ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ರೈತಸಂಘಟನೆ ಕರಪತ್ರ ಅಭಿಯಾನ
ಚಾಮರಾಜನಗರ: ಬಿಜೆಪಿ ಹಾಗೂ ಮಿತ್ರಪಕ್ಷಗಳ ಅಭ್ಯರ್ಥಿಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವಂತೆ ರಾಜ್ಯ ರೈತ ಸಂಘಟನೆಯು ಕರಪತ್ರ ಅಭಿಯಾನ ನಡೆಸಿತು. ಚಾಮರಾಜನಗರ ತಾಲೂಕಿನ ನಾಗವಳ್ಳಿ ಹಾಗೂ ಚಂದಕವಾಡಿ ಗ್ರಾಮಗಳಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಸಾರ್ವಜನಿಕರಿಗೆ ಕರಪತ್ರಗಳನ್ನು ಕೊಟ್ಟು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ಹಾಕದೇ ರೈತ ವಿರೋಧಿ ಧೋರಣೆ ತಳೆದಿರುವುದಕ್ಕೆ ತಕ್ಕ ಪಾಠ ಕಲಿಸಬೇಕೆಂದು ಒತ್ತಾಯಿಸಿದರು. ಕೊಟ್ಟ ಮಾತಿನಂತೆ ನರೇಂದ್ರ ಮೋದಿ (Narendra Modi) ರೈತರ ಸಾಲಮನ್ನಾ ಮಾಡಿಲ್ಲ, ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಟ್ಟಿಲ್ಲ, ರೈತರ ವಿರುದ್ಧ ಹಾಕಲಾಗಿದ್ದ ಕೇಸ್ ಗಳನ್ನು ವಾಪಾಸ್ ಪಡೆದಿಲ್ಲ, ಈಗಲೂ ಹಿಂಬಾಗಿಲಿನಿಂದ ರೈತ ವಿರೋಧಿ ಕಾನೂನು ತರಲು ಪ್ರಯತ್ನಿಸುತ್ತಿದ್ದಾರೆಂದು ಕರಪತ್ರದಲ್ಲಿ ಬರೆಯಲಾಗಿದೆ....