Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/includes/action.php on line 305

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/templates/template_single_post.php on line 757

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/templates/template_single_post.php on line 758

Warning: Trying to access array offset on value of type bool in /home/u672248591/domains/kadambakesari.com/public_html/wp-content/themes/bingo/templates/template_single_post.php on line 759
Latest News

ವಿವಿಧ ಯೋಜನೆಗಳಿಂದ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

KSSKDC Aug 08 2021

ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ 2021-2022ನೇ ಸಾಲಿನಲ್ಲಿ ಸಫಾಯಿ ಕರ್ಮಚಾರಿ, ಮ್ಯಾನ್ಯುಯಲ್ ಸ್ಕಾವೆಂಜರ್ಸ್ ಹಾಗೂ ಅವರ ಅವಲಂಬಿತರಿಗಾಗಿ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ (ಸ್ವಸಹಾಯ ಗುಂಪುಗಳಿಗೆ), ಐರಾವತ ಯೋಜನೆ ಮತ್ತು ಭೂ ಒಡೆತನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಗಸ್ಟ್ 5ರಿಂದ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ವಿವರ:-ಸ್ವಯಂ ಉದ್ಯೋಗ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.50,000 ಈ ಪೈಕಿ ಶೇ .50 ಸಾಲ ಮತ್ತು ಶೇ.50 ಸಹಾಯಧನ ನೀಡಲಾಗುವುದು.

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ(ಐ.ಎಸ್.ಬಿ):- ವಿವಿಧ ಸ್ವಯಂ ಉದ್ಯೋಗ ಘಟಕಗಳ ಉದ್ದೇಶಕ್ಕೆ ಹಾಗೂ ಐ.ಎಸ್.ಬಿ ಘಟಕಗಳ ಉದ್ದೇಶಕ್ಕೆ ಘಟಕ ವೆಚ್ಚದ ಶೇ.70 ರಷ್ಟು ಅಥವಾ ಗರಿಷ್ಟ ರೂ.1.00 ಲಕ್ಷ ಸಹಾಯಧನ ಹಾಗೂ ರೂ.1.00ಲಕ್ಷ ನಿಗಮದಿಂದ ಸಾಲ ನೀಡಲಾಗುವುದು.

ಪ್ರೇರಣಾ (ಮೈಕ್ರೋ ಕ್ರೆಡಿಟ್ ಫೈನಾನ್ಸ್ ಯೋಜನೆ:- ನೋಂದಾಯಿತ ಸ್ವ-ಸಹಾಯ ಮಹಿಳಾ ಸಂಘಗಳಿಗೆ (ಕನಿಷ್ಟ 10 ಸದಸ್ಯರು) ಸದಸ್ಯರಿಗೆ 25,000 ರೂ.ಗಳಂತೆ ರೂ.2.50 ಲಕ್ಷ ನೆರವು ನೀಡಲಾಗುವುದು.

ಐರಾವತ ಯೋಜನೆ:- ಪ್ರವಾಸಿ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನ ಒದಗಿಸಲಾಗುವುದು. ಶೇ.50 ರಿಂದ ಶೇ.60 ಅಥವಾ ಗರಿಷ್ಟ ರೂ.5.00- ಲಕ್ಷಗಳವರೆಗೆ ಸಹಾಯಧನ ನೀಡಲಾಗುವುದು. ಬಾಕಿ ಮೊತ್ತವನ್ನು ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳಿಂದ ಭರಿಸಲಾಗುವುದು.

ಭೂ ಒಡೆತನ ಯೋಜನೆ:- ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ತಮ್ಮ ವಾಸ ಸ್ಥಳದಿಂದ 10 ಕಿ.ಮೀ. ವ್ಯಾಪ್ತಿಯೊಳಗೆ ಕೃಷಿಗೆ ಯೋಗ್ಯವಾದ 02 ಎಕರೆ ಖುಷ್ಕಿ ಅಥವಾ 01 ಎಕರೆ ತರಿ ಜಮೀನು ಖರೀದಿಸಲು ಸಹಾಯಧನ ಮತ್ತು ಸಾಲ ನೀಡಲಾಗುವುದು. (ಘಟಕ ವೆಚ್ಚ ರೂ.15.00 ಲಕ್ಷಗಳಿಂದ ರೂ.20.00 ಲಕ್ಷಗಳು) ಶೇ.50 ಸಹಾಯ ಧನ ಹಾಗೂ ಸೇ.50 ಅವಧಿಗೆ ಸಾಲ ನೀಡಲಾಗುವುದು.

ಅರ್ಜಿಗಳನ್ನು 2021ರ ಸೆಪ್ಟೆಂಬರ್ 2ರೊಳಗೆ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!