Davanagere

ಸುಂದರ ದಾಂಪತ್ಯ ಜೀವನಕ್ಕೊಂದೆರೆಡು ಅನುಭವದ ಮಾತು….

ಪ್ರಿಯ ಸ್ನೇಹಿತರೆ, ಇಂದು ನಾನು ಬರೆಯುತ್ತಿರುವ ಸಂಪಾದಕೀಯದ ವಿಚಾರವೇನೆಂದರೆ ವ ಸುಂದರ ದಾಂಪತ್ಯ ಜೀವನಕ್ಕೊಂದೆರೆಡು ಅನುಭವದ ಮಾತು….. ಮಾತುಗಳನ್ನು ಹಂಚಿಕೊಳ್ಳುವ ಮೂಲಕ ನನ್ನ ಬರವಣಿಗೆಯನ್ನು ನಿಮಮಗಳ ಮುಂದೆ ಇಡುತ್ತಿದ್ದೇನೆ. ಇಷ್ಟವಾದರೆ ನಿಮ್ಮ ಮನೆಯ ಸದಸ್ಯರೊಂದಿಗೆ ಒಟ್ಟಿಗೆ ಪತ್ರಿಕೆಯ ಕೈಯಲ್ಲಿಟ್ಟುಕೊಂಡು ೧೫ ನಿಮಿಷಗಳವರೆಗಾದರೂ ಪತ್ರಿಕೆಯ ಓದುವ ಹವ್ಯಾಸ ಮಾಡಿಕೊಳ್ಳಿ, ಅದುವೆ ನಮಗೆ ನೀವುಗಳು ಕೊಡುವ ಗೌರವ ಪ್ರಶಂಸೆ….
ಮೊದಲನೇಯದಾಗಿ ಸ್ನೇಹಿತರೆ, ಪ್ರೀತಿ ನಮಗೆ ಬೇಕು ಅಂದಾಗ ಹುಟ್ಟುವುದಿಲ್ಲ. ಹಾಗೆ, ನಾವು ಪ್ರೀತಿಸಲೇ ಬೇಕು ಎಂದು ಹುಡುಕುತ್ತಾ ಹುಡುಕುತ್ತಾ ಹೋದರೆ ಸಿಗುವ ವಸ್ತುವು ಅದಲ್ಲ. ಸಿಗದೆ ಇದ್ದಾಗಲೂ ಯಾರೋ ಸುಂದರವಿರುವ ಹುಡುಗ / ಹುಡುಗಿಯರನ್ನು ಕಂಡು ಅವರು ನಮಗೆ ಇಷ್ಟ ಆಗಿ, ಇವರೆ ಸರಿ ಎಂದು ಪ್ರಸ್ತಾಪ ಮಾಡಿ `ನನ್ನನ್ನು ಪ್ರೀತಿಸು, ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲಾ ಎಂದು’ ಕೇಳಿಕೊಳ್ಳುವುದು ಸಹ ನಿಜವಾದ ಪ್ರೀತಿಯಲ್ಲ. ನಾನು ಕೂಡ Once upon time ಕಾಲೇಜು ದಿನಗಳಲ್ಲಿ, ಶಿಕ್ಷಕ ವೃತ್ತಿಯ ಸಂದರ್ಭದಲ್ಲಿ ಸುಮಾರು 7-8 ಹುಡುಗಿಯರ ಹಿಂದೆ ಬಿದ್ದಿದ್ದರೆ, ನನ್ನ ಹಿಂದೆ 5 ಹುಡುಗಿಯರು ಬಿದ್ದಿದ್ದು ನನಗೆ ನೆನಪಿಸಿಕೊಂಡಾಗ ಅಂದಿದ್ದ ಆ ಪೋಲಿ, ಪೊರ್ಕಿ ಹುಡುಗ ನಾನೇನಾ..?? ಪಾಲಿಗೆ ಬಂದಿದ್ದ ಅದೆಷ್ಟೋ ಉತ್ತಮ ಅವಕಾಶಗಳನ್ನು ಕೈಚೆಲ್ಲಿ ವೃಥಾಃ ಸಮಯವ ಹಾಳು ಮಾಡಿಬಿಟ್ಟನಾ…?? ಎಂದು ಭಾಸವಾಗುತ್ತೆ. ನಾ ಮಾಡಿದ ತಪ್ಪುಗಳ ಸರಿಪಡಿಸಲಿಕ್ಕೆ ಆಕೆ ನನ್ನ ಬಾಳ ಪುಟಗಳಿಗೆ ಲಗ್ಗೆಯಿಟ್ಟಳು. ನಿಜಕ್ಕೂ ಆಕೆ ನನಗೆ ಅದೃಷ್ಟ ದೇವತೆನೆ. ನನ್ನಂತೆ ಸುಮಾರು ಜನ ಹುಡುಗರು ಪ್ರೀತಿಯ ಗುಂಗಲ್ಲಿ ಸಮಯವ ಹಾಳು ಮಾಡಿದ್ದೇನೋ ನಿಜ, ಆದರೆ ಬಾಳ ಸಂಗಾತಿ ಜೊತೆಯಾದ ನಂತರ ಮುಂಚೆ ಇದ್ದ ಕುಚೇಷ್ಟೆಗಳು ಬಂದ್ ಆಗಿ, ಜವಾಬ್ದಾರಿಯೆಂಬ ಕೆಲಸವು ಭುಜಕ್ಕೆ ತಗುಲಿದಾಗ ಜೀವನ ಸುಂದರ ಚಿತ್ರಣವಾಗುತ್ತಾ ಸಾಗುತ್ತದೆ. ಆದರೆ ಸುಂದರ ಚಿತ್ರಣದ ನಡು ನಡುವೆ ಜೊತೆಯಾದ ಬಾಳ ಸಂಗಾತಿಯ ಜೊತೆ ಸಮಯವ ಕಳೆಯದೆ, ಅವಳ ನಗು ಮುಖಕ್ಕೆ ಪ್ರೀತಿಯ ಮಾತುಗಳನ್ನಾಡದೆ ಹೋದರೆ ಜೀವನ ಮುರಾಬಟ್ಟೆಯಾಗುತ್ತದೆ. ನಾವು ಗಂಡು ಮಕ್ಕಳು ಮದುವೆಯ ನಂತರ ಕೆಲಸ ಕೆಲಸವೆಂದು ಮನೆಯಲ್ಲಿದ್ದವರಿಗೆ ಯಾರಿಗೂ ಸಮಯವ ನೀಡದೆ, ಹೊರಗಿನವರ ಜೊತೆ ಗಂಟೆಗಟ್ಟಲೆ ಮಾತನಾಡಿ, ರಾತ್ರಿ ಊಟದ ಸಮಯದಲ್ಲೂ ನಮ್ಮ ಬಾಳ ದಾರಿಗೆ ಬೆಳಕಾಗಿದ್ದವಳ ಜೊತೆಯಲ್ಲೂ ಮಾತನಾಡದೆ, ನಮ್ಮ ದಿನಚರಿಯ ನೆನಪುಗಳನ್ನು ಹಂಚಿಕೊಳ್ಳದೆ ಎರಡನೇಯ ಪತ್ನಿ ಜಂಗಮವಾಣಿಗೆ ನೇತು ಬಿದ್ದು, ನಿಮಿಷ ನಿಮಿಷಕ್ಕೂ ಬರುವ ಹುಚ್ಚು ಸಂದೇಶಗಳ ನೋಡಿ ಹುಚ್ಚರಂತೆ ಹಲ್ಲು ಕಿಸಿಯುತ್ತಿದ್ದೇವೆಯೇ ಹೊರತು. ಮನೆಯಲ್ಲಿರುವ ಸಂಪೂರ್ಣ ನಗುವಿನ ವಾತಾವರಣವ ಕಳೆದುಕೊಳ್ಳುತ್ತಿದ್ದೇವೆ. ನಿಜಕ್ಕೂ ನಾವುಗಳು ಮನೆಯವರಿಗೆ ಕ್ಷಮೆಯ ಕೇಳಲೆಬೇಕು. So ನನ್ನ ಕಡೆಯಿಂದ Sorry ನನ್ನವಳಿಗೆ.ಎರಡನೇಯದಾಗಿ ನಾನು ಅಂದು ನನ್ನ ಸುಮಾಗೆ ಅದೆಷ್ಟೋ ಹುಚ್ಚು ಸಂದೇಶಗಳ ರವಾನಿಸಿ ಆಕೆಯ ಮನಸ್ಸಲ್ಲಿ ಇಲ್ಲ-ಸಲ್ಲದ ಕನಸುಗಳ ಗೂಡ ಕಟ್ಟಿಸಿದ್ದೆ. ಅದನ್ನ ನಂಬಿದ ಮುದ್ದಿನ ಕುಳ್ಳಿ 30 ವರ್ಷಗಳ ಕಾಲ ಸಾಕಿ ಸಲಹಿದ ತನ್ನವರನ್ನೆಲ್ಲ ಬಿಟ್ಟು, ಆಕೆಗಾಗಿದ್ದ ವಡವೆ-ವಸ್ತ್ರಗಳ ಜೊತೆಗೆ ಆಕೆಯ ಅಪ್ಪನ ಆಸ್ತಿಯನ್ನೇ ಬಿಟ್ಟು, ಇಳಿ ಸಂಜೆಯ ಹೊತ್ತಲ್ಲಿ ಆಟೋ ಹತ್ತಿಕೊಂಡು ನಾನಿದ್ದಲ್ಲಿಗೆ ಬಂದಿದ್ದಳು. ಆ ದಿನ ಆಕೆಯ ಕಂಗಳಲ್ಲಿ ನನ್ನ ಕೈ ಬಿಡಬೇಡ, ನಿನ್ನನ್ನೇ ನಂಬಿ ಬಂದಿದ್ದೇನೆ, ನೀನೇ ನನ್ನ ಜೀವನ ಎಂಬ ನೋಟ ನನ್ನ ಮೇಲೆ ನನಗೆ ನಂಬಿಕೆ ಬರುವಂತೆ ಮಾಡಿ, ಛಲ ದುಪ್ಪಟ್ಟಾಗಲು ಶುರು ಮಾಡಿತು. ನನ್ನಂತೆ ಎಲ್ಲಾ ಗಂಡು ಮಕ್ಕಳಿಗೆ, ಪ್ರೀತಿಸಿ ಮದುವೆಯಾದ್ರೂ, ಕುಟುಂಬದ ಜೊತೆಗೂಡಿ ಮದುವೆಯಾದ್ರೂ ಒಂದು ಹೆಣ್ಣು ತನ್ನವರನ್ನೆಲ್ಲಾ ಬಿಟ್ಟು ಗಂಡನ ಮನೆಯೇ ತನ್ನ ನೆಲೆಯೆಂದು ಆಸರೆಯಾಗಿ ಬಂದಿರುತ್ತಾಳೆ. ಅಂತಹ ಹೆಣ್ಣಿಗೆ ನಾವು ಮದುವೆಯಾದ ನಂತರ ಕೊಡುವ ಬೆಲೆ ಗೌರವ ಬರ ಬರುತ್ತಾ ಕಡಿಮೆಯಾಗುತ್ತಾ ಹೋಗುತ್ತದೆ. ಆಕೆಯ ಮೇಲೆ ಜಬರ್ದಸ್ತ್ ಮಾಡಲು ಹೋಗುತ್ತೇವೆ, ಇದರಿಂದ ನೊಂದುಕೊಳ್ಳುವ ಆಕೆ ತನ್ನ ಕನಸ ಗೋಪುರಗಳನ್ನು ನುಚ್ಚುನೂರು ಮಾಡಿ, ತನ್ನ ಆಸೆ ಆಕಾಂಕ್ಷೆಗಳನ್ನ ಸಾಯಿಸಿ ನಾನು ಇಂತವನನ್ನ ಮದುವೆಯಾಗಿದ್ದಾSSS ಅಂತ ಅಳುವುದಕ್ಕಿಂತ, ಮೊನ್ನೆ ಮೇಘನ ಇಂತಹ ಹುಡುಗ ಮತ್ತೇ ನನಗೆ ಸಿಕ್ಕೋಲ್ಲ ಅಂತ ಕಣ್ಣೀರಟ್ಟಳಲ್ಲ, ಆ ರೀತಿ ನಮ್ಮವರಿಗೆ ಅನಿಸಬೇಕು. ಅದಕ್ಕಾಗಿ ನಾನು ಮದುವೆಯಾದಾಗಿನಿಂದ ಇಲ್ಲಿಯವರೆಗೂ ನನ್ನಾಕೆಗೆ ಜಬರ್ದಸ್ತ್ ಮಾಡಿದ್ದರೇ ಕ್ಷಮೆ ಕೇಳಿಕೊಳ್ಳುವೆ. ಕಾರಣ ನನಗೆ ಗೊತ್ತಿಲ್ಲದೆ ಆಕೆಗೆ ನಾ ಜಬರ್ದಸ್ತ್ ಮಾಡಿರಬಹುದು. ಆದರೆ ಬೇಕೂ ಅಂತಾ ಮಾಡಿಲ್ಲ, ಇನ್ನು ಮುಂದೆ ಆ ತಪ್ಪಾ ನಾ ಮಾಡಲಾರೆ. ನೀವೂ ನನ್ನಂತೆ ತಪ್ಪು ಮಾಡಿದ್ದರೆ ಇನ್ನುಮುಂದೆ ಮಾಡಬೇಡಿ, ಕ್ಷಮೆಯ ಕೇಳಿ.
ಒಟ್ಟಿನಲ್ಲಿ ದಾಂಪತ್ಯ ಖುಷಿಯ ದಡದಲ್ಲಿ ತೇಲಬೇಕೆಂದರೆ ಮನಸ್ಸು ಮನಸ್ಸು ಒಂದಾಗಿ, ಕನಸು ಕಲ್ಪನೆಗಳಲ್ಲಿ ಒಂದಾಗಿ `ಪ್ರೀತಿ ಭಾವ’ ನುಡಿಯಾಗಿ `ನಾನು ನಿನ್ನನ್ನು ಪ್ರೀತಿಸುತ್ತೇನೆ’ ಅಂತಾ ಹೃದಯದಿಂದ ಹೊರಬರುವ ಉಸಿರಿಗೆ ಪ್ರತಿಯಾಗಿ `ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂಬ ಉಸಿರು ಒಂದಾಗಬೇಕು.. ಎಲ್ಲರಿಗೂ ಪ್ರೀತಿಯನ್ನು ಹುಡುಕುವ ಆತುರ. ಹುಡುಕಿ… ಅದು ತಪ್ಪಲ್ಲ. ಆದರೆ ಪ್ರೀತಿ ಅನ್ನೋದು ಸುಂದರ ಭಾವನೆಗಳ ವಿಲಾಸ. ನಿಮ್ಮ ಜೊತೆಯಲ್ಲಿರುವ ಪ್ರೀತಿಯನ್ನ ಮೊದಲು ಹುಡುಕಿ, ನಿಮ್ಮ ಜೊತೆಯಲ್ಲಿರುವವರಿಗೆ ನಿಮ್ಮ ಸಮಯವ ಮೀಸಲಿಡಿ, ಪ್ರೀತಿಯ ಬಗ್ಗೆ ನೀವು ಅರಿತು, ನಿಮ್ಮವರ ಪ್ರೀತಿಯನ್ನು ಅರಿಯಿರಿ ಇದುವೆ ಸುಖಕರ ಜೀವನದ ಸ್ವಾರಸ್ಯ….
ಲೇಖನ : ಸೂರ್ಯಪ್ರಕಾಶ್.ಆರ್

error: Content is protected !!