ಖೊಟ್ಟಿ ದಾಖಲೆಗಳ ಮೂಲಕ ಕೆಲಸ ಗಿಟ್ಟಿಸಿಕೊಂಡ ಅಂಗನವಾಡಿ ಕಾರ್ಯಕರ್ತೆ
ವಿಧಾನಸೌಧಕ್ಕೆ ಹೋಗಿ ದೂರು ನೀಡಿದರೂ ಕ್ರಮ ಜರುಗಿಸದ ಹೆಬ್ಬಾಳ್ಕರ್; ವರದಿ ಓದಿಯಾದ್ರೂ ಎಚ್ಚೆತ್ತುಕೊಳ್ಳುವರೇ ಡಿಸಿ

ಬೆಳಗಾವಿ : ರಾಯಬಾಗ ತಾಲ್ಲೂಕು, ಕಂಚಕರವಾಡಿ ಗ್ರಾಮದ ಪಾಟೀಲ ತೋಟದಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ -೦೨ರ, ಕೋಡ್ ಸಂಖ್ಯೆ-೪೬೭ರ ಅಂಗನವಾಡಿ ಕೇಂದ್ರದ ಶಿಕ್ಷಕಿಯ ( ಕಾರ್ಯಕರ್ತೆ) ಹುದ್ಧೆಗೆ ರಾಜ್ಯ ಸರ್ಕಾರ ದಿನಾಂಕ ೧೨-೦೬-೨೦೦೮ರಂದು ಗೆಜೆಟ್ ಸುತ್ತೋಲೆಯ ಹೊರಡಿಸಿದ್ದು, ಅದರಂತೆ ಜನತಾ ಪ್ಲಾಟ್ ವಾರ್ಡ ನಂಬರ್ – ೦೭, ಹಾರುಗೇರಿ ಗ್ರಾಮದ ಲಿಂಗಾಯಿತ ಸಮುದಾಯದ ನಿವಾಸಿಯಾಗಿರುವ ಶ್ರೀಮತಿ ದಾನಮ್ಮ ಬಾಳಪ್ಪ ಬೆನ್ನಾಡೆ ಬಿನ್ ಬಾಳಪ್ಪ ರಾಮಪ್ಪ ಎಂಬುವವರು ತಹಸೀಲ್ದಾರ್ ಕಚೇರಿಯಲ್ಲಿ ಲಂಚವನ್ನು ನೀಡಿ, ಖೊಟ್ಟಿ ದಾಖಲೆಗಳನ್ನ ಅಂದರೆ ನಿವಾಸಿ ದೃಢೀಕರಣ ಹಾಗೂ ಪಡಿತರ ಚೀಟಿಯನ್ನು ಮಾಡಿಸಿಕೊಂಡು ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ, ತಾವು ಇರುವ ವಾಸಸ್ಥಳದ ಪುರಾವೆಯನ್ನು ನೀಡದೆ, ಖೊಟ್ಟಿ ದಾಖಲೆಗಳ ಮೂಲಕ ಹಾಗೂ ಹೆಸರೇ ಇರದ ತಾತ್ಕಾಲಿಕ ಪಡಿತರ ಚೀಟಿಯ ನಮೂದಿಸಿ ಹುದ್ಧೆಯನ್ನು ಸಂಪಾದಿಸಿಕೊಂಡಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆಗೆ ಅಂದರೆ ಶಿಶು ಅಭಿವೃದ್ಧಿ ಹಾಗೂ ಮಹಿಳಾ ಮಕ್ಕಳ ಇಲಾಖೆಗೆ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ದೂರು ನೀಡಿದರೂ ಸಹ ಅಂಗನವಾಡಿ ಕಾರ್ಯಕರ್ತೆಯೂ ತಮ್ಮ ಬಾಹ್ಯ ರಾಜಕೀಯ ಪ್ರಾಬಲ್ಯವನ್ನು ಮತ್ತು ಹಣದ ದರ್ಪವನ್ನು ಇಲಾಖೆಯ ಸಿಬ್ಬಂಧಿಗಳ ಮೇಲೆ ಹಾಕಿ ತಮ್ಮ ಕೆಲಸಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಮ್ಮ ಪತ್ರಿಕೆಯ ಜಿಲ್ಲಾ ವರದಿಗಾರರು ಮಾಹಿತಿ ಕಲೆ ಹಾಕಿದ್ದಾಗೆ ಕಂಡುಬಂದಿರುವ ವಿಷಯವೇನೆಂದರೆ ಶ್ರೀಮತಿ ದಾನಮ್ಮ ಬಾಳಪ್ಪ ಬೆನ್ನಾಡೆಯವರು ಕಂಚಕರವಾಡಿಯಲ್ಲಿ ಯಾವುದೇ ರೀತಿಯಿಂದಲೂ ವಾಸವಿರುವುದಿಲ್ಲವೆಂತಲೂ ಹಾಗೂ ಅವರ ಮನೆಯೂ ಇಲ್ಲದಿರುವುದು ಕಂಡುಬಂದಿದೆ.
ಅಲ್ಲದೇ ತಮ್ಮ ಮೂಲ ಸ್ಥಳವಾದ ಹಾರುಗೇರಿಯಲ್ಲಿ ರಾಮಪ್ಪ ಬೆನ್ನಾಡೆಯವರ ಮನೆಯ ವಿಳಾಸದಲ್ಲಿಯೇ ೨೦೧೬ರವರೆಗೆ ಇರುವುದು ಕಂಡುಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಚುನಾವಣಾ ಗುರುತಿನ ಚೀಟಿ, ಹಳೆಯ ಮನೆಯ ಪೋಟೋಗಳ ಪ್ರತಿ ಹಾಗೂ ಪಹಣಿ ಮ್ಯೂಟೇಷನ್‌ಗಳ ನಕಲು ಪ್ರತಿಯೇ ಸಾಕ್ಷಿಯಾಗಿವೆ. ಇನ್ನು ಇದಿಷ್ಟು ದಾಖಲೆಗಳ ಕಲೆ ಹಾಕಿರುವ ನಮ್ಮ ಜಿಲ್ಲಾ ವರದಿಗಾರರಿಗೆ ಹಣದ ಆಮೀಷವನ್ನು ಒಡ್ಡಿ, ಸುಮ್ಮನಾಗುವಂತೆ ಬಲವಂತ ಪಡಿಸುತ್ತಿದ್ದಾರೆ. ಇವರ ಮಾತು ಕೇಳಿ ಸುಮ್ಮನೆ ಇಲ್ಲದಿದ್ದರೆ ನಿನ್ನನ್ನು ಊರಿಂದಲೇ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮದ ಜನರೊಂದಿಗೆ ಧಮ್ಕಿ ಹಾಕಿಸುತ್ತಿದ್ದಾಳೆ. ಇಂತಹ ಖೊಟ್ಟಿ ದಾಖಲೆಗಳೊಂದಿಗೆ ಸರ್ಕಾರದ ಹುದ್ಧೆಯನ್ನು ಗಿಟ್ಟಿಸಿಕೊಂಡಿರುವ ಮಾನಿನಿಗೆ ನಮ್ಮ ಜಿಲ್ಲಾ ವರದಿಗಾರರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಂದರೆ ಜಿಲ್ಲಾಧಿಕಾರಿಗಳಿಗೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ, ಮತ್ತು ಜಿಲ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ದೂರುಗಳ ಮೇಲೆ ದೂರು ನೀಡಿದರೂ ಯಾವುದೇ ರೀತ್ಯ ಕಾನೂನು ಕ್ರಮ ಜರುಗಿಸದೆ ಇರುವುದು ನಿಜಕ್ಕೂ ಶೋಚನೀಯ ಸಂಗತಿಯೆನಿಸಿದೆ.
ವರದಿ : ಪುಂಡಲೀಕ್ ಎ.ಪಾಟೀಲ್, ಬೆಳಗಾವಿ