ದೇವರಾಜ್ ಅರಸ್ ಬಡಾವಣೆಯ, ಸ್ವಿಮ್ಮಿಂಗ್ ಪೂಲ್ ಎದುರುಗಡೆ ಪೋಸ್ಟ್ ಆಫೀಸ್ ಸಿಬ್ಬಂಧಿಗಳ ವಸತಿಗೃಹಗಳ ಸುತ್ತಲೂ ಕಾಂಪೌಂಡ್ ಕಳಪೆ
Kadambakesari

ಕಾಮಗಾರಿಯ ಮಾಡುತ್ತಿರುವುದರ ಬಗ್ಗೆ
ದಾವಣಗೆರೆ ತಾಲ್ಲೂಕು, ಕಸಬಾ ಹೋಬಳಿ, ದೇವರಾಜ್ ಅರಸ್ ಬಡಾವಣೆಯ ಅಂದರೆ ದಾವಣಗೆರೆ ಮಹಾನಗರ ಪಾಲಿಕೆ 18ನೇ ವಾರ್ಡಿನಲ್ಲಿ ಬರತಕ್ಕ ದೇವರಾಜ್ ಅರಸ್ ಬಡಾವಣೆ ಮುಖ್ಯ ರಸ್ತೆಯಲ್ಲಿ ಸ್ವಿಮ್ಮಿಂಗ್ ಪೂಲ್ ನ ಎದುರುಗಡೆ ಸುಮಾರು 40-50 ವರ್ಷಗಳ ಹಿಂದೆ ಪೋಸ್ಟ್ ಆಫೀಸ್ ಸಿಬ್ಬಂಧಿಗಳಿಗಾಗಿ ನೀಡಿರುವ ವಸತಿಗೃಹಗಳ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದು, ಅದು ಶಿಥಿಲಾವಾಸ್ಥೆಯಲ್ಲಿರುತ್ತದೆ. ಅಂತಹ ಹಳೆಯ ಕಾಂಪೌಂಡಿಗೆ ಪೋಸ್ಟ್ ಆಫೀಸ್ ಎಸ್.ಪಿ(ಅಂಚೆ ಅಧೀಕ್ಷಕರು), ಸ್ಥಳೀಯ ಸಿಬ್ಬಂಧಿಗಳು, ಮತ್ತು ಕಂಟ್ರ್ಯಾಕಟರ್ ಗಳೆಲ್ಲಾ ಸೇರಿ ಸರ್ಕಾರದ ಹಣವನ್ನು ದೋಚಲು ಯಾವುದೇ ರೀತಿಯ ಮುಂಜಾಗೃತಾ ಕ್ರಮ ತೆಗೆದುಕೊಳ್ಳದೆ, ಏಕಾಏಕಿ ಮಹಾನಗರ ಪಾಲಿಕೆಗೂ ವಿಷಯ ತಿಳಿಸದೆ, ಕಳಪೆ ಕಾಮಗಾರಿಯ ನಡೆಸಿ, 20 ಲಕ್ಷ ಸರ್ಕಾರದ ಅನುದಾನವನ್ನು.
ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸದರಿ ಜಾಗದಲ್ಲಿ ಕಳೆದ ಬಾರಿ ಅಂದರೆ 2023ರ ನವೆಂಬರ್ ತಿಂಗಳಿನಲ್ಲಿ 27ಲಕ್ಷದ 11ಸಾವಿರ ರೂಗಳ ಕಾಮಗಾರಿಯನ್ನು ಬೆಂಗಳೂರಿನ ಕಂಟ್ರ್ಯಾಕ್ಟರ್, ಅಂಚೆ ಕಚೇರಿ ಅಧೀಕ್ಷಕರು ಸಾರ್ವಜನಿಕರ ಹಿತದೃಷ್ಠಿಯನ್ನು ಹೊಂದದೆ ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಾಂಪೌಂಡಿನ ಗೋಡೆಗೆ 100-150ಕೆಜಿ ತೂಕದ ಗ್ರಿಲ್ ಗಳನ್ನು ಹಾಕಿ, ಕಾಂಕ್ರೀಟ್ ಹಾಕದೆ, ತಮಗೆ ಬೇಕಾದ ಕಡೆ ಮಾತ್ರ ಹೊಸ ಫಿಲ್ಲರ್ ಗಳನ್ನು ಅದು ಕಡಿಮೆ ತೂಕದ ಕಬ್ಬಿಣ, ಎಮ್ ಸ್ಯಾಂಡ್, ಸೀಮೆಂಟ್ ಹಾಕಿ, ಫಿಲ್ಲರಗಳನ್ನು ಕಟ್ಟಿ ಹಳೆಯ ಕಾಂಪೌಂಡಿನ ಫಿಲ್ಲರುಗಳಿಗೆ ಜೊತೆ ಮಾಡಿರುತ್ತಾರೆ. ಅಲ್ಲದೆ ಯಾವುದೇ ರೀತಿಯ ಕಾರ್ಯಾದೇಶ ಪ್ರತಿಯನ್ನು ಹೊಂದದೆ ಕಾಮಗಾರಿ ನಡೆಸುತ್ತುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಸ್ತುತ ನೀತಿ ಸಂಹಿತಿ ಇರುವುದರಿಂದ ಯಾವುದೇ ರೀತಿಯ ಸರ್ಕಾರಿ ಕಾಮಗಾರಿಗಳು ನಡೆಯಬಾರದೆಂಬ ನಿಯಮವಿದ್ದರೂ ಸಹ ಕೆಲಸ ನಿರ್ವಹಿಸುತ್ತಿದ್ದಾರೆ.
ಇದರಿಂದ ಸ್ಥಳೀಯರಿಗೆ ಭಯ ಉಂಟಾಗಿ, ನಮ್ಮ ಪತ್ರಿಕಾ ಕಚೇರಿಗೆ ದೂರು ನೀಡಿದ್ದು, ನಾವುಗಳು ಕಾಮಗಾರಿ ನಡೆಸುತ್ತಿದ್ದ ಕಂಟ್ರ್ಯಾಕ್ಟರ್ ರವರಿಗೆ ಮತ್ತು ಸಿಬ್ಬಂಧಿಗಳಿಗೆ ಕಾಮಗಾರಿಯ ಕಾರ್ಯಾದೇಶದ ಪ್ರತಿ, ಎಸ್ಟೀಮೇಷನ್ ನಕಲು ಪ್ರತಿ ನೀಡಲು ಕೋರಿದ್ದು, ಸಿಬ್ಬಂಧಿಗಳಾದ ಮಾರುತಿ(ಕಚೇರಿ ಸಹಾಯಕ), ಅಂಚೆ ಕಚೇರಿಯ ಅಧೀಕ್ಷಕರು, ಕಂಟ್ರ್ಯಾಕ್ಟರ್ ನಮ್ಮ ಮೇಲೆ ರೇಗಾಡಿ, ಕಾರ್ಯಕ್ಕೆ ಅಡೆತಡೆ ಮಾಡಿ, ಬೇರೆ ಬೇರೆಯವರಿಂದ ದೂರವಾಣಿ ಕರೆ ಮಾಡಿಸಿ ಭಯಭೀತರನ್ನಾಗಿ ಮಾಡುತ್ತಿದ್ದಾರೆ. ಇದರಿಂದ ನಾನು ಇವರ ಈ ಕಾರ್ಯ ವೈಖರಿಯನ್ನು ಕಂಡು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಮಾಹಾನಗರಪಾಲಿಕೆ ಆಯುಕ್ತರಿಗೆ ದೂರು ದಾಖಲಿಸಿದ್ದರೂ ಸಹ ಇಂತಹ ಕಳಪೆ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳು ಯಾವುದೇ ರೀತಿಯ ಕ್ರಮ ಜರುಗಿಸದೆ ಕಾಮಗಾರಿ ನಡೆಸದಂತೆ ಆದೇಶ ಕೂಡ ಹೊರಡಿಸಿದೆ ಮೂಕ ವಿಸ್ಮಿತರಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವರದಿ: ಇಂತಿ ತಮ್ಮ ವಿಶ್ವಾಸಿ
ಸೂರ್ಯಪ್ರಕಾಶ್.ಆರ್,