Davanagere

ಆಶ್ರಯ ಯೋಜನೆಯಡಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ನೀಡಿರುವ ನಿವೇಶನವನ್ನು ಬೇರೆ ಜನಾಂಗದವರ ಹೆಸರಿಗೆ ಖಾತೆ ಮಾಡಿರುವ ಪಾಲಿಕೆ ಅಧಿಕಾರಿಗಳು

ಸರಿಯಾದ ನ್ಯಾಯ ದೊರಕಿಸಿಕೊಡದ ಆಯುಕ್ತೆ ಶ್ರೀಮತಿ ರೇಣುಕ

ದಾವಣಗೆರೆ : ಮಹಾನಗರ ಪಾಲಿಕೆ ವಾರ್ಡ ನಂಬರ್ 05 ರ ವ್ಯಾಪ್ತಿಯಲ್ಲಿ ಬರುವ ರಾಜೀವ್ ಗಾಂಧಿ ಬಡಾವಣೆಯಲ್ಲಿ ಚಾಲ್ತಿ ಡೋರ್ ನಂಬರ್ 259ರ ಸ್ವತ್ತು, ಈ ಹಿಂದೆ ಅಂದರೆ ದಿನಾಂಕ 04/08/1992 ರಂದು ಪರಿಶಿಷ್ಟ ಜಾತಿಗೆ ಸೇರಿದ ಶ್ರೀಮತಿ ಸಾವಿತ್ರಿಬಾಯಿ ಕೋಂ ಲೇಟ್ ಕೃಷ್ಣ ನಾಯ್ಕ್ [ಲಂಬಾಣಿ], #೦೦, ಗೋಶಾಲೆ, ಆವರಗೆರೆ, ದಾವಣಗೆರೆ, ವಯಸ್ಸು 54, ಇವರಿಗೆ ಜಿಲ್ಲಾಡಳಿತವು ಆಶ್ರಯ ಯೋಜನೆಯಡಿ ಅಳತೆ 20×30 ರ ವಿಸ್ತೀರ್ಣವುಳ್ಳ ಖಾಲಿ ನಿವೇಶನ [259]ವನ್ನು ಮಂಜೂರು ಮಾಡಿರುತ್ತದೆ. ಅದರಂತೆ ಸರ್ಕಾರದ ಸುತ್ತೋಲೆಯಂತೆ ಹಂಚಿಕೆಯಾದ ನಿವೇಶನ / ಮನೆಯನ್ನು 15-20 ವರ್ಷಗಳವರೆಗೆ ಯಾರಿಗೂ ಕೂಡ ಪರಭಾರೆ ಮಾಡುವಂತಿಲ್ಲ, ಯಾವ ಉದ್ಧೇಶಕ್ಕೆ ನೀಡಲಾಗಿದೆಯೋ ಅದೇ ಉದ್ಧೇಶಕ್ಕೇ ಸೀಮಿತಗೊಂಡಿಬೇಕೆಂಬ ನಿಯಮವಿದ್ದರೂ ಸಹ ಪಾಲಿಕೆ ಅಧಿಕಾರಿಗಳು ಹಾಗೂ ಕೆಲವು ಭೂ ಮಾಪಿಯಾ ಮಾಡುತ್ತಿರುವ ವ್ಯೆಕ್ತಿಗಳು ಸದರಿ ಫಲಾನುಭವಿಯ ಹೆಸರಿನಲ್ಲಿ ನಕಲಿ ಸ್ವತ್ತಿನ ಮಾಲೀಕರನ್ನು ಕರೆದುಕೊಂಡು ದಾವಣಗೆರೆ ಉಪ ನೋಂದಣಿ ಕಚೇರಿಯಲ್ಲಿ ದಿನಾಂಕ 12-11-2001 ರಂದು ಜನರಲ್ ಪವರ್ ಆಫ್ ಆಟಾರ್ನಿ ಮೂಲಕ 1ನೇ ಮೇನ್, 8ನೇ ಕ್ರಾಸ್, ಕೊಂಡಜ್ಜಿ ರಸ್ತೆ, ಎಸ್.ಜೆ.ಎಂ ನಗರ ನಿವಾಸಿ ಮೊಹಮ್ಮದ್ ಅಲಿ ಬಿನ್ ಜಿ.ಬಾಷಾ ಸಾಬ್ ಎಂಬುವವರು ನೋಂದಣಿ ಮಾಡಿಕೊಂಡು, ತದ ನಂತರ ದಿನಾಂಕ 17/11/2003 ರಂದು ಬೇರೆ ವ್ಯೆಕ್ತಿಗಳಿಗೆ ಅಂದರೆ ಶ್ರೀಮತಿ ಫರೀದಾ ಕೋಂ ಫೈಜುಸಾಬ್ ಎಂಬುವವರಿಗೆ 21000/- ರೂಗಳಿಗೆ ಮಾರಾಟ ಮಾಡಿರುತ್ತಾರೆ. ಸದರಿ ಮೂಲ ಫಲಾನುಭವಿ ತಮ್ಮ ಸ್ವತ್ತಿನ ನಿವೇಶನದ ಬಳಿ ಹೋದಾಗಲೆಲ್ಲ ಜೀವ ಬೆದರಿಕೆ ಹಾಕಿ, ಭಯ ಹುಟ್ಟಿಸಿ, ಫಲಾನುಭವಿಗಳಿಗೆ ಪಾಲಿಕೆಯಲ್ಲಿ ತಮ್ಮ ಹೆಸರಿಗೆ ಇದೆ ಎಂಬುದನ್ನು ಮನವರಿಕೆ ಮಾಡಿ ಕಳುಹಿಸಿರುತ್ತಾರೆ. ನಂತರ ನಾನು ಸದರಿಯವರ ಪರವಾಗಿ ಪಾಲಿಕೆಯಲ್ಲಿ ಅಲೆದಾಡಿದಾಗ, ಅಲ್ಲಿ ಯಾವುದೇ ವ್ಯೆಕ್ತಿಯ ಹೆಸರಿನಲ್ಲಿ ಖಾತೆ ಇರದೆ ಮೂಲ ಫಲಾನುಭವಿ ಶ್ರೀಮತಿ ಸಾವಿತ್ರಬಾಯಿ ಕೋಂ ಲೇಟ್ ಕೃಷ್ಣ ನಾಯ್ಕ್ ಎಂಬುವವರ ಹೆಸರಿಗೆ ಇರುವುದನ್ನು ಅರಿತು, ಪಾಲಿಕೆಯ ಕರವಸೂಲಿಗಾರರಾದ ಶ್ರೀಮತಿ ಅಂಜಿನಮ್ಮ ಎಂಬುವವರ ಬಳಿ ದಿನಾಂಕ 19-05-2022 ರಂದು ಮನೆ ಕಂದಾಯ ಖಾಲಿ ನಿವೇಶನದ ಕಂದಾಯ ಕಟ್ಟಿ, ದಿನಾಂಕ 05-07-2022 ರಂದು ಸದರಿ ಫಲಾನುಭವಿಯ ಹೆಸರಿಗೆ ನಮೂನೆ-2[ನಿಯಮ11]ರಂತೆ ಇ- ಸ್ವತ್ತು ಪಡೆದುಕೊಂಡಿದ್ದು, ದಾಖಲೆ ಸಂಖ್ಯೆ 2035759, ಸ್ವತ್ತಿನ ನಿರ್ಧರಣಾ ಸಂಖ್ಯೆ 259, ಆಗಿದ್ದು ಸದರಿಯವರ ಹೆಸರಿಗೆ ಆನಲೈನ್ ಇ-ಸ್ವತ್ತು ಇದ್ದರೂ ಸಹ ಖೊಟ್ಟಿ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಂಡಿರುವ ವ್ಯೆಕ್ತಿಗಳು ಮತ್ತು ಪಾಲಿಕೆಯ ಕಂದಾಯಾಧಿಕಾರಿ, ಕರವಸೂಲಿಗಾರರು, ವಲಯ ಆಯುಕ್ತರು ಸೇರಿ ಒಮ್ಮೆ ಸ್ವತ್ತಿಗೆ ಸಂಬಂಧಿಸಿದಂತೆ ನೀಡಿದ ಇ-ಆಸ್ತಿ ಮತ್ತೊಮ್ಮೆ ಕೊಡುವುದಕ್ಕೆ ಬರುವುದಿಲ್ಲವಾದರೂ ಸಹ ಮತ್ತೊಂದು ಮನೆಯ ಪೋಟೊ ಪಡೆದುಕೊಂಡು, ಹೊಸದಾಗಿ ಪಿಐಡಿ ಸಂಖ್ಯೆಯನ್ನು ಸೃಜಿಸಿ ಖೊಟ್ಟಿ ದಾಖಲೆಗಳ ಮಾಡಿಸಿಕೊಂಡಿರುವ ವ್ಯೆಕ್ತಿಯ ಹೆಸರಿಗೆ ದಿನಾಂಕ ೨೩/೦೨/೨೦೨೩ ರಂದು ಮತ್ತೊಂದು ಇ-ಸ್ವತ್ತು ಮಾಡಿರುತ್ತಾರೆ.
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು

error: Content is protected !!