ಆಸ್ತಿಗಾಗಿ ಜೀವಂತವಾಗಿರುವ ಅಜ್ಜಿ ಹೆಸರಲ್ಲಿ ಮರಣ ಪ್ರಮಾಣಪತ್ರ ಸೃಷ್ಟಿ
ಚಿಕ್ಕಮಗಳೂರಿನಲ್ಲಿ ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜಿ ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ಮಾಡಿಸಿ ಆಸ್ತಿ ಕಬಳಿಸಿದ್ದಾರೆ. ಸರ್ಕಾರಿ ದಾಖಲೆಗಳಲ್ಲಿ ಅಜ್ಜಿ ಸತ್ತಿದ್ದಾರೆ ಎಂದು ದಾಖಲಿಸಿ, ಅಕೆಯನ್ನು ಆಸ್ತಿಯಿಂದ ವಂಚಿತಳನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಅಜ್ಜಿ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಕಾಫಿನಾಡಿನಲ್ಲಿ ಆಸ್ತಿಗಾಗಿ ಬದುಕಿರುವ ಅಜ್ಜಿಯನ್ನೇ ಮೊಮ್ಮಕ್ಕಳು ಸಾಯಿಸಿದ್ದಾರೆ. ಅಯ್ಯೋ ನೀವೇನು ಅಪಾರ್ಥ ಮಾಡಿಕೊಳ್ಳಬೇಡಿ, ಇವರೇನು ಅಜ್ಜಿಯನ್ನು ಕೊಲೆ ಮಾಡಿ ಕ್ರಿಮಿನಲ್ ಅಪರಾಧ ಮಾಡಿಲ್ಲ. ಸರ್ಕಾರಿ ದಾಖಲೆಗಳಲ್ಲಿ ತಮ್ಮ ಅಜ್ಜಿ ಸತ್ತೇ ಹೋಗಿದ್ದಾಳೆ ಎಂದು ದಾಖಲೆ...