ಸರ್ಕಾರದ ಸುತ್ತೋಲೆಯ ಕ್ಯಾರೇ ಮಾಡದ ಪಾಲಿಕೆಯ ಚೆಕ್ಕರ್ ಸಿಬ್ಬಂಧಿಗಳು ; ಸರಿಯಾದ ಸಮಯಕ್ಕೆ ಬಾರದ ಪಾಲಿಕೆಯ ಉಪಾಯುಕ್ತರು
ಅರಸನಂತೆ ಆಳು, ಅಪ್ಪನಂತೆ ಮಗ ಎಂಬಂತೆ ಪಾಲಿಕೆಯಲ್ಲಿ ಮೇಲಾಧಿಕಾರಿಗಳಂತೆ ಸಿಬ್ಬಂಧಿಗಳು

Davanagere : ರಾಜ್ಯ ಸರ್ಕಾರದ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಮತ್ತು ಕರ್ತವ್ಯ ಅವಧಿಯಲ್ಲಿ ಕಾರ್ಯನಿಷ್ಠೆ ತೋರಲು ಕಟ್ಟುನಿಟ್ಟಿನ ನಿಯಮ ರೂಪಿಸಿಲೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ ಈ ಹಿಂದೆ 2022ರಲ್ಲಿ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯವಾಗಲಿದೆಯಾದರೂ ಅದು ನಮ್ಮ ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುವ ಪಾಪಿಷ್ಠರಿಗೆ ಮಾತ್ರ ಅನ್ವಯವಾಗುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳಲ್ಲಿ ಸಮಯ ಪ್ರಜ್ಞೆ ಹಾಗೂ ಕಾರ್ಯನಿಷ್ಠೆ ಎರಡೂ ಇಲ್ಲ ಎಂಬುದು ರಾಜ್ಯ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ಬಂದಿದ್ದೂ, ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಚುರುಕು ಮುಟ್ಟಿಸುವ ಸಲುವಾಗಿ ಹಾಗೂ ನಾಗರೀಕರಿಗೆ ಉತ್ತಮ ಸೇವೆ ಸಲ್ಲಿಸಲು ಸರ್ಕಾರಿ ನೌಕರರ ಕರ್ತವ್ಯ ಲೋಪಗಳನ್ನು ತಡೆಯಲು ಸುತ್ತೋಲೆ ಸಂಖ್ಯೆ:ಮುಕಾ/4464335/2022 ದಿ. 25-07-2022ರಂದು ಸುತ್ತೋಲೆಯ ಹೊರಡಿಸಲಾಗಿದೆ. ದೂರದ ಸ್ಥಳಗಳಿಂದ ಸರ್ಕಾರಿ ಕಚೇರಿಗೆ ಆಗಮಿಸುವ ನಾಗರೀಕರು, ಅಧಿಕಾರಿಶಾಹಿಯ ನಿರ್ಲಕ್ಷ್ಯ ಮತ್ತು ಉಡಾಫೆಯ ವರ್ತನೆ ಹಾಗೂ ಸಮಯ ಪ್ರಜ್ಞೆ ಕಾರ್ಯ ನಿಷ್ಠೆಯ ಕೊರತೆಯಿಂದ ಸಾರ್ವಜನಿಕರು ದಿನನಿತ್ಯ ಬವಣೆ ಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10-00 ಗಂಟೆಗೆ ಕಡ್ಡಾಯವಾಗಿ ಎಲ್ಲಾ ಸರ್ಕಾರಿ ನೌಕರರು, ಸಿಬ್ಬಂಧಿಗಳು,
ಕಚೇರಿಗೆ ಹಾಜರಾಗಿರಬೇಕು ಮತ್ತು ತಮ್ಮ ಕರ್ತವ್ಯದ ಅವಧಿ ಪೂರ್ಣವಾಗುವವರೆಗೂ ನಿಗಧಿಪಡಿಸಿದ ಸ್ಥಳದಲ್ಲಿಯೇ ಇದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ಆದೇಶ ಹೊರಡಿಸಲಾಗಿದೆ. ಅಲ್ಲದೇ ಅನ್ಯ ಕಾರ್ಯ ಅಥವಾ ಕರ್ತವ್ಯ ನಿಮಿತ್ತ ತೆರಳಬೇಕಿದ್ದಲ್ಲಿ ಚಲನ-ವಲನಗಳ ವಹಿಯಲ್ಲಿ ಸಕಾರಣ ನಮೂದಿಸಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮತ್ತು ನಿಗಧಿತ ಕಾಲಾವಧಿಗಿಂತ ವಿಳಂಬವಾಗಿ ಹಾಜರಾಗುವ ಹಾಗೂ ಕಚೇರಿ ಅವಧಿಯಲ್ಲಿ ತಮ್ಮ ಸ್ಥಾನದಲ್ಲಿ ಇಲ್ಲದಿದ್ದ ಸಿಬ್ಬಂಧಿ ಮತ್ತು ಅಧಿಕಾರಿಗಳಗಳ ವಿರುದ್ಧ ಸಕ್ಷಮ ಪ್ರಾಧಿಕಾರ ಸೂಕ್ತ ಕ್ರಮ ಜರುಗಿಸಲಾಗುವುದು.
ಎಂದು ಸುತ್ತೋಲೆಯಲ್ಲಿ ತಿಳಿಸಿದ್ದರೂ ಸಹ ಪಾಲಿಕೆಯ ಯಾವೋಬ್ಬ ಅಧಿಕಾರಿಯೂ ಸಹ ನಿಗಧಿತ ಸರ್ಕಾರಿ ಸಮಯಕ್ಕೆ ಹಾಜರಾಗದೆ ಇರುವುದು ಪ್ರತಿದಿನ ಸಾಮಾನ್ಯವಾಗಿದೆ.. ಇನ್ನು ಸರ್ಕಾರ ಇಂತಹ ಖದೀಮ ಕಳ್ಳರನ್ನು ಪತ್ತೇ ಹಚ್ಚಲಿಕ್ಕಾಗಿಯೇ ತಮ್ಮ ಹೆಬ್ಬೆಟ್ಟಿನ ಮುದ್ರೆಯ ಅಂದರೆ ಬಯೋಮೆಟ್ರಿಕ್ ಹಾಜರಾತಿಯ ನಿಗದಿ ಪಡಿಸಿದ್ದರೂ ಸಹ ಇವರ ಸಮಯ ಪ್ರಜ್ಞೆ ಮಾತ್ರ ಕತ್ತೆ ಮುಂದೆ ಕಿನ್ನರಿ ಬಾರಿಸಿದಂತಾಗಿದೆ.
ಪಾಲಿಕೆಯ ಸಿಬ್ಬಂಧಿಗಳಿಗೆ ಸಮಯದ ಬಗ್ಗೆ ಹಾಗೂ ಅವರ ಕರ್ತವ್ಯ ನಿಷ್ಠೆಯ ಪಾಠ ಹೇಳಬೇಕಾದ ಮೇಲಾಧಿಕಾರಿಗಳೇ ಇಲ್ಲಿ ಲಂಘು ಲಗಾಮಿಲ್ಲದೆ, ಕೇಳುವ ಮುಖ್ಯಸ್ಥನೇ ಇಲ್ಲದ ಮನೆಯ ಮೂರ್ಖ ಶಿಖಾಮಣಿ ಸಿಬ್ಬಂಧಿಗಳಂತೆ 10-00 ಗಂಟೆಯ ನಂತರ ಅಂದರೆ 10 ಗಂಟೆ 20 ನಿಮಿಷಕ್ಕೆ, 10 ಗಂಟೆ 40 ನಿಮಿಷಕ್ಕೆ ಬಂದು, , ಸರ್ಕಾರ ಜನರ ಕೆಲಸಗಳ ನಿರ್ವಹಿಸಲು ನೀಡಿರುವ ಕುರ್ಚಿಯ ಮೇಲೆ ತಮ್ಮ ಜಾಡು ಹಿಡಿದ ಕಸದ ಕಾಲುಗಳನ್ನು ಅಲ್ಲಾಡಿಸಿಕೊಂಡು ಕುಳಿತುಕೊಂಡು, ತಮ್ಮ ಕಿವಿಯ ಒಳಗೆ ಇರುವ ಗುಗ್ಗೆಯ ತೆಗೆದುಕೊಳ್ಳುತ್ತಾ ಕೂರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ನಮ್ಮ ಪತ್ರಿಕೆಯ ಸಂಪಾದಕರೂ ಪ್ರತಿನಿತ್ಯ ಪಾಲಿಕೆಗೆ ಬೆಳಿಗ್ಗೆ ನಮ್ಮ ಪತ್ರಿಕೆಯನ್ನು ನೀಡಲು 9 ಗಂಟೆ 40 ನಿಮಿಷಕ್ಕೆ ಸರಿಯಾಗಿ ಭೇಟಿ ನೀಡಿ, ಅಲ್ಲಿಯೇ ಇರುವಂತಹ ಉಳಿದ ಪತ್ರಿಕೆಗಳನ್ನು ಓದಲು ಕುಳಿತಾಗ ಅಲ್ಲಿ ಒಬ್ಬೊಬ್ಬರೇ ಬರುವ ದೃಶ್ಯಗಳೇ ಸಾಕು. ಅಷ್ಟೇ ಅಲ್ಲ ನಮ್ಮ ಪತ್ರಿಕೆಯ ಸಂಪಾದಕರೂ ಪ್ರತಿಯೊಂದು ಕಚೇರಿಯಲ್ಲಿ ತೆಗೆದಿರುವ ಜಿಪಿಎಸ್ ಪೋಟೋಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ. ಅದರಲ್ಲೂ ನಮ್ಮ ಕಳ್ಳ ಫಕೀರ ಸುರೇಶ್ ಪಾಟೀಲ ತನ್ನ ಬೇರೆ ಊರಿನ ಮನೆಯಿಂದ ಬಸ್ಸಲ್ಲಿ ಬಂದು ಕೈಯಲ್ಲಿ ಊಟದ ಬ್ಯಾಗ್ ಅನ್ನು ತನಗೆ ನೀಡಿರುವ ಕೊಠಡಿಯಲ್ಲಿಟ್ಟು, ತನ್ನ ಇನ್ನೊಬ್ಬ ಫಕೀರನ ಜೊತೆ ಕಚೇರಿಗೆ ಬಂದ ಐದು ನಿಮಿಷ ತಡ ಪಾಲಿಕೆಯ ಹೊರಗಡೆ ಇರುವ ಜನತಾ ಬಜಾರ್ ಕಡೆ ಮುಖ ಮಾಡಿ ಕಾಫಿ / ಟೀ ಸವೆಯಲು ಹೋಗುವನು, ಇದನ್ನ ಕೇಳುವ ಮೇಲಾಧಿಕಾರಿಗಳಾದ ಉಪಾಯುಕ್ತರಾದ ಶ್ರೀಮತಿ ಲಕ್ಷ್ಮೀ ಶೇಖರಪ್ಪನವರು ಸಹ 10 ಗಂಟೆ 35 ನಿಮಿಷಕ್ಕೆ ಬರುವರು, ಇವರಂತೆ, ಇವರ ಕೈಯ ಕೆಳಗೆ ಇರುವ ಸಿಬ್ಬಂಧಿಗಳೂ ಅದರಲ್ಲೂ ಕಟ್ಟಡ ಪರವಾನಗೆ ಕೊಠಡಿಯ ಸಬ್ಬಂಧಿಗಳು, ವಿದ್ಯುತ್ ವಿಭಾಗದಲ್ಲಿರುವ ಸಿಬ್ಬಂಧಿಗಳು, ಚುನಾವಣಾ ವಿಭಾಗದಲ್ಲಿರುವ ಸಿಬ್ಬಂಧೀಗಳು,
ಸಾಮಾನ್ಯ ಶಾಖೆಯ ಸಿಬ್ಬಂಧಿಗಳು, ಆಡಳಿತ ಶಾಖೆಯ ಸಿಬ್ಬಂಧಿಗಳು, ಕಾರ್ಯಪಾಲಕ ಸಿಬ್ಬಂಧಿಗಳು ಹೀಗೇ ಎಲ್ಲಾ ಮೂರು ಬಿಟ್ಟು ಮೂರ್ಖ ಶಿಖಾಮಣಿಗಳೇ ತುಂಬಿರುವ ಕತ್ತೆ ಕಿರುಬರೆಲ್ಲಾ ಪಾಲಿಕೆಯಲ್ಲಿ ತುಂಬಿಕೊಂಡು ಸರ್ಕಾರ ನಿಗಧಿಪಡಿಸಿರುವ ಸರ್ಕಾರಿ ಸಮಯಕ್ಕೆ ಸರಿಯಾಗಿ ಬಾರದೆ ತಮ್ಮದೇ ಆದ ಸಮಯಕ್ಕೆ ಅಂದರೆ 10ಗಂಟೆ 20 ನಿಮಿಷದ ನಂತರ ಬಂದು, ಅದರಲ್ಲಿ ತಮ್ಮ ಕಾಫಿ / ಟೀ ಕುಡಿಯುವ ಚಟಕ್ಕೆ ಮತ್ತೊಮ್ಮೆ ಅರ್ಧಗಂಟೆ ಹೊರಗಡೆ ಇದ್ದು ಬರುವ ಮಹಾ ಕರ್ತವ್ಯ ಪಾಲನೆ ಮಾಡುವ ದೇಶಭಕ್ತರಾಗಿದ್ದಾರೆ. ಇನ್ನೂ ಇವರ ಬಗ್ಗೆ ನಮ್ಮ ಪತ್ರಿಕೆಯಲ್ಲಿ ಸುದ್ಧಿ ಮಾಡಿದರಂತು ಎಲ್ಲಿಲ್ಲದ ಕೋಪ ಸಿಟ್ಟು ಆವೇಶ, ನಮ್ಮ ಪತ್ರಿಕೆಯ ಸಂಪಾದಕರನ್ನು ಸುಟ್ಟು ಹಾಕುವಷ್ಟು ಕಡುಗೆಂಪು ನೋಟ, ಮಾತುಗಳು, ಕಾರ್ಯ ವೈಖರಿ ಸಾಮಾನ್ಯವಾಗಿ ಕಾಣುತ್ತವೆ.
ಎಲ್ಲಾಕ್ಕಿಂತ ನಗು ತರಿಸುವ ವಿಷಯವೆನೇಂದರೆ, ಇವರ ಕಾರ್ಯ ಪ್ರವೃತ್ತಿಯ ಬಗ್ಗೆ ನಕಾರಾತ್ಮಕವಾಗಿ ಜನರ ಮುಂದೆ ತಂದರೆ ಪಾಲಿಕೆಯಲ್ಲಿರುವ ಕೆಲಸಕ್ಕೆ ಬಾರದ ನಾಲಾಯಕ್ ವ್ಯೆಕ್ತಿಗಳ ರೌಢಿಗಳ ತಮ್ಮ ಹಣ ಬಲದ ಮಾತುಗಳನ್ನು ನಮ್ಮ ಪತ್ರಿಕೆಯ ಸಂಪಾದಕರ ಮೇಲೆ ತೋರಿಸುತ್ತಾರೆ. ಆದರೆ ಇದ್ಯಾವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ನಮ್ಮ ಪತ್ರಿಕೆಯ ಸಂಪಾದಕರು ಪಾಲಿಕೆಯ ಆಯುಕ್ತರ ಗಮನಕ್ಕೆ ಸಿಬ್ಬಂಧಿಗಳ ಮತ್ತು ಉಪಾಯುಕ್ತರ ಕಾರ್ಯವೈಖರಿ,
ಸಮಯ ಪಾಲನೆ ಬಗ್ಗೆ ಮೌಖಿಕವಾಗಿ ದೂರನ್ನು ನೀಡಿದ್ದಾರೆ. ಪಾಪ ಪಾಲಿಕೆ ಆಯುಕ್ತರು ನಮ್ಮ ದಾವಣಗೆರೆ ಮಹಾನಗರಪಾಲಿಕೆಯನ್ನು ಬೃಹತ್ ಬೆಂಗಳೂರು ರೀತಿ ಮಾಡೋ ಹಂಬಲದಲ್ಲಿದ್ದರೇ ಈ ಕುತಂತ್ರಿಗಳು ಮಾತ್ರ ಆಯುಕ್ತರಿಗೆ ಬೆನ್ನ ಹಿಂದೆ ಶಾಪ ಹಾಕಿ, ಯಾವಾಗ ಹೋಗ್ತಾರೋ ಅನ್ನೋ ಗುಸು-ಗುಸು, ಪಿಸು-ಪಿಸು ಆಗಿ ಮಾತುಗಳನ್ನು ಆಡುತ್ತಿದ್ದಾರೆ. ಆದ್ದರಿಂದ ಮಾನ್ಯ ಆಯುಕ್ತರಿಗೆ ಮತ್ತು ನಮ್ಮ ಜಿಲ್ಲೆಯ ಹೆಮ್ಮೆಯ ಉಕ್ಕಿನ ಮಹಿಳಾ ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರು ಪಾಲಿಕೆಯಲ್ಲಿರುವ ವಲಯ ಕಚೇರಿಗಳಲ್ಲಿರುವ ಎಲ್ಲಾ ಸಿಬ್ಬಂಧಿಗಳನ್ನು ಬೇರೆ ಬೇರೆ ಜಿಲ್ಲೆಗಳ ಕಚೇರಿಗಳಿಗೆ ವರ್ಗಾವಣೆ ಮಾಡಿ ನವ-ನವೀನ ಹೊಸ ಯುವ ಪ್ರತಿಭೆಗಳನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕಾಗಿ ಈ ಮೂಲಕ ನಮ್ಮ ಪತ್ರಿಕಾ ತಂಡದಿಂದ ವಿನಂತಿಸಿಕೊಳ್ಳುತ್ತೇವೆ.
=>ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು, ದಾವಣಗೆರೆ