ಪಾಲಿಕೆ ಆಯುಕ್ತರೇ ಲೋಕಾಯುಕ್ತ ತನಿಖೆಯಲ್ಲಿರುವ ಅಪರಾಧಿಗಳಿಗೆ ಶಿಕ್ಷೆ ನೀಡುವಿರೋ… ಇಲ್ಲ ಕೆಲಸದಿಂದ ಬಿಟ್ಟು ಬೇರೆ ಪಾಲಿಕೆಗೆ ವರ್ಗಾವಣೆಯಾಗುವಿರೋ… ನೀವೇ ತೀರ್ಮಾನಿಸಿ…???
ಆಯುಕ್ತೆ ರೇಣುಕಾರವರ ಮೌನ ನೂರು ಅನುಮಾನಗಳ ಸೆರೆಯಾಗಿದೆ..!!

ದಾವಣಗೆರೆ : ಇಡೀ ದಾವಣಗೆರೆ ಮಹಾನಗರಪಾಲಿಕೆ ಅದರಲ್ಲಿಯೂ ವಲಯ ಕಚೇರಿ 03 ಅಂತೂ ಲಂಚಾವತಾರಮಯವಾಗಿದೆ. ನಗರದ ಮಹಾ ನಗರಪಾಲಿಕೆಯಲ್ಲಿ ಲಂಚಾವತಾರದ ಸದ್ದು ಜೋರಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಇ-ಸ್ವತ್ತು ಖಾತೆ ಬದಲಾವಣೆ, ಮಾಡಿಕೊಡಲು ಪಾಲಿಕೆಯ ನೌಕರರು ಲಂಚ ಸ್ವೀಕರಿಸಿಕೊಂಡು ತಮಗೆ ಹಣ ಸಿಕ್ಕರೆ ಮಾತ್ರ ಅತೀ ಶೀಘ್ರದಲ್ಲಿಯೇ ಮಾಡಿಕೊಡುತ್ತಾರೆ. ಅವರ ಕುರ್ಚಿಯ ಕೆಳಗೆ ಹಣ ತಳ್ಳದಿದ್ದರೆ ಕಾನೂನಿನ ಪಾಠ ಹೇಳಿ ಇ-ಸ್ವತ್ತು ಸಕಾಲದಲ್ಲಿ 15 ದಿನಕ್ಕೆ ಮತ್ತು ಖಾತೆ ಬದಲಾವಣೆ 45 ದಿನಗಳಿಗೆ ಬರುತ್ತೆ. ಇಂತಹ ಭ್ರಷ್ಟರ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದೂರು ದಾಖಲಾಗಿದ್ದರೂ ಸಹ ಪಾಲಿಕೆ ಆಯುಕ್ತರು ಯಾವುದೇ ಕ್ರಮ ಜರುಗಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉದಾಹರಣೆಗೆ ಸುರೇಶ್ ಫಾಟೀಲ ಮತ್ತು ಸಹಾಯಕ ಕಂದಾಯಾಧಿಕಾರಿ ವಿನಯ್ ಮೇಲೆ ಅನಧಿಕೃತ ಸೈಟುಗಳ ಖಾತೆ ಮಾಡಿಸುವುದರ ಅಕ್ರಮತೆಯ ಬಗ್ಗೆ ದಿನಾಂಕ 18-10-2023ರಂದು ಲೋಕಾಯುಕ್ತ ದೂರು ದಾಖಲಾಗಿದ್ದರೂ ಸಹ ಮಾನ್ಯ ಪಾಲಿಕೆ ಆಯುಕ್ತರು ಮಾತ್ರ ಲಂಚಬಾಕರ ಮೇಲೆ ಶಿಸ್ತುಕ್ರಮ ಜರುಗಿಸುವುದಿರಲಿ, ಏಕಪ್ಪ ಇಂತಾ ಅಲ್ಕಾ ಕೆಲಸ ಮಾಡಿದ್ದೀರಿ ಅಂತ ಕೇಳಿಯೂ ಇಲ್ಲ. ಇಂತಹ ಮಾನಗೇಡಿಗಳಿಗೆ ಶಿಕ್ಷೆ ನೀಡದೆ ಯಾರದೋ ರಾಜಕೀಯ ಪ್ರಾಬಲ್ಯಕ್ಕೊಳಗಾಗಿ ಬಾಯಿ ಬಿದ್ದವರಂತೆ ಇರುವುದು ನಿಜಕ್ಕೂ ನಮ್ಮ ಪಾಲಿಕೆಯ ಅನಾಗರೀಕತೆಯಾಗಿದೆ.
ಕಾರಣ ಕಳೆದ 2022 ರಲ್ಲಿ ಬೀದಿ ವ್ಯಾಪಾರಿಗಳ ಶುಂಕ ವಸೂಲಾತಿಗಾಗಿ ನಡೆದ ಹರಾಜು ಟೆಂಡರಿನ ಗೋಲ್ ಮಾಲಿನಲ್ಲಿ ಸಿಲುಕಿದ್ದ ಮಾಜಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿಯವರನ್ನು ಕೆಲಸದಿಂದ ಬೇರೆ ಕಡೆ ವರ್ಗಾವಣೆ ಮಾಡಿದ ಜಿಲ್ಲಾಡಳಿತ ವೆಂಕಟೇಶ್ ಎಂಬ ಪ್ರಥಮ ದರ್ಜೆ ಸಹಾಯಕನನ್ನು ಸಹ ಮುಲಾಜಿಲ್ಲದೇ ಕೆಲಸದಿಂದ ಸಸ್ಪೆಂಡ್ ಮಾಡಿದ್ದ ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಮಾಹಾ ನಿರ್ದೇಶಕರು ಅಮಾನತ್ತುಗೊಳಿಸಿದ್ದರು. ಆದರೆ ಇಂದು ಸಾಕ್ಷಿ ಸಮೇತ ಲಂಚಬಾಕ ವಿನಯ್ ಮತ್ತು ಸುರೇಶ್ ಪಾಟೀಲ ಭ್ರಷ್ಟತೆಯಲ್ಲಿ ತೊಡಗಿರುವುದು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಾಗಿದ್ದರೂ ಸಹ ನಮ್ಮ ಪಾಲಿಕೆಯ ಆಯುಕ್ತರು ಮಾತ್ರ ತಮಗೇನು ಅರಿವಿಲ್ಲದಂತೆ ಇರುವುದು ಅನುಮಾನಗಳಿಗೆ ಗುರಿಯಾಗಿದ್ದಾರೆ.
ಅಲ್ಲದೆ ನಮ್ಮ ಪತ್ರಿಕೆಯ ಸಂಪಾದಕರು ಆಯುಕ್ತರು ಮರೆತಿದ್ದಾರೆಂದು ಭ್ರಷ್ಟರ ವಿರುದ್ಧ ಕಳೆದ 10 ದಿನಗಳ ಹಿಂದೆ ಲಿಖಿತವಾಗಿ ದೂರು ನೀಡಿದ್ದರೂ ಸಹ ಆಯುಕ್ತರಾಗಲಿ ಪಾಲಿಕೆಯ ಸಿಬ್ಬಂಧಿಗಳಾಗಲಿ ನೀಡಿರುವ ದೂರಿನ ಅರ್ಜಿಯನ್ನು ಸ್ವೀಕರಿಸದೆ ಕ್ರಮ ಜರುಗಿಸದೆ, ಕೊನೆಗೆ ಏನನ್ನೋ ಬರೆದು ಹಿಂಬರಹದ ಮೂಲಕ ಪೋಸ್ಟ್ ಮಾಡಿದ್ದಾರೆ. ಇಂತಹ ನಿರ್ಲಜ್ಯ ನಿರ್ಲಕ್ಷ್ಯ ಕೆಲಸ ನಿರ್ವಹಿಸುತ್ತಿರುವ ದಾವಣಗೆರೆ ಮಹಾನಗರ ಪಾಲಿಕೆಯ ಸಿಬ್ಬಂಧಿಗಳನ್ನು ಕೆಲಸದಿಂದ ಅಮಾನತ್ತುಗೊಳಿಸಿ, ಶಿಸ್ತುಕ್ರಮ ಜರುಗಸಿ, ಇಲ್ಲವೇ ತಾವೇ ಕರ್ತವ್ಯ ಲೋಪದ ಆಧಾರದ ಮೇಲೆ ನಮ್ಮ ದಾವಣಗೆರೆ ಮಹಾನಗರಪಾಲಿಕೆಯನ್ನು ಬಿಟ್ಟು ಬೇರೆ ಕಡೆ ವರ್ಗಾವಣೆಯಾಗಲಿ ಎಂಬುದೇ ನಮ್ಮ ಪತ್ರಿಕೆಯ ಕಳಕಳಿ ಪ್ರಾರ್ಥನೆಯಾಗಿದೆ. ಇದರಿಂದ ಪಾಲಿಕೆಗೆ ಹೊಸ ಆಯುಕ್ತರು ಬಂದಾದರೂ ಪಾಲಿಕೆಯಲ್ಲಿ ಜರುಗುವ ಲಂಚದಾವತಾರವನ್ನು ಕೊನೆಗಾಣಿಸುವರೆ ಕಾದು ನೋಡಬೇಕಾಗಿದೆ….?
ವರದಿ : ಸೂರ್ಯಪ್ರಕಾಶ್.ಆರ್, ಸಂಪಾದಕರು