ಕ್ಷಿಪ್ರ ನಿಗಾವಣೆ ತಂಡ ರಚಿಸಿ, ಡೆಂಗ್ಯೂ ನಿಯಂತ್ರಿಸಿ -ನಗರಸಭೆ ಪೌರಾಯುಕ್ತೆ ಎಂ.ರೇಣುಕಾ
ಚಿತ್ರದುರ್ಗ: ಕರೋನ ನಿಯಂತ್ರಣ ಸಂದರ್ಭದಲ್ಲಿ ರಚಿಸಿದಂತೆ ಪ್ರತಿ ವಾರ್ಡ್‌ಗಳಿಗೆ ಕ್ಷಿಪ್ರ ನಿಗಾವಣೆ ತಂಡ ರಚಿಸಿ, ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಜರುಗಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಹೇಳಿದರು. ಇಲ್ಲಿನ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ವಾರ್ಡ್‌ವಾರು ಆಶಾ ಕಾರ್ಯಕರ್ತೆಯರು, ನಗರ ಆರೋಗ್ಯ ಕೇಂದ್ರಗಳ ಆರೋಗ್ಯ ನಿರೀಕ್ಷಣಾಧಿಕಾರಿಗಳು, ನೀರುಗಂಟಿಯವರು, ನಗರಸಭೆ...