ದಾವಣಗೆರೆ ಮಹಾನಗರಪಾಲಿಕೆ ಕಸ ಸಂಗ್ರಹಣಾ ವಾಹನಗಳಿಗೆ ಇನ್ನುಮುಂದೆ ಜಿಪಿಆರ್.ಎಸ್ ಅಳವಡಿಕೆ ; ಜಿಲ್ಲಾಧಿಕಾರಿಯಿಂದ ಚಾಲನೆ
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣೆ ಕುರಿತಂತೆ ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಆರ್ ಎಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಯಾವುದೇ ವಾಹನ ಎಲ್ಲಿದೆ ಎನ್ನುವ ಮಾರ್ಗ ತಿಳಿಯಲಿದೆ. ಯಾವುದೇ ಕಾರಣಕ್ಕೂ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ, ಪೌರ ಕಾರ್ಮಿಕರಾಗಲೀ ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡಿನ ಮಾಹಿತಿ ತಂತ್ರಜ್ಞಾನ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರಾದ ಜಿ.ಆರ್.ಮಮತ ತಿಳಿಸಿದರು. ನಗರದ ಶ್ರೀ ದುರ್ಗಾಶಕ್ತಿ ಮಹಿಳಾ...