ಸಾಂಸ್ಕೃತಿಕ ನಗರಿಯಲ್ಲಿ ದರೋಡೆ, ಗುಂಡಿನ ಸುರಿಮಳೆ: ಓರ್ವ ಅಮಾಯಕ ಯುವಕ ಬಲಿ
ಸಾಂಸ್ಕೃತಿಕ ನಗರಿಯಲ್ಲಿ ಮಂಗಳವಾರ ಚಿನ್ನಾಭರಣ ದರೋಡೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಅಮಾಯಕ ಯುವಕ ಬಲಿಯಾಗಿದ್ದಾರೆ. ಹಾಡಹಗಲೇ ನಡೆದ ಘಟನೆಯು ನಾಗರಿಕರನ್ನು ಬೆಚ್ಚಿಬೀಳಿಸಿದೆ. ಸಾಂಸ್ಕೃತಿಕ ನಗರಿಯಲ್ಲಿ ಇಂದು ಗುಂಡಿನ ಸುರಿಮಳೆಗೈದಿದೆ. ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿದ ದರೋಡೆಕೋರರು ಆಭರಣ ವ್ಯಾಪಾರಿಯ ಕೈಕಾಲು ಕಟ್ಟಿ ಚೆನ್ನಾಗಿ ಥಳಿಸಿ ಕದೀಮರು ದರೋಡೆ ಮಾಡಿರುವ ಘಟನೆ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿದೆ. ವಿದ್ಯಾರಣ್ಯಪುರಂ ಅಮೃತ ಗೋಲ್ಡ್ ಪ್ಯಾಲೇಸ್‌ನಲ್ಲಿ ದರೋಡೆ ನಡೆದಿದೆ. ದರೋಡೆಕೋರರ ಗುಂಡಿನ ದಾಳಿಗೆ ದಡದಹಳ್ಳಿ ನಿವಾಸಿ ಚಂದ್ರು (೨೩) ಮೃತರಾಗಿದ್ದಾರೆ. ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರ ಗಾಯಗೊಂಡಿದ್ದಾರೆ. ವಿದ್ಯಾರಣ್ಯಪುರಂ ಮುಖ್ಯರಸ್ತೆಯಲ್ಲಿರುವ ಅಮೃತ ಚಿನ್ನಾಭರಣ ಮಳಿಗೆಗೆ ಸೋಮವಾರ ಸಂಜೆ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ನುಗ್ಗಿದ್ದ ನಾಲ್ವರು ದರೋಡೆಕೋರರು ಮಾಲೀಕ ಧರ್ಮೇಂದ್ರನ ಕೈಕಾಲು ಕಟ್ಟಿ ಚೆನ್ನಾಗಿ ಥಳಿಸಿ ದರೋಡೆ ಮಾಡಿದ್ದಾರೆ. ಬೆಳ್ಳಿ ಬಿಟ್ಟು ಚಿನ್ನದ ಆಭರಗಳನ್ನು ದೋಚಿದ್ದಾರೆ. ಚಿನ್ನಾಭರಣ ಅಂಗಡಿಯಿಂದ ಹೊರಬಂದು ದರೋಡೆಕೋರರು...