ಗುರುದಕ್ಷಿಣಿಗಾಗಿ ನನ್ನೆಲ್ಲಾ ಸ್ನೇಹಿತರೂ ಕೈಯ ಜೋಡಿಸಲಿ…. ..!!
ಇದುವೇ ಶಿಕ್ಷಕರ ದಿನಾಚರಣೆಗೆ ವಿದ್ಯಾರ್ಥಿಗಳಾಗಿ ನೀಡುವ ಕೊಡುಗೆ

ಇಂದು ನಮಗೆಲ್ಲ ಹುಟ್ಟಿನಿಂದ ಹಿಡಿದು ಸಾವಿನ ಕೊನೆಯ ಹಂತದವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ತಮ್ಮದೇ ಆದ ಜೀವನದ ಪಾಠಗಳನ್ನ, ಮೌಲ್ಯಗಳನ್ನ ತಿಳಿಸಿದ ಶಿಕ್ಷಕ ವೃಂದದವರ ದಿನಾಚರಣೆ. ಕೆಲವು ಶಿಕ್ಷಕರು ನಮಗೆ ತಾಯಿ ರೂಪದಲ್ಲಿ, ಸ್ನೇಹಿತರ ರೂಪದಲ್ಲಿ, ತಂದೆ ರೂಪದಲ್ಲಿ, ಬಂದು ಬಳಗದವರ ರೂಪದಲ್ಲಿ ಪಾಠಗಳ ಹೇಳಿದ್ದಾರೆ. ಆದರೆ ಜೀವನದ ಶೈಲಿ ಹೀಗೆ ಇರಬೇಕು, ಇದೇ ರೀತಿಯಲ್ಲಿ ನಾವುಗಳು ನಡೆಯಬೇಕು ಎಂಬುದನ್ನು ನಾಲ್ಕು ಗೋಡೆಗಳ ನಡುವೆ ಅದಕ್ಕೆ ಪಾಠಶಾಲೆ ಎಂಬ ಅಡಿಬರಹವನ್ನು ನೀಡಿ ಶಿಕ್ಷಣ ನೀಡಿದ್ದಾರೆ. ಅಂತಹ ಪಾಠಶಾಲೆ ಇಂದು ಅದೆಷ್ಟೋ ಮಹಾನ್ ವ್ಯೆಕ್ತಿಗಳಿಗೆ ಆಶ್ರಯ ತಾಣವಾಗಿ, ಗುರಿ ಮುಟ್ಟಿಸುವ ಗುರುಕುಲವಾಗಿದೆ. ಅಂತಹ ಗುರುಕುಲದ ಮಹಾದ್ವಾರವನ್ನು ನಾನು ಮೊನ್ನೆ ಹಾಗೆ ಸುಮ್ಮನೆ ನೋಡಿದಾಗ, ನನ್ನ ಅದೃಷ್ಟಕ್ಕೆ ನಾನು ಧನ್ಯವಾದ ಹೇಳಿದಾಗ ಅದು, ಸಹಜವಾಗಿ, ಸಂತೋಷದಿಂದ ಸಂತೋಷಪಟ್ಟಿದ್ದೇನೆ.
ನಾನು ಮೊನ್ನೆ ನಮ್ಮ ಪತ್ರಿಕಾ ತಂಡದ ಸ್ನೇಹಿತರ ಒಡಗೂಡಿ, ಕೆ.ಆರ್. ಮಾರ್ಕೆಟ್ ಒಳಗಿರುವ ನೇತಾಜಿ ಸುಭಾಷ್ ಚಂದ್ರಬೋಸ್ ಸರ್ಕಾರಿ ಪ್ರೌಢ ಶಾಲೆಯ ಗೋಡೆಗಳ ಮತ್ತು ನಾಮಫಲಕಗಳ ಅದ್ಭುತ ನೋಟವನ್ನು ನೋಡಲು, ನನಗೆ ಅದೇನೋ ಕೋಟಿ ನೆನಪುಗಳ ಪುಸ್ತಕವ ಹೊಂದಿರುವ ಗ್ರಂಥಾಲಯವ ಹೊಂದಿದ ಭಾವನೆ ಮೂಡಿತು. ಅದರಲ್ಲಿ ಕೆಲವು ಸುಂದರ ನೆನಪುಗಳ ಮೆಲುಕು ಹಾಕುತ್ತವೆ. ಅದರಲ್ಲಿಯೂ ಅಂದು ನಮ್ಮ ಶಾಲೆಯಲ್ಲಿ ಸರಾಗವಾಗಿ ತಮ್ಮ ಎರಡು ಕೈಗಳಿಂದ ಹಾರ್ಮೋನಿಯಮ್ ನುಡಿಸುತ್ತ ತಮ್ಮ ಅದ್ಭುತ ಧನಿಯೊಂದಿಗೆ ನಮಗೆಲ್ಲ ಸಂಗೀತ ಹೇಳಿಕೊಡುತ್ತಿದ್ದ, ಕಲ್ಲಪ್ಪ ಅರಳಿ ಗುರುಗಳ ಮಾತು ಮತ್ತು ಅಂದು ಭುಜಕ್ಕೆ ತಟ್ಟಿ ಮಾತನಾಡಿದ್ದ ಭಂಗಿಯಂತೆಯೇ ಮೊನ್ನೆಯೂ ನನ್ನ ಭುಜಕ್ಕೆ ಕೈ ಹಾಕಿ ಮಾತನಾಡಿದ ರೀತಿ ಏನೋ ಒಂಥರಾ ಮನಸ್ಸಿಗೆ ತಂಪು ಎರೆಚಿದಂತಾಯಿತು. ಅಷ್ಟೇ ಅಲ್ಲದೇ ನಮ್ಮ ಡಿಇಡಿ ತರಬೇತಿಯಲ್ಲಿ ಬೋಧನೆ ಮಾಡಿದ ವಸಂತಕುಮಾರಿ ಶಿಕ್ಷಕರೇ ನಮ್ಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಬಂದಿರೋದು ನನಗೆ ಎಲ್ಲಿಲ್ಲದ ಸಂತೋಷ ತರಿಸಿ, ನನಗೆ ಹಳೆಯ ನೆನಪುಗಳ ಮೆಲುಕ ಹಾಕುವಂತೆ ಮಾಡಿತು.
hw-remosaic: 0;
touch: (-1.0, -1.0);
modeInfo: ;
sceneMode: Auto;
cct_value: 0;
AI_Scene: (6, -1);
aec_lux: 0.0;
hist255: 0.0;
hist252~255: 0.0;
hist0~15: 0.0;
ಅಂದು ನಮ್ಮ ಶಾಲೆಯ ಮುಂಭಾಗದಲ್ಲಿ ನಾನು ನನ್ನ ಸ್ನೇಹಿತರು ಮತ್ತು ಕೆಲವು ತರಗತಿ ವಿದ್ಯಾರ್ಥಿನಿಯರು ಸೇರಿ ನಮ್ಮ ಅಂದಿನ ಶಿಕ್ಷಕರ ಜೊತೆ ಅದರಲ್ಲೂ ನಮ್ಮ ಮುದ್ದಿನ ಪಿಟಿ ಮಾಸ್ಟರ್‌ರವರ ಜೊತೆ ಸ್ವಚ್ಚತೆ ಕಾರ್ಯ ಇಂದಿಗೂ ನೆನಪಿದೆ. ನಮ್ಮ ಶಾಲೆಗೆ ಸೌಂದರ್ಯವೆಂದರೆ ಮೃದುವಾದ ಹಚ್ಚ ಹಸಿರಿನ ಹುಲ್ಲು, ಅಂದು ನಮ್ಮ ಸ್ನೇಹಿತರ ಜೊತೆಗೆ ಸೇರಿ ಹಾಕಿದ್ದ ಗಿಡ-ಮರಗಳು , ಆ ಗಿಡಗಳಿಗೆ ಈಶ, ಸೊಟ್ಟ ಬಸ್ಯಾ (ರಘು), ರೇಖಾ, ರಮ್ಯ, ರಶ್ಮೀ, ಇಬ್ರಾಹೀಂ, ಅರುಣ, ಮಿಥುನ, ಪವನ, ಸುಹೀಲ್, ವಿನಯ್, ಶಶಿ ಜೊತೆ ಜಗಳ ಮಾಡಿಕೊಂಡು, ಕಾಲೆಳೆದುಕೊಂಡು, ಕ್ವಾಟಲೆ-ಕೀಟಲೆ ಮಾಡಿಕೊಂಡು ಹಾಕುತ್ತಿದ್ದ ನೀರಿನ ಜಗಳಗಳು ಇಂದಿಗೂ ನಮ್ಮ ತರಗತಿಯಿಂದ ನೋಡಬಹುದಾಗಿದೆ! ಇದು ನನ್ನನ್ನು ಅಷ್ಟೇ ಕೇವಲ ಭಾವಪರವಶಗೊಳಿಸದೆ, ನನ್ನ ಸ್ನೇಹಿತರೂ ಓದಿದರೆ ನಿಜಕ್ಕೂ ಆನಂದ ಭಾಷ್ಪ ತರಿಸಿಕೊಳ್ಳುವರು, ಅಲ್ಲದೇ ಎಲ್ಲರೂ ಮಿಸ್ ಯೂ ಡಿಯರ್ ಫ್ರೆಂಡ್ಸ್ ಎಂದು ಹೇಳುವರು, ಇಂದಿನ ಮೋದಿ ಯವರ ಸ್ವಚ್ಚತೆಯ ಕಾರ್ಯಕ್ರಮ ಸ್ವಚ್ಚ ಭಾರತ್ ಪರಿಕಲ್ಪನೆ ಅಂದೇ ನಮ್ಮ ಬಾಲ್ಯ ಮಿತ್ರರೊಂದಿಗೆ ಕೈ ಜೋಡಿಸಿದ್ದೆವು. ಅಂದು ನಮ್ಮ ಶಿಕ್ಷಕರು ಹೇಳುತ್ತಿದ್ದ ವಿಚಾರಗಳು ಇಂದಿನ ಸ್ವಚ್ಚತೆ ಕೇವಲ ಸುತ್ತಮುತ್ತಲಿನ ಪ್ರದೇಶದ ಸ್ವಚ್ಚತಾ ಅಭಿಯಾನಗಳಿಗೆ ಸೀಮಿತವಾಗದೆ, ಮನಸ್ಸಿನಲ್ಲಿ ಆಲೋಚನೆಗಳಲ್ಲಿ ವ್ಯವಸ್ಥೆಗಳಲ್ಲಿ ಸರ್ಕಾರಿ ಕಛೇರಿಗಳಲ್ಲಿ, ರಾಜಕಾರಣಗಳಲ್ಲಿ ಸ್ವಚ್ಚತೆಯೆಂಬ ನದಿಯೂ ಹರಿಯಬೇಕಾಗಿದೆ.
hw-remosaic: 0;
touch: (0.4361111, 0.4361111);
modeInfo: ;
sceneMode: Auto;
cct_value: 0;
AI_Scene: (-1, -1);
aec_lux: 0.0;
hist255: 0.0;
hist252~255: 0.0;
hist0~15: 0.0;
hw-remosaic: 0;
touch: (0.4361111, 0.4361111);
modeInfo: ;
sceneMode: Auto;
cct_value: 0;
AI_Scene: (6, -1);
aec_lux: 0.0;
hist255: 0.0;
hist252~255: 0.0;
hist0~15: 0.0;
ಲೇಖನ : ಸೂರ್ಯಪ್ರಕಾಶ್.ಆರ್, ಸಂಪಾದಕರು, ದಾವಣಗೆರೆ