Davanagere

ಸಿ.ಎ. ಸೈಟು ಕ್ರಯಪತ್ರದ ನೋಂದಣಿಗೆ ಲಂಚ ಪಡೆದಿದ್ದ ಆರೋಪ ಲೋಕಾಯುಕ್ತ ಕಚೇರಿಯಲ್ಲಿ ಆಡಿಯೋ ತುಣುಕುಗಳಿಂದ ಸಾಬೀತಾಗಿದ್ದರೂ, ಸಬ್ ರಿಜಿಸ್ಟ್ರಾರ್ಗೆ ಶಿಕ್ಷೆಯಾಗದೆ ಇರುವುದು ದುರ್ಧೈವ

ಮಾನ್ಯ ಕಂದಾಯ ಮಂತ್ರಿಗಳೇ ಈ ಲಂಚಬಾಕನನ್ನ ಕೂಡಲೇ ಮಂಪರು ಪರೀಕ್ಷೆಗೊಳಪಡಿಸಿ.... ಶಿಕ್ಷೆ ನೀಡಿ

????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ನಮ್ಮ ಪತ್ರಿಕೆಯ ಸಂಪಾದಕರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಭೂ ಮಾಫಿಯಾ ಹಗರಣವನ್ನು ಬಯಲಿಗೆಳೆಯಲು ಸ್ಟಿಂಗ್ ಮಾಡಿದ್ದೂ, ಅದರಲ್ಲಿ ದಾವಣಗೆರೆ ಮಹಾನಗರಪಾಲಿಕೆಯ ಭ್ರಷ್ಟ ಅಧಿಕಾರಿಗಳಾದ ಸಹಾಯಕ ಕಂದಾಯಾಧಿಕಾರಿ ವಿನಯ್, ಪಾಲಿಕೆ ವ್ಯವಸ್ಥಾಪಕ ಸುರೇಶ್ ಪಾಟೀಲರ ಪಾಲಿಕೆಯ ನಗರಸಭೆ ನಿವೇಶನಗಳನ್ನು ಹೇಗೆ ದೊಡ್ಡ ದೊಡ್ಡ ಕುಳಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ದಾಖಲೆ ಸಮೇತ ಪತ್ತೆ ಹಚ್ಚುತ್ತಿದ್ದಾಗ, ನಮ್ಮ ನೋಂದಣಾಧಿಕಾರಿ ಹೇಮೇಶಣ್ಣನೂ ಸಹ ಪಾಲಿದಾರನಾಗಿದ್ದಾನೆ. ಕಾರಣ ಸರಿ ಮಾರ್ಗದಲ್ಲಿ ನಡೆಯಿರಿ ಎಂದು ಹೊರ ನೋಟಕ್ಕೆ ಮಾತನಾಡುವ ಹೇಮೇಶಣ್ಣ ಅನಧಿಕೃತ ಸೈಟುಗಳ ನೋಂದಣಿಗೆ 80, 50, 1 ಲಕ್ಷದ ವರೆಗೆ ಲಂಚ ಪಡೆಯುವ ಮೂಲಕ ಅನಧಿಕೃತ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದ. ಅದಕ್ಕ ಸಂಬಂಧಿಸಿದ ಮುಖ್ಯ ದಾಖಲೆಗಳನ್ನು ಅಂದರೆ ಖುದ್ದು ನೋಂದಣಾಧಿಕಾರಿಯೇ ಹಣ ನೀಡದೆ ಇದ್ದಾಗ ಯಾವ ರೀತಿ ಮಾತನಾಡುತ್ತಿದ್ದರೂ ಎಂಬ ಆಡಿಯೋ, ಹಾಗೂ ಹೇಮೇಶಣ್ಣನ ಕೈಗೆ ಸೇರಬೇಕಾದ ಪ್ರತಿದಿನದ ಮಾಮೂಲಿ ಒಬ್ಬ ಚೇಲಾನ ಮೂಲಕ ಪಡೆದುಕೊಳ್ಳುತ್ತಿದ್ದ ವಿಡಿಯೋ ತುಣುಕುಗಳನ್ನು ಲೋಕಾಯುಕ್ತ ಅಧಿಕಾರಿಗಳಿಗೆ ನೀಡಿದ್ದೂ, ಲೋಕಾಯುಕ್ತ ಕಚೇರಿಯಲ್ಲೂ ಸಹ ಅವರ ಮತ್ತು ನಮ್ಮ ಸಂಪಾದಕರ ಮಾತಿನ ಚಕಾಮಕಿಯ ಧ್ವನಿಯ ಹೆಚ್ಚಿನ ತನಿಖೆಗಾಗಿ ಧ್ವನಿ ಪರೀಕ್ಷಣಾಲಯಕ್ಕೆ ಕಳುಹಿಸಿ ಸಾಬೀತು ಪಡಿಸಿಕೊಂಡಿದ್ದು, ಇಲ್ಲಿಯವರೆಗೂ ಆರೆಸ್ಟ್ ಮಾಡದೆ, ಕರ್ತವ್ಯ ನಡೆಸಲಿಕ್ಕೆ ಅವಕಾಶ ಕೊಟ್ಟಿರೋದು ನಮ್ಮ ಸಮಾಜದ ದುರ್ಧೈವವಾಗಿದೆ.
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಸಿ.ಎ.ಸೈಟುಗಳನ್ನು ಅನಧಿಕೃತ ವ್ಯೆಕ್ತಿಯೊಬ್ಬರೂ ಅನಧಿಕೃತ ವ್ಯಕ್ತಿಗಳಿಗೆ ಮರಣ ಶಾಸನ ಪತ್ರ ಮಾಡಲು ಮುಂದಾಗಿ ಅದರ ನೋಂದಣಿ ಮಾಡಿಸಲು ಬಂದಾಗ ಲಂಚಬಾಕ ಸಬ್ ರಿಜಿಸ್ಟ್ರಾರ್ ಈ ಹಿಂದೆ ತಾವೇ 80 ಸಾವಿರ ಲಂಚ ಪಡೆದು ದಿನಾಂಕ 22-06-2022 ರಂದು ಎಸ್.ಎಸ್. ಬಡಾವಣೆಯ ನಗರಸಭೆ ನಿವೇಶನ #1967/20 ರ ಸೈಟನ್ನು ಪಾಲಿಕೆಯ ಅಧಿಕಾರಿಗಳ ಮಾತಿನಂತೆಯೇ ಕ್ರಯದ ಪತ್ರ ಮಾಡಿಸಲು ಸಬ್ ರಿಜಿಸ್ಟ್ರಾರ್ ಅಧಿಕಾರಿ ಲಂಚಕ್ಕೆ ಕೈಯೊಡ್ಡಿ ನೋಂದಣಿ ಮಾಡಿಸಿ ಕೊಟ್ಟಿದ್ದರು. ಅಲ್ಲಿಂದ 9 ತಿಂಗಳ ನಂತರ ಮತ್ತೇ ಅದೇ ಸೈಟನ್ನು ಇನ್ನೊಬ್ಬ ಅನಧಿಕೃತ ವ್ಯೆಕ್ತಿಯೂ ಪಾಲಿಕೆಯಿಂದ ತಂದಿರುವ ಖಾತೆಯ ದಾಖಲೆಯನ್ನೇ ಇಟ್ಟುಕೊಂಡು, ಯಾವುದೇ ಇ-ಸ್ವತ್ತು / ಖಾತೆ ಎಕ್ಟ್ಸ್ರಾಕ್ಟ್ ಇಲ್ಲದೇಯೇ ಕಚೇರಿಯಲ್ಲಿ ಯಾವುದೇ ನೋಂದಣಿ ನಡೆಯಲಿ ನಮ್ಮ ಹೇಮೇಶಪ್ಪ ಇ.ಸಿ. ಚೆಕ್ ಮಾಡಿಕೊಂಡು ನೋಂದಣಿ ಮಾಡುವ ಆಸಾಮಿ ಅಂದು ಇ.ಸಿ ಇಲ್ಲದೆಯೇ, ಇ-ಸ್ವತ್ತು ಇಲ್ಲದೆಯೇ ವಿಲ್ ಮಾಡಿಸಿ ಲಂಚ ಪಡೆದ ಆರೋಪ ಇದೀಗ ದಾಖಲೆಗಳ ಸಮೇತ ಸಾಬೀತಾಗಿದ್ದು ಅಧಿಕಾರಿಗೆ ಹೈ ಕೋರ್ಟ್ ನ್ಯಾಯಾಲಯ ಶಿಕ್ಷೆ ನೀಡಬೇಕಿದೆ. ದಾವಣಗೆರೆ ತಾಲೂಕಿನ ಹಲವು ಗ್ರಾಮದ – ನಗರ ಭಾಗಗಳ ಯಾವುದೇ ನೋಂದಣಿ ಮಾಡಿಕೊಳ್ಳಲು ಸಬ್ ರಿಜಿಸ್ಟ್ರಾರ್ ಮಿನಿಮಮ್ 4 ಸಾವಿರದಿಂದ 1 ಲಕ್ಷದವರೆಗೂ ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದರು. ಈ ಬಗ್ಗೆ ಖುದ್ದೂ ನಮ್ಮ ಹೇಮೇಶಣ್ಣನೇ ತಮ್ಮ ಲಂಚದ ಡೀಮ್ಯಾಂಡನ್ನು ಪತ್ರಾಂಕ ಬರಹಗಾರರು ತರುವ ಅನುಬಂಧ – ಘೋಷಣೆಯ ಮೇಲೆ ತಮ್ಮ ಕೈಯಾರೆ ಬರೆದು ಕಳುಹಿಸುತ್ತಿದ್ದರು. ಇದನ್ನು ಸಹ ನಮ್ಮ ಪತ್ರಿಕೆಯ ಸಂಪಾದಕರು ಪತ್ರ ಮಾಡಿಸಲು ನೋಂದಣೀ ಕಚೇರಿಯಲ್ಲಿಯೇ ಠೀಕಾಣಿ ಹೂಡಿ, ಅಲ್ಲಿರುವ ಭ್ರಷ್ಟತೆಯನ್ನು ಪತ್ತೆ ಹಚ್ಚಲು ಆಗ ತಾನೇ ಹೊಸದಾಗಿ ದಾವಣಗೆರೆ ಉಪ ನೋಂದಣಾಧಿಕಾರಿಗಳ ಕಚೇರಿಗೆ ಬಂದ ಹೇಮೇಶಣ್ಣನ ಕರ್ಮಕಾಂಡ ಒಂದೋಂದೆಯಾಗಿ ಬಯಲಿಗೆ ಬಂತು. ಹೇಮೇಶಣ್ಣ ನೋಂದಣಾ ಸಮಯದಲ್ಲಿ ನೋಂದಣಿ ಮಾಡುವ ಪ್ರತಿಯೊಂದು ಕ್ರಯ ಪತ್ರಗಳಿಗೆ, ದಾನಪತ್ರಗಳಿಗೆ, ಯಾವುದೇ ರೀತಿಯ ದಸ್ತಾವೇಜು ಪತ್ರಗಳಿಗೆ ಇಂತಿಷ್ಟು ಹಣವನ್ನು ನೀಡುವಂತೆ ಕೇಳಿದ್ದು, ನೀಡಲಿಲ್ಲವೆಂದಾಗ ಕೆಲಸದ ಬಗ್ಗೆ ಅಸಡ್ಡೆ ಮಾಡುತ್ತಾ, ಮಾತಿನಲ್ಲಿಯೇ ಹಣವನ್ನು ನೀಡುವಂತೆ ಪುಸಲಾಯಿಸುತ್ತಿದ್ದ. ಇದಕ್ಕೆ ಸಾಕ್ಷಿಗಳು ಮಹಾಸ್ವಾಮಿಗಳೇ ಅನುಬಂಧ ಪತ್ರದ ಮೇಲೆ ತಮಗೆ ನೀಡಬೇಕಾದ ಹಣದ ನಂಬರನ್ನು ಗೀಚಿ, ಗೀಚಿದ ಹಣವನ್ನು ತಮ್ಮ ಚೇಲಾದ ಮೂಲಕ ಪಡೆಯುತ್ತಿದ್ದ.
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಇನ್ನು ಮಹಾಸ್ವಾಮಿಗಳು ಸ್ವತಃ ನಮ್ಮ ಪತ್ರಿಕೆಯ ಸಂಪಾದಕರೂ ಎಸ್.ಜೆ.ಎಂ ನಗರದಲ್ಲಿ ಬರತಕ್ಕ 20*20 ಅಳತೆಯ ಖಾಲಿ ನಿವೇಶನವನ್ನು ಕ್ರಯ ಮಾಡಿಕೊಳ್ಳಲು ಬಳ್ಳಾರಿ ಜಿಲ್ಲೆಗೆ ಹೋಗಿ ವಾರಸುದಾರರಿಂದ ಜಿಪಿಎ ಮಾಡಿಸಿಕೊಂಡು, ದಾವಣಗೆರೆ ಉಪ ನೋಂದಣಿ ಕಚೇರಿಯಲ್ಲಿ ಕ್ರಯ ಮಾಡಿಕೊಳ್ಳಲು ಹೋದಾಗ, ಜಿಪಿಎಗೆ ನೋಂದಣಿ ವೆಚ್ಚ 20 ಸಾವಿರ ಬಂದಿದ್ದರೆ, ನಮ್ಮ ಹೇಮೇಶಣ್ಣ ನಮಗೆ ನಾವೇ ನೋಂದಣಿ ಮಾಡಿಕೊಳ್ಳಲು ತಗಲುವ ವೆಚ್ಚ 3 ರಿಂದ 4 ಸಾವಿರ ಖರ್ಚು ತಗುಲಿದರೆ ಈ ಲಂಚಬಾಕನಿಗೆ ನೀಡಿದ್ದೂ ಮಾತ್ರ 10 ಸಾವಿರ ಲಂಚ, ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಈ ಲೇಖನದಲ್ಲಿ ಹಾಕಿರುವ ದಾಖಲೆಗಳೇ ಸಾಕ್ಷಿಯಾಗಿವೆ. ಇದಕ್ಕೂ ಹೆಚ್ಚಿನ ಸಾಕ್ಷಿಗಳು ನೈಜವಾಗಿ ಬೇಕೇ ಬೇಕು ಎಂಬಂತಾದರೆ ಮಹಾಸ್ವಾಮಿಗಳನ್ನು ಸಾರ್ವಜನಿಕವಾಗಿ ಮಂಪರು ಪರೀಕ್ಷೆಗೆ ಒಳಪಡಿಸಿ, ಅಲ್ಲಿಯೇ ಸತ್ಯ ಬಯಲಿಗೆ ಬರುತ್ತೆ. ಒಟ್ಟಿನಲ್ಲಿ ಇಂತಹ ಲಂಚಬಾಕ ಭ್ರಷ್ಟರಿಗೆ ಹೈಕೋರ್ಟ್ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ನೀಡದಿರಲಿ ಎಂಬುದೇ ನಮ್ಮ ಈ ದಿನದ ಲೇಖನದ ಮನವಿಯಾಗಿದೆ.
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು

error: Content is protected !!