Davanagere

ಪಾಲೀಕೆ ಆಯುಕ್ತರು ಡೇರಿಂಗ್ ಕಮೀಷನರೇ ಆಗಿದ್ದರೇ… ಪುಷ್ಪಾ ಮಹಾಲಿಂಗಪ್ಪ ಶಾಲೆ ಕಟ್ಟಡ ತೆರವುಗೊಳಿಸಲಿ, ಇಲ್ಲವೇ ತಮ್ಮ ಸಿಬ್ಬಂಧಿಗಳು ಭ್ರಷ್ಟರೆಂದು ಒಪ್ಪಿಕೊಳ್ಳಲಿ

ನಾಳೆ ಪಾಲಿಕೆಯಲ್ಲಿರುವ ಸತ್ಯ ಹರಿಶ್ಚಂದ್ರ ಇಂಜಿನೀಯರುಗಳಿಗೆ ಪತ್ರಿಕಾ ತಂಡದಿಂದ ಸವಾಲ್ ;

ದಾವಣಗೆರೆ: ಈ ಹಿಂದೆ ನಮ್ಮ “ಕದಂಬ ಕೇಸರಿ” ಕನ್ನಡ ದಿನಪತ್ರಿಕೆಯಲ್ಲಿ ಒಂದು ಹೆಸರಾಂತ ಕಾಲೇಜಿನ ಸರ್ಕಾರಕ್ಕೆ ವಂಚಿಸಿರುವ ಕರಾಳಮುಖವನ್ನು ಸುದ್ಧಿಯ ಮೂಲಕ ಬಿತ್ತರಿಸಿದ್ದು, ಇಲ್ಲಿಯವರೆಗೂ ಅಂದರೆ ದಿನಾಂಕ 22-05-2023ರಂದು ಪಾಲಿಕೆಗೆ ನೀಡಿದ ದೂರಿನಿಂದ ಹಿಡಿದು, ಮಾನ್ಯ ಮತ್ರಿಗಳ ಕಚೇರಿಗೆ ದಿನಾಂಕ 13-07-2023ರಂದು ನೀಡಿದ ದೂರಿನವರೆಗೂ ಹಾಗೂ ವರದಿಗಾರರ ಕೂಟದಲ್ಲಿ ನಡೆಸಿದ ಸುದ್ಧಿಘೋಷ್ಠಿಯವರೆಗೂ ದೂರ ನೀಡಿದರೂ ಸಹ ಯಾವುದೇ ಕ್ರಮ ಜರುಗದೇ ಇರುವುದು ನಮ್ಮ ದೇಶದ ಕಾನೂನಿ ಬಗ್ಗೆ ಬೇಸರ ತರಿಸಿದಂತಾಗಿದೆ. ಅನಧಿಕೃತವಾಗಿ ತಮ್ಮ ತಮ್ಮ ಸ್ವಾರ್ಥಪರ ಕೆಲಸಗಳಿಗೆ ದುರುಪಯೋಗಪಡಿಸಿಕೊಂಡು, ಪಾಲಿಕೆಯಿಂದ ಮಾಡಿರುವ ರಾಜಕಾಲುವೆಯ ಮೇಲೆ ತಮ್ಮ ಶಾಲೆಯ ಕಟ್ಟಡವನ್ನು ಹಾಗೂ ಕಾಂಪೌಂಡನ್ನು ಕಟ್ಟಿಕೊಂಡಿದ್ದಾರೆ. ಹಾಗೂ ಬಪರ್ ಝೋನ್ ಎಂದು ಗುರುತಿಸಿರುವ ಅದಕ್ಕಾಗಿಯೇ ಬೆಸ್ಕಾಂ ಇಲಾಖೆಯವರು ಹಾಕಿರುವ ಹೈಟೆನ್ಸನ್ (ಬಾರಿ ವಿದ್ಯುತ್ ಪ್ರಸರಣ ತಂತಿಗಳ) ಲೈನ್ಗಳ ಕೆಳಗೆ ಯಾವುದೇ ರೀತಿಯ ಕಟ್ಟಡವನ್ನು ಕಟ್ಟಬಾರದೆಂಬ ನಿಯಮವಾಳಿಗಳಿದ್ದರೂ ಸಹ ಹೆಸರಾಂತ ಶಾಮನೂರು ಎಜ್ಯೂಕೇಷನ್ ಸಂಸ್ಥೆ (SET) ರವರು ತಮ್ಮ ಶಾಮನೂರು ಪುಷ್ಪಾಮಹಾಲಿಂಗಪ್ಪ ಹಿರಿಯ-ಕಿರಿಯ ಪ್ರಾಥಮಿಕ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳ ಕಟ್ಟಡವನ್ನು ಕಟ್ಟಿಕೊಂಡಿದ್ದು , ಈ ಸಂಸ್ಥೆಯ ಆಡಳಿತ ಮಂಡಳಿಯಾಗಲಿ, ಸಂಸ್ಥೆಯ ಸಿಬ್ಬಂಧಿಗಳಾಗಲಿ ಯಾವೊಬ್ಬ ಮಕ್ಕಳಿಗೂ ಸಹ ಉಚಿತ ಶಿಕ್ಷಣ ನೀಡುತ್ತಿಲ್ಲ, ಬದಲಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಆರಂಭಿಕ ಶುಲ್ಕವೇ 55000/- ರೂಗಳಿಂದ ನಿಗಧಿ ಪಡಿಸಿದ್ದು, ಇನ್ನು ಇಲ್ಲಿಯೇ ರೆಸಿಡೆನ್ಸಿಯಲ್ ವಿದ್ಯಾರ್ಥಿಗಳಾದ್ದರೆ ಅವರಿಂದ ವರ್ಷಕ್ಕೆ 1 ಲಕ್ಷ 80000/- ಸಾವಿರಗಳಿಂದ 2 ಲಕ್ಷದವರೆಗೂ ಶುಲ್ಕ ಪಡೆದುಕೊಳ್ಳುತ್ತಾರೆ. ಇಂತಹ ಶುಲ್ಕ ಪಡೆದುಕೊಳ್ಳುವ ಸಂಸ್ಥೆಯು ಮಾತ್ರ ಸರ್ಕಾರ ನಿಗಧಿ ಪಡಿಸಿರುವ ರಾಜಕಾಲುವೆ / ಬಫರ್ ಝೋನ್ ಪ್ರದೇಶಗಳಲ್ಲಿ ತಮ್ಮ ಶಾಲೆ ಕಟ್ಟಡವನ್ನು ಕಟ್ಟಿಕೊಂಡು ಕರ್ನಾಟಕ ಬ್ಯಾಂಕ್ ಹಾಗೂ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಗಳಲ್ಲಿ ಕೋಟಿಗಟ್ಟಲೇ ಹಣವನ್ನು ಸರ್ಕಾರದ ಪ್ರದೇಶಗಳ ತೋರಿಸಿ ಪಡೆದುಕೊಂಡು ತಮ್ಮ ಲಕ್ಸರಿ ಲೈಫ್ ನಡೆಸಿಕೊಂಡು, ಜನರ ಮುಂದೆ ಸತ್ಯ ಹರಿಶ್ಚಂದ್ರರವರ ತರಹ ಕೋಟಿಗಟ್ಟಲೇ ಹಣವನ್ನು ಹುಟ್ಟಿನಿಂದಲೇ ಪಡೆದವರಂತೆ ನಟಿಸುತ್ತಿದ್ದಾರೆ.
ಜನರಿಗೇನೋ ಇವರದೇ ಆಸ್ತಿಯೆಂಬ ಕಲ್ಪನೆಯ ಮೂಡಿಸಿ ಬ್ಯಾಂಕುಗಳಲ್ಲಿ ಕೋಟಿಗಟ್ಟಲೇ ಹಣವನ್ನು ಸಾಲ ಪಡೆದು ಅದರ ಜೊತೆ ವಿದ್ಯಾರ್ಥಿಗಳ ಪೋಷಕರಿಂದಲೂ ಬೋಧನಾ ಶುಲ್ಕ ಪಡೆದು ಸರ್ಕಾರಕ್ಕೆ ಮತ್ತು ಪಾಲಿಕೆಗೆ ಪಂಗನಾಮ ಹಾಕುತ್ತಿದ್ದಾರೆ. ಇದರ ಬಗ್ಗೆ ಪಾಲಿಕೆಯ ಆಯುಕ್ತರಿಂದ ಹಿಡಿದು ಬಿಲ್ಡಿಂಗ್ ಲೈಸೆನ್ಸ ನೀಡುವ ಕಚೇರಿ ಸಿಬ್ಬಂಧಿಗಳವರೆಗೂ ಹಾಗೂ ಕಾರ್ಯಪಾಲಕ ಅಭಿಯಂತರರವರೆಗೆ ದೂರು ನೀಡಿದರೂ ಸಹ ಪ್ರತಿಯೊಬ್ಬ ಕರ್ತವ್ಯಲೋಪವೆಸಗುವ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಜರುಗಿಸದೆ ಇದ್ದಿದ್ದರಿಂದ ನಮ್ಮ ಪತ್ರಿಕಾ ತಂಡ ನಮ್ಮ ಪತ್ರಿಕೆಯಲ್ಲಿ ಪಾಲಿಕೆಯ ಕಾರ್ಯ ವೈಖರಿಯ ಬಗ್ಗೆ ಸುದ್ಧಿಯ ಮೇಲಿಂದ ಮೇಲೆ ಪ್ರಸಾರ ಮಾಡಿದ್ದಕ್ಕೆ ಕೆಲವು ಕಿಡಿಗೇಡಿ ಸಿಬ್ಬಂಧಿಗಳು ಸಂಪಾದಕರ ಮೇಲೆ ಕಿಡಿಕಾರಿಕೊಂಡು, ಮನಸ್ಸಿಲ್ಲದೆ ಕಾಲೇಜಿನ ಾಡಳಿತ ಮಂಡಳಿಗೆ ಕೇವಲ ನೋಟೀಸುಗಳನ್ನು ವರ್ಷದಿಂದ ವರ್ಷಕ್ಕೆ ತಳ್ಳುತ್ತಾ ಬಂದಿದ್ದಾರೆ. ಕೊನೆಯದಾಗಿ ಮೊನ್ನೆ ಪತ್ರಿಕೆಯ ಸಂಪಾದಕರಿಗೆ ಪಾಲಿಕೆಯು ದಿನಾಂಕ 08-08-2024ರಂದು “ ಕರ್ನಾಟಕ ಪೌರನಿಗಮಗಳ ಅಧಿನಿಯಮ-1976ರ ಕಲಂ 321(3)ರ ಅನುಸಾರವಾಗಿ ಅಂತಿಮ ಆದೇಶವನ್ನು ಹೊರಡಿಸಿ, ಸಂಪಾದಕರಿಗೆ ನಾವು ಸತ್ಯ ಹರಿಶ್ಚಂದ್ರರೂ, ನಾವು ಯಾವುದೇ ಕಾರಣಕ್ಕೂ ಕರ್ತವ್ಯಲೋಪವೆಸಗೋಲ್ಲ, ಯಾರೇ ದೊಡ್ಡವರೇ ಆಗಲಿ ಸೂಕ್ತ ಕ್ರಮ ಜರುಗಿಸುತ್ತೇವೆ ನಾವು ನಮ್ಮ ಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿ, ನೋಡಿ ಮುಂದಿನ ತಿಂಗಳು ಅಂದರೆ ದಿನಾಂಕ 10-09-2024ರಂದು ಅಂದರೆ ನಾಳೆಯೇ ಬೆಳಿಗ್ಗೆ 8-00 ಗಂಟೆಗೆ ಅನಧಿಕೃತವಾಗಿ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಹೆಸರಾಂತ ಪುಷ್ಪಾ ಮಹಾಲಿಂಗಪ್ಪ ಶಾಲೆ, ಮತ್ತು ಅದರ ಇನ್ನೊಂದು ಶಾಲೆ ವಿದ್ಯಾ ವೈಭವ ಶಾಲೆ, ಮಹಾಲೀಂಗಪ್ಪನವರ ಸಹೋದರ ಸರ್ಕಾರಿ ಶಿಕ್ಷಕರಾಗಿರುವ ಭೀಮಪ್ಪನವರ ಮನೆಯ ಗೋಡೆಗಳನ್ನು ತೆರವುಗೊಳಿಸಿಯೇ ಬಿಡುತ್ತೇವೆ ಎಂದು ಪಾಲಿಕೆಯ ಅಭಿಯಂತರರು ಮತ್ತು ಯೋಜನಾ ಅಧಿಕಾರಿಗಳು ತಿಳಿಸಿದ್ದಾರೆ.

filter: 0; fileterIntensity: 0.0; filterMask: 0; module:1facing:0;
hw-remosaic: 0;
touch: (-1.0, -1.0);
modeInfo: ;
sceneMode: Night;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;

ಆಯುಕ್ತರು ನಿಜವಾಗಿ ಡೇರಿಂಗ್ ಕಮೀಷನರೇ ಆಗಿದ್ದರೇ….
ಇದು ನಾಳೆ ಮಂಗಳವಾರ ಪಾಲಿಕೆಯ ಆಯುಕ್ತರು ನಿಜವಾಗಿ ಡೇರಿಂಗ್ ಕಮೀಷನರೇ ಆಗಿದ್ದರೇ, ಸಿಬ್ಬಂಧಿಗಳು ಪ್ರಮಾಣಿಕ ಸತ್ಯಾಹರಿಶ್ಚಂದ್ರರೇ ಆಗಿದ್ದರೇ ನೋಟೀಸ್ ನೀಡಿದಂತೆ ನಡೆದುಕೊಳ್ಳಲಿ, ಇಲ್ಲವೆಂದರೆ ನಗರದಲ್ಲಿ ದುರ್ಬಲ ವರ್ಗದ, ಬಡತನ ರೇಖೆಗಿಂತ ಕಡಿಮೆಯಿರುವ ಜನ ಸಾಮಾನ್ಯರು ಏನಾದರೂ ಖಾಲಿ ಇರುವ ಜಾಗಗಳಲ್ಲಿ ತಮ್ಮ ಕುಟುಂಬದವರೊಂದಿಗೆ ಜೀವನಕ್ಕೆ ಗುಡಿಸಲು ಹಾಕಿಕೊಂಡರೆ, ತಕ್ಷಣ ದೊಡ್ಡ ದೊಡ್ಡ ಖದೀಮ ಕಳ್ಳರು ಪಾಲಿಕೆಯಿಂದ ಹಿಡಿದು ಜಿಲ್ಲಾಡಳಿತ, ಶಾಸಕರ ಕಿವಿಯವರೆಗೂ ಸುದ್ಧಿಯ ಮುಟ್ಟಿಸಿ ಅಲ್ಲಿಂದ ತಕ್ಷಣವೇ ಖಾಲಿ ಮಾಡಿಸಿ, ಸರ್ಕಾರಿ ಸೌಮ್ಯಕ್ಕೇ ಸೇರಿದ ಸ್ವತ್ತು ಎಂದು ಬೋರ್ಡನ್ನು ತಗಲು ಹಾಕಿ ಬಿಡುತ್ತಾರೆ. ಅದೇ ದೊಡ್ಡ ದೊಡ್ಡ ತಿಮಿಂಗಿಲಗಳು ಜೀವನಕ್ಕಿರಲಿ ಸ್ವಾಮಿ ತಮ್ಮ ದುಡಿಮೆಗಾಗಿ ಲಕ್ಷ ಲಕ್ಷ ಹಣ ಮಾಡುವುದಕ್ಕಾಗಿ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ಜಾಗವನ್ನು ಕಬಳಿಸಿ ವರುಷವಲ್ಲ ಅವರ ಜನುಮವೇ ಮುಗಿಯುವುದಕ್ಕೆ ಬಂದರೂ ಸಹ ಅಲ್ಲಿಂದ ಅವರನ್ನು ಖಾಲಿ ಮಾಡಿಸುವುದಿರಲಿ, ಅವರಿಗೆ ಒಂದೇ ಒಂದು ನೋಟಿಸು ಕೊಡುವುದಕ್ಕೆ ಧೈರ್ಯವಿರುವುದಿಲ್ಲ. ಇದು ನಮ್ಮ ದೇಶದ ಸ್ಥಿತಿ, ಮೋದಿ ಬಂದರೂ ಗಾಂಧಿ ಬಂದರೂ ಅಷ್ಟೇ ಆಗಿದೆ. ಇದಕ್ಕೆ ಜ್ವಲಂತ ನಿದರ್ಶನವಾಗದಿರಲಿ ಎಂಬುದು ನಮ್ಮಯ ಪತ್ರಿಕೆಯ ಆಶಯವಾಗಿದೆ.
filter: 0; fileterIntensity: 0.0; filterMask: 0; module:1facing:0;
hw-remosaic: 0;
touch: (-1.0, -1.0);
modeInfo: ;
sceneMode: Night;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;

ಕಟ್ಟಡ ತೆರವುಗೊಳಿಸಲು ದೂರು ನೀಡಿದರೇ… ಪತ್ರಿಕೆಯ ಸಂಪಾದಕರಿಗೆ ಬೆದರಿಕೆ
ನಗರ ಭಾಗದಲ್ಲಿ ಹೆಸರು ಮಾಡಿರುವ ಒಂದು ದೊಡ್ಡ ಶಿಕ್ಷಣ ಸಂಸ್ಥೆಯು, ತಮ್ಮ ಸ್ವಾರ್ಥ ದುಡಿಮೆಗಾಗಿ ಪಾಲಿಕೆ ಮತ್ತು ದೂಢಾದಿಂದ ಲೇಔಟ್ ಪ್ಲಾನ್ ಇಟ್ಟುಕೊಂಡಿದ್ದರೂ ಸಹ ಅನಧಿಕೃತವಾಗಿ ಕಟ್ಟಡ ಕಟ್ಟಿಕೊಂಡಿದೆ. ಅಲ್ಲದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸುತ್ತೋಲೆಗಳ ಪ್ರಕಾರ ಅತಿ ಹೆಚ್ಚಿನ ಅಂದರೆ ಅಧಿಕ ಒತ್ತಡ ಪ್ರಸರಣ ಮಾರ್ಗಗಳ ಗೋಪುರಗಳ ಮಾರ್ಗಗಳಲ್ಲಿ ಯಾವುದೇ ರೀತಿಯ ಕಟ್ಟಡ, ಮನೆ ಕಟ್ಟುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ಅಲ್ಲಿಯ ಜಾಗವನ್ನು ಅತಿಕ್ರಮಿಸಿ ತಮ್ಮ ಸ್ವಂತ ದುಡಿಮೆಗೆ ದುರುಪಯೋಗ ಪಡಿಸಿಕೊಂಡು ಜೀವ ಹಾನಿ ತರುವುದು ಮತ್ತು ವಿದ್ಯುತ್ ಪೂರೈಕೆಗೂ ಆಡಚಣೆ ಮಾಡುವುದು, ಇಂಡಿಯನ್ ಎಲೆಕ್ಟ್ರಿಕ್ ಸಿಟಿ ಅಧಿನಿಯಮ-1956, ಇಂಡಿಯನ್ ಎಲೆಕ್ಟ್ರಿಕ್ ಸಿಟಿ ಆ್ಯಕ್ಟ್ 1910 ಮತ್ತು 2003ರನ್ವಯ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕರ್ನಾಟಕ ಪೌರ ಮಹಾನಗರಪಾಲಿಕೆಗಳ ಅಧಿನಿಯಮ 1976 ಹಾಗೂ ಮಹಾನಗರಪಾಲಿಕೆಗಳ ನಿಯಮ-1977 ರಂತೆ ಕಲಂ 233, 234241 ರಂತೆ, ಮಹಾನಗರಪಾಲಿಕೆಯ ಅನುಮತಿಯಿಲ್ಲದ್ಎ ಚರಂಡಿ ಮೇಲೆ ಕಟ್ಟಡಗಳನ್ನು ನಿರ್ಮಿಸುವುದು, ಚರಂಡಿಗಳ ಜೊತೆ ಸಂಪರ್ಕ ಸಾಧಿಸುವುದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಅಂತಹ ಅಪರಾಧವನ್ನು ಶ್ಯಾಮನೂರು ಎಜ್ಯುಕೇಸನಲ್ ಟ್ರಸ್ಟನ ಅಧೀನದಲ್ಲಿರುವ ಪುಷ್ಪಾ ಮಹಾಲಿಂಗಪ್ಪ ಶಿಕ್ಷಣ ಸಂಸ್ಥೆಯ ಮಾಲೀಕರು ಹಾಗೂ ಅವರ ಸಹೋದರರು ಕೃತ್ಯ ಎಸಗಿದ್ದಾರೆ. ಇದರ ಬಗ್ಗೆ ಪತ್ರಿಕೆಯಲ್ಲಿ ಸಂಪಾದಕರು ಸುದ್ಧಿ ಮಾಡಿದರೆ, ಕಾಲೇಜಿನ ಆಡಳಿತಾಧಿಕಾರಿ ಶ್ರೀಮಾನ್ ಮಹಾಲಿಂಗಪ್ಪನವರು ತಮ್ಮ ಹಣಬಲ ತೋರಿಸಿ ಸುಮ್ಮನಾಗುವಂತೆ ಮಾಡಲು ಪ್ರಯತ್ನಿಸಿ, ಅದ್ಯಾವುದೋ ವ್ಯೆಕ್ತಿಯಿಂದ ಹೇಳಿ ಕಳುಹಿಸಿದ್ದರೂ, ಅದಕ್ಕೆ ಜಗ್ಗದೆ ಸಂಪಾದಕರೂ ಹೈ ಕೋರ್ಟ್ ವರೆಗೂ ಮುನ್ನಡೆಸಿದಾಗ, ಶ್ರೀಮಾನ್ ಸಾಹೇಬರೂ ಇನ್ನೂ ದೂರ ಹೋಗಿ, ನಮ್ಮ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಯಕರುಗಳಿಗೆಯೇ ಸಂಪಾದಕರ ಬಗ್ಗೆ ಹೇಳಿ ಬಾಯಿ ಮುಚ್ಚಿಸಲು ಬೆದರಿಕೆಯ ಒಡ್ಡಿಸಿದ್ದರೂ ಸಹ ನಾಳೆಯ ಪಾಲಿಕೆಯ ಅಂತಿಮ ಆದೇಶದವರೆಗೂ ಸಂಪಾದಕರು ಯಾರಿಗೂ ಜಗ್ಗದೆ ಕಾನೂನು ಕ್ರಮ ಜರುಗಿಸುವಲ್ಲಿ ಸಫಲರಾಗಿದ್ದಾರೆ.
filter: 0; fileterIntensity: 0.0; filterMask: 0; module:1facing:0;
hw-remosaic: 0;
touch: (-1.0, -1.0);
modeInfo: ;
sceneMode: Night;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;

ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು

error: Content is protected !!