ಅನಧಿಕೃತ ಪತ್ರಕರ್ತರಿಂದ ನೈಜ ಸುದ್ದಿಗಾರರಿಗೆ ಅನ್ಯಾಯ ವಾಗುತ್ತಿದೆ ; ಶಾಸಕ ಬಿ.ಪಿ.ಹರೀಶ್
ಹರಿಹರ : ಅನಧಿಕೃತ ಪತ್ರಕರ್ತರಿಂದ ನೈಜ ಸುದ್ದಿಗಾರರಿಗೆ ಅನ್ಯಾಯವಾಗುತ್ತದೆ ಇದನ್ನು ತಡೆಯುವಲ್ಲಿ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು. ನಗರದ ಶ್ರೀಮತಿ ಗಿರಿಯಮ್ಮ ಪ್ರೌಢಶಾಲೆ ಆವರಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಹರಿಹರ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಇತ್ತೀಚೆಗೆ ಯೂಟ್ಯೂಬ್ ಚಾನಲ್, ಅನಧಿಕೃತ ಪತ್ರಕರ್ತರು ಹೆಚ್ಚಾಗುತ್ತಿದ್ದು ಅವರಿಂದ ನೈಜ ಸುದ್ದಿಗಾರರಿಗೆ ಸಮಸ್ಯೆಯಾಗುತ್ತಿದೆ ಇದನ್ನು ತಡೆಯುವಲ್ಲಿ ರಾಜ್ಯ ಸಂಘಟನೆಯ ಮುಖ್ಯರು...