ಬೊಮ್ಮಾಯಿಯವರ ಹಿಂದಿನ ಬಿಜೆಪಿ ಸರ್ಕಾರದ ಯಡವಟ್ಟಿನಿಂದ ಶಿಧಿಲಾವಸ್ಥೆಯಲ್ಲಿರುವ ದಾವಣಗೆರೆ ತಾಲ್ಲೂಕು ಕಚೇರಿ
ದಾವಣಗೆರೆ: ದಾವಣಗೆರೆ ತಾಲ್ಲೂಕು ಕಛೇರಿಗೆ ಪ್ರತಿನಿತ್ಯ ನೂರಾರು ಕೆಲಸ-ಕಾರ್ಯಗಳಿಗಾಗಿ ಅಧಿಕಾರಿಗಳು ಹಾಗೂ ಜನಸಾಮಾನ್ಯರು ಪ್ರತಿನಿತ್ಯ ಭೇಟಿ ನೀಡುತ್ತಾರೆ. ಆದರೆ ಈಗಿರುವ ದಾವಣಗೆರೆ ತಾಲ್ಲೂಕು ಕಚೇರಿಯು ಕಳೆದ ಬಾರಿಯಿದ್ದ ಬಿಜೆಪಿ ಸರ್ಕಾರದ ಕೆಟ್ಟ ರಾಜಕಾರಣ, ಯಡವಟ್ಟಿನ ನಿರ್ಧಾರಗಳಿಂದ ಶಿಥಿಲಾವಸ್ಥೆಯಲ್ಲಿದೆ. ಯಾವಾಗ ಯಾವ ಅವಘಡ ಸಂಭವಿಸುತ್ತೋ ಎಂಬುದು ಜನರ ಭಯವಾಗಿದೆ. ಕಾರಣ ಕಚೇರಿಯ ಹೊರಗಡೆ ಕಟ್ಟಡದ ಗೋಡೆ್ಗಳ ಚೆಕ್ಕಳಗಳು ಮುರಿದು ಬಿದ್ದಿವೆ, ಮಳೆಗಾಲದಲ್ಲಿ ಕಟ್ಟಡದ ಛಾವಣಿಗಳ ಮೇಲೆ ನೀರು ನಿಂತು ಕಟ್ಟಡದೊಳಗೆಲ್ಲ ನೀರು...