1998ರ ಗೆಲುವಿನ ನಂತರ ಬಿಜೆಪಿಗೆ ತಕ್ಕ ಪಾಠ ಕಲಿಸಿದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್….!!
ಸೋತು-ಸುಣ್ಣವಾಗಿರುವ ಜಿ.ಎಂ.ಸಿದ್ಧೇಶ್‌ರವರಿಗೆ ಪತ್ರಿಕೆಯ ಕಡೆಯಿಂದ ಸಣ್ಣ ಸಲಹೆ

ಒಂದೇ ಕುಟುಂಬದ ಹಿಡಿತದಲ್ಲಿದ್ದ, ದಾವಣಗೆರೆ ಜಿಲ್ಲೆ ಅಕ್ಷರಶಃ ಅಭಿವೃದ್ಧಿಯಲ್ಲಿ ಕುಂಠಿತವಾಗಿತ್ತು. ಅಂದು ೧೯೭೧ ರಿಂದ ೧೯೯೧ ರವರೆಗು ದಾವಣಗೆರೆ ಕೇವಲ ಚಿತ್ರದುರ್ಗದ ಭಾಗವಾಗಿದ್ದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಸ್ಥಳೀಯವಾಗಿ ಎಸ್.ನಿಜಲಿಂಗಪ್ಪ ಹಾಗೂ ಕೊಂಡಜ್ಜಿ ಬಸಪ್ಪ, ಚಂದ್ರಶೇಖರಪ್ಪ ಹಾಗೂ ಚೆನ್ನಯ್ಯ ಒಡೆಯರ್ ಅವರ ಮುಂದಾಳತ್ವದಲ್ಲಿ ಲೋಕಸಭಾ ಅಭ್ಯರ್ಥಿಯ ಪಟ್ಟಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿತ್ತು. ನಂತರ ೧೯೯೬ ರಲ್ಲಿ ದೇಶದಲ್ಲಿ ೧೧ನೇಯ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಮತ್ತು ಪಿ.ವಿ.ನರಸಿಮಃರಾವ್ ಅವರ ನಾಯಕತ್ವದಲ್ಲಿ ಚುನಾವಣೆ ನಡೆದು, ಸಂಸತ್ ಚುಕ್ಕಾಣಿ ಹಿಡಿಯಲು ಯಾವುದೇ ಪಕ್ಷ ಬಹುಮತ ಪಡೆಯದೆ ಅತಂತ್ರ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಜಿ. ಮಲ್ಲಿಕಾರ್ಜುನಪ್ಪರವರು ಮೊದಲ ಬಾರಿಗೆ ಜಿಲ್ಲೆಯಾಗಿದ್ದ ದಾವಣಗೆರೆಯಲ್ಲಿ ಕಮಲದ ಗರಿಯನ್ನು ಹೆಗಲಿಗೇರಿಸಿಕೊಂಡು ಗೆಲುವಿನ ನಗೆ ಬೀರಿದ್ದರು. ಆಗ ಇವರ ಪಕ್ಷ ಹಾಗೂ ಮಿತ್ರ ಪಕ್ಷಗಳಲ್ಲಿ ಮೂಡಿದ ಒಡಕಿನಿಂದ ಮತ್ತೆ ೧೯೯೮ರಲ್ಲಿ ಲೋಕಸಭೆ ಚುನಾವಣೆ ನಡೆದಿದ್ದು, ಜಿ. ಮಲ್ಲಿಕಾರ್ಜುನಪ್ಪರವರನ್ನು ಎದುರಿಸಲು ಖುದ್ಧು ಶಾಮನೂರು ಶಿವಶಂಕರಪ್ಪ ನವರೇ ಚುನಾವಣಾ ಸ್ಪರ್ಧಾಳು ಆಗಿ ನಿಂತು ಜಿ. ಮಲ್ಲಿಕಾರ್ಜುನಪ್ಪರವರನ್ನು ಸೋಲಿಸಿ ಮೊದಲ ಬಾರಿ ಲೋಕಸಭೆಗೆ ಕಾಲಿಟ್ಟರು. ತದನಂತರ ೧೯೯೯ರಲ್ಲಿ ನಡೆದ ಪಾಕಿಸ್ಥಾನದ ಉಗ್ರಗಾಮಿಗಳ ಕಾಟದಿಂದ ದೇಶದಲ್ಲಿ ಮತ್ತೆ ಅತಂತ್ರವಾಗಿ ಮತ್ತೆ ೧೩ನೇ ಲೋಕಸಭೆ ಚುನಾವಣೆ ನಡೆದು, ವಾಜಪೇಯಿಯವರು ಕಾರ್ಗಿಲ್ ಯುದ್ಧದ ಮೂಲಕ ಭಾರತೀಯ ಜನರಲ್ಲಿ ಹೊಸ ಚೈತನ್ಯವನ್ನು ತಂದು ಬಿಜೆಪಿ ಅಲೆ ಎಲ್ಲೆಡೆ ಹರಡುವಂತೆ ಮಾಡಿದರು. ಅದರ ಪರಿಣಾಮ ದಾವಣಗೆರೆ ಜಿಲ್ಲೆಯಲ್ಲಿ ೧೯೯೯ರಲ್ಲಿ ಮತ್ತೆ ಜಿ. ಮಲ್ಲಿಕಾರ್ಜುನಪ್ಪರವರು ಕಮಲವನ್ನು ಅರಳಿಸಿದ್ದರು. ಅಲ್ಲಿಂದ ನಡೆದ ಜಿ.ಎಂ ಸಿದ್ಧೇಶ್ ರವರು ಒಮ್ಮೆ ಅವರ ತಂದೆಯ ಮರಣದ ಅನುಕಂಪದ ಆಧಾರದ ಮೇಲೆ, ಇನ್ನುಮ್ಮೆ ವಾಜಪೇಯಿಯವರ ಪ್ರಭಾವದ ಮೇಲೆ, ಮತ್ತೊಮ್ಮೆ ಮೋದಿಯವರ ಹೆಸರಿನ ಮೇಲೆ ಜಿಲ್ಲೆಯಲ್ಲಿ ಯಾರೂ ಕಿತ್ತುಹಾಕಲಾಗದ ರೀತಿ ಆಲದ ಮರದಂತೆ ಜಿಲ್ಲೆಯಲ್ಲಿ ತಳಪಾಯ ಹೂಡಿದ್ದರು. ಸರಿ ಸುಮಾರು ೨೫-೨೭ ವರ್ಷಗಳ ಕಾಲ ಜಿಲ್ಲೆಯಲ್ಲಿ ಬಿಜೆಪಿಯ ಪಕ್ಷದ ಮೂಲಕ ಸಂಸದರಾಗಿದ್ದ ಜಿ.ಎಂ ಸಿದ್ಧೇಶ್ ರವರು ಜಿಲ್ಲೆಯಲ್ಲಿ ಅಂದುಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಅದಕ್ಕೆ ಸಾಕ್ಷಿಯೇ ಮೊನ್ನೆ ಬಂದ ಚುನಾವಣಾ ಫಲಿತಾಂಶವೇ ಸಾಕು. ಮಾನ್ಯ ಮಾಜಿ ಸಂಸದರು ತಮ್ಮದೇ ಪಕ್ಷದ ಕೆಲವು ನಾಯಕರುಗಳಿಗೆ ಮುಂದುವರೆಯಲು ಬಿಡದೆ, ಅದೆಷ್ಟೋ ವೇದಿಕೆಗಳಲ್ಲಿ ತಮ್ಮವರ ಮೇಲೆಯೇ ರೇಗಾಡಿ, ಕೂಗಾಡಿ, ಅವರನ್ನು ಕೆಲವು ಹಗರಣಗಳಲ್ಲಿ ಸಿಲುಕಿಸಿದ್ದು ಸಹ ಜಿಲ್ಲೆಯ ಜನರಿಗೆ ಕಂಡುಬಂದಿದೆ. ಅದಕ್ಕಾಗಿ ಜಿಲ್ಲೆಯ ಜನರು ಮತ್ತು ತಮ್ಮದೇ ಪಕ್ಷದ ಕಾರ್ಯಕರ್ತರು ಜಿ.ಎಂ.ಸಿದ್ಧೇಶ್ ಅವರ ಬಗ್ಗೆ ಆರೋಪಗಳನ್ನೆ ಸುರಿಸುತ್ತಾರೆ. ಜಿ.ಎಂ.ಸಿದ್ಧೇಶ್ ಅವರು ಸುಮಾರು ೨೦ ವರ್ಷಗಳ ಕಾಲ ಸಂಸದರಾಗಿದ್ದು, ೩ ಬಾರಿ ರಾಜ್ಯ ಕ್ಯಾಬಿನೆಟ್ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರಮಾಣ ವಚನ ಮಾಡುವಾಗ ಹೇಳುವ ನಾನು ಈ ದೇಶದ ಪ್ರತಿಯೊಬ್ಬ ಪ್ರಜೆಗಳ ಅಭಿವೃದ್ಧಿಗೆ, ಸಂವಿಧಾನದಡಿಯಲ್ಲಿ, ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಮಾನತೆಯಿಂದ ಕಾಣುತ್ತೇನೆಂದು, ಆತ್ಮ, ಶುದ್ಧಃಕರಣದಿಂದ ಕೆಲಸ ಕಾರ್ಯಗಳನ್ನು ಮಾಡುತ್ತೇನೆಂದು, ಯಾವುದೇ ಕ್ಷೇತ್ರದಲ್ಲೂ ತಮ್ಮವರ ಪರವಾಗಿ ನನ್ನ ಪ್ರಾಬಲ್ಯವನ್ನು ತೋರಿಸದೆ ಏಕದೃಷ್ಠಿಯಾಗಿ ಆಡಳಿತ ನಿರ್ವಹಿಸುತ್ತೇನೆಂದು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣೀಕರಿಸುತ್ತೇನೆಂದು ಹೇಳಿದ್ದ ಸಾಲುಗಳನ್ನು ಮರೆತು, ಎಲ್ಲಾ ಕಚೇರಿಗಳಲ್ಲಿಯೂ ತನ್ನ ಪಟೇಲಂ ಚೇಲವಾದ ಪಿ.ಎ ದೇವರಾಜ್ ಅವರದೇ ಕಾರುಬಾರು ನಡೆಯುವಂತೆ ಮಾಡಿದ್ದರು, ಅಲ್ಲದೇ ಸರ್ಕಾರಿ ಅಧಿಕಾರಿಗಳನ್ನ ತನ್ನ ಕೆಲಸಗಳಿಗೆ ಬಳಸಿಕೊಂಡಿದ್ದು ಜಿಲ್ಲೆಯ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರೆ ಸಾಕ್ಷಿ. ಒಮ್ಮೆ ನಮ್ಮ ಪತ್ರಿಕೆಯ ಸಂಪಾದಕರು ಅವರ ಖಾಸಗಿ ಕಚೇರಿಯಾದ ಜಿ.ಎಂ.ಐ.ಟಿ ಕಾಲೇಜಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿದ ಅಂಬೇಡ್ಕರ್ ನಿಗಮ ಮಂಡಳಿಯಲ್ಲಿ ನಿರುದ್ಯೋಗಿ ಯುವಕರಿಗೆ ನೀಡುವ ಸಬ್ಸಿಡಿ ಲೋನ್ ಬಗ್ಗೆ ಮಂಜೂರು ಮಾಡಿಸಲು ತಮ್ಮ ಲೆಟರ್ ಕೇಳಲು ಹೋದಾಗ, ಮಾನ್ಯ ಸಂಸದರು ಮತ್ತು ಒಬ್ಬ ಐಎಎಸ್ ಅಧಿಕಾರಿಯಾದ ಮಹಾಂತೇಶ್ ಬೀಳಗಿಯವರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಅಹವಾಲುಗಳನ್ನು ಕೇಳಲು ಬಂದರೆ, ಹೇ ಇವನು ಕಾಂಗ್ರೆಸ್ ನವನು, ಈಗ ನಮ್ಮ ಹತ್ತಿರ ಕೆಲಸವಿದೆ, ಅದಕ್ಕೆ ಬಂದಿದ್ದಾನೆ, ನೋಡೋಣ ತಗೋ ಮುಂದಿನ ಸಾರಿ, ಈಗ ನಮ್ಮ ಕಾರ್ಯಕರ್ತರಿಗಿದೆ ಎಂದು ಹೇಳಿದ ನಿದರ್ಶನಗಳು ಮತ್ತು ಜಿಲ್ಲಾಧಿಕಾರಿ ಬಂದ ಸಾರ್ವಜನಿಕರಿಗೆ ಹೇ ಯಾಕಪ್ಪಾ ನೀನು ಕಾಂಗ್ರೆಸ್ ಬೆಂಬಲಿಸುತ್ತೀಯಾ ಸಾಹೇಬ್ರು ಜೊತೆಗಿರಪ್ಪ, ಅವರ ಪಕ್ಷದ ಕಡೆ ಕೆಲಸ ಮಾಡಪ್ಪ ಅಂದಿರೋದು ನಮಗೆ ಜಿ.ಎಂ.ಸಿದ್ಧೇಶ್ ರವರ ವ್ಯೆಕ್ತಿತ್ವ ತಿಳಿದು ಹೋಯಿತು. ಇವರೊಬ್ಬ ಸ್ವಾರ್ಥಪರ ವ್ಯೆಕ್ತಿ, ಜನರ ಅಭಿವೃದ್ಧಿ ಮುಖ್ಯವಲ್ಲ ಕೇವಲ ತನಗೆ, ತಮ್ಮವರಿಗೆ ಮಾತ್ರ ಸಂಸದರಾಗಿರುವುದು ಎಂದು ತಿಳಿದು, ಅಲ್ಲಿಂದ ನಾವುಗಳು ಅವರ ಐ-ಫೈ ಜೆಸ್ಟ್ ಹೌಸ್ ಇಂದ ಹೊರ ಬಂದೆವು. ಇಲ್ಲಿಯವರೆಗೂ ಅವರು ನೀಡಿದ ಸಬ್ಸಿಡಿ ಲೋನ್ ಪತ್ರ ಈಗಲೂ ಮೂಲೆಯಲ್ಲಿ ಬಿದ್ದಿದೆ, ಪಾಪ ನಮ್ಮ ಪತ್ರಿಕೆಯ ಸಂಪಾದಕರ ಜೊತೆಯಿದ್ದ ನಿರುದ್ಯೋಗಿ ಮಿತ್ರರು ಸಹ ಲೋನ್ ಬರುವ ಆಸೆಯನ್ನೇ ಕೈ ಬಿಟ್ಟರು. ಇಂತಹ ಸ್ವಾರ್ಥಪರ ವ್ಯೆಕ್ತಿ ದೇವರಂತ ಕೆಲಸ ಮಾಡುವ ಮೋದಿಯವರ ಹೆಸರನ್ನೇ ಬಳಸಿಕೊಂಡು, ನಾನು ಈ ಬಾರಿಯೂ ಗೆಲ್ಲುತ್ತೇನೆ ಎಂಬ ಆಸೆ ನಿಜವಾಗುತ್ತಾ, ಅಲ್ಲದೆ ಪುಣ್ಯಾತ್ಮ ಜಿ.ಎಂ ಸಿದ್ಧೇಶ್ ಯಾವಾಗಲಾದರೂ ನಮ್ಮ ಮಾಧ್ಯಮ ಮಿತ್ರರು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಕೇಳಿದರೆ, ಹೇ ನಾವೇ ಅಲ್ರೇನಯ್ಯ ಸ್ಮಾರ್ಟಸಿಟಿ ತಂದಿರೋದು, ಜಿಲ್ಲೆ ಇಂಪ್ರ್ಯೂ ಮಾಡಿರುವುದು ಅಂತ ಬಡಾಯಿ ಕೊಚ್ಚಿಕೊಳ್ಳುತ್ತಾರೆ, ಇವರ ಮಾತಿಗೆ ನಮ್ಮ ಪತ್ರಿಕೆಯ ಪ್ರಶ್ನೆ ಎಂದರೆ ಮಾನ್ಯರೆ ನೀವೂ ಸ್ಮಾರ್ಟಸಿಟಿ ಯೋಜನೆಯಡಿ ತುಂಬಾ ಒಳ್ಳೆಯ ಕೆಲಸಗಳೆ ಮಾಡಿದ್ಧೀರಿ…. ಆದರೆ ಏಕೆ ದಾವಣಗೆರೆ ನಗರಭಾಗವಾದ ಅಶೋಕ ರಸ್ತೆಯ ಮಧ್ಯೆ ನಿರ್ಮಿಸಿರುವ ಅಂಡರ್‌ಪಾಸ್ ಕಾರ್ಯ ಕುಲಗೆಟ್ಟಿದೆ, ಆವರಗೆರೆಯ ಬಳಿ ನಿರ್ಮಿಸಿರುವ ರೈಲ್ವೇ ಬ್ರಡ್ಜ್ ಏಕೆ ಎರೆಡೆರಡು ಬಾರಿ ಕೆಲಸ ಮಾಡಿ ಹಣ ಪೋಲ್ ಮಾಡಿದ್ದೀರಿ, ನಗರದ ಖಾಸಗಿ ಬಸ್ ನಿಲ್ದಾಣವೇಕೆ ಅದಷ್ಟೋ ಕೋಟಿ ಖರ‍್ಚು ಮಾಡಿ ಬಸ್ ನಿಲ್ಲುವುದಕ್ಕೆ ಸ್ಥಳವೇ ಇಲ್ಲದಂತೆ ಹೈ-ಪೈ ಮಾಲ್‌ಗಳಂತೆ ಮಾಡಿರಿ, ಕುಂದುವಾಡ ಕೆರೆ ಅಭಿವೃದ್ಧಿಗೆಂದು ಕೋಟಿ ಕೋಟಿ ಹಣವನ್ನು ಬಳಸಿಕೊಂಡು ಮಾಡಿದ್ದಾದರು ಏನ್ ಸ್ವಾಮಿ, ಪ್ರತಿ ವರ್ಷ ಕೇಂದ್ರದಿಂದ ಜಿಲ್ಲೆ ಬಿಡುಗಡೆಯಾಗುವ ಅಭಿವೃದ್ಧಿಯ ಹಣ ಇಲ್ಲಿಯವರೆಗೂ ಎಷ್ಟು ಬಂದಿದೆ, ಏನ್ ಮಾಡಿದ್ಧೀರಿ ಎಂಬ ಪಟ್ಟಿಯಾದ್ರೂ ನಿಮ್ಮಲ್ಲಿ ಇದೆಯಾ….. ತಾಲ್ಲೂಕುಗಳಿಂದ ಹಿಡಿದು ಗ್ರಾಮಗಳ ಅಭಿವೃಧ್ಧಿಗೆ ದೀಪಗಳಿಂದ ಹಿಡಿದು, ರಸ್ತೆಯ ಅಭಿವೃದ್ಧಿಯಾದ್ರೂ ಏನ್ ಮಾಡಿದ್ದೀರಿ, ಅರಣ್ಯೀಕರಣವನ್ನ ಇಲ್ಲಿಯವರೆಗೂ ಎಷ್ಟು ಕೋಟಿ ಹಣ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಿದ್ಧೀರಿ, ಅದು ಎಲ್ಲೆಲ್ಲಿ ಮಾಡಿದ್ಧೀರಿ ಎಂಬುದರ ಮಾಹಿತಿ ನೀಡುವಿರಾ…., ಕೇಂದ್ರದಿಂದ ೨೦೧೯ರಿಂದ ೨೦೨೨ ರವರೆಗೆ ತಾವು ಜಿಲ್ಲೆಗೆ ಏನೇನ್ ಕೊಡುಗೆ ನೀಡಿದ್ದೀರಿ ಅಭಿವೃದ್ಧಿ ಏನ್ ಆಗಿದೆ ಎಂಬುದನ್ನು ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ಮಾಹಿತಿ ಕೇಳಿದರೆ ತಮ್ಮ ಅಭಿವೃದ್ಧಿಯ ಸಾಧನೆ ಶೂನ್ಯ, ಯಾವುದೇ ಹಣ ಬಿಡುಗಡೆಯಾಗಿಲ್ಲವೆಂಬ ಶರಾ ಬರೆದು ಹಿಂಬರಹ ಕಳುಹಿಸಿದ್ದಾರೆ. ಹಾಗಾದರೆ ತಾವು ಇಲ್ಲಿಯವರೆಗೂ ಏನೂ ಮಾಡದೆ ಕೇಂದ್ರ ಸರ್ಕಾರದ ಹಣವನ್ನು ತಮ್ಮ ಮತ್ತ ತಮ್ಮ ಚೇಲಾಗಳಿಗೆ ಬಳಸಿಕೊಂಡಿದ್ದೀರಾ ಹೇಗೆ ಎಂಬುದೇ ನಮ್ಮ ಯಕ್ಷ ಪ್ರಶ್ನೆಯಾಗಿದೆ ಸ್ವಾಮಿ. ಇಂತಹ ಲಜ್ಜೆಗೇಡಿತನದ ವ್ಯೆಕ್ತಿಗೆ ಸರಿಯಾಗಿ ಬುದ್ಧಿ ಕಲಿಸಲು, ಈ ಬಾರಿ ದುರ್ಗಮಾತೆಯಾಗಿ, ದಾವಣಗೆರೆ ಜನತೆಗೆ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲು ಉಕ್ಕಿನ ಮಹಿಳೆಯಾಗಿ ಬಂದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರು ಗೆದ್ದು ಲೋಕಸಭೆಗೆ ಲಗ್ಗೆ ಇಟ್ಟಿದ್ದಾರೆ. ಇದು ನಿಮಗೆ ಸರಿಯಾದ ಪಾಠವಾಗಲಿ, ಕೇವಲ ಅವರಿವರ ಹೆಸರ ಹೇಳಿಕೊಂಡು, ಅನುಕಂಪದ ಆಧಾರ ಮೇಲೆ ಚುನಾವಣೆಯಲ್ಲಿ ಗೆದ್ದು ಬೀಗುವುದಕ್ಕಿಂತ, ನೀವೂ ಏನಾದರೂ ಕೆಲಸ ಮಾಡಿ, ಜನತೆಗೆ ಅಭಿವೃದ್ಧಿಯ ತೋರಿಸಿ ಮತ ಕೇಳಲು ಬನ್ನಿ ಹಾಗೂ ನಿಮ್ಮಂತೆಯೇ ಎಲ್ಲಾ ಕಡೆ ಬಿಜೆಪಿ ಪಕ್ಷದ ಪಟಾಲಂ ಬಳಗವು ಕೇವಲ ಮೋದಿಯವರ ಜಪ ಮಾಡದೆ ತಮ್ಮ ಸ್ವಂತ ಹೆಸರಿನಿಂದ ಕೆಲಸ ಮಾಡಿ ಗುರುತಿಸಿಕೊಳ್ಳಲಿ ಎಂಬುದೇ ನಮ್ಮ . ಪತ್ರಿಕೆಯ ಸಂದೇಶ.