ರಾಜ್ಯ ಸರ್ಕಾರದ ಕೆಂಪು-ಹಳದಿ ಬಣ್ಣದ ಟ್ಯಾಗ್ ಧರಿಸದೆ ಕನ್ನಡಕ್ಕೆ ಅವಮಾನ ಮಾಡುತ್ತಿರುವ ಹರಿಹರದ ಸಿಂಗಲೀಕ ನೋಂದಣಾಧಿಕಾರಿ ನಾಗರಾಜ್
ಹರಿಹರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಹೇಳುವವರಿಲ್ಲ-ಕೇಳುವವರಿಲ್ಲ

ದಾವಣಗೆರೆ : ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಕೋಟಿ ಕೋಟಿ ರೂಪಾಯಿಗಳ ಆದಾಯ ಸಂಗ್ರಹದೊಂದಿಗೆ ಕರ್ನಾಟಕ ಸರ್ಕಾರಕ್ಕೆ ಮೂರನೇ ಅತಿ ಹೆಚ್ಚು ಆದಾಯವನ್ನು ಉತ್ಪಾದಿಸುವ ಇಲಾಖೆಯಾಗಿದೆ. ನೋಂದಾಯಿತ ಒಟ್ಟು ದಾಖಲೆಗಳು ಸುಮಾರು ೧೯.೫೭ ಲಕ್ಷಗಳು. ಅಂಚೆ ಚೀಟಿಗಳು ಮತ್ತು ನೋಂದಣಿ ಇಲಾಖೆಯು ನೋಂದಾಯಿತ ಸಾರ್ವಜನಿಕ ದಾಖಲೆಗಳಾದ ಮದುವೆಗಳು ಮತ್ತು ಸಂಸ್ಥೆಗಳ ನೋಂದಣಿ, ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು ಅಂದರೆ ಮಾರಾಟ, ವರ್ಗಾವಣೆ ಅಥವಾ ಸ್ಥಿರ ಆಸ್ತಿಗಳ ಉಡುಗೊರೆ, ಅಡಮಾನ, ವಕೀಲರ ಅಧಿಕಾರ, ಉಯಿಲುಗಳು ಮತ್ತು ಇನ್ನೂ ಹೆಚ್ಚಿನವುಗಳ ಪಾಲಕರಾಗಿದ್ದಾರೆ. ಕೆಲವು ಹಳೆಯ ದಾಖಲೆಗಳು ೧೮೬೫ ರ ಹಿಂದಿನದು. ಈ ನಿರ್ಣಾಯಕ ಸಾರ್ವಜನಿಕ ದಾಖಲೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಇಲಾಖೆಯ ಪ್ರಧಾನ ಜವಾಬ್ದಾರಿಯಾಗಿದೆ. ನೋಂದಾಯಿತ ದಾಖಲೆಗಳಿಗೆ ಸಂಬಂಧಿಸಿದ ದಾಖಲೆಗಳು ಅಥವಾ ಮಾಹಿತಿಯನ್ನು ವ್ಯಾಖ್ಯಾನಿಸಲಾದ ಕಾರ್ಯವಿಧಾನಗಳ ಮೂಲಕ ವಿನಂತಿಸಿದಾಗ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ನಿಗದಿತ ವಹಿವಾಟುಗಳಿಗೆ ಸರ್ಕಾರದ ಪರವಾಗಿ ಮುದ್ರಾಂಕ ಶುಲ್ಕವನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಇಲಾಖೆ ಹೊಂದಿದೆ. ೧ ಜಿಲ್ಲಾ ರಿಜಿಸ್ಟ್ರಾರ್ ಕಛೇರಿಯ ನಿಯಂತ್ರಣದಲ್ಲಿರುವ ೫ ಉಪ-ರಿಜಿಸ್ಟ್ರಾರ್ ಕಛೇರಿಗಳ (Sಖಔ) ಮೂಲಕ ಸೇವೆಗಳನ್ನು ಒದಗಿಸಲಾಗುತ್ತದೆ.
’ಕಾವೇರಿ’ ಎಂದು ನಾಮಕರಣ ಮಾಡಲಾದ ಸಾಫ್ಟ್ವೇರ್ ಅಪ್ಲಿಕೇಶನ್ನ ಅನುಷ್ಠಾನದ ಮೂಲಕ ಇಲಾಖೆಯ ಸೇವೆಗಳನ್ನು ಗಣಕೀಕರಣಗೊಳಿಸಲಾಗಿದೆ. ಕಾವೇರಿ ತಂತ್ರಾಂಶವನ್ನು ೨೦೦೪ ರ ಹೊತ್ತಿಗೆ ಎಲ್ಲಾ Sಖಔ ಗಳಲ್ಲಿ ಬೂಥ್ ಮಾದರಿಯಲ್ಲಿ ಯಶಸ್ವಿಯಾಗಿ ಹೊರತರಲಾಯಿತು ಮತ್ತು ಅಂದಿನಿಂದ ಇಂದಿನವರೆಗೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಡೇಟಾ ಮತ್ತು ದಾಖಲೆಗಳ ನೋಂದಣಿ ಮತ್ತು ಡಿಜಿಟಲೀಕರಣದ ಪ್ರಕ್ರಿಯೆಗಳನ್ನು ವೇಗಗೊಳಿಸಲು ಕಾವೇರಿ ಸಹಾಯ ಮಾಡಿದೆ. ಆದರೆ ರಾಜ್ಯದ ಮೂಲೆಯಲ್ಲಿರುವ ಯಾವ ನೋಂದಣಾಧಿಕಾರಿಗಳ ಕಚೇರಿಯಲ್ಲೂ ಸಹ ಬಡಪಾಯಿ ಹಾಗೂ ಮಧ್ಯಮ ವರ್ಗದ ಜನರ ಕೆಲಸಗಳು ಸಲೀಸಾಗಿ ನಡೆಯುತ್ತಿಲ್ಲ. ಕಾರಣ ಆ ನೋಂದಣಾಧಿಕಾರಿಗಳ ಕಚೇರಿಯಲ್ಲಿರುವ ಭ್ರಷ್ಟ ಸಿಬ್ಬಂಧಿಗಳು, ಭ್ರಷ್ಟ ಅಧಿಕಾರಿಗಳು, ಕೆಚ್ಚಲಿಗೆ ಬಾಯಿ ಹಾಕಿ ರಕ್ತ ಹೀರುವ ಮಧ್ಯವರ್ತಿಗಳ ರೂಪದಲ್ಲಿರುವ ರಿಯಲ್ ಎಸ್ಟೇಟ್ ಏಜೆಂಟರುಗಳು. ಅದಕ್ಕಾಗಿಯೇ ಏನೋ ಯಾವ ಇಲಾಖೆಯಲ್ಲೂ ಇಲ್ಲದ ಆದಾಯ ರಾಜ್ಯದ ಎರಡೇ ಎರಡು ಇಲಾಖೆಗಳಲ್ಲಿ ಕಂಡುಬರುತ್ತದೆ. ಅದುವೇ ಒಂದು ಆರ್.ಟಿ.ಓ ಕಚೇರಿ, ಇನ್ನೊಂದು ನೋಂದಣಾಧಿಕಾರಿಗಳ ಕಚೇರಿ. ಹೌದು ಎಷ್ಟೇ ರಾಜ್ಯ ಸರ್ಕಾರ ಬದಲಾದರೂ ಸಹ, ಕೆಲವು ಆದೇಶಗಳು ಬದಲಾವಣೆಗಳೂ ಬಂದರೂ ಸಹ ಆನಲೈನ್ ಎಂದು ಬೊಬ್ಬೆಯೊಡೆದರೂ ಸಹ ಜನರ ಬಳಿ ಲಂಚದ ಹಣ ಕೀಳುವ ರಕ್ಕಸರೇ ಹೊಸ ಹೊಸ ಆಲೋಚನೆಗಳಿಂದ ಸೃಷ್ಠಿಯಾಗಿ, ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಾರೆ. ಇಂತಹ ಅಧಿಕಾರಿಗಳಲ್ಲಿ ಒಂದೊಳ್ಳೆ ಉದಾಹರಣೆ ಎಂದರೆ, ದಾವಣಗೆರೆ ಜಿಲ್ಲೆಯ ಮಾಜಿ ಉಪ ನೋಂದಣಾಧಿಕಾರಿ ಹೇಮೇಶ (ಪ್ರಸ್ತುತ ಎನ್.ಆರ್.ಪುರ ಉಪನೋಂದಣಾಧಿಕಾರಿ)… ಹಾಗೂ ಈಗ ಹರಿಹರ ತಾಲ್ಲೂಕು ಉಪನೋಂದಣಾಧಿಕಾರಿಯಾಗಿರುವ ನಾಗರಾಜ್.
ಪ್ರತಿ ಫೈಲ್‌ಗೆ ಸಹಿ ಹಾಕಲು ಹೆಚ್ಚುವರಿ ಹಣ ಪಡೆಯುವ ಹರಿಹರದ ಉಪನೋಂದಣಾಧಿಕಾರಿ ನಾಗರಾಜ್ … ತಾನೇ ಸತ್ಯಹರಿಶ್ಚಂದ್ರನ ಮೊಮ್ಮೊಗನಂತೆ ಬಿಲ್ಡಪ್ ಕೊಡ್ತಾನೆ, ಈ ಕಳ್ಳ ಫಕೀರ ದಿನಕ್ಕೆ ಸಾವಿರಾರು ರೂಗಳ ಲಂಚದ ಹೇಸಿಗೆಗೆ ಕೈ ಹಾಕಿ ಮುಕ್ಕುವ ಇವನು ನೆಟ್ಟಗೆ ತನ್ನ ಕಚೇರಿಯ ಅಂದರೆ ಹರಿಹರ ಉಪನೋಂದಣಾಧಿಕಾರಿ ಕಚೇರಿ ಹೊರಗಡೆಯ ಬಾಗಿಲ ತೆರೆಯುವ ವ್ಯೆವಸ್ಥೆ ಮಾಡಿಲ್ಲ. ಅಲ್ಲದೇ ಜನರಿಗೆ ಇದುವೇ ಉಪನೋಂಣಾಧಿಕಾರಿಗಳ ಕಚೇರಿ, ಇಲ್ಲಿ ಹೋದರೆ ನಮ್ಮ ಸ್ವತ್ತಿಗೆ ಸಂಬಂದಪಟ್ಟ ಕೆಲಸ ಕಾರ್ಯಗಳು ನಡೆಯುತ್ತೆ ಎಂಬ ಭಾವನೆ ಮೂಡಿಸುವಂತಹ ಸಾರ್ವಜನಿಕರಿಗೆ ಕಾಣುವಂತಹ ದೊಡ್ಡದಾದ ನಾಮಫಲಕವೇ ಇಲ್ಲ. ಇನ್ನು ದೊಡ್ಡದಾಗಿ ಹರಿಹರ ಅಭಿವೃದ್ಧಿ ಮಾಡುವುದು ನಾವೇ ಎಂದು ಜಂಬ ಕೊಚ್ಚಿಕೊಳ್ಳುವ ಬಿ.ಜೆ.ಪಿ ಶಾಸಕರಾದ ಬಿ.ಪಿ ಹರೀಶ್ ಅವರಿಗೆ ಕಣ್ಣಿಗೆ ಬಿದ್ದಿದಿಯೋ ಇಲ್ಲವೋ ಗೊತ್ತಿಲ್ಲ. ಈ ಅಲಾಲ್‌ಟೋಪಿ, ಕಳ್ಳ ಫಕೀರ ರಾಜ್ಯ ಸರ್ಕಾರ ಹೊರಡಿಸಿರುವ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಅಭಿಯಾನದಡಿ ರೂಪಿಸಿರುವ ಎಲ್ಲಾ ಸರ್ಕಾರಿ ಕಚೇರಿಯ ಸಿಬ್ಬಂಧಿಗಳು ಮತ್ತು ನೌಕರರು ಕಡ್ಡಾಯವಾಗಿ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಧರಿಸಬೇಕು ಎಂದು ತಿಳಿಸಿದರೆ, ಇವನು ಏಕೋ ಇವರಪ್ಪನ ಮನೆಯಲ್ಲಿ ಕೆಲಸ ಮಾಡುವವರ ತರಹ, ಹಿಟ್ಲರ್ ತರಹ ಮುಖ ಸಿಡ್ರಿಸಿಕೊಂಡು, ನಾವು ಹಾಕೋಲ್ಲ, ನಮಗೆ ಇಲಾಖೆಯಿಂದ ಏನು ಟ್ಯಾಗ್ ಕಳಿಸಿಲ್ಲ, ನೀನು ಏನ್ ಮಾಡಿಕೊಳ್ತಿಯೋ ಮಾಡ್ಕೋ, ನನಗೆ ಗೊತ್ತಿದೆ ಎಂದು, ಇವನ ಗಜನಿಂಬೆಹಣ್ಣಿನ ಗಾತ್ರದ ಕುಂಡಿಯ ತೋರಿಸಿಕೊಂಡು ಕಚೇರಿ ಸಮಯ ಮುಗಿಯದೇ ಇದ್ದರು ಮಾತನಾಡದೆ ಎದ್ದು ಹೋಗ್ತಾನೆ. ಇಂತಹ ಬೇಜಾವಾಬ್ದಾರಿ ನಾಲಾಯಕ್, ಸಾರ್ವಜನಿಕರಿಗೆ ಸ್ಪಂಧಿಸಿದ, ಸಾರ್ವಜನಿಕರ ಕಣ್ಣೀಗೆ ಬೀಳದ ಕಚೇರಿ ನಡೆಸುತ್ತಿರುವ ಆರಾಮಿಕೋರ, ಭ್ರಷ್ಟ ಹರಿಹರ ತಾಲ್ಲೂಕು ಉಪನೋಂದಣಾಧಿಕಾರಿ ಕಚೇರಿಗೆ ಅವಶ್ಯಕತೆಯಿಲ್ಲ. ಇಂತಹ ಮೂಢ-ಮೂರ್ಖ ಶಿಖಾಮಣಿಗಳ ಬಗ್ಗೆ ನಮ್ಮ ಪತ್ರಿಕೆ ಸಂಪಾದಕರು ಪತ್ರಿಕೆಯಲ್ಲಿ ಸುದ್ಧಿ ಮಾಡಿರುವುದು ಬೇಕಾಬಿಟಿಗಾಗಿಯಲ್ಲ, ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಜಿಲ್ಲಾ ನೋಂದಣಾಧಿಕಾರಿಗಳು ಪತ್ರಿಕೆ ಓದುವ ಗೀಳು ಇಟ್ಟುಕೊಂಡು ಇಂತಹ ಭ್ರಷ್ಟರ ಬಗ್ಗೆ ನಿರ್ದಾಕ್ಷೀಣ್ಯ ಕ್ರಮ ಜರುಗಿಸಬೇಕೆಂದು. ಆದರೆ ಜಿಲ್ಲಾ ನೋಂದಣಾಧಿಕಾರಿಗಳು ಹಮ್ ಸಾಥ್ ಸಾಥ್ ಹೈ ಸಿನಿಮಾವನ್ನು ಚೆನ್ನಾಗಿ ನೋಡಿದ್ದಾರೆ ಅನಿಸುತ್ತೆ, ಯಾವುದೇ ಅಧಿಕಾರಿಯ ಬಗ್ಗೆ ದೂರು ನೀಡಿದರೂ ಸಹ ಮೂಕ ಪ್ರೇಕ್ಷಕರಂತೆ ಮೂಕರಾಗಿಯೇ ಇದ್ದು, ಮೂರ್ಖ ಶಿಖಾಮಣಿ ನೋಂದಣಾಧಿಕಾರಿಗಳಿಗೆ ಸಾಥ್ ನೀಡುತ್ತ, ಏನ್ ಭಯಪಡಬೇಡಿ ನಾನಿದ್ದೀನಿ ಎಂದು ಹೇಳುತ್ತಾರೆ ಅನಿಸುತ್ತೆ. ಇಲ್ಲಪ್ಪ ನಾವು ಯಾರಿಂದಲೂ ಹೇಸಿಗೆಯನ್ನ ಹಂಚಿಕೊಂಡಿಲ್ಲ, ನಾವು ನಿಷ್ಠಾವಂತ ಅಧಿಕಾರಿ, ಸರ್ಕಾರಿ ಸಂಬಳವನ್ನ ಅಷ್ಟೇ ಪಡೆದುಕೊಂಡು ಜೀವನ ಸಾಗಿಸುತ್ತಿರುವುದು, ಅಲ್ಲಾಹ್ ಮೇಲಾಣೆ ಅಂತ ತಮ್ಮ ದೇವರು ಮೆಚ್ಚುವಂತೆ ಹರಿಹರ ಉಪನೋಂದಾಣಾಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಿ ಆಗ ನಾವು ಜಿಲ್ಲಾ ನೋಂಧಣಾಧಿಕಾರಿಗಳನ್ನು ಒಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ, ಎಲ್ಲರಂತೆ ಇವರು ಸಾಥ್ ಸಾಥ್ ಜೋಡೋ ಮಾಡುವವರು ಎಂದು ಅರ್ಥೈಸಿಕೊಳ್ಳುತ್ತೇವೆ.
(ಮುಂದಿನ ಸಂಚಿಕೆಯಲ್ಲಿ ಹರಿಹರ ಉಪನೋಂದಣಾಧಿಕಾರಿಯ ಲಂಚದಾಹ….ನಿರೀಕ್ಷಿಸಿ?.)
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು ದಾವಣಗೆರೆ,