Davanagere

ಸಮಯಕ್ಕೆ ಸರಿಯಾಗಿ ಕೆಲಸಕ್ಕ ಹಾಜರಾಗದ ಪಿಡಬ್ಲೂಡಿ ಕಚೇರಿಯ ಸಿಬ್ಬಂದಿ

ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿಗಳೇ… ನೀವಾದರೂ ಸೋಮಾರಿಗಳ ಎಡೆಮುರಿ ಕಟ್ಟುತ್ತೀರಾ….

ದಾವಣಗೆರೆ : ನಗರದ ಪಿ.ಬಿ ರಸ್ತೆಯಲ್ಲಿರುವ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಸರಿ ಸುಮಾರು ೩ ಗಂಟೆ ೩೦ ನಿಮಿಷವಾಗುತ್ತಿದ್ದರೂ ಸಿಬ್ಬಂಧಿ ಹಾಗೂ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗದೆ ಸಾಮಾನ್ಯ ಜನರ ಸಮಸ್ಯೆಗಳು, ಹಾಗು ಅವರ ಕೆಲಸ ಕಾರ್ಯಗಳನ್ನು ಪಡೆದುಕೊಳ್ಳಲು ಅತೀವವಾಗಿ ಕಷ್ಟ ಪಡಬೇಕಾದ ನಿವಾರ್ಯತೆಯಿದೆ. ಇಂತಹ ಕೆಲಸಕ್ಕೆ ಸಮಯಕ್ಕೆ ಸರಿಯಾಗಿ ಬಾರದ ಹಾಗೂ ಕರ್ತವ್ಯ ಲೋಪ ಎಸಗುವವರ ಮೇಲೆ ನಿರ್ದಾಕ್ಷೀಣ್ಯ ಕ್ರಮವನ್ನು ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಗಳು ತೆಗೆದುಕೊಳ್ಳಬೇಕಾಗಿದೆ. ನಿಷ್ಕಾಳಜಿ ವಹಿಸುತ್ತಿರುವ ಸಿಬ್ಬಂಧಿಗಳ ಮೇಲೆ ಇಂದು ನಮ್ಮ ಪತ್ರಿಕೆಯ ತಂಡ ಹಾಗೂ ಸಂಪಾದಕರೂ ಭೇಟಿ ನೀಡಿದಾಗ ಅಲ್ಲಿ ಬರೀ ಖಾಲಿ ಚೇರುಗಳು ಕಣ್ಣಿಗೆ ಬಿದ್ದಿರುವುದು ಸಾಮಾನ್ಯವಾಗಿde.ಆದ್ದರಿಂದ ಜಿಲ್ಲಾಧಿಕಾರಿಗಳಾಗಲಿ, ಕಾರ್ಯಪಾಲಿಕ ಅಭಿಯಂತರರಾಗಲಿ ಕಾನೂನು ಕ್ರಮ ಜರುಗಿಸುತ್ತಾರೆ ಅಂದರೆ ಸ್ವತಃ ತಾವೂಗಳೇ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರದೇ ಇರುವುದು, “ತಾಯಿಯಂತೆ ಮಗಳು, ನೂಲಿನಂತೆ ದಾರವೆಂಬಂತೆ ತಾವೇ ಸರಿಯಿಲ್ಲವೆಂದ ಮೇಲೆ ಸಾಮಾನ್ಯ ಜನರು ತಮ್ಮ ಗೋಳನ್ನು ಯಾರಿಗೆ ಹೇಳಿಕೊಳ್ಳಬೇಕು ಎಂಬುದೇ ವಿಶ್ಮಯವಾಗಿದೆ.
ವರದಿ : ಸೂರ್ಯಪ್ರಕಾಶ್.ಆರ್

error: Content is protected !!