Davanagere

ಲೈಸೆನ್ಸು ಪಡೆಯೋದೇ ಒಂದು… ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗೋದೇ ಒಂದು….!!

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಡಿ ಹಲವು ಕಟ್ಟಡಗಳಿಗೆ ಕಟ್ಟಡ ಪರವಾನಿಗೆ ಇಲ್ಲದೇ ಕಾಮಗಾರಿ ನಡೆಸುತ್ತಿರುವ ಸರ್ಕಾರದ ದ್ರೋಹಿಗಳು.....!!

ದಾವಣಗೆರೆ: ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಬಡಾವಣೆಗಳಲ್ಲಿ ದೊಡ್ಡ ದೊಡ್ಡ ಜನರು ತಮ್ಮ ದೊಡ್ಡಸ್ಥಿಕೆ ತೋರಿಸಿಕೊಳ್ಳಲು ಹಾಗೂ ತಮ್ಮ ದೊಡ್ಡತನದ ವ್ಯೆವಹಾರ ಮುಂದುವರೆಸಲು ದೊಡ್ಡದಾಗಿಯೇ ದೊಡ್ಡ ಅಂತಸ್ಥಿನ ಮಹಡಿಗಳನ್ನ ಬೆಂಗಳೂರು ನಗರದಲ್ಲಿ ನಿರ್ಮಿಸಿದಂತೆ ಕಾಮಗಾರಿ ಮಾಡುತ್ತಿದ್ದಾರೆ. ಇದು ಖುಷಿಯ ವಿಷಯವೇ ಆದರೆ ಈ ದೊಡ್ಡ ದೊಡ್ಡ ಜನರು ದಡ್ಡ ನನ್ನ ಮಕ್ಕಳಾಗಿ ಸರ್ಕಾರಕ್ಕೆ ವಂಚನೆ ಮಾಡಿ, ತಾವು ಪಡೆಯುವ ಅಥವಾ ಕಟ್ಟುವ ಕಟ್ಟಡಗಳ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಕಟ್ಟಡಗಳನ್ನು ಕಟ್ಟಿ ಪಾಲಿಕೆಗೂ, ಸರ್ಕಾರಕ್ಕೂ ವಂಚಿಸುತ್ತಿರುವುದು ನಿಜಕ್ಕೂ ನಮ್ಮ ಬಡಪಾಯಿ ಜನರ ಯೋಚನೆಯ ವಿಷಯವಾಗಿದೆ. ಕಾರಣ ನಮ್ಮಂತಹ ಬಡಪಾಯಿ ಜನರು ಒಂದು ಸುಂದರ ಮನೆಯಲ್ಲಿ ಜೀವನ ಸಾಗಿಸಲು ಕಟ್ಟಿಕೊಳ್ಳುವ ಮನೆಗೆ ಪಾಲಿಕೆಯ ಕಳ್ ಖದೀಮ ಅಧಿಕಾರಿಗಳು ಒಬ್ಬರೂ ತಪ್ಪಿದರೆ ಒಬ್ಬರು ಬಂದು ಯುಜಿಡಿ ಕಲೆಕ್ಸನ್ ಇಂದ ಹಿಡಿದು ಬೆಸ್ಕಾಂ ಕಲೆಕ್ಸನ್, ನೀರು ಕಂದಾಯದಿಂದ ಹಿಡಿದು ಮನೆ ಕಂದಾಯದವರೆಗೂ ಪರಶೀಲನೆ ಮಾಡಿ, ಆ ದಾಖಲೆ-ಈ ದಾಖಲೆ ಅಂತ ಕಾನೂನು ಹೇಳುವ ಖದೀಮರು ಮಾತ್ರ ದೊಡ್ಡವರ ಬಳಿ ಬಾಲ ಬಿಚ್ಚದೆ, ಅವರು ನೀಡುವ ಅರೆದು-ಉರಿದು ಕಪ್ಪಾಗಿರುವ ನಾಯಿ ಬಿಸ್ಕೆಟಗಳ ಎಂಜಲನ್ನು ತಿಂದು ಕುಂಯಿ ಕುಂಯಿ ಅಂತ ಬಾಲ ಅಲ್ಲಾಡಿಸಿಕೊಂಡು ಬರುತ್ತಾರೆ. ಅದಕ್ಕೆ ಸಾಕ್ಷಿ ಇಂದು ನಾವು ನಮ್ಮ ಪತ್ರಿಕೆಯಲ್ಲಿ ಹಾಕುವ ಕಟ್ಟಡಗಳ ಛಾಯಚಿತ್ರವೇ ಸಾಕು. ಅಲ್ಲದೇ ಕರ್ನಾಟಕ ಪೌರ ಮಹಾನಗರಪಾಲಿಕೆಗಳ ಅಧಿನಿಯಮ-೧೯೭೭, ಕಟ್ಟಡಗಳ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಅಧ್ಯಾಯ ೧೫ರ ಕಲಂ ನಂ ೩೦೦ರಂತೆ ದಾವಣಗೆರೆ ಜಿಲ್ಲೆಯ ನಗರ ವ್ಯಾಪ್ತಿಗೊಳಪಡುವ ಪಾಲಿಕೆಯ ಎಂ.ಸಿ.ಸಿ “ಎ’ ಬ್ಲಾಕ್ ನಲ್ಲಿ ಬರುವ, ಶಿವಲೀಲಾ ಸ್ಕ್ಯಾನೀಂಗ್ ಸೆಂಟರ್ ಪಕ್ಕದಲ್ಲಿ ಚಾಲ್ತಿ ಡೋರ್ ನಂಬರ್ ೧೯೭೮/೧ರ ಮಾಲೀಕರಾದ ಶ್ರೀಮತಿ ಮಂಜುಳ ಎಂ ಕೋಂ ಲೇಟ್ ಮಂಜುನಾಥ್ ಗೌಡ, ಇವರುಗಳು ತಮ್ಮ ಸ್ವತ್ತಿನ ಜಾಗದಲ್ಲಿ ಬಹು ಅಂತಸ್ಥಿನ ಮಹಡಿಗಳ ಕಟ್ಟಡವನ್ನು ನಿರ್ಮಿಸಿ ವಾಣಿಜ್ಯೋದ್ಯಮಕ್ಕೆ ಹಾಗೂ ತಮ್ಮ ವ್ಯೆವಹಾರಿಕ ದುಡಿಮೆಗೆ ಬಳಸಿಕೊಳ್ಳುತ್ತಿದ್ದು, ಇಲ್ಲಿಯವರೆಗಾದರೂ ಪಾಲಿಕೆಯ ಕಟ್ಟಡ ಹಾಗೂ ನಗರ ಯೋಜನ ಕಚೇರಿಯಲ್ಲಿ ಕಲಂ ನಂ ೨೯೯ರಂತೆ ಕಟ್ಟಡ ಪರವಾನಿಗೆಯನ್ನು ಪಡೆಯದೆ ಇರುವುದು ಕಂಡು ಬಂದಿರುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ಪಾಲಿಕೆಯ ಇಲಾಖಾ ಸಿಬ್ಬಂಧಿಗಳೇ ನಮಗೆ ನೀಡಿರುವ ಹಿಂಬರಹದ ಪ್ರತಿಯೇ ಸಾಕ್ಷಿ. ಇದರ ಬಗ್ಗೆ ಸಿಬ್ಬಂಧಿಗಳಿಗೆ ಅಂದರೆ ಸಹಾಯಕ ಅಭಿಯಂತರರಾದ ಅನೂಪ್ ಕನೋಜ್, ಶ್ರೀಮತಿ ಶೃತಿ ಹಾಗೂ ಕಟ್ಟಡ ಪರವಾನಿಗೆಯ ಕಚೇರಿಯ ಮುಖ್ಯಸ್ಥರಿಗೆ ಕೆಲವು ಆರ್.ಟಿ.ಐ ಕಾರ್ಯಕರ್ತರು, ಸಂಘಟನಾಕಾರರು ದೂರನ್ನು ಸಲ್ಲಿಸಿದ್ದರೂ ಸಹ ಯಾವುದೇ ರೀತಿಯ ಕ್ರಮ ಜರುಗಿಸದೆ ಸದರಿ ಮಾಲೀಕರೊಂದಿಗೆ ಶಾಮೀಲಾಗಿ ಕೇವಲ ನಾಮಕಾವಸ್ಥೆಗೆ ಮಾತ್ರ ಇಲಾಖೆಯಿಂದ ನೋಟೀಸ್ ನೀಡುವ ಕರ್ತವ್ಯದಲ್ಲಿ ಲೋಪವನ್ನು ಮೈಗೂಡಿಸಿಕೊಂಡಿದ್ದಾರೆ. ಇಂತಹ ಕರ್ತವ್ಯ ಲೋಪವೆಸಗುವ ಭ್ರಷ್ಟ ಅಧಿಕಾರಿಗಳಿಂದಲೇ ಪಾಲಿಕೆಗೆ ಮತ್ತು ಸರ್ಕಾರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಅಲ್ಲದೇ ಸದರಿ ಸ್ವತ್ತಿನ ಕಟ್ಟಡ ಕಾಮಗಾರಿಗೆ ಪಾಲಿಕೆಯಿಂದ ಯಾವುದೇ ರೀತಿಯ ಪರವಾನಿಗೆ ನೀಡಿಲ್ಲವೆಂದು ಅಧಿಕೃತ ತಿಳುವಳಿ ಪತ್ರವನ್ನು ಸಹ ನೀಡಿದ್ದು, ಸದರಿ ಮಾಲೀಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವಲ್ಲಿ ಇಲಾಖೆಯ ಸಿಬ್ಬಂಧಿಗಳು ಅದರಲ್ಲಿಯೂ ಯಾವುದಕ್ಕೂ ಕೆಲಸಕ್ಕೆ ಬಾರದ ಅನೂಪ್ ಕನೋಜ್, ಪಾಲಿಕೆಯ ಕೆಲಸದ ಅವಧಿಯು ಬೆಳಿಗ್ಗೆ ೯ ಗಂಟೆ ೫೦ ನಿಮಿಷದಿಂದ ಮಧ್ಯಾಹ್ನ ೧ ಗಂಟೆ ೩೦ ನಿಮಿಷಕ್ಕೆ ಹಾಗೂ ಮಧ್ಯಾಹ್ನ ೨ ಗಂಟೆ ೩೦ ನಿಮಿಷದಿಂದ ಸಂಜೆ ೬-೦೦ ಗಂಟೆಯವರೆಗೆ ಇದ್ದರೆ, ಅನೂಪ್ ಅವರು ಮಾತ್ರ ಯಾವಾಗ ಬರುತ್ತಾರೋ… ಯಾವಾಗ ಹೋಗುತ್ತಾರೋ ಅವರಿಗೆ ಗೊತ್ತು. ಇದರ ಬಗ್ಗೆ ಪಾಲಿಕೆ ಆಯುಕ್ತರಿಗೆ ಕೇಳಿದರೆ ನಮ್ಮ ಸಿಬ್ಬಂಧಿಗಳು ವಾರ್ಡಗೆ ಹೋಗಿರುತ್ತಾರೆ, ಬರ್ತಾರೆ ಅಂತ ಸಿಬ್ಬಂಧಿಗಳ ಪಾಲಿಗೆ ದೇವರಾಗಿ ಬಿಡುತ್ತಾರೆ. ಈ ಲೇಖನದ ಮೂಲಕ ಆಯುಕ್ತರಿಗೆ ಕೇಳುವುದೇನೆಂದರೆ ನಿಮ್ಮ ಸಿಬ್ಬಂಧಿಗಳು ಕೆಲಸದ ಅವಧಿಯಲ್ಲಿ ವಾರ್ಡಿಗೆ ಹೋಗುವುದು ನಿಜವಾದರೆ ವಾರ್ಡಿನ ಸ್ಥಳ ಪರಿಶೀಲನೆ ಮಾಡಿರುವ, ಕರ್ತವ್ಯ ನಿರ್ವಹಿಸಿರುವ ಪೋಟೋ ಕಾಫಿಗಳ ಜಿ.ಪಿ.ಎಸ್ ಅಳವಡಿಸಿ ನಮಗೆ ನೀಡಬಹುದಲ್ವಾ…, ಇನ್ನು ಶ್ರೀಮತಿ ಶೃತಿಯವರೋ ಕಚೇರಿಗೆ ಯಾವಾಗ ಬಂದರೂ ಹೇಳುವ ಒಂದೇ ಒಂದು ಮಾತು… ಸಾರ್ ಲೆಟರ್ ರೆಡಿಯಾಗಿದೆ, ಮೇಡಂ / ಸರ್ ಸಹಿಗೆ ಹೋಗಿದೆ, ನಾನೇನು ಮಾಡಲಿ ಸಾರ್… ನೀವೂ ಅಲ್ಲೇ ಕೇಳಿ ಅಂತ ಸಲೀಸಾಗಿ ಆರಿಕೊಳ್ಳುತ್ತಾರೆ. ಇನ್ನೂ ಒಳಗಡೆ ಇರುವ ನಮ್ಮ ಜಂಟಿ ನಿದೇಶಕರೋ ಅವರಿಗೆ ಪೋನ್ ಕಾಯಾಲಿನೇ ಜಾಸ್ತಿ ಇದೆ ಅನಿಸುತ್ತೇ ನಾವು ಯಾವಾಗ ಕಚೇರಿಗೆ ಹೋಗಿ ಭೇಟಿ ನೀಡಿ ಮಾಹಿತಿ ಕೇಳಿದರೂ ಪೋನಿನಲ್ಲೇ ತಲ್ಲೀನರಾಗಿ, ತಮಗೆ ಕೆಲಸಕ್ಕೆಂದು ಕೊಟ್ಟಿರುವ ಸರ್ಕಾರದ ಕುರ್ಚಿಯನ್ನು ಅಲ್ಲಾಡಿಸಿಕೊಂಡು, ನಮ್ಮ ಸ್ಟಾಫ್ ಗೆ ಹೇಳಿನಿ ತಡಿರಿ ಮಾಹಿತಿ ಕೊಡ್ತಿನಿ ಅಂತಾ ಬಿಳಿ ಗಡ್ಡದೊಂದಿಗೆ ತಮ್ಮ ಕೈಸವರಿಕೊಂಡು ಹೇಳಿ ಕಳುಹಿಸಿ ಬಿಡುತ್ತಾರೆ. ಇಂತಹ ಭ್ರಷ್ಟ ಅಧಿಕಾರಿಗಳಿಂದಾಗಿ ನಮಗೆ ಮತ್ತು ಜನರಿಗೆ ಅರ್ಥವಾಗುವುದೇನೆಂದರೆ ಇವರೆಲ್ಲ ದೊಡ್ಡವರ ಎಂಜಲ ಹಣದ ಆಮೀಷಕ್ಕೆ ಒಳಗಾಗಿ ಕರ್ತವ್ಯದಲ್ಲಿ ಎಡವಿದ್ದಾರೆ ಅನಿಸುತ್ತೆ. ಆದ್ದರಿಂದ ಪಾಲಿಕೆ ಆಯುಕ್ತರಾದ ತಾವುಗಳಾದರೂ ಈ ಕೂಡಲೇ ಈ ರೀತಿ ಅನಧಿಕೃತವಾಗಿ ಕಟ್ಟಡ ಪರವಾನಿಗೆ ಹೊಂದದೆ, ಕಟ್ಟಡ ಕಾಮಗಾರಿ ನಡೆಸಿ ತಮ್ಮ ಸ್ವಾರ್ಥಪರ ವ್ಯವಹಾರಕ್ಕೆ ಸರ್ಕಾರವನ್ನು ವಂಚಿಸಿರುವವರ ವಿರುದ್ಧ, ಕರ್ನಾಟಕ ಪೌರ ಮಹಾನಗರಪಾಲಿಕೆಗಳ ಅಧಿನಿಯಮ-೧೯೭೭, ಕಟ್ಟಡಗಳ ನಿಯಂತ್ರಣಗಳಿಗೆ ಸಂಬಂಧಿಸಿದಂತೆ ಅಧ್ಯಾಯ ೧೫ರ ಕಲಂ ನಂ ೨೯೮ರಂತೆ ಕಟ್ಟಡಗಳಿಗೆ ಯಾವುದೇ ರೀತಿಯ ಬಳಕೆಯ ಸೌಲಭ್ಯಗಳ ನೀಡದೆ ತಟಸ್ಥಗೊಳಿಸಿ, ಕಲಂ ನಂ ೩೦೭ರಂತೆ ತಾವುಗಳೇ ಸ್ವತಃ ಕಟ್ಟಡ ಪರಿಶೀಲನೆ ನಡೆಸಿ, ಕಲಂ ನಂ ೩೦೯ರಂತೆ ಕಟ್ಟಡದೊಳಗೆ ಮಾನವ ಜೀವಕ್ಕೆ ಹಾನಿಯುಂಟಾಗುವ ಸಂಭವವಿದ್ದರೆ ಕಾಮಗಾರಿಯ ನಿಲ್ಲಿಸಿ, ಒಂದುವೇಳೆ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದರೆ, ಕಲಂ ೩೩೧ರಂತೆ ಕೊನೆಯ ಅಂದರೆ ಅಂತಿಮ ನೋಟೀಸ್ ಹೊರಡಿಸಿ, ಅನಧಿಕೃತವಾಗಿ ಕಟ್ಟಡ ಪರವಾನಿಗೆ ಪಡೆಯದೆ, ಕಟ್ಟಡ ನಿರ್ಮಿಸಿ, ವಾಣಿಜ್ಯ ಬಳಕೆಗೆ ಒಳಪಟ್ಟಿರುವ ಕಟ್ಟಡಗಳನ್ನು ಒಡೆದು ಹಾಕಿಸಿ, ಹಾಗೂ ಇಂತಹ ಸರ್ಕಾರಕ್ಕೆ ದ್ರೋಹ ಎಸಗುವ ಮಾಲೀಕರಿಗೆ ಸಾಥ್ ನೀಡಿ ತಮ್ಮ ಕರ್ತವ್ಯವನ್ನು ಮರೆತು ಆಮೀಷಕ್ಕೆ ಒಳಗಾಗಿರುವ ಸಿಬ್ಬಂಧಿಗಳಿಗೆ ಶಿಸ್ತುಕ್ರಮ ಜರುಗಿಸಿ, ಡೈನಾಮಿಕ್ ಆಫೀಸರ್ ಎನಿಸಿಕೊಳ್ಳಿ ಎಂಬುದೇ ನಮ್ಮ ಈ ದಿನದ ಲೇಖನದ ಮನವಿಯಾಗಿದೆ.


ವರದಿ :- ಸೂರ್ಯಪ್ರಕಾಶ್.ಆರ್,

error: Content is protected !!