರ್ಕಾರದ ಹಣ ತಿನ್ನುತ್ತಿರುವ ದೇಶ ದ್ರೋಹಿ, ಬಡಪಾಯಿ ಜನರ ಹೊಟ್ಟಯ ಮೇಲೆ ತಣ್ಣೀರ ಎರಚಿ ನಮ್ಮಗಳ ಹೊಟ್ಟೆ ತುಂಬಿಸುತ್ತಿದ್ದ ಪರಮ ಪಾಪಿ ಅಂತ.
ಸ್ನೇಹಿತರೆ ನಾನು ಸರ್ಕಾರಿ ಕೆಲಸದಲ್ಲಿರುವವರೆಲ್ಲ ಕೆಟ್ಟವರಂತಲೋ…. ಭ್ರಷ್ಟಚಾರಿಗಳಂತಲೋ ಹೇಳುತ್ತಿಲ್ಲ, ಅದರಲ್ಲಿ ಕೆಲವರು ಮಾತ್ರ ಹೀಗೆ. ಇನ್ನು ಕೆಲವರು ನಮ್ಮ ಸಮಾಜಕ್ಕೆ ಮತ್ತು ಸುತ್ತಮುತ್ತಲಿನ ಜನರಿಗೆ ಅಷ್ಟೇ ಏಕೆ ತಮ್ಮ ಸ್ವಂತ ಕುಟುಂಬದ ಸದಸ್ಯರಿಗೆ ರೋಲ್ ಮಾಡೆಲ್ ಆಗಿರುತ್ತಾರೆ. ಉದಾಹರಣೆಗೆ ಬೀದಿ ಬೀದಿಯಲ್ಲಿ ಕಷ್ಟ ಅನುಭವಿಸಿ ಜನರ ಕಷ್ಟಗಳೋ ಹೇಗೆ ಅಂದುಕೊಂಡು ಅವರಿಗೆಎಲ್ಲರಿಗೂ ಬಡವ ಬಲ್ಲಿದನೆನ್ನದೆ, ಜಾತಿ ನೋಡದೆ ಎಲ್ಲಾ ವರ್ಗದ ಜನರಿಗೂ ಸೂರು ನೀಡಿ, ನಮ್ಮೆಲ್ಲರ ಮನ ಮನೆಯಲ್ಲಿ ಅಚ್ಚಳಿಯದೆ ಉಳಿದ ಡಾ ಕೆ.ಶಿವರಾಂ ಸಾಹೇಬರು, ಪುಡಿ ರೌಡಿಗಳಿಂದ ಹಿಡಿದು ಗಾಂಚಾಲಿ ಮಾಡುವ ಬಡ್ಡಿ ಹೈದರಿಗೆಲ್ಲ ಸಿಂಹ ಸ್ವಪ್ನವಾಗಿ, ಹೆಣ್ಣುಮಕ್ಕಳು ರಾತ್ರಿ ಹೊತ್ತು ಓಡಾಡಲು ಧೈರ್ಯವ ಹೇಳಿಕೊಟ್ಟ ನಮ್ಮ ರವಿ ಡಿ ಚೆನ್ನಣ್ಣನವರ್ ಅಂತವರೂ ಹಾಗೂ ಹೊರಗಡೆ ಶೇಂಗಾ ಮಾರಿಕೊಂಡು ಊರಿನ ಮಕ್ಕಳಿಗೆ ಶಿಕ್ಷಣ ಪಡೆಯಲು ಶಾಲೆ ನಿರ್ಮಿಸಿದ ವ್ಯೆಕ್ತಿಯೂ ನಮ್ಮಗಳ ಮಧ್ಯೇಯೇ ಇದ್ದಾರೆ. ಇಂತಹ ಪುಣ್ಯ ಪುರುಷರಿಂದಲೇ ಈ ದೇಶ ಪಾವಿತ್ರತ್ಯತೆಯನ್ನ ಹೊಂದಿದೆ. ಅದಕ್ಕಾಗಿ ಯಾವ ಯಾವ ಸಂದರ್ಭಗಳಲ್ಲಿ ಏನಾಗಬೇಕೊ ಆವೆಲ್ಲಾ ಆಗುತ್ತಿವೆ. ಆದರೆ ಇವುಗಳ ಪರಿವೇ ಇಲ್ಲದ ಪಾಪಿ ಕಳ್ ನನ್ನ ಮಕ್ಕಳಿಗೆ ತಾವು ಮಾಡಿದ್ದೇ ಸರಿಯೆನಿಸರಬಹುದು. ಆದರೆ ಮೇಲಿರುವ ಭಗವಂತ ನಮ್ಮಗಳ ಪಾಪ ಪುಣ್ಯ ಲೆಕ್ಕವ ಮಾಡಿ ಯಾವಾಗ ಚಾಟಿಯ ಬೀಸುತ್ತಾನೋ ತಿಳಿದಿಲ್ಲ. ಅದಕ್ಕೆ ಅನಿಸುತ್ತೆ ಹಂಸಲೇಖ ಸಾಹೇಬರು ತಮ್ಮ ಸುಂದರ ಸಂಗೀತದೊಂದಿಗೆ ಉತ್ತಮ ಸಾಹಿತ್ಯ ಬರೆದಿರುವುದು…. ” ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ…. ಈ ಬಾಳು ಸುಂದರ ನಗರಿ… ನೀ ಇದರ ಮೇಟಿ ಕಣೋ…. ನಿಂತಾಗ ಬುಗುರಿಯ ಆಟ ಎಲ್ಲಾರು ಒಂದೇ ಓಟ…. ಮರೆತಾಗ ಜೀವನ ಪಾಠ ಕೊಡುತ್ತಾನೆ ಚಾಟಿಯ ಏಟ…. ಕಾಲ ಕ್ಷಣಿಕ ಕಣೊ…..” ಅದ್ಬುತ ಸಾಲುಗಳಲ್ಲಿ ಮನುಜರಾಗಿ ಹುಟ್ಟಿರುವ ನಾವುಗಳು ಅರ್ಥ ಮಾಡಿಕೊಳ್ಳಬೇಕಿದೆ.
ಈ ದೇಶ ಉದ್ದಾರವಾಗಬೇಕೆಂದರೆ… ಇಲ್ಲ ಮನುಷ್ಯ ಉದ್ದಾರವಾಗಬೇಕೆಂದರೆ ವಿಮರ್ಶೆ ಮಾಡುವ ವ್ಯೆಕ್ತಿಗಳು ಇರಬೇಕು, ಪ್ರಶ್ನೆ ಮಾಡಿದರೆ ರಾಜಕಾರಣದ ಸಭೆಗಳು ಉತ್ತಮ ಅಂಶಗಳಿಂದ ಹಲವು ವಿಚಾರಗಳು, ಸುತ್ತೋಲೆಗಳು ಹೊರಗಿನ ಪ್ರಪಂಚಕ್ಕೆ ತಿಳಿಸಲು ಸಾಧ್ಯ…. ಅದಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದ ೧೯ನೇ ವಿಧಿಯಲ್ಲಿ ಒಟ್ಟು ೫ ಉಪಕಲಂಗಳನ್ನಾಗಿ ಮಾಡಿ ಪ್ರತಿಯೊಬ್ಬ ಪ್ರಜೆ, ಪ್ರತಿಯೊಂದು ಜೀವಿಯೂ ಜೀವಿಸುವ ಮುಕ್ತವಾಗಿ ಮಾತನಾಡುವ ಮುಕ್ತವಾಗಿ ಸಂಚರಿಸುವ ಹಕ್ಕನ್ನು ನೀಡಿದ್ದಾರೆ. ಆದರೆ ಇಂದು ಕೆಲವು ಧುರಳರು, ಭಂಡ ಬಡ್ಡಿ ಅಧಿಕಾರಿಗಳು ನಮ್ಮ ಪತ್ರಿಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಹಲವು ಪ್ರಯೋಗ ಮಾಡುವರು. ಅದರಲ್ಲಿ ಬೆದರಿಸುವ ಕಲೆಯಂತು ಸಾಮಾನ್ಯವಾಗಿದೆ. ಈ ಕಿಡಿ ಹಚ್ಚುವ ಕಳ್ಳ ಖದೀಮರಿಗೆ ಗೊತ್ತಿದೆಯೋ ಇಲ್ಲೋ ಗೊತ್ತಿಲ್ಲ ಪತ್ರಿಕೆಯ ವರದಿಗಾರರಿಗೆ ಅಥವಾ ಪತ್ರಿಕೆಯ ಮೇಲಾಗಲೀ ದೌರ್ಜನ್ಯವೆಸಗಿದರೆ ಜಾಮೀನು ರಹಿತ ಏಳು ವರ್ಷ ಸಜೆ, ೫೦೦೦೦೦ ಲಕ್ಷ ದಂಡ ವಿಧಿಸಬೇಕೆಂಬ ಸುಪ್ರೀಂ ಕೋರ್ಟ ಆದೇಶ ಮಾಡಿದೆ. ಅಷ್ಟೇ ಅಲ್ಲ ವರದಿಗಾರರ ಮೇಲೆ ಹಲ್ಲೆ ಅಥವಾ ಕೊಲೆ ಯತ್ನ ಮಾಡಿದರೆ ಕಡ್ಡಾಯವಾಗಿ ಜೀವಾವಧಿ ಶಿಕ್ಷೆ ೫ ಲಕ್ಷ ದಂಡ, ಅದು ಎಲ್ಲಾಕ್ಕಿಂತ ಹೆಚ್ಚಾಗಿ ಪತ್ರಿಕೆಯ ವರದಿಗಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ, ಅವರ ಮೇಲೆ ಹಲ್ಲೆ ಅಥವಾ ಬೆದರಿಕೆ ಮಾಡುವ ಯಾವನೇ ಆಗಲಿ ಜಾಮೀನು ರಹಿತವಾಗಿ ಸಾಯುವವರೆಗೂ ಬಂಧಿಖಾನೆಯೊಳಗೆ ಬೀಳಬೇಕೆಂಬ ನಿಯಮ ಜಾರಿಯಲ್ಲಿದೆ ಎಂಬುದನ್ನು ಭ್ರಷ್ಟ ಅಧಿಕಾರಿಗಳು, ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಸಹಕಾರ ಮಾಡಲು ಬರುವ ಚೇಲಾಗಳಿಗೆ, ಲಂಪಟರಿಗೆ, ಖದೀಮ ಕಳ್ಳರಿಗೆ, ಮೋಸ ಮಾಡುವ ಕೆಲೆಗಡುಕರಿಗೆ ನೆನಪಿರಲಿ.
ಸ್ನೇಹಿತರೆ, ಇಂದು ಅದೆಷ್ಟೋ ಸುದ್ಧಿ ಮಾಧ್ಯಮದವರು ಹಾಗೂ ಪತ್ರಿಕೆಯವರು ತಮ್ಮ ಪತ್ರಿಕೆಯಲ್ಲಾಗಲಿ, ಸುದ್ಧಿವಾಹಿನಿಯಲ್ಲಾಗಲಿ ಕಣ್ಣ ಮುಂದೆ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳಿಂದ ಹಿಡಿದು, ಭ್ರಷ್ಟತೆಯ ಬಗ್ಗೆ ದಾಖಲೆಗಳಿದ್ದರೂ ಸಹ ನೈಜತೆಯ ಸುದ್ಧಿ ಮಾಡದೆ, ಹೇ ಗುರು ನಮಗ್ಯಾಕೆ ಬೇಕು… ಮಾಡಿದವನು ಒಂದಲ್ಲಾ ಒಂದು ದಿನ ಅನುಭವಿಸಿಕೊಳ್ಳುತ್ತಾನೆ, ನಮಗೆ ಹೆಂಡತಿ ಮಕ್ಕಳು ಇದ್ದಾರೆ, ಕುಟುಂಬ ಇದೆ ಅಂತ ತಮ್ಮ ಪತ್ರಿಕಾ ಧರ್ಮವನ್ನೇ ಮರೆತು ತಾವಾಯಿತು ತಮ್ಮ ಪಾಡಾಯಿತು ಇರುತ್ತಿದ್ದಾರೆ. ಇದಕ್ಕೆ ಕಾರಣ ನಾನು ಮೇಲೆ ತಿಳಿಸಿದ ಅಂಶಗಳೇ ಕಾರಣವಾಗಿದೆ. ಆದ್ದರಿಂದಲೇ ಇಂದು ಎಲ್ಲಾ ಪತ್ರಿಕೆಯಲ್ಲೂ ಸಹ ಸಾಮಾನ್ಯ ವಿಷಯವಿರುತ್ತದೆ. ಟಿ.ಆರ್.ಫಿ ಬರುತ್ತದೆ ಅಂದರೆ ಅದಕ್ಕೆ ಜೋತು ಬಿದ್ದಿರುತ್ತಾರೆ, ಇನ್ನು ಕೆಲವು ಮಾಧ್ಯಮ ಮಿತ್ರರೋ ತಮಗೆ ತಿಂಗಳು ತಿಂಗಳು ಲಕ್ಷ ಲಕ್ಷ ಜಾಹಿರಾತು ನೀಡುತ್ತಾರೆ, ನಮಗ್ಯಾಕೆ ಅವರ ಬಗ್ಗೆ ಸುದ್ಧಿ ಮಾಡಿ ಬರುವ ಹಣಕ್ಕೆ ಕತ್ತರಿ ಹಾಕಿಕೊಳ್ಳಬೇಕು, ನಮ್ಮ ಹೆಂಡತಿ ಮಕ್ಕಳು ಅವರು ಕೊಡುವ ಪಾಪದ ಹಣದಿಂದಲೇ ಜೀವನ ಹೊಂದಿಕೊಂಡಿರುತ್ತಾರೆ ಅಂತ ಬಾಯಿಗೆ ಬೆರಳಿಟ್ಟುಕೊಂಡು ಸುಮ್ಮನಾಗುತ್ತಾರೆ. ಇಂತಹವರ ನಡುವೆ ನಾನು ನಮ್ಮ ಗುರುಗಳ ಮಠದಲ್ಲಿ ಬೆಳದಿದ್ದು ಅಲ್ಲಿ ಹೇಳಿಕೊಟ್ಟ ಸಂಸ್ಕಾರದ ವಿಷಯಗಳು, ನನ್ನ ಗುರುಗಳು ನನಗೆ ತಿಳಿಸಿದ ಜೀವನದ ಪಾಠಗಳು, ನನ್ನ ತಂದೆ ತಾಯಿಗಳು ಪಟ್ಟ ಕಷ್ಟಗಳು ನನಗೆ ನನ್ನದೇ ಆದ ವ್ಯೆಕ್ತಿತ್ವ ರೂಪಿಸಿಕೊಳ್ಳುತ್ತಿದ್ದೇನೆ. ಯಾವನೇ ಬಂದರೂ…. ಯಾರೇ ಬೆನ್ನ ಹಿಂದೆ ಬೈದರೂ… ಯಾರೇ ಕೊಲೆ ಮಾಡುತ್ತೇವೆ ಅಂತ ಬಂದರೂ ನಾನು ಹಎದರುವ ಮಗ ಅಲ್ಲವೇ ಅಲ್ಲ…. ಏಕೆಂದರೆ ನಾನು ಶ್ರೀ ಸಿಗಂಧೂರೇಶ್ವರಿ ತಾಯಿಯ ಆರಾಧನೆ ಮಾಡುತ್ತ, ಕಾಲೀ ಪೂಜೆಯ ಮಾಡಿ, ಬಾಬಾ ಸಾಹೇಬರ ಆದರ್ಶಮಯ ವಿಚಾರಗಳೊಂದಿಗೆ ಸಂವಿಧಾನವನ್ನು ಅರಿತುಕೊಂಡಿರುವವನು… ಪುಡಂಗಿಗಳ ಬಗ್ಗೆ ಹೆದರದೆ ಏನು ಮಾಡಬೇಕು ಅದನ್ನೇ ಮಾಡುತ್ತೇನೆ. ಇನ್ನು ಕೊನೆಯದಾಗಿ ಹೇಳುವುದು ನನ್ನ ಬೆದರಿಸುವ… ಕೋಪದಲ್ಲಿ ಬೈಯುವ…. ನನ್ನ ಬರವಣಿಗೆಗೆ ಉರ್ರುಕೊಳ್ಳುವ…. ನನ್ನ ವಿಚಾರಗಳಿಗೆ ಅಸೂಯೆ ಪಟ್ಟುಕೊಳ್ಳುವ ಕೆಟ್ಟವರಿಗೆ ಹೇಳುವುದೇನೆಂದರೆ ನೀವೂ ಏನೇ ಮಾಡಿ…. ನಿಮ್ಮ ಮನೆಯ ಮಕ್ಕಳನ್ನು ಅಥವಾ ನಿಮ್ಮ ಮನೆಯ ಸದಸ್ಯರನ್ನೋ ನೆನಪಿಗೆ ಇಟ್ಟುಕೊಂಡು ನಿಮ್ಮ ಕೆಲಸ ಮಾಡಿ, ಅವರಿಗೆ ತಂದು ಕೊಡುವ ಅಮೂಲ್ಯ ಊಡುಗೊರೆ, ತಿಂಡಿ ತಿನಿಸುಗಳು, ಬಟ್ಟೆ -ಚಪ್ಪಲಿಗಳು, ಕೊಡಿಸುವ ಕಾರು ಬೈಕುಗಳು, ತಂಗುವ ಛಾವಣಿಯ ಸೂರು ಇನ್ನೊಬ್ಬರ ಹೊಟ್ಟೆಯ ಮೇಲೆ, ಇನ್ನೊಬ್ಬರ ಹೆಂಡತಿ ಮಕ್ಕಳ ಕಣ್ಣೀರಿನ ಮೇಲೆ, ಇನ್ನೊಬ್ಬರ ತಂದೆ ತಾಯಿಗಳ ಶಾಪದ ಮೇಲೆ ಬರುವಂತಾಗದಿರಲಿ… ಏಕೆಂದರೆ ನಿಮಗೇನಾದರೂ ಆದರೆ ಅಥವಾ ನಿಮ್ಮ ಕುಟುಂಬದವರಿಗೆ ಏನಾದರೂ ಆದರೆ ಅವರುಗಳ ಶಾಪವೇ ಆಗಿರುತ್ತದೆ. ನಾನು ನಮ್ಮ ನಚ್ಚಿನ ಕರುನಾಡ ಜೀವ ಕನ್ನಡದ ರತ್ನ ಅಪ್ಪು ಅವರ ಅಪ್ಪಟ ಅಭಿಮಾನಿ ನಿಮ್ಮಂತಹ ಕೆಟ್ಟವರಿಗೂ ಒಳ್ಳೆಯದನ್ನೇ ಬಯಸುವ ಮನಸ್ಸಿರುವ ವ್ಯೆಕ್ತಿ…. ಎಲ್ಲರಿಗೂ ಒಳಿತಾಗಲಿ, ನಾನು ನಮ್ಮ ಪತ್ರಿಕೆಯವರು ನಿಮ್ಮ ಮನಸ್ಸಿಗೆ ಅಥವಾ ನಿಮ್ಮ ಕುಟುಂಬದವರ ಮನಸ್ಸಿಗೆ ನಮ್ಮ ವರದಿಯ ಮೂಲಕ ಘಾಸಿಗೊಳಿಸಿದ್ದರೆ ದಯಮಾಡಿ ಕ್ಷಮಿಸಿ… ಆಗಂತ ಮತ್ತೇ ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೆ ಅದೇ ಕೆಲಸ ಮಾಡಿದರೆ ನಾವು ಮತ್ತೇ ಸುದ್ದಿಯ ವರದಿ ಮಡುವೆವು.. ಕಾರಣ ನಮ್ಮ ಪತ್ರಿಕೆ ಯಾರಿಗೂ ಅಂಜದೆ ಇರುವ ನೇರ ನಿಷ್ಟುರ, ಪಕ್ಷಾತೀತ ಪತ್ರಿಕೆಯಾಗಿದೆ. ಸರ್ಕಾರಿ ಅಧಿಕಾರಿಗಳ ಬಗ್ಗೆ ಋಣಾತ್ಮಕವಾಗಿ ಬರೆದರೆ ಪತ್ರಿಕೆ ಮಾಧ್ಯಮ ಪಟ್ಟಿಗೆ ಸೇರುವುದಿಲ್ಲವೆಂದು ಭಯ ಪಡಿಸುವ ನನ್ನ ಆತ್ಮೀಯರಿಗೂ ಸೇರಿ ಹೇಳುವುದೇನೆಂದರೆ ” ನಮ್ಮ ಪತ್ರಿಕೆಯ ಉತ್ತಮ ಬರಹಗಾರ, ಉತ್ತಮ ವಾಗ್ಮಿಗಳಾದ ಶ್ರೀ ದಿವಂಗತ ರವಿ ಬೆಳೆಗೆರೆ ಸಾಹೇಬರ ಪತ್ರಿಕೆ ಹಾಯ್ ಬೆಂಗಳೂರು ಇಲ್ಲಿಯವರೆಗೂ ಮಾಧ್ಯಮ ಪಟ್ಟಿಗೆ ಸೇರಿಲ್ಲ… ಆದರೂ ಹೆಸರು ಮಾಡಿಲ್ಲವಾ… ಜಾಹಿರಾತು ಬರುತ್ತೆ, ಸರ್ಕಾರದ ಹಣ ಸಂಬಳದ ರೂಪದಲ್ಲಿ ತಿಂಗಳು ತಿಂಗಳು ಬೀಳುತ್ತೆ ಅಂತ ಯೋಚಿಸಿ ಸುಮ್ಮನಿರೋಕೆ ನಾನು ಬೇರೆ ಮಾಧ್ಯಮದವರ ತರಹ ಅಲ್ಲ ಸ್ವಾಮಿ…. ನನ್ನ ವೃತ್ತಿ ನನ್ನ ಧರ್ಮ… ಜೈ ಅಂಬೇಡ್ಕರ್.
ಲೇಖನ : ಸೂರ್ಯಪ್ರಕಾಶ್.ಆರ್