ಕೇಂದ್ರ ರೈಲ್ವೇ ಇಲಾಖೆಗೆ ಸುಳ್ಳು ಮಾಹಿತಿಗಳ ನೀಡಿ, ಪಿಂಚಣಿ ಪಡೆಯುತ್ತಿರುವ ಜಬರ್ದಸ್ತ್ ಅಜ್ಜಿ
ಲಂಚದ ಹಣಕ್ಕೆ ಮಾರುಹೋಗಿ ಸುಳ್ಳು ದಾಖಲೆ ನೀಡಿದ ಆನಗೋಡು ನಾಡಕಚೇರಿ

ದಾವಣಗೆರೆ : ಹರಿಹರ ತಾಲ್ಲೂಕು, ಕಸಬಾ ಹೋಬಳಿಯ ಅಮರಾವತಿ ಗ್ರಾಮದ ವೀರಶೈವ ಲಿಂಗಾಯಿತ ಸಮುದಾಯದ ಬಸಪ್ಪ ಕರೂರು (ಪೌತಿ) ಎಂಬುವವರು ಈ ಹಿಂದೆ ಕೇಂದ್ರ ಸರ್ಕಾರದ ಮೈಸೂರು ವಿಭಾಗದ ರೈಲ್ವೆ ಇಲಾಖೆಯ ಪ್ರಮುಖ ಅಂಗವಾದ CEMTEX (Central Magnetic Tape Exchange) DEPARTMENT,, ಅಂದರೆ ಕೇಂದ್ರ ಆಯಸ್ಕಾಂತ ಸುರುಳಿ ತಯಾರಿಕಾ ಘಟಕದಲ್ಲಿ ನೇಮಕಾತಿಗೊಂಡಿದ್ದು, ಅಲ್ಲಿಂದ ಬಸಪ್ಪ ಕರೂರು ಎಂಬುವವರು ಜೀವನ ಸಾಗಿಸಿಕೊಂಡಿದ್ದು, ಗಿರಿಯಮ್ಮ ಎಂಬುವವರನ್ನು ವಿವಾಹವಾಗಿದ್ದು, ಇವರಿಗೆ ಗುರುಶಾಂತಮ್ಮ, ಚನ್ನಬಸಮ್ಮ, ಸಿದ್ದಮ್ಮ , ಗಂಗಮ್ಮ, ಫಕೀರಪ್ಪ, ಸಿದ್ದಲಿಂಗಪ್ಪ, ದೇವೆಂದ್ರಪ್ಪ, ಚಂದ್ರಪ್ಪ, ಷಣ್ಮುಖಪ್ಪ, ಗೌರಮ್ಮ ಎಂಬ ಮಕ್ಕಳಿದ್ದು, ಅದರಲ್ಲಿ ಸಿದ್ದಮ್ಮ ಕೋಂ ಬಸಪ್ಪ(ಹೆಚ್ ಕಲ್ಪನಹಳ್ಳಿ ವಾಸ) ಹಾಗೂ ಫಕೀರಪ್ಪ (ಅಮರಾವತಿ ವಾಸ) ಎಂಬುವವರು ತಮ್ಮ ಮಕ್ಕಳೊಂದಿಗೆ ಸೇರಿ ಕೇಂದ್ರ ಸರ್ಕಾರಕ್ಕೆ ಸುಳ್ಳು ಮಾಹಿತಿಗಳ ನೀಡಿ, ಪಿಂಚಣಿ ಹಣವನ್ನು ಪಡೆಯುತ್ತ ರಾಷ್ಟ್ರದ್ರೋಹ ಬಗೆದಿದ್ದಾರೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ, ಬಸಪ್ಪ ಕರೂರು ಎಂಬುವವರು ಸರಿ-ಸುಮಾರು ೩೦-೪೦ ವರ್ಷಗಳ ಹಿಂದೆಯೇ ಮರಣ ಹೊಂದಿದ್ದು, ಇವರ ಧರ್ಮಪತ್ನಿ ಗಿರಿಯಮ್ಮನೂ ಸಹ ಮರಣ ಹೊಂದಿದ್ದು, ಅಮರಾವತಿಯ ಬಸಪ್ಪ ಕರೂರು ಅವರ ಮಗ ಫಕೀರಪ್ಪ ಮತ್ತು, ಆತನ ಸಹೋದರಿಯಾದ ಸಿದ್ದಮ್ಮ ಕೋಂ ಬಸಪ್ಪ ( ಹೆಚ್ ಕಲ್ಪನಹಳ್ಳಿ ವಾಸ) ನವರ ಕಿರಿಯ ಮಗ ಯೋಗೇಶ್ ಎಂಬುವವನು ಸೇರಿ, ಬಸಪ್ಪ ಕರೂರು ಎಂಬುವವರಿಗೆ ಸಿದ್ಧಮ್ಮ ಎಂಬುವವರು ಮಗಳಾಗಿದ್ದು, ಮಗಳನ್ನೇ ಧರ್ಮಪತ್ನಿಯನ್ನಾಗಿಸಿ ಕೇಂದ್ರ ಸರ್ಕಾರದ ಪಿಂಚಣಿಯನ್ನು ನಿಲ್ಲದಂತೆ ಯೋಗೇಶ್ ಮತ್ತು ಫಕೀರಪ್ಪ ಸೇರಿ ಸಿದ್ದಮ್ಮ ಕೋಂ ಬಸಪ್ಪ ಎಂಬುವವರ ಹೆಸರಿಗೆ ಹರಿಹರದ ಪಿ.ಬಿ ರಸ್ತೆಯ ಬ್ರಾಂಚ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಬ್ಯಾಂಕನಲ್ಲಿ ದಿನಾಂಕ ೨೬-೦೯-೧೯೯೮ ರಿಂದ ಬ್ಯಾಂಕ್ ಖಾತೆಯ ಸೃಜಿಸಿ, ತಿಂಗಳು – ತಿಂಗಳು ಕೇಂದ್ರ ಸರ್ಕಾರದ ಹಣವನ್ನು ಸುಳ್ಳು ಮಾಹಿತಿಗಳೊಂದಿಗೆ ಪಡೆಯುತ್ತಿದ್ದಾರೆ.
ಬ್ಯಾಂಕ್ ಖಾತೆ ಸಂಖ್ಯೆ : ೧೦೬೧೧೩೯೫೯೧೧ (Sಡಿ.ಅiಣizeಟಿ). ರೆಗ್ಯಲರ್ ಫೆನಸ್ಷನಿಯರ್ಸ್ ಖಾತೆ ಮಾಡಿಕೊಂಡು, ಇದಕ್ಕೆ ಖುದ್ಧುಯೋಗೇಶ್ ಎಂಬುವವನ ಹೆಸರನ್ನೇ ನಾಮಿನಿ ಮಾಡಿದ್ದು, ಕೇಂದ್ರ ಸರ್ಕಾರದ ಹಣವನ್ನು ತಾನೇ ಬಿಡಿಸಿಕೊಳ್ಳುತ್ತಿದ್ದಾನೆ. ಇದಕ್ಕೆ ಪುಷ್ಠಿ ನೀಡುವಂತೆ ಹೆಚ್ ಕಲ್ಪನಹಳ್ಳಿ ನಿವಾಸಿಯಾಗಿರುವ ಸಿದ್ದಮ್ಮ ಕೋಂ ಬಸಪ್ಪ ಎಂಬುವವರ ಬ್ಯಾಂಕ್ ಖಾತೆಯ ವಹಿವಾಟಿನ ಸಂಪೂರ್ಣ ಮಾಹಿತಿಯ ನಕಲು ಪ್ರತಿಗಳೇ ಸಾಕ್ಷಿ. ಈ ಒಂದು ರಾಷ್ಟ್ರದ್ರೋಹದ ಅಪರಾಧವನ್ನು ನಮ್ಮ ಪತ್ರಿಕಾ ಕಚೇರಿಗೆ ಮತ್ತು ಸಂಘಟನಾ ಕಚೇರಿಗೆ ಸ್ವಂತ ಮಗನಾದ ಹೆಚ್ ಕಲ್ಪನಹಳ್ಳಿ ನಿವಾಸಿಯಾಗಿರುವ ಅಜ್ಜಪ್ಪ ಬಿನ್ ಬಸಪ್ಪ, ಎಂಬುವವರು, ನೊಂದುಕೊಂಡು, ತಮ್ಮ ಸ್ವಂತ ಕಿರಿಯ ಸಹೋದರ ಯೋಗೇಶ್ ಮತ್ತು ಸೋದರ ಮಾವ ಫಕೀರಪ್ಪ ಎಂಬುವವರ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ದಿನಾಂಕ ೨೭-೧೧-೨೦೧೮ರಂದು ಆನಗೋಡು ಹೋಬಳಿ ದಾವಣಗೆರೆ ತಾಲ್ಲೂಕು ತಹಸೀಲ್ದಾರ್ ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಲಂಚದ ಹಣಕ್ಕೆ ಮಾರು ಹೋಗಿ ಸುಳ್ಳು ದಾಖಲೆಯನ್ನ ಅಂದರೆ ಜೀವಂತ ದೃಢೀಕರಣ ಪ್ರಮಾಣಪತ್ರವನ್ನು ಮಹಜರ್ ಮಾಡದೆ ನೀಡಿರುವುದು ಕಂಡುಬಂದಿದೆ. (ನಾಳೆಯ ಸಂಚಿಕೆಯಲ್ಲಿ ಕರಾಳ ಮುಖ ನಿರೀಕ್ಷಿಸಿ…)ವರದಿ : ಸೂರ್ಯಪ್ರಕಾಶ್.ಆರ್,