2025ನೇ ಸಾಲಿನ SSLC ಮತ್ತು 2nd ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ PUC ಮತ್ತು SSLC ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, 2ನೇ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 19 ರಂದು ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ.
2ನೇ ಪಿಯುಸಿ ಪರೀಕ್ಷೆಯ ನಂತರ SSLC ಪರೀಕ್ಷೆ 2025, ಮಾರ್ಚ್ 20ರಿಂದ ಆರಂಭಗೊಂಡು ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆಯಲಿವೆ. 25 ದಿನಗಳ ಅವಧಿಯಲ್ಲಿ ಪರೀಕ್ಷೆಯನ್ನು ನಡೆಸಲು ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ನಿರ್ಧರಿಸಿದೆ.
ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 2 ರಿಂದ 16 ರವರೆಗೆ 15 ದಿನಗಳ ಕಾಲಾವಕಾಶವನ್ನು ನೀಡಿದೆ. ಅಕ್ಷೇಪಣೆಗಳನ್ನು ಇ-ಮೇಲ್ ಮೂಲಕ chairpersonkseeb@gmail.com ಗೆ ಸಲ್ಲಿಸಬಹುದು.
ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ
ಮಾರ್ಚ್ 1, 2025, ಶನಿವಾರ: ಕನ್ನಡ/ಅರೇಬಿಕ್
ಮಾರ್ಚ್ 3, 2025, ಸೋಮವಾರ: ಗಣಿತ/ ಶಿಕ್ಷಣ ಶಾಸ್ತ್ರ/ ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ 4, 2025, ಮಂಗಳವಾರ: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 5, 2025, ಬುಧವಾರ: ರಾಜ್ಯಶಾಸ್ತ್ರ/ ಸಂಖ್ಯಾಶಾಸ್ತ್ರ
ಮಾರ್ಚ್ 6, 2025, ಗುರುವಾರ: ಪರೀಕ್ಷೆ ಇರುವುದಿಲ್ಲ.
ಮಾರ್ಚ್ 7, 2025: ಶುಕ್ರವಾರ: ಇತಿಹಾಸ, ಭೌತಶಾಸ್ತ್ರ
ಮಾರ್ಚ್ 8, 2025 ಶನಿವಾರ: ಹಿಂದಿ
ಮಾರ್ಚ್ 9 ಭಾನುವಾರ ರಜಾದಿನ
ಮಾರ್ಚ್ 10: ಐಚ್ಛಿಕ ಕನ್ನಡ/ ಲೆಕ್ಕಶಾಸ್ತ್ರ/ ಭೂರ್ಗಭಶಾಸ್ತ್ರ/ ಗೃಹ ವಿಜ್ಞಾನ
ಮಾರ್ಚ್ 11 ಮಂಗಳವಾರ ಪರೀಕ್ಷೆ ಇರುವುದಿಲ್ಲ.
ಮಾರ್ಚ್ 12, ಬುಧವಾರ: ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
ಮಾರ್ಚ್ 13, ಗುರುವಾರ: ಅರ್ಥಶಾಸ್ತ್ರ
ಮಾರ್ಚ್ 14 ಶುಕ್ರವಾರ ಪರೀಕ್ಷೆ ಇರುವುದಿಲ್ಲ.
ಮಾರ್ಚ್15, 2025, ಶನಿವಾರ: ಇಂಗ್ಲಿಷ್
ಮಾರ್ಚ್16 ಭಾನುವಾರ ಪರೀಕ್ಷೆ ಇರುವುದಿಲ್ಲ.
ಮಾರ್ಚ್ 17 ಸೋಮವಾರ: ಭೂಗೋಳಶಾಸ್ತ್ರ/ ಜೀವಶಾಸ್ತ್ರ
ಮಾರ್ಚ್ 18, ಮಂಗಳವಾರ: ಸಮಾಜಶಾಸ್ತ್ರ/ ವಿದ್ಯುನ್ಮಾನಶಾಸ್ತ್ರ/ ಗಣಕ ವಿಜ್ಞಾನ
ಮಾರ್ಚ್19, ಬುಧವಾರ: ಹಿಂದೂಸ್ತಾನಿಸಂಗೀತ/ ಮಾಹಿತಿ ತಂತ್ರಜ್ಞಾನ/ ರಿಟೇಲ್/ ಆಟೋಮೊಬೈಲ್/ ಹೆಲ್ತ್ಕೇರ್/ ಬ್ಯೂಟಿ ಆಂಡ್ ವೆಲ್ನೆಸ್
ಎಸ್ಎಸ್ಎಲ್ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ
ಮಾರ್ಚ್ 20 ಗುರುವಾರ ಪ್ರಥಮ ಭಾಷೆ, ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ ( ಎನ್ಸಿಇಆರ್ಟಿ), ಸಂಸ್ಕೃತ
ಮಾರ್ಚ್ 22 ಶನಿವಾರ ಸಮಾಜ ವಿಜ್ಞಾನ
ಮಾರ್ಚ್ 24 ಸೋಮವಾರ ದ್ವಿತೀಯ ಭಾಷೆ, ಇಂಗ್ಲಿಷ್, ಕನ್ನಡ
ಮಾರ್ಚ್ 27 ಗುರುವಾರ ಗಣಿತ
ಮಾರ್ಚ್ 29 ಶನಿವಾರ ತೃತೀಯ ಭಾಷೆ, ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, ಎನ್ಎಸ್ಕ್ಯೂಎಫ್ ವಿಷಯಗಳು.
ಏಪ್ರಿಲ್ 2 ಬುಧವಾರ ವಿಜ್ಞಾನ