ನಗರದ ಅಕ್ರಮ ಕಟ್ಟಡಗಳಿಗೆ ಪಾಲಿಕೆಯ ಸಿಬ್ಬಂಧಿಗಳು, ಮತ್ತು ರಾಜಕೀಯ ಪಕ್ಷದ ಮುಖಂಡರುಗಳೇ ಸಾಥ್
Kadamabakesari.com

ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕೆಲವು ಹೆಸರಾಂತ ಬಡಾವಣೆಗಳಲ್ಲಿ ಅಕ್ರಮವಾಗಿ ಕಟ್ಟಡ ಪರವಾನಿಗೆಯ ಪಡೆಯದೆ ಮೂಲಭೂತ ಸೌಲಭ್ಯಗಳನ್ನು ಮಾತ್ರ ಪಾಲಿಕೆಯಿಂದ ಪಡೆದುಕೊಳ್ಳುತ್ತಿರುವ ಕಟ್ಟಡದ ಮಾಲೀಕರಿಗೆ ಪಾಲಿಕೆಯ ಕಟ್ಟಡ ಪರವಾನಿಗೆಯ ನೀಡುವ ಸಿಬ್ಬಂಧಿಗಳು ಮತ್ತು ಕಚೇರಿಯಲ್ಲಿರುವ ಕಾರ್ಯಪಾಲಕ ಅಭಿಯಂತರರು,
ಸಹಾಯಕ ಕಿರಿಯ ಕಾರ್ಯಪಾಲಕ ಅಭಿಯಂತರರು ಸಾಥ್ ನೀಡುತ್ತಿದ್ದು, ಅಕ್ರಮವಾಗಿ ಕಟ್ಟಡವನ್ನು ಕಟ್ಟಿರುವ ಮಾಲೀಕರ ಬಗ್ಗೆ ಮಾಹಿತಿ ಕೇಳಿದರೆ ಸಿಬ್ಬಂಧಿಗಳೇ ಮಾಹಿತೀ ಕೇಳಿರುವವರ ಬಗ್ಗೆ ಮಾಹಿತಿ ನೀಡಿ, ಬೆದರಿಕೆಯ ತರಿಸುವುದರ ಹಿಡಿದು, ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಬಾರದೆಂದರೆ
ಕೋರ್ಟ್ ಮೊರೆ ಹೋಗಿ ಎಂದು ಸಲಹೆಗಳನ್ನು ಸಹ ಇದೇ ಸಿಬ್ಬಂಧಿಗಳು ನೀಡುತ್ತಿದ್ದಾರೆ. ಇದರಿಂದಾಗಿ ಪಾಲಿಕೆಗೆ ಬರಬೇಕಾದ ಅದೆಷ್ಟೋ ಲಕ್ಷ ಹಣ ಪಂಗನಾಮವಾಗುತ್ತಿದೆ. ಇದಕ್ಕೆ ಊರ್ ಉದ್ಧಾರ ಮಾಡುವ ಕೆಲವು ಪಕ್ಷದ ಮುಖಂಡರುಗಳೂ ಸಹ ಸಾಥ್ ನೀಡಿದ್ದೂ, ಏನಾದರೂ ಮಾಹಿತಿ ಕೇಳಿದರೆ ತಮ್ಮ ಹಣಬಲ –ತೋಳ್ ಬಲವನ್ನು ತೋರಿಸಿ ಬಾಯಿ ಮುಚ್ಚಿಸುತ್ತಿದ್ದಾರೆ. ಇದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಸಾಕ್ಷಿ ಸಮೇತ ಸುದ್ಧಿಗಳ ಪ್ರಸರಿಸುವೆವು… ತಪ್ಪದೇ ನಿರೀಕ್ಷಿಸಿ
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು