ಜಿಲ್ಲಾಸ್ಪತ್ರೆಗೆ ೧೮ ಕೋಟಿ ಅನುದಾನ ; ಸೂಕ್ತ ರೀತಿಯ ಬಳಕೆಗೆ ಎಸ್.ಎಸ್. ಎಂ. ಸಲಹೆ
ಜಿಲ್ಲೆಗೆ ಯಾವುದೇ ಶಾಸಕರೂ- ಮಂತ್ರಿಗಳು ಬರಲಿ ಅವರಿಗೆ ಶಿಷ್ಟಾಚಾರ ಪಾಲನೆ ಮಾಡುವುದು ಸೂಕ್ತ

ಚಿಗಟೇರಿ ಆಸ್ಪತ್ರೆ ಅಭಿವೃದ್ದಿಗೆ ಮುಂದಾಗಿ: ಆರೋಗ್ಯ ಸಚಿವರು ಜಿಲ್ಲೆಗೆ ಬಂದಾಗ ಚಿಗಟೇರಿ ಆಸ್ಪತ್ರೆ ಹೊಸ ಬ್ಲಾಕ್ ನಿರ್ಮಾಣಕ್ಕೆ ೧೮ ಕೋಟಿ ನೀಡಿದ್ದು ಮತ್ತು ಹೊಸ ರ‍್ಯಾಂಪ್, ವಾಟರ್ ಟ್ಯಾಂಕ್ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳ ಪ್ಲಾನ್‌ನ್ನು ತಂದು ತೋರಿಸಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲು ಜಿಲ್ಲಾ ಸರ್ಜನ್‌ಗೆ ತಿಳಿಸಿದರು. ಮತ್ತು ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪನವರು ಮಾಯಕೊಂಡ ಸಮುದಾಯ ಆರೋಗ್ಯ ಕೇಂದ್ರವಾದರೂ ರಾತ್ರಿ ಸಮಯದಲ್ಲಿ ವೈದ್ಯರು ಇರುವುದಿಲ್ಲ ಎಂದಾಗ ಹೆಚ್ಚುವರಿಯಾಗಿ ಒಬ್ಬ ವೈದ್ಯರನ್ನು ನಿಯೋಜನೆ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಶಿಷ್ಟಾಚಾರ ಪಾಲನೆಗೆ ಸೂಚನೆ; ಯಾವುದೇ ಅಧಿಕಾರಿಗಳು ಜಿಲ್ಲೆಗೆ ಬಂದಾಗ ಸಂಬಂಧಿಸಿದ ಶಾಸಕರನ್ನು ಸಂಪರ್ಕಿಸಿ ಆಯಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳು, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕಾಮಗಾರಿಗಳನ್ನು ಅನುಷ್ಟಾನ ಮಾಡುವಾಗ ಶಾಸಕರ ಗಮನಕ್ಕೆ ತರಬೇಕು ಮತ್ತು ಇದರ ಶಂಕುಸ್ಥಾಪನೆ, ಉದ್ಘಾಟನೆಯನ್ನು ಕೈಗೊಳ್ಳುವಾಗ ಇವರನ್ನು ಆಹ್ವಾನಿಸಬೇಕು. ಮತ್ತು ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುವಾಗಲೂ ಮಾಹಿತಿ ನೀಡಬೇಕು, ಈ ಬಗ್ಗೆ ಜಿಲ್ಲಾಧಿಕಾರಿಗಳು ಎಲ್ಲಾ ಅಧಿಕಾರಿಗಳ ಸಭೆ ನಡೆಸಿ ನಿರ್ದೇಶನ ನೀಡಲು ಸೂಚನೆ ನೀಡಿದರು.